15 ವರ್ಷಗಳ ಹಳೆಯ ವಾಹನಗಳು ಗುಜರಿಗೆ ಪಕ್ಕಾ?

By Suvarna News  |  First Published Jan 17, 2021, 3:16 PM IST

ಮಾಲಿನ್ಯ ನಿಯಂತ್ರಣ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ರಹದಾರಿಯನ್ನು ಸೃಷ್ಟಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಕ್ರ್ಯಾಪೇಜ್ ಪಾಲಿಸಿ(ಗುಜರಿ ನೀತಿ)ಯನ್ನು ಜಾರಿಗೆ ತರಲು ಹೊರಟಿದೆ. ಶೀಘ್ರವೇ ನೀತಿಗೆ ಸರಕಾರದಿಂದ ಒಪ್ಪಿಗೆ ಸಿಗುವ ವಿಶ್ವಾಸವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ವ್ಯಕ್ತಪಡಿಸಿದ್ದಾರೆ.


15 ವರ್ಷಗಳ ಹಳೆಯ ವಾಹನಗಳ ಸ್ಕ್ರ್ಯಾಪ್ ಮಾಡುವ ನೀತಿಗೆ ಈ ವರ್ಷ ಕೇಂದ್ರ ಸರ್ಕಾರ ಒಪ್ಪಿಗೆ  ನೀಡುವ ಸಾಧ್ಯತೆ ಇದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಹನಗಳ ಸ್ಕ್ರ್ಯಾಪ್ ನೀತಿ ಬಹಳ ದಿನಗಳಿಂದ ನಿರೀಕ್ಷಿತವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅನುಮತಿ ನೀಡುವ ತಿದ್ದುಪಡಿಗಳನ್ನು ಮೋಟಾರು ವಾಹನ ಕಾಯ್ದೆಗೆ 2019ರ ಜುಲೈ 15 ರಂದು ಒಪ್ಪಿಗೆ ನೀಡಲಾಗಿತ್ತು. ಈ ಸಂಬಂಧ ನಾವು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಮತ್ತು ಸ್ಕ್ರ್ಯಾಪಿಂಗ್ ಪಾಲಿಸಿಗೆ ಆದಷ್ಟು ಬೇಗನೆ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿ ನಾನಿದ್ದೇನೆ ಎಂದು ಗಡ್ಕರಿ ತಿಳಿಸಿದ್ದಾರೆ.

Latest Videos

undefined

5.2 ಸೆಕೆಂಡಲ್ಲಿ 0 ನಿಂದ 100 ಕಿ.ಮೀ. ವೇಗ; ಐಒನಿಕ್ ಕಾರಿನ 5 ಚಿತ್ರಗಳು ಬಿಡುಗಡೆ!

ಕಾರುಗಳು, ಟ್ರಕ್ಸ್, ಬಸ್‌ಗಳು ಸೇರಿದಂತೆ 15 ವರ್ಷಗಳಷ್ಟು ಹಳೆಯದಾದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ನೀತಿಯಾಗಿದೆ ಎಂದು ಸಚಿವರು ಆತ್ಮನಿರ್ಭರ್  ಭಾರತ್ ಇನ್ನೋವೇಷನ್ ಚಾಲೆಂಜ್-2020-21ರ ಕಾರ್ಯಕ್ರಮದಲ್ಲಿ ಹೇಳಿದರು.

ಏನಿದು ಪಾಲಿಸಿ?

15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಕಡ್ಡಾಯವಾಗಿ ಹಾಕಬೇಕು. ದೇಶದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಲಕ್ಷಾಂತರ ವಾಹನಗಳು ಓಡಾಡುತ್ತಿವೆ. ಇದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಹೀಗಾಗಿ ಸ್ಕ್ರ್ಯಾಪ್ ಪಾಲಿಸಿ ಮೂಲಕ ಆಯಸ್ಸು ಮೀರಿದ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕಬೇಕು. ಈ ವೇಳೆ ವಾಹನದ ಬಿಡಿಭಾಗಗಳ ಕಂಡಿಷನ್ ಆಧರಿಸಿ ಸರ್ಕಾರವು ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಹಣ ನೀಡುತ್ತದೆ. ಸರ್ಕಾರ ನಿಗದಿ ಪಡಿಸುವ ಹಣ ಹಳೇ ವಾಹನದ ರೀಸೇಲ್ ವ್ಯಾಲ್ಯೂಗಿಂತ ಹೆಚ್ಚಿರಲಿದೆ ಅಥವಾ ಸಮಾನಾಗಿ ಇರಲಿದೆ.

ಈ ನೀತಿಯ ಉಪಯೋಗ ಏನು?
ಪ್ರಮುಖವಾಗಿ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗಲಿದೆ. ಇಷ್ಟೇ ಅಲ್ಲ, ಹಳೇ ವಾಹನಗಳು ಗುಜರಿಗೆ ಸೇರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಗುಜರಿಗೆ ಹಾಕುವ ಮೊದಲು ಉತ್ತಮ ಸ್ಥಿತಿಯಲ್ಲಿರುವ ಬಿಡಿಭಾಗಗಳನ್ನು ಪುನರ್ ಬಳಕೆಗೂ ಅವಕಾಶ ಕಲ್ಪಿಸಲಾಗುತ್ತದೆ.

ಐಕಾನಿಕ್ ಕಾರ್ ಮಾರುತಿ 800 ಬಗ್ಗೆ ನಿಮಗೆಷ್ಟು ಗೊತ್ತು?

ಯಾಕೆ ವಿರೋಧ?

ಸ್ಕ್ರ್ಯಾಪ್ ನೀತಿಗೆ ವಿರೋಧ ಕೂಡ ಇದೆ. ಯಾಕೆಂದರೆ, ಆರ್ಥಿಕ ಶಸಕ್ತರಲ್ಲದವರು ಹಳೇ ವಾಹನದಲ್ಲೇ ಜೀವನ ನಡೆಸುತ್ತಾರೆ. ಈ ವೇಳೆ ಅವರ ವಾಹನ ಗುಜರಿಗೆ ತಳ್ಳಿದರೆ ಬದುಕು ದುಸ್ತರವಾಗಲಿದೆ ಹೊಸ ವಾಹನ ಖರೀದಿ ಸಾಮರ್ಥ್ಯ ಕೂಡ ಕಡಿಮೆ. ಹೀಗಾಗಿ ಬಡ ವರ್ಗವೂ ವಿರೋಧ ವ್ಯಕ್ತಪಡಿಸುತ್ತಿದೆ.

ನೇಪಾಳದ ರಸ್ತೆಗಳಲ್ಲಿ ಟಾಟಾ ಇಂಟ್ರಾ ವಿ20 ಟ್ರಕ್

ಸ್ಕ್ರ್ಯಾಪ್ ಪಾಲಿಸಿ ಪ್ರಕಾರ 15 ವರ್ಷಕ್ಕಿಂತ ಮೇಲ್ಪಟ್ಟ ಹಲವು ವಾಹನಗಳು ಉತ್ತಮ ಸ್ಥಿತಿಯಲ್ಲಿವೆ. ಇಷ್ಟೇ ಅಲ್ಲ ಪ್ರತಿ ವಾಹನ ಆರು ತಿಂಗಳಿಗೊಮ್ಮೆ ಎಮಿಷನ್ ಟೆಸ್ಟ್ ಮಾಡಿಸಬೇಕು. ಎಮಿಷನ್ ಟೆಸ್ಟ್ ಪಾಸಾದ ವಾಹನವನ್ನು ಗುಜರಿಗೆ ಹಾಕುವುದು ಎಷ್ಟು ಸರಿ? ಎಮಿಶನ್ ಸರಿ ಇಲ್ಲ ಎಂದರ್ಥವೇ? ಇದರ ಜೊತೆಗೆ 10 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕು. ಸ್ಕ್ರ್ಯಾಪ್ ಪಾಲಸಿ ಜಾರಿಗೆ  ಬಂದರೆ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕತೆ ಏನು.. ಹೀಗೆ ಹಲವು ಗೊಂದಲಗಳು ಈ ಪಾಲಿಸಿಯಲ್ಲಿವೆ.

ಬಜೆಟ್‌ನಲ್ಲಿ ಘೋಷಣೆ?

ಮುಂದಿನ ತಿಂಗಳು ಮಂಡನೆಯಾಗಲಿರುವ  ಬಜೆಟ್‌ನಲ್ಲಿ ಸ್ಕ್ರ್ಯಾಪಿಂಗ್ ಪಾಲಿಸಿ ಉಲ್ಲೇಖವಾಗುವ ಸಾಧ್ಯತೆ ಇದೆ. ಒಂದೊಮ್ಮೆ ಈ ನೀತಿಯನ್ನು ಜಾರಿಗೆ ತಂದರೆ ಆಟೋಮೊಬೈಲ್ ಕ್ಷೇತ್ರಕ್ಕೆ ಲಾಭವಾಗಲಿದ್ದು, ಹೊಸ ವಾಹನಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ. ಹೀಗಿದ್ದೂ, ಈ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಧಾನಿ ಕಾರ್ಯಾಲಯವು ತೆಗೆದುಕೊಳ್ಳಬೇಕಿದೆ. ಈ ಮೊದಲು ಸಂಬಂಧಿಸಿದವರೊಂದಿಗೆ ಮತ್ತೆ ಮಾತುಕತೆ ನಡೆಸಿ ನೀತಿಯನ್ನು ರೂಪಿಸುವಂತೆ ಅವರು ಪ್ರಧಾನಿ ಕಾರ್ಯಾಲಯ ಸೂಚಿಸಿತ್ತು. ಒಂದೊಮ್ಮೆ ಈ ನೀತಿ ಜಾರಿಯಾದರೆ ಭಾರತವು ಆಟೋಮೊಬೈಲ್ ಹಬ್ ಆಗಲಿದ್ದು, ವಾಹನಗಳ ಬೆಲೆಯಲ್ಲಿ ಇಳಿಕೆಯಾಗಬಹುದು.

click me!