ಸೋನಿ ಎಲೆಕ್ಟ್ರಿಕ್ ಕಾರು ಟೆಸ್ಟಿಂಗ್ ಆರಂಭ; ಶೀಘ್ರದಲ್ಲೇ ಅನಾವರಣ!

By Suvarna News  |  First Published Jan 15, 2021, 5:50 PM IST

ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗುತ್ತಿದೆ. ಆದರೆ ಸೋನಿ ಎಲೆಕ್ಟ್ರಿಕ್ ಕಾರು ಎಂದಾಗ ಬಹುತೇಕ ಕಿವಿ ನೆಟ್ಟಗಾಗುತ್ತದೆ. ಕಾರಣ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ದಿಗ್ಗಜನಾಗಿ ಗುರುತಿಸಿಕೊಂಡಿರುವ ಸೋನಿ ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಸೋನಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.


ಜಪಾನ್(ಜ.12); ಸೋನಿ ಎಲೆಕ್ಟ್ರಿಕಾನಿ ವಸ್ತುಗಳು ಯಾರಿಗೆ ತಾನೇ ತಿಳಿದಿಲ್ಲ. ಟಿವಿ, ಮ್ಯೂಸಿಕ್ ಸಿಸ್ಟಮ್, ಕ್ಯಾಮಾರ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನೀಡುತ್ತಿರುವ ಹೆಗ್ಗಳಿಗೆ ಸೋನಿಗಿದೆ. ಇದೀಗ ಇದೇ ಸೋನಿ ಕಂಪನಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಅತೀ ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಬಹುದಾದ ಎಲೆಕ್ಟ್ರಿಕ್ ಕಾರನ್ನು ಸೋನಿ ಶೀಘ್ರದಲ್ಲೇ ಅನಾವರಣ ಮಾಡಲಿದೆ.

ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ

Latest Videos

undefined

2020ರ ಗ್ರಾಹಕ ಎಲೆಕ್ಟ್ರಾನಿಕ್ ಶೋನಲ್ಲಿ ಸೋನಿ ಮೊದಲ ಬಾರಿಗೆ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಪರಿಚಯಿಸಿತು. ಬಳಿಕ ತಯಾರಿ ಆರಂಭಿಸಿತು. ಇದೀಗ ಸೋನಿ  ವಿಶನ್ ಎಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿನ ರೋಡ್ ಟೆಸ್ಟ್ ಆರಂಭಗೊಂಡಿದೆ. ಆಸ್ಟ್ರಿಯಾದ ಸುಂದರ ತಾಣಗಲ್ಲಿ ಸೋನಿ ವಿಶನ್ ಎಸ್ ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟ್ ನಡೆಸಿದೆ.

ಈ ಕಾರಿನಲ್ಲಿ ಹಲವು ವಿಶೇಷತೆಗಳಿವೆ. 4.8 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗ ತಲುಪತ್ತದೆ. ಇನ್ನು ಈ ಕಾರಿನ ಗರಿಷ್ಟ ವೇಗ 240 ಕಿ.ಮೀ ಪ್ರತಿ ಗಂಟೆಗೆ. ಅತ್ಯಾಧುನಿಕ  ಟೆಕ್ನಾಲಜಿ ಬಳಸಲಾಗುತ್ತಿದೆ. ಕಾರಣ ಟೆಕ್ ದಿಗ್ಗಜನಾಗಿರುವ ಸೋನಿಗೆ ಇದುವ ಸುಲಭದ ಮಾತು. ಸೋನಿ ಪ್ರಕಾರ, ಅತೀ ಕಡಿಮೆ ಸಮಯದಲ್ಲಿ ಕಾರು ಫುಲ್ ಚಾರ್ಜ್ ಆಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲಿ ಬಹಿರಂಗವಾಗಲಿದೆ.

 

click me!