
ನವದೆಹಲಿ (ಅ.21) ವಿಶ್ವದ ನಂಬರ್ 1 ಎಲೆಕ್ಟ್ರಿಕ್ ಕಾರು ಟೆಸ್ಲಾ ಇದೀಗ ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಹಾರುವ ಕಾರು ಬಿಡುಗಡೆ ಮಾಡುವ ಮೂಲಕ ಹೊಸ ಇತಿಹಾಸ ರಚಿಸಿದೆ. ಇದೀಗ ಈ ಕಾರು ಭಾರತದಲ್ಲಿ ಲಭ್ಯವಿದೆ. ಟೆಸ್ಲಾ ಇತ್ತೀಚೆಗೆಷ್ಟೇ ಭಾರತಕ್ಕೆ ಪ್ರವೇಶ ಮಾಡಿದೆ. ವೈ ಮಾಡೆಲ್ ಕಾರಿನ ಮೂಲಕ ಭಾರತಕ್ಕೆ ಎಂಟ್ರಿಕೊಟ್ಟ ಟೆಸ್ಲಾ ಇದೀಗ ನೇರವಾಗಿ ರೋಡ್‌ಸ್ಟರ್ ಫ್ಲೈಯಿಂಗ್ ಕಾರು ನೀಡುತ್ತಿದೆ. 5 ಲಕ್ಷ ರೂಪಾಯಿ ಪಾವತಿ ಮೂಲಕ ಈ ಕಾರು ಬುಕಿಂಗ್ ಮಾಡಿಕೊಳ್ಳಬಹುದು.
ಟೆಸ್ಲಾ ರೋಡ್‌ಸ್ಟರ್ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಅಧಿಕೃತ ಟೆಸ್ಲಾ ವೆಬ್‌ಸೈಟ್ ಮೂಲಕ ಮಾಡಬಹುದು. ಬುಕಿಂಗ್ ಆರಭಂಭದಲ್ಲಿ 5.01 ಲಕ್ಷ ರೂಪಾಯಿ ಪಾವತಿಸಬೇಕು. ಆದರೆ ಇಲ್ಲಿಗೆ ಬುಕಿಂಗ್ ಪೂರ್ಣಗೊಳ್ಳುವುದಿಲ್ಲ. 5.01 ಲಕ್ಷ ರೂ ಪಾವತಿ ಬಳಿಕ 10 ದಿನಗಳ ಸಮಯವಿದೆ. ಈ ಸಮಯದಲ್ಲಿ ಬುಕಿಂಗ್ ಕ್ಯಾನ್ಸಲ್ ಮಾಡಬಹುದು. ಕ್ಯಾನ್ಸಲ್ ಮಾಡಿದರೆ ಪಾವತಿ ಮಾಡಿದ 5.01 ಲಕ್ಷ ರೂಪಾಯಿ ಸಂಪೂರ್ಣ ಮರುಪಾವತಿಯಾಗಲಿದೆ. 10 ದಿನದ ಒಳಗೆ ಬಾಕಿ ಉಳಿದ ಬುಕಿಂಗ್ ಹಣ ಅಂದರೆ 45.05 ಲಕ್ಷ ರೂಪಾಯಿ ಪಾವತಿಸಬೇಕು. ಹೌದು ಟೆಸ್ಲಾ ರೋಡ್‌ಸ್ಟರ್ ಕಾರಿನ ಬುಕಿಂಗ್ ಬೆಲೆ 50.06 ಲಕ್ಷ ರೂಪಾಯಿ.
ಟೆಸ್ಲಾ ರೋಡ್‌ಸ್ಟರ್ ವಿಶ್ವವನ್ನೇ ಚಕಿತಗೊಳಿಸಿದ ಕಾರು, ಗುರತ್ವಾಕರ್ಷಣ ಬಲಕ್ಕೆ ಸವಾಲೆಸೆದು ಸಾಗಿದ ಕಾರು. ಹಾರುವ ಕಾರನ್ನೇ ಆವಿಷ್ಕಾರ ಮಾಡಿ ಅಷ್ಟೇ ವೇಗದಲ್ಲಿ ಕಾರು ಪ್ರಿಯರ ಬಳಿ ತಲುಪಿಸುತ್ತಿರುವ ಕೀರ್ತಿ ಟೆಸ್ಲಾಗಿದೆ. ಹಲವು ವಿಶೇಷತೆಗಳ ಈ ಕಾರಿನ ಬೆಲೆ 2.5 ಕೋಟಿ ರೂಪಾಯಿ (ಎಕ್ಸ್ ಶೋ ರೂಂ).
ಇತ್ತೀಚೆಗೆ ಟೆಸ್ಲಾ ರೋಡ್‌ಸ್ಟರ್ ಕಾರು ಬಿಡುಗಡೆ ಮಾಡಿ ಹಲವು ಘೋಷಣೆ ಮಾಡಿತ್ತು. 2028ರಲ್ಲಿ ಟೆಸ್ಲಾ ರೋಡ್‌ಸ್ಟರ್ ಕಾರು ಉತ್ಪಾದನೆ ಆರಂಭಗೊಳ್ಳಲಿದೆ ಎಂದಿತ್ತು. ಎಡಭಾಗದಲ್ಲಿ ಸ್ಟೀರಿಂಗ್ ವ್ಹೀಲ್ ಇರುವ ಕಾರಿನ ಉತ್ಪಾದನೆ 2028ರಲ್ಲಿ ನಡೆಯಲಿದೆ. ಭಾರತದಲ್ಲಿ ಬಲಭಾಗದಲ್ಲಿ ಡ್ರೈವಿಂಗ್ ವ್ಹೀಲ್ ಇರಲಿದೆ. ಈ ಕಾರಿನ ಉತ್ಪಾದನೆ ಕುರಿತು ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಭಾರತದಲ್ಲಿ ಕಾರು ಬಿಡುಗಡೆ ಹಾಗೂ ಡೆಲಿವರಿ ವಿಳಂಬವಾಗಲಿದೆ.
ಸದ್ಯ ಭಾರತದಲ್ಲಿ ಟೆಸ್ಲಾದ ವೈ ಮಾಡೆಲ್ ಕಾರುಗಳು ಮಾತ್ರ ಲಭ್ಯವಿದೆ. ಇದೀಗ ರೋಡ್‌ಸ್ಟರ್ ಆಗಮಿಸುತ್ತಿದೆ. ರೋಡ್‌ಸ್ಟರ್‌ಗೂ ಮೊದಲು ಭಾರತದಲ್ಲಿ ಟೆಸ್ಲಾ ವೈಎಲ್ ಮಾಡೆಲ್ ಕಾರು ಬಿಡುಗಡೆ ಮಾಡುತ್ತಿದೆ. ಇದು 6 ಸೀಟಿನ ಕಾರಾಗಿದೆ. 0-100 ಕಿಲೋಮೀಟರ್ ವೇಗವನ್ನು ಕೇವಲ 4.5 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 681 ಕಿಲೋಮೀಟರ್ ಮೈಲೇಜ್ ನೀಡಲಿದೆ.