ಚಾಮುಂಡಿ ಬೆಟ್ಟದಲ್ಲಿ ಅಮೆರಿಕದಿಂದ ಅಮದು ಮಾಡಿಕೊಂಡಿರುವ, ಎಲಾನ್ ಮಸ್ಕ್ ಒಡೆತನ ಟೆಸ್ಲಾ ಕಂಪನಿ ಕಾರು ಪ್ರತ್ಯಕ್ಷಗೊಂಡಿದೆ. ಟೆಸ್ಲಾ ಕಾರು ನೋಡಲು ಜನ ಮುಗಿಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಮೈಸೂರು(ಜ.16) ವಿಶ್ವದ ನಂಬರ್ 1 ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಅಮೆರಿಕ ಟೆಸ್ಲಾ ಪಾತ್ರವಾಗಿದೆ. ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಭಾರತದಲ್ಲಿ ಉತ್ಪಾದನೆ ಆರಂಭಿಸುವ ಪ್ರಯತ್ನಗಳು ನಡೆಯುತ್ತಿದೆ. ಆದರೆ ಮುಕೇಶ್ ಅಂಬಾನಿ ಸೇರಿದಂತೆ ಕೆಲ ಭಾರತೀಯರು ಅಮೆರಿಕದಿಂದ ಟೆಸ್ಲಾ ಕಾರು ಆಮದು ಮಾಡಿಕೊಂಡಿದ್ದಾರೆ. ಇದೀಗ ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ಟೆಸ್ಲಾ ಕಾರು ಕಾಣಿಸಿಕೊಂಡಿದೆ. ಟೆಸ್ಲಾ ಕಾರು ನೋಡಲು ಜನ ಮುಗಿಬಿದ್ದ ವಿಡಿಯೋ ವೈರಲ್ ಆಗಿದೆ.
ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿರುವ ಕೆಂಪು ಬಣ್ಣದ ಟೆಸ್ಲಾ ಕಾರು ಇತರ ಸವಾರರು ಗಮನಸೆಳೆದಿದೆ. ಕೆಲ ಬೈಕರ್ಸ್ ಟೆಸ್ಲಾ ಕಾರು ಚೇಸ್ ಮಾಡಿಕೊಂಡು ಸಾಗಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾರು ಪಾರ್ಕ್ ಮಾಡಿದ ಬೆನ್ನಲ್ಲೇ ಜನ ಸೇರಿದ್ದಾರೆ. ಕಾರಣ ಟೆಸ್ಲಾ ಕಾರು ನೋಡಲು, ಕಾರಿನೊಳಗಿನ ಫೀಚರ್ಸ್ ನೋಡಲು ಕುತೂಹಲ ಗೊಂಡಿದ್ದಾರೆ. ಎಲ್ಲಕ್ಕಿಂತ ವಿಶೇಷವಾಗಿ ಟೆಸ್ಲಾ ಕಾರಿನ ಡೋರ್ ಅತ್ಯಂತ ಆಕರ್ಷಣೆ ಕೇಂದ್ರ.
undefined
ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಟೆಸ್ಲಾದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು!
ka_09_rider ಅನ್ನೋ ಇನ್‌ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಟೆಸ್ಲಾ ಕಾರು ಪಾರ್ಕ್ ಮಾಡಿದ ಬಳಿಕ ಭಾರಿ ಜನ ಸೇರಿದ್ದರು. ಹೀಗಾಗಿ ಕಾರಿನ ಮಾಲೀಕ ಡೋರ್ ತೆರೆದು ಮತ್ತಷ್ಟು ಕುತೂಹಲ ಹೆಚ್ಚಿಸಿದರು. ಕಾರಿನ ಫೀಚರ್ಸ್ ಸೇರಿದಂತೆ ಕೆಲ ಮಾಹಿತಿಗಳನ್ನು ನೀಡಿದ್ದಾರೆ. ಟೆಸ್ಲಾ ಕಾರುಗಳ ಡೋರ್ ಮೇಲಕ್ಕೆ ತೆರೆದುಕೊಳ್ಳುತ್ತದೆ. ಇದನ್ನು ನೋಡಲು ಜನರು ಮುಗಿಬಿದ್ದಿದ್ದರು.
ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಾರು ವಿಶ್ವದ ಬಹುಬೇಡಿಕೆಯ ಎಲೆಕ್ಟ್ರಿಕ್ ಕಾರು. ಆದರೆ ಈ ಕಾರು ಭಾರತದಲ್ಲಿ ಮಾರಾಟ ಆರಂಭಿಸಲು ಹಲವು ಸುತ್ತಿನ ಮಾತುಕತೆ ನಡೆಸಿದೆ. 2015ರಿಂದ ಟೆಸ್ಲಾ ಭಾರತ ಪ್ರವೇಶಕ್ಕೆ ನಿರಂತರ ಮಾತುಕತೆ ನಡೆಯುತ್ತಿದೆ. ಯಾವೂದೂ ಕೂಡ ಅಂತಿಮವಾಗಿಲ್ಲ. ಇತ್ತೀಚೆಗೆ ಟೆಸ್ಲಾ ಭಾರತದಲ್ಲಿ ಹೂಡಿಕೆಗೆ ತಯಾರಿ ಮಾಡಿಕೊಂಡಿರುವ ಮಾಹಿತಿಯನ್ನು ಬಹಿರಂಗಪಡಿಸಿತ್ತು.
ಚೀನಾದಲ್ಲಿ ಟೆಸ್ಲಾ ಉತ್ಪಾದನೆ ಘಟಕವಿದೆ. ಭಾರತದಲ್ಲಿ ಉತ್ಪಾದನೆಯಾಗುವ ಕಾರುಗಳನ್ನು ಇಂಡೋ ಪೆಸಿಫಿಕ್ ವಲಯದಲ್ಲಿ ರಫ್ತು ಮಾಡುವ ಸಾಧ್ಯತೆ ಇದೆ. ಟೆಸ್ಲಾ ಈ ಬಾರಿ ಉತ್ತಮ ಯೋಜನೆಯೊಂದಿಗೆ ಭಾರತ ಸರ್ಕಾರವನ್ನು ಸಂಪರ್ಕಿಸಿದೆ. ಹಾಗಾಗಿ ಈ ಬಾರಿ ಈ ಯೋಜನೆ ಧನಾತ್ಮಕವಾಗಿ ಮುಂದುವರೆಯಲಿದೆ ಎಂಬ ವಿಶ್ವಾಸವಿದೆ. ಈಗಾಗಲೇ ವಾಣಿಜ್ಯ ಕೈಗಾರಿಕೆ ಸಚಿವಾಲಯ ಟೆಸ್ಲಾದೊಂದಿಗಿನ ಮಾತುಕತೆಯನ್ನು ಮುನ್ನಡೆಸುತ್ತಿದ್ದು, ಸರ್ಕಾರ ಈ ಬಾರಿ ಉತ್ತಮ ಡೀಲ್ ಮಾಡಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಟೆಸ್ಲಾ ಕಾರು ಬಳಸಿ ರಾಮ್ ಹೆಸರನ್ನು ರಚಿಸಿದ ಅಮೆರಿಕ ವಾಸಿ ಭಾರತೀಯರು!
ಟೆಸ್ಲಾ ಭಾರತದಲ್ಲಿ ತನ್ನ ಘಟಕವನ್ನು ಗುಜರಾತ್‌ನಲ್ಲಿ ತೆರೆಯುವುದು ಬಹುತೇಕ ಅಂತಿಮವಾಗಿದೆ. ಆದರೆ ಇದುವರೆಗೂ ಅಧಿಕೃತ ಘೋಷಣೆ ಬಿದ್ದಿಲ್ಲ. ವೈಬ್ರೆಂಟ್ ಗುಜರಾತ್ ಸಮ್ಮಿಟ್‌ನಲ್ಲಿ ಈ ಕುರಿತು ಕೆಲ ನಿರ್ಧಾರಗಳು ಹೊರಬರವು ನಿರೀಕ್ಷೆಯಿತ್ತು. ಆದರೆ ಟೆಸ್ಲಾ ಕುರಿತ ನಿರ್ಧಾರಗಳು ಹೊರಬಿದ್ದಿಲ್ಲ.