ಸಡನ್ನಾಗಿ ಕಾರಿನ ಬ್ರೇಕ್ ಫೇಲ್ ಆದ್ರೆ ಹೀಗೆ ಮಾಡಿ, ಪ್ರಾಣಾಪಾಯದಿಂದ ಪಾರಾಗಿ!

By Suvarna News  |  First Published Aug 25, 2022, 5:42 PM IST

ಎಷ್ಟೋ ಸಲ ಹೈವೆಯಲ್ಲಿ ವೇಗವಾಗಿ ಹೋಗುತ್ತಿರುವಾಗ ಸಡನ್ನಾಗಿ ಬ್ರೇಕ್ ಫೇಲ್ ಆಗಿ ಬಿಡುತ್ತೆ. ಹೊಸಬರಾದರೆ ಏನೂ ಮಾಡಲೂ ತೋಚದೆ ಆತಂಕಕ್ಕೊಳಗಾಗುತ್ತಾರೆ. ಇದು ಜೀವ ತೆಗೆಯೋ ಸಂದರ್ಭವೇ ಹೆಚ್ಚು. ಬ್ರೇಕ್ ಫೇಲ್ ಆದಾಗ ಏನು ಮಾಡಬೇಕು ಅನ್ನೋ ಬಗ್ಗೆ ಕೆಲವು ಟಿಪ್ಸ್ ಇಲ್ಲಿವೆ.


ಇತ್ತೀಚೆಗೆ ಲಾರಿ, ಬಸ್ ಇತ್ಯಾದಿಗಳ ಬ್ರೇಕ್ ಫೇಲ್ ಆಗಿ ವಾಹನ ಎಲ್ಲೆಲ್ಲೋ ಹೋಗಿ ಬಿದ್ದು ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಅನೇಕ ಬಾರಿ ಈ ವೇಗವಾಗಿ ಚಲಿಸುತ್ತಿರುವ ಕಾರುಗಳಲ್ಲಿ ಕೆಲವೊಮ್ಮೆ ಹಠಾತ್ತನೆ ಬ್ರೇಕ್ ಫೇಲ್ ಆಗಿ ಅಪಘಾತಕ್ಕಿಡಾಗಿದ್ದ ಸುದ್ದಿಗಳನ್ನು ನೋಡುತ್ತಲೇ ಇರುತ್ತೇವೆ. ಹೀಗೆ ಬ್ರೇಕ್ ಫೇಲ್ ಆಗಿ ಅಪಘಾತಗಳಾಗುವುದು ಅಮಾಯಕ ಜೀವ ಬಲಿ ಪಡೆಯುವ ಬಹಳ ಕೆಟ್ಟ ಸಂದರ್ಭ. ಅನೇಕ ಚಾಲಕರಿಗೆ ಕಾರು ಓಡಿಸುವಾಗ ಎಲ್ಲಿ ಕಾರಿನ ಬ್ರೇಕ್ ಫೇಲ್ ಆಗಿ ಬಿಡುತ್ತದೆಯೋ ಅನ್ನೋ ಭಯ ಇದ್ದೇ ಇರುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಚಾಲಕರು ತೆಗೆದುಕೊಳ್ಳುವ ಬುದ್ದಿವಂತಿಕೆಯ ನಡೆಗಳು ಕೆಲವೊಮ್ಮೆ ಪ್ರಾಣವನ್ನೇ ಉಳಿಸುತ್ತವೆ. ಈ ಸಮಯ ಆತಂಕವಾದರೂ ಬುದ್ಧಿಪೂರ್ವಕ ಯೋಚಿಸುವುದು ಬಹಳ ಒಳ್ಳೆಯದು. ಹೀಗೆ ಕಾರಿನ ಬ್ರೇಕ್ ಫೇಲ್ ಆದರೆ ಪ್ರಯಾಣಿಕರ ಪ್ರಾಣವನ್ನು ಮತ್ತು ತಮ್ಮ ಜೀವವನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಅನ್ನುವ ಬಗ್ಗೆ ಇಲ್ಲಿ ವಿವರಗಳಿವೆ. ಕಾರು ಡ್ರೈವ್ ಮಾಡುವ ಪ್ರತಿಯೊಬ್ಬರಿಗೂ ಈ ಕುರಿತ ಅರಿವು ಇದ್ದರೆ ಬಹಳ ಒಳ್ಳೆಯದು.

ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ

Tap to resize

Latest Videos

undefined

ನಿಮ್ಮ ಕಾರಿನ ಬಹುಮುಖ್ಯವಾದ ಪಾರ್ಟ್ ಬ್ರೇಕ್. ಅದು ಫೇಲ್ ಆಯ್ತು ಅಂದರೆ ಕಾರಿನ ಕಂಟ್ರೋಲ್ ಕಳೆದುಹೋದ ಹಾಗೆ. ಒಂದು ವೇಳೆ ಹೀಗಾದರೆ ಭಯ ಪಡುವ ಬದಲು ಸಮಾಧಾನ ತಂದುಕೊಂಡು ಮೊದಲು ಮಾಡಬೇಕಾದ ಕೆಲಸ ಎಂದರೆ ಹ್ಯಾಂಡ್ ಬ್ರೇಕ್ ಅನ್ನು ಹಾಕುವುದು. ಈ ಹ್ಯಾಂಡ್ ಬ್ರೇಕ್ ಅನ್ನು ಹಾಕುವುದರಿಂದ ಕಾರು ಸ್ವಲ್ಪ ಮಟ್ಟಿಗೆ ನಿಧಾನವಾಗುತ್ತದೆ ಮತ್ತು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ.

ಕಾರಿನ ಬ್ರೇಕ್ ಒತ್ತಿ ಹಿಡಿದು ನಿಧಾನಕ್ಕೆ ಸ್ವಲ್ಪ ಬಿಡಬೇಕು

ಕಾರಿನ ಬ್ರೇಕ್ ಅನ್ನು ಹಾಗೆಯೇ ಪೂರ್ತಿಯಾಗಿ ಒತ್ತಿ ಹಿಡಿಯಿರಿ, ಆಮೇಲೆ ನಿಧಾನವಾಗಿ ಸ್ವಲ್ಪ ಬಿಡಬೇಕು. ಹೀಗೆ ಅನೇಕ ಬಾರಿ ಪಂಪ್ ಮಾಡುವಂತೆ ಮಾಡಿದಾಗ ಸ್ವಲ್ಪ ಪ್ರೇಷರ್ ಬ್ರೇಕ್ ನಲ್ಲಿ ಶೇಖರಣೆ ಆಗಿ ಕಾರಿನ ವೇಗ ಕಡಿಮೆ ಆಗುತ್ತದೆ. ಹಾಗೆಯೇ ನಿಮಗೆ ಬ್ರೇಕ್ ನಲ್ಲಿ ಸ್ವಲ್ಪ ಮಟ್ಟಿಗೆ ಪ್ರೆಷರ್ ಬರುವುದು ಅನುಭವಕ್ಕೆ ಬಂದರೆ ಕಾರು ಪೂರ್ತಿಯಾಗಿ ನಿಲ್ಲುವವರೆಗೆ ಹಾಗೆಯೇ ಬ್ರೇಕ್ ಅನ್ನು ಪಂಪ್ ಮಾಡುತ್ತಲೇ ಇರಿ.

ಹೊಸ ವರ್ನಾ ಸೆಡಾನ್ ಅನ್ನು ಪ್ರೋತ್ಸಾಹಿಸಲು ಎಲಾಂಟ್ರಾ ಬಿಡುಗಡೆ ಮುಂದೂಡಲಿದೆ ಹ್ಯುಂಡೈ

ಲೋ ಗೇರ್ ಗೆ ಬದಲಾಯಿಸಿಕೊಳ್ಳಿ

ಕೆಲವೊಮ್ಮೆ ನಾವು ಕಾರು ಓಡಿಸುವಾಗ ಟಾಪ್ ಗೇರ್ ನಲ್ಲಿ ವೇಗವಾಗಿ ಹೋಗುತ್ತಿರುತ್ತೇವೆ. ಹಠಾತ್ತನೆ ಗೇರ್ ಗಳನ್ನು ಕೆಳಕ್ಕೆ ಹಾಕಿಕೊಂಡಾಗ ಕಾರು ಅಲುಗಾಡಿದಂತಾಗಿ ವೇಗ ತಕ್ಷಣ ಇಳಿಯುತ್ತದೆ. ಕಾರಿನ ಬ್ರೇಕ್ ಫೇಲ್ ಆದಾಗಲೂ ಸಹ ಇದೇ ರೀತಿಯಾಗಿ ಟಾಪ್ ಗೇರ್ ನಲ್ಲಿರುವ ಗೇರನ್ನು ಫಸ್ಟ್ ಅಥವಾ ಸೆಕೆಂಡ್‌ ಗೇರ್‌ಗೆ ಬದಲಾಯಿಸಿಕೊಳ್ಳಿ, ಇದರಿಂದ ಕಾರಿನ ವೇಗ ಕಡಿಮೆಯಾಗುತ್ತದೆ. ಹಾಗೆ ವೇಗ ಕಳೆದುಕೊಂಡ ಕಾರಿನ ಗೇರ್ ಅನ್ನು ನ್ಯೂಟ್ರಲ್ ಗೆ ಹಾಕಿಕೊಂಡು ಕಾರನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ನಿಲ್ಲಿಸಿಕೊಳ್ಳಿ. ಒಂದು ವೇಳೆ ನೀವು ಆಟೊಮೇಟಿಕ್ ಗೇರ್ ಗಳಿರುವ ವಾಹನ ಚಲಾಯಿಸುತ್ತಿದ್ದರೆ, ಕೂಡಲೇ ಬ್ರೇಕ್ ಮೇಲಿಂದ ಮತ್ತು ಎಕ್ಸಲೆಟರ್ ಮೇಲಿಂದ ಕಾಲನ್ನು ತೆಗೆಯಿರಿ. ಆಗ ಕಾರು ನಿಧಾನವಾಗುತ್ತದೆ ಮತ್ತು ಚಾಲಕರ ನಿಯಂತ್ರಣಕ್ಕೆ ಸಿಗುತ್ತದೆ.

ಎಂಜಿನ್ ಆಫ್ ಮಾಡಬೇಡಿ
ಕಾರಿನ ಬ್ರೇಕ್ ಫೇಲ್ ಆದಾಗ ನಿಮ್ಮ ಕಾರಿನ ಎಂಜಿನ್ ಅನ್ನು ಆಫ್ ಮಾಡಿದರೆ ಕಾರಿನ ವೇಗ ಕಡಿಮೆ ಆಗುತ್ತದೆ ಎಂದು ನೀವು ತಿಳಿದಿದ್ದರೆ, ಅದು ತಪ್ಪು. ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಇನ್ನೂ ಜಾಸ್ತಿಯಾಗುತ್ತದೆ, ಹೊರತು ಕಡಿಮೆ ಆಗುವುದಿಲ್ಲ. ಎಂಜಿನ್ ಆಫ್ ಮಾಡಿದಾಗ ಕಾರಿನ ಸ್ಟೇರಿಂಗ್ ಲಾಕ್ ಆಗುತ್ತದೆ ಮತ್ತು ನಮಗೆ ಕಾರನ್ನು ಆ ಕಡೆ ಈ ಕಡೆ ತಿರುಗಿಸುವುದಕ್ಕೆ ಬರುವುದಿಲ್ಲ. ಹೀಗಾಗಿ ತಪ್ಪಿಯೂ ಇಂಥಾ ಅತಿ ಬುದ್ಧಿವಂತಿಕೆ ಕೆಲಸ ಮಾಡಬೇಡಿ.

ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್, 3 ವರ್ಷದಲ್ಲಿ 3 ಲಕ್ಷ ಕಾರು ಮಾರಾಟ!

ಸುರಕ್ಷಿತ ಸ್ಥಳದಲ್ಲಿ ಹೋಗಿ ಕಾರನ್ನು ನಿಲ್ಲಿಸಿ
ಮೇಲೆ ಹೇಳಿದ ಯಾವ ಟಿಪ್ಸ್‌ ವರ್ಕೌಟ್‌ ಆಗದೇ ಇದ್ದಾಗ, ಕೊನೆಯದಾಗಿ ಉಳಿದಿರುವಂತಹ ಆಯ್ಕೆ ಎಂದರೆ ನಿಮ್ಮ ಕಾರಿನ ವೇಗವನ್ನು ಕಡಿಮೆ ಮಾಡಲು ಯಾವುದಾದರೊಂದು ಸ್ಥಳದಲ್ಲಿ ಹೋಗಿ ಅಲ್ಲಿ ನಿಲ್ಲಿಸುವುದು. ಎಂದರೆ ರಸ್ತೆಯ ಬದಿಯಲ್ಲಿರುವ ಯಾವುದಾದರೂ ಚಿಕ್ಕ ಗಿಡ ಮರಗಳ ಪೊದೆಗಳಲ್ಲಿ ಹೋಗಿ ನಿಲ್ಲಿಸುವುದು ಅಥವಾ ಯಾವುದೋ ಒಂದು ಗೋಡೆಗೆ ಹೋಗಿ ಅಪ್ಪಳಿಸಿ ಕಾರನ್ನು ನಿಲ್ಲಿಸಬೇಕಷ್ಟೆ.

ಮುಂಜಾಗ್ರತೆಯಾಗಿ ಕಾರು ಹತ್ತಿದ ತಕ್ಷಣ ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಪರೀಕ್ಷಿಸಿಕೊಳ್ಳಿರಿ. ಅಲ್ಲದೆ ಬ್ರೇಕ್ ನಲ್ಲಿ ವ್ಯತ್ಯಾಸ ಕಂಡು ಬಂದರೆ ಮೊದಲು ಅದನ್ನು ಸರಿಪಡಿಸಿಕೊಂಡೇ ಮುಂದೆ ಹೋಗಿ.

click me!