ಎಲೆಕ್ಟ್ರಿಕ್ ವಾಹನಗಳಿಗೆ ಮಣೆ ಹಾಕಿದ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್

By Suvarna NewsFirst Published Jan 27, 2021, 2:53 PM IST
Highlights

ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಜೋ ಬೈಡನ್ ಕೆಲ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೀಗ ಸರ್ಕಾರದ ಸರಿ ಸುಮಾರು 6.50 ಲಕ್ಷ ವಾಹನಗಳನ್ನು ಬದಲಿಸಿ, ಹೊಸ ವಾಹನ ಖರೀದಿಸಲು ನಿರ್ಧರಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ವಾಶಿಂಗ್ಟನ್(ಜ.27): ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಇತ್ತೀಚೆಗಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಳಿಕ ಡೋನಾಲ್ಡ್ ಟ್ರಂಪ್ ತೆಗೆದುಕೊಂಡಿದ್ದ ಹಲವು ನಿರ್ಧಾರಗಳನ್ನು ಬದಲಿಸಿ, ಹೊಸ ಆದೇಶ ಹೊರಡಿಸಿದ್ದಾರೆ. ಇದೀಗ 6.50 ಲಕ್ಷ ಸರ್ಕಾರಿ ವಾಹನಗಳನ್ನು ಬದಲಿಸಿ ಹೊಸ ವಾಹನ ಖರೀದಿಗೆ ಮುಂದಾಗಿದ್ದಾರೆ.

ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!.

ಜೋ ಬೈಡೆನ್ ತೆಗೆದುಕೊಂಡ ಕೆಲ ಪ್ರಮುಖ ನಿರ್ಧಾರಗಳಲ್ಲಿ ಇದು ಕೂಡ ಒಂದಾಗಿದೆ. ಕಾರಣ 6.50 ಲಕ್ಷ ಸರ್ಕಾರಿ ವಾಹನ ಬದಲಿಸಿ ಇದೀಗ ಅಮೆರಿಕದಲ್ಲಿ ಉತ್ಪಾದನೆಯಾಗಿರುವ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬೈಡನ್ ಸರ್ಕಾರ ಮುಂದಾಗಿದೆ. ಈ ಮೂಲಕ ಗ್ರೀನ್ ಎನರ್ಜಿ ಉತ್ತಜಿಸಲು, ಮಾಲಿನ್ಯ ತಗ್ಗಿಸಲು ಅಮೆರಿಕ ಮುಂದಾಗಿದೆ.

5 ನಿಮಿಷ ಚಾರ್ಜಿಂಗ್, 100 KM ಮೈಲೇಜ್; ಬಿಡುಗಡೆಯಾಗುತ್ತಿದೆ ಹ್ಯುಂಡೈ IONIQ 5 ಕಾರು!.

ಬೈಡೆನ್ ಇದಕ್ಕೆ ನಿಗದಿತ ಸಮಯ ಹೇಳಿಲ್ಲ. ಇಷ್ಟೇ ಅಲ್ಲ ಈ ಯೋಜನೆಯ ಮೊತ್ತ ಕೂಡ ಬಹಿರಂಗ ಪಡಿಸಿಲ್ಲ. ಆದರೆ ಕೆಲ ಮಾಧ್ಯಮದ ವರದಿ ಪ್ರಕಾರ 20 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ತಗುಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜುಲೈ 2020ರ ವೇಳೆ 3,215 ಎಲೆಕ್ಟ್ರಿಕ್ ವಾಹನಗಳು ಸರ್ಕಾರಿ ವಾಹನಗಳಾಗಿ ಸೇರಿಕೊಂಡಿದೆ. 

ಇದೀಗ 6.50 ಲಕ್ಷ ಸರ್ಕಾರಿ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಬದಲಾಯಿಸುವುದು ಅತ್ಯಂತ ಸವಾಲಿನ ಯೋಜನೆಯಾಗಿದೆ. 
 

click me!