ಬೇಸಿಗೆಯಲ್ಲಿ ಡ್ರೈವಿಂಗ್ ಮಾಡುವಾಗ ನಿಮ್ಮ ವಾಹನ ರಕ್ಷಣೆ ಹೇಗೆ? ಇಲ್ಲಿವೆ ಟಿಪ್ಸ್

By Suvarna News  |  First Published Oct 22, 2021, 5:01 PM IST

ರಜೆ ಸಿಕ್ಕಿದಾಗ ಮಂಗಳೂರು ಮುಂತಾದ ಕರಾವಳಿ ಪ್ರದೇಶಗಳ ಕಡೆಗೆ, ಬೀಚ್‌ಸೈಡ್ ಪ್ರವಾಸ ಹೋಗುತ್ತೀರಿ. ಇಲ್ಲಿ ಬಿಸಿಲ ಧಗೆ ಸಾಮಾನ್ಯ.  ಹಾಗೇ ಇನ್ನು ಬಿಸಿಲು ಹೆಚ್ಚಲಿದೆ. ಇಂಥ ವೇಳೆಯಲ್ಲಿ ನಿಮ್ಮ ಕಾರಿನ ರಕ್ಷಣೆ ಹೇಗೆ? ಟಿಪ್ಸ್ ಇಲ್ಲಿದೆ.


ಬೇಸಿಗೆಯಲ್ಲಿ (Summer) ನಿಮ್ಮ ವಾಹನದ (Vehicle) ಹೊಳಪು ರಕ್ಷಿಸಿಕೊಳ್ಳುವುದು ಕೊಂಚ ಕಷ್ಟ ಸಾಧ್ಯ. ಯಾಕೆಂದ್ರೆ ಬಿಸಿಲಿನ ಝಳ ಮತ್ತು ಧೂಳಿನ ಪರಿಣಾಮ ಹೆಚ್ಚಿನ ವಾಹನಗಳು ತಮ್ಮ ನೈಜ ಬಣ್ಣವನ್ನು ಕಳೆದುಕೊಳ್ಳುತ್ತವೆ. ಹಾಗೇ ಓವರ್‌ಹೀಟ್ (Overheat) ಕೂಡ ಆಗಬಹುದು. ಇದರಿಂದ ಕಾರನ್ನು ರಕ್ಷಿಸಿಕೊಳ್ಳಬೇಕು. ಹೇಗೆ?

ಹೊಳಪು ಕಾಪಾಡಿಕೊಳ್ಳುವುದು
ಬೇಸಿಗೆಯ ಬಿಸಿಲಿಗೆ ಮನುಷ್ಯನ ಬಣ್ಣವೇ ಟ್ಯಾನ್ ಆಗುತ್ತೆ ಇನ್ನು ವಾಹನದ ಪರಿಸ್ಥಿತಿಯೇನು! ಸೂರ್ಯನ ಬಿಸಿಲಿಗೆ ನಿಮ್ಮ ಕಾರಿನ ಬಣ್ಣ ಮಾಸುವುದು ಸಹಜ. ಹೀಗಾಗಿ ಸೂರ್ಯನ ಶಾಖದಿಂದ ನಿಮ್ಮ ಕಾರುಗಳು ಮತ್ತು ಬೈಕ್ ಪೆಯಿಂಟ್ ಹಾಳಾಗುತ್ತದೆ. ಆದ್ದರಿಂದ ನಿಮ್ಮ ಕಾರನ್ನು ನೆರಳಿರುವ ಪ್ರದೇಶಗಳಲ್ಲಿ ನಿಲ್ಲಿಸುವುದು ಉತ್ತಮ. ವಿಶೇಷವಾಗಿ ಬೀಚ್‌ಸೈಡ್ ಹೋದಾಗ ಮರಗಳಿಲ್ಲದ ಕಡೆ ವಾಹನ ನಿಲ್ಲಿಸಿದರೆ ಪೇಂಟ್ ಮಸುಕಾಗುತ್ತದೆ.

Tap to resize

Latest Videos

undefined

ಕಾರಿನ ಇಂಟೀರಿಯರ್ (Interiors)
ಅತಿಯಾದ ಬಿಸಿಲು ಕಾರಿನ ಪೇಂಟ್ ಮಾತ್ರವಲ್ಲ, ಕಾರಿನ ಒಳಭಾಗಗಳಿಗೂ ಅಪಾಯ. ಅದರಲ್ಲಿಯೂ ನಿಮ್ಮ ಕಾರುಗಳು ಲೆದರ್ (leather) ಅಥವಾ ಬ್ಲಾಕ್ ಸೀಟ್‌ಗಳನ್ನು ಹೊಂದಿದ್ದರೆ ಅವು ಬೇಗನೆ ಬಿಸಿಯಾಗುತ್ತವೆ. ಹೀಗಾಗಿ ಕಾರನ್ನು ಬಿಸಿಲಿನಲ್ಲಿ ನಿಲ್ಲಿಸಿದಲ್ಲಿ ಕಾರಿನ ಒಳಗೆ ಕೂರುವ ಮುನ್ನ ಸ್ವಲ್ಪ ಸಮಯದ ಮಟ್ಟಿಗೆ ಕಾರಿನ ಬಾಗಿಲುಗಳನ್ನು ತೆರೆಯಿರಿ. ಯಾಕೆಂದ್ರೆ ಬಿಸಿಲಿನ ಕಾರಣದಿಂದಾಗಿ ನಿಮ್ಮ ಕಾರಿನ ಒಳಭಾಗವು ಹೆಚ್ಚು ಬಿಸಿಯಾಗುವುದಲ್ಲದೇ ಕೆಲವೊಮ್ಮೆ ಉಸಿರಾಡುವುದಕ್ಕೂ ತೊಂದರೆಯಾಗಬಹುದು.

ಕಾರಿನ ಗ್ಲಾಸ್ (Glass)
ನಿಮಗಿದು ಗೊತ್ತಾ? ಬಿಸಿಲಿಗೆ ನಿಮ್ಮ ಕಾರಿನ ಗಾಜುಗಳನ್ನು ಬಿರುಕುಗೊಳಿಸಬಲ್ಲ ಶಕ್ತಿಯಿದೆ. ಆದ್ದರಿಂದ ನೀವು ನಿಮ್ಮ ಕಾರನ್ನು ಬಿಸಿಲಿನಲ್ಲಿ ಪಾರ್ಕ್ ಮಾಡಿದ್ದಲ್ಲಿ ಕಾರ್ ಕವರ್ ಹಾಕಿ ರಕ್ಷಣೆ ಮಾಡಿ. ಇಲ್ಲದಿದ್ದಲ್ಲಿ ಇದಕ್ಕಾಗಿ ನೀವು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ.

ಕಾರಿನ ಟೈರ್ (Car Tyre)
ನಿಮ್ಮ ಕಾರಿನ ಟೈರ್‍‍ಗಳು ಹಳೆಯದೇ? ಹಾಗಾದ್ರೆ ಹೆಚ್ಚಿನ ಬಿಸಿಲ ತಾಪಮಾನದ ಸಂದರ್ಭದಲ್ಲಿ ದೂರದ ಪ್ರಯಾಣಕ್ಕೂ ಮುನ್ನ ನಿಮ್ಮ ಕಾರಿನ ಟೈರ್‍‍ಗಳನ್ನು ಬದಲಾಯಿಸಿಕೊಳ್ಳಿ. ಇದಕ್ಕೆ ಕಾರಣ ಬಿಸಿಲಿನಿಂದ ಟೈರ್‌ಗಳ ಮೇಲ್ಪದರವು ಕರಗಬಹುದಾದ ಸಾಧ್ಯತೆಗಳಿದ್ದು, ಪಂಚರ್ ಕೂಡಾ ಆಗಬಹುದು. ಆದ್ದರಿಂದ ಬಿಸಿಲಿನಲ್ಲಿ ಕಾರಿನಲ್ಲಿ ಹೋಗುವ ಮುನ್ನ ನಿಮ್ಮ ಕಾರಿನ ಟೈರ್ ಗುಣಮಟ್ಟವನ್ನು ಪರಿಶೀಲಿಸಿದರೆ ಒಳ್ಳೆಯದು.

ಕಾರಿನ ಕ್ಲಚ್ ಬಳಸುವಾಗ ಎಚ್ಚರವಿರಲಿ, ಈ ತಪ್ಪುಗಳನ್ನು ಮಾಡಬೇಡಿ

ಕೂಲಂಟ್
ಬಿಸಿಲಿನಲ್ಲಿ ನಿಮ್ಮ ದೇಹಕ್ಕೆ ತಂಪಾದ ಪಾನಿಯಗಳು (Cold Drinks) ಎಷ್ಟು ಅಗತ್ಯವೋ ಕಾರುಗಳಿಗೆ ಕೂಲಂಟ್‍‍ಗಳು (Coolers) ಅಷ್ಟೇ ಅಗತ್ಯ. ಏಕೆಂದರೆ ಅವುಗಳನ್ನು ಅಗಾಗ ಬದಲಾಯಿಸದಿದ್ದರೆ ಅವುಗಳು ನಿಮ್ಮ ಕಾರಿನ ಎಂಜಿನ್ ಅನ್ನು ಹಾಳು ಮಾಡಬಹುದು.

ಎಂಜಿನ್ ಆಯಿಲ್ (Engine oil)
ನಿಮ್ಮ ಕಾರನ್ನು ಸರ್ವಿಸ್ ಮಾಡಿಸಿದ್ದೀರಾ? ಕಾರಣ, ಬಿಸಿಲಿಗೆ ನಿಮ್ಮ ಕಾರಿನಲ್ಲಿರುವ ಆಯಿಲ್ ಗಟ್ಟಿಗಟ್ಟುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಆಗಾಗ ನಿಮ್ಮ ಕಾರಿನ ಆಯಿಲ್ ಅನ್ನು ಬದಲಾಯಿಸುತ್ತಿದ್ದಲಿ ನಿಮ್ಮ ಕಾರಿನ್ ಎಂಜಿನ್‌ನ ಗುಣಮಟ್ಟವು ಹೆಚ್ಚು ಕಾಲ ಬಾಳಿಕೆ ಬರಲಿದೆ.

ಹಿಲ್ ಸ್ಟೇಶನ್‌ಗಳಿಗೆ ಡ್ರೈವ್ ಮಾಡುವಾಗ ಹ್ಯಾಂಡ್‌ ಬ್ರೇಕ್ ಬಳಕೆ ಬಗ್ಗೆ ತಿಳೀರಿ

ಏರ್ ಕಂಡಿಷನರ್ (Air Conditoiner)
ಬಿಸಿಲಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಎಸಿ ಉಪಯೋಗ ಮಾಡಿದ್ರೆ ಮಾತ್ರ ಸಾಲದು. ಅವುಗಳನ್ನು ಆಗಾಗ ನಿಮ್ಮ ಕಾರಿನ ಅಧಿಕೃತ ಸರ್ವಿಸ್ ಸೆಂಟರ್‌‍ಗಳಲ್ಲಿ ಪರಿಶೀಲಿಸಿ. ಕಾರು ಆನ್ ಮಾಡುವ ಸಂದರ್ಭದಲ್ಲಿ ನಿಮ್ಮ ಕಾರಿನ ಎಸಿ ಆಫ್ ಇರಲಿ.

ಬ್ಯಾಟರಿ (battery)
ನಿಮ್ಮ ಕಾರ್ ಬ್ಯಾಟರಿಯ ಗುಣಮಟ್ಟವನ್ನು ಆಗಾಗ ಪರೀಶಿಲಿಸುತ್ತಿರಿ. ಯಾಕೆಂದ್ರೆ ಬಿಸಿಲಿಗೆ ಪ್ರಯಾಣಿಸುವಾಗ ನಾವು ಎಸಿಯನ್ನು ಹೆಚ್ಚು ಬಳಸುವುದು ಸಹಜ. ಅದರಿಂದ ನಿಮ್ಮ ಕಾರಿನ ಬ್ಯಾಟರಿಯೊಳಗಿನ ಆಸಿಡ್ ಕಡಿಮೆಗೊಳ್ಳುತ್ತಾ ಹೋಗುತ್ತದೆ. ಅದು ಪೂರ್ಣವಾಗಿ ಕಡಿಮೆಯಾದಲ್ಲಿ ನಿಮ್ಮ ಕಾರಿನ ಬ್ಯಾಟರಿಗೆ ಅಪಾಯ ತಪ್ಪಿದಲ್ಲ.

click me!