ಮೇಡ್ ಇನ್ ಇಂಡಿಯಾ BMW 220i M ಸ್ಪೋರ್ಟ್ ಕಾರು ಬಿಡುಗಡೆ!

By Suvarna NewsFirst Published Jan 12, 2021, 9:31 PM IST
Highlights

ಗರಿಷ್ಠ ಸುರಕ್ಷತೆ, ಗರಿಷ್ಠ ಆರಾಮದಾಯಕ ಪ್ರಯಾಣ ಹಾಗೂ ಅಷ್ಟೇ ಐಷಾರಾಮಿ BMW 220i M ಸ್ಪೋರ್ಟ್ಸ್ ಕಾರು ಬಿಡುಗಡೆಯಾಗಿದೆ. ಇದು ಮೇಡ್ ಇನ್ ಇಂಡಿಯಾ ಕಾರು. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಜ.12):  BMW 2 ಸೀರೀಸ್ ಗ್ರಾನ್ ಕೂಪೆ ಭಾರತದಲ್ಲಿ ಇಂದು ಹೊಸ ಪೆಟ್ರೋಲ್ ವೇರಿಯೆಂಟ್‍ನಲ್ಲಿ ಬಿಡುಗಡೆ ಮಾಡಲಾಯಿತು. ಆಕರ್ಷಕ ‘M ಸ್ಪೋರ್ಟ್’ ಪ್ಯಾಕೇಜ್‍ನಲ್ಲಿ ಪರಿಚಯಿಸಿದ ನ್ಯೂ BMW 220i ಸ್ಥಳೀಯವಾಗಿ BMW ಗ್ರೂಪ್ ಘಟಕ ಚೆನ್ನೈನಲ್ಲಿ ಉತ್ಪಾದಿಸಲಾಗಿದೆ. ಇದು ಇಂದಿನಿಂದ ಡೀಲರ್‍ಶಿಪ್‍ನಲ್ಲಿ ಲಭ್ಯವಿದ್ದು ಎರಡು ಆಕರ್ಷಕ ಡೀಸೆಲ್ ವೇರಿಯೆಂಟ್ಸ್‍ನಲ್ಲಿ ಲಭ್ಯವಿದೆ. BMW 220i M ಸ್ಪೋರ್ಟ್ 40,90,000 ರೂಪಾಯಿ

BMW ಕಾರು ಕನಸು ಮತ್ತಷ್ಟು ಸುಲಭ; ಗ್ರಾನ್ ಕೂಪೆ `ಬ್ಲಾಕ್ ಶ್ಯಾಡೋ ಎಡಿಶನ್ ಲಾಂಚ್!

BMW 2 ಸೀರೀಸ್ ಗ್ರಾನ್ ಕೂಪೆ ನಾಲ್ಕು ಉತ್ಸಾಹಕರ ಬಣ್ಣಗಳು- ಆಲ್ಪೈನ್ ವ್ಹೈಟ್(ನಾನ್-ಮೆಟಾಲಿಕ್) ಮತ್ತು ಮೆಟಾಲಿಕ್ ಪೇಂಟ್‍ವಕ್ರ್ಸ್- ಬ್ಲಾಕ್ ಸಫೈರ್, ಮೆಲ್ಬೋರ್ನ್ ರೆಡ್ ಮತ್ತು ಸ್ಟಾರ್ಮ್ ಬೇಯಲ್ಲಿ ಲಭ್ಯ. ಒ ಸ್ಪೋರ್ಟ್ ವೇರಿಯೆಂಟ್ ಎರಡು ಹೆಚ್ಚುವರಿ ವಿಶೇಷ ಬಣ್ಣಗಳು-ಮಿಸಾನೊ ಬ್ಲೂ ಮತ್ತು ಸ್ನಾಪರ್ ರಾಕ್ಸ್‍ಗಳಲ್ಲಿ ಲಭ್ಯ. ಅಪ್‍ಹೋಲ್ಸ್‍ಟ್ರಿ ಆಯ್ಕೆಯ ಸಂಯೋಜನೆಗಳಲ್ಲಿ ಸೆನ್ಸಾಟೆಕ್ ಆಯಿಸ್ಟರ್ ಬ್ಲಾಕ್ ಮತ್ತು ಸೆನ್ಸಾಟೆಕ್ ಬ್ಲಾಕ್ ಒಳಗೊಂಡಿವೆ. 

ಭಾರತದಲ್ಲಿ ಆಲ್-ನ್ಯೂ BMW X5M ಕಾಂಪಿಟಿಷನ್ ಬಿಡುಗಡೆ !...

BMW ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್ ಅಸಾಧಾರಣ ದಕ್ಷತೆಯೊಂದಿಗೆ ಗರಿಷ್ಠ ಶಕ್ತಿಯನ್ನು ಒಗ್ಗೂಡಿಸುತ್ತದೆ ಮತ್ತು ಕಡಿಮೆ ಎಂಜಿನ್ ವೇಗಗಳಲ್ಲೂ ತಕ್ಷಣದ ಪ್ರತಿಕ್ರಿಯೆ ನೀಡುತ್ತದೆ. ಟು-ಲೀಟರ್ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್ 190 hP ಔಟ್‍ಪುಟ್ ಉತ್ಪಾದಿಸುತದೆ ಮತ್ತು ಗರಿಷ್ಠ ಟಾರ್ಕ್ 280 Nm ಅನ್ನು 1350-4600 RPM ನಲ್ಲಿ ನೀಡುತ್ತದೆ. ಈ ಕಾರು ಕೇವಲ 7.1 ಸೆಕೆಂಡುಗಳಲ್ಲಿ 0 -100 km/H ವೇಗ ಪಡೆಯುತ್ತದೆ. ಎಯ್ಟ್ ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೊಮ್ಯಾಟಿಕ್ ಟ್ರಾನ್ಸ್‍ಮಿಷನ್ ಸ್ಟೀರಿಂಗ್ ವ್ಹೀಲ್‍ನಲ್ಲಿ ಶಿಫ್ಟ್ ಪ್ಯಾಡಲ್‍ಗಳೊಂದಿಗೆ ಬಂದಿದೆ. ಈ ಕ್ವಿಕ್-ಶಿಫ್ಟ್ ಕಂಟ್ರೋಲ್ ಅನ್ನು ತೀವ್ರವಾದ ಮ್ಯಾನುಯಲ್ ಗೇರ್ ಬದಲಾವಣೆಗಳಿಗೆ ಅನುಗುಣವಾಗಿ ಮತ್ತೆ ಅಪ್‍ಡೇಟ್ ಮಾಡಲಾಗಿದೆ. ಉದ್ದದ ಏಳನೇ ಗೇರ್ ರಿವ್ ಕಡಿಮೆ ಇರಿಸುವ ಮೂಲಕ ನಗರ ಹೊರಗಡೆ ಅಥವಾ ಮೋಟಾರ್ ದಾರಿಯಲ್ಲಿ ಇಂಧನ ಬಳಕೆ ಕಡಿಮೆ ಮಾಡಲು ನೆರವಾಗುತ್ತದೆ. ಟ್ರಾನ್ಸ್‍ಮಿಷನ್ ಕಾರನ್ನು ಕೆಲ ಸನ್ನಿವೇಶಗಳಲ್ಲಿ ನ್ಯೂಟ್ರಲ್ ಆಗಿರಿಸಲು ನೆರವಾಗುತ್ತದೆ, ವಿಶೇಷವಾದ ಲೋ-ವಿಸ್ಕೋಸಿಟಿ ಆಯಿಲ್ ಅಔ2 ಹೊರಹೊಮ್ಮುವಿಕೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. 

BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್‍ನ ವಿಶೇಷವಾದ ಮತ್ತು ಅನುಕೂಲಕರ ಫೈನಾನ್ಷಿಯಲ್ ಸಲ್ಯೂಷನ್ಸ್ ಅನ್ನು ವೈಯಕ್ತಿಕ ಅಗತ್ಯಗಳಂತೆ ವಿನ್ಯಾಸಗೊಳಿಸಲಾಗಿದೆ.BMW 360˚ ಫೈನಾನ್ಷಿಯಲ್ ಪ್ಯಾಕೇಜಸ್ ಅನ್ನು ಮಹತ್ತರ ಮೌಲ್ಯದೊಂದಿಗೆ ನೀಡುತ್ತದೆ ಮತ್ತು ಸಂಪೂರ್ಣ ಮನಃಶ್ಯಾಂತಿ ಪಡೆಯಬಹುದು. ಸರ್ವೀಸ್ ಇನ್‍ಕ್ಲೂಸಿವ್ ಮತ್ತು ಸರ್ವೀಸ್ ಇನ್‍ಕ್ಲೂಸಿವ್ ಪ್ಲಸ್ ಮಾಲೀಕತ್ವದ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಈ ಪ್ಯಾಕೇಜ್‍ಗಳು ಕಂಡೀಷನ್ ಬೇಸ್ಡ್ ಸರ್ವೀಸ್ ನೀಡುತ್ತವೆ. 

BMW 2 ಸೀರೀಸ್ ಗ್ರಾನ್ ಕೂಪೆ 
BMW 2 ಸೀರೀಸ್ ಗ್ರಾನ್ ಕೂಪೆ ತನ್ನ ದೊಡ್ಡ ಸ್ಟೇಬಲ್‍ಮೇಟ್ಸ್‍ನ ಉನ್ನತ ಸೌಂದರ್ಯಪ್ರಜ್ಞೆಯನ್ನು ಸರಿಸಾಟಿ ಇರದಂತೆ ವರ್ಗಾಯಿಸುತ್ತದೆ. ಎಕ್ಸ್‍ಟೀರಿಯರ್ ಆಧುನಿಕ ಹಾಗೂ ಸುಂದರ ವಿನ್ಯಾಸ ಹೊಂದಿದ್ದು ನಿಖರ ಸಾಲುಗಳು ಮತ್ತು ಕಡೆದಿಟ್ಟ ಮೇಲ್ಮೈಗಳಿಂದ ಬೆಳಕು ಮತ್ತು ನೆರಳಿನ ಆಕರ್ಷಕ ಇಂಟರ್‍ಪ್ಲೇ ಸೃಷ್ಟಿಸುತ್ತದೆ. ಈ ಪ್ರತ್ಯೇಕವಾಗಿ ನಿಲ್ಲುವ ಗುಣವು ಅದರ ಹಿಗ್ಗಿಸಿದ ಸಿಲ್ಹೌಟ್, ನಾಲ್ಕು ಫ್ರೇಮ್‍ಲೆಸ್ ಡೋರ್ಸ್ ಮತ್ತು ಅ-ಪಿಲ್ಲರ್‍ನಲ್ಲಿ ಸೈಡ್ ಟ್ಯಾಪರ್‍ನೊಂದಿಗೆ ಎದ್ದು ಕಾಣುವ ಶೌಲ್ಡರ್‍ಗಳು ಅದಕ್ಕೆ ಕ್ರೀಡಾತನದ, ಹೆಚ್ಚಿಲ್ಲದ ಮತ್ತು ವಿಸ್ತಾರವಾದ ನಿಲುವು ನೀಡುತ್ತದೆ. ಕೊಂಚ ಕೋನ ಹೊಂದಿದ ಪ್ರಮುಖ BMW ನಾಲ್ಕು ಕಣ್ಣಿನ ಮುಖದಿಂದ ಪೂರ್ಣ-ಐಇಆ ಹೆಡ್‍ಲೈಟ್ಸ್ ಮತ್ತು BMW ಕಿಡ್ನಿ ಗ್ರಿಲ್ ಕ್ಲಾಸಿಕ್ BMW ಐಕಾನ್‍ಗಳಿಗೆ ತಾಜಾ ವ್ಯಾಖ್ಯಾನ ನೀಡುತ್ತದೆ. ಫುಲ್-ಐಇಆ ಟೈಲ್‍ಲೈಟ್ಸ್ ಹಿಂಬದಿಯ ಕೇಂದ್ರಕ್ಕೆ ವಿಸ್ತರಿಸಿದೆ ಮತ್ತು ಅಚ್ಚುಮೆಚ್ಚಿನ BMW ‘ಐ’ ಆಕಾರವನ್ನು ಒಂದು ತೆಳುವಾದ ಬೆಳಕಿನ ಅಂಶದೊಂದಿಗೆ ನೀಡುತ್ತದೆ ಮತ್ತು ಬದಿಗೆ ಅನನ್ಯವಾದ ಸ್ವೀಪ್ ನೀಡುತ್ತದೆ. 

ಅದರ ಕ್ರೀಡಾ ನೋಟದ ಆಚೆಗೂ ಒಳಾಂಗಣವನ್ನು ಕ್ಯಾಬಿನ್‍ನ ವೈಶಾಲ್ಯತೆಯನ್ನು ಹೆಚ್ಚಿಸುವಂತೆ ಮತ್ತು ಡ್ರೈವರ್-ಫೋಕಸ್ಟ್ ಕಾಕ್‍ಪಿಟ್ ವಿಶಿಷ್ಟ ವಸ್ತುಗಳಿಂದ ವಿನ್ಯಾಸಗೊಳಿಸಲಾಗಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಸ್ಪೋರ್ಟ್ ಸೀಟ್ಸ್ ಎಲೆಕ್ಟ್ರಿಕಲ್ ಮೆಮೊರಿ ಫಂಕ್ಷನ್‍ನಿಂದ ಹೆಚ್ಚಿನ ದೀರ್ಘ ಪ್ರಯಾಣದ ಅನುಕೂಲ ನೀಡುತ್ತದೆ. ಸೊಗಸಾದ ಕೂಪೆ ಉದಾರ ಕ್ಯಾಬಿನ್ ಸ್ಥಳವನ್ನು ನೀಡಿದ್ದು ಹಿಂಬದಿ ಪ್ರಯಾಣಿಕರಿಗೆ ಸುಲಭ ಪ್ರವೇಶ ಮತ್ತು ಕಾಲು ಚಾಚಲು ವಿಶಾಲ ಸ್ಥಳ ನೀಡುತ್ತದೆ. ದೊಡ್ಡ ಪನೋರಮ ಗ್ಲಾಸ್ ರೂಫ್ ವೈಶಾಲ್ಯತೆಯ ಭಾವನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ದೊಡ್ಡ 430 ಲೀಟರ್ಸ್ ಲಗೇಜ್ ಕಂಪಾರ್ಟ್‍ಮೆಂಟ್ ಅನ್ನು 40/20/40 ಸ್ಪ್ಲಿಟ್ ರಿಯರ್ ಸೀಟ್ ಬ್ಯಾಕ್‍ರೆಸ್ಟ್ ಮಡಚುವ ಮೂಲಕ ವಿಸ್ತರಿಸಬಹುದು. ರಿಯರ್‍ಸೀಟ್ ಅನ್ನು ಸಂಪೂರ್ಣವಾಗಿ ಮತ್ತಷ್ಟು ಸ್ಥಳಾವಕಾಶಕ್ಕೆ ಮಡಚಬಹುದು. ಇಲ್ಯುಮಿನೇಟೆಡ್ ಟ್ರಿಮ್, ಈ ವರ್ಗದಲ್ಲಿ ಪ್ರಥಮವಾಗಿದ್ದು ಹಗಲಿನಲ್ಲಿ ಸಹಜವಾಗಿ ಕಾಣುತ್ತದೆ ಮತ್ತು ಕತ್ತಲಲ್ಲಿ ಅಲಂಕಾರಿಕ ಬೆಳಕಿನ ಅಂಶವಾಗಿ ಸ್ಥಳವನ್ನು ರೂಪಿಸುವ ಪರಿಣಾಮದಲ್ಲಿ ಕಾಣುತ್ತದೆ. ಆ್ಯಂಬಿಯೆಂಟ್ ಲೈಟಿಂಗ್ ಆರು ಮಂದಗೊಳಿಸಬಲ್ಲ ವಿನ್ಯಾಸಗಳೊಂದಿಗೆ ಪ್ರತಿ ಮನಸ್ಥಿತಿಗೂ ವಾತಾವರಣ ಸೃಷ್ಟಿಸುತ್ತದೆ. 

ಈ ಕಾರು ಫ್ರಂಟ್-ವ್ಹೀಲ್-ಡ್ರೈವ್ ಆರ್ಕಿಟೆಕ್ಚರ್ ಹೊಂದಿದ್ದು ಇದು ಎಂಜಿನ್ ಅನ್ನು ಟ್ರಾನ್ಸ್‍ವರ್ಸ್‍ಲಿ ಇರಿಸುತ್ತದೆ, ಇದರಿಂದ ಡ್ರೈವಿಂಗ್ ಡೈನಮಿಕ್ಸ್‍ನಲ್ಲಿ ರಾಜಿಯಾಗದೆ ಸ್ಥಳ ಉಳಿಸುತ್ತದೆ. ಅಂಡರ್‍ಸ್ಟೀರಿಂಗ್ ಕಡಿಮೆ ಮಾಡಲು  ಟೆಕ್ನಾಲಜಿ(ಆಕ್ಚುಯೇಟರ್ ಕಂಟಿಗ್ಯೂಯಸ್ ವ್ಹೀಲ್ ಸ್ಲಿಪ್ ಲಿಮಿಟೇಷನ್ ಸಿಸ್ಟಂ) (ಡ್ರೈವಿಂಗ್ ಸ್ಟೆಬಿಲಿಟಿ ಕಂಟ್ರೋಲ್)ಯೊಂದಿಗೆ ಸಂಯೋಜನೆಯಲ್ಲಿ ಕೆಲಸ ಮಾಡುತ್ತದೆ.BMW ಪರ್ಫಾರ್ಮೆನ್ಸ್ ಕಂಟ್ರೋಲ್ ಸಿಸ್ಟಂ ಕಾರಿನ ಸ್ಥಿರತೆಯನ್ನು ಚಕ್ರಗಳ ಉದ್ದೇಶಿತ ಬ್ರೇಕಿಂಗ್ ಮೂಲಕ ಹೆಚ್ಚಿಸುತ್ತದೆ. 

BMW ಟ್ವಿನ್ ಪವರ್ ಟರ್ಬೊ ಡೀಸೆಲ್ ಎಂಜಿನ್ ಅಸಾಧಾರಣ ದಕ್ಷತೆಯೊಂದಿಗೆ ಗರಿಷ್ಠ ಶಕ್ತಿಯನ್ನು ಸಂಯೋಜಿಸುತ್ತದೆ ಮತ್ತು ಕಡಿಮೆ ಎಂಜಿನ್ ವೇಗಗಳಲ್ಲೂ ತಕ್ಷಣದ ಪ್ರತಿಕ್ರಿಯೆ ನೀಡುತ್ತದೆ. BMW 220ಜ ನ ಟು-ಲೀಟರ್ ಫೋರ್-ಸಿಲಿಂಡರ್ ಡೀಸೆಲ್ ಎಂಜಿನ್ ಔಟ್‍ಪುಟ್ 190 hP ಉತ್ಪಾದಿಸುತ್ತದೆ ಮತ್ತು ಗರಿಷ್ಠ ಟಾರ್ಕ್ 1,750 – 2,500 RPM ನಲ್ಲಿ 400 NM ನೀಡುತ್ತದೆ. ಕಾರು ಕೇವಲ 7.5 ಸೆಕೆಂಡುಗಳಲ್ಲಿ 0 -100 KM/h ವೇಗ ಪಡೆಯುತ್ತದೆ. BMW ಟ್ವಿನ್ ಪವರ್ ಟರ್ಬೊ ಪೆಟ್ರೋಲ್ ಎಂಜಿನ್ ಗರಿಷ್ಠ ಶಕ್ತಿಯನ್ನು ಅಸಾಧಾರಣ ದಕ್ಷತೆ ಮತ್ತು  ತಕ್ಷಣದ ಪ್ರತಿಕ್ರಿಯಾತ್ಮಕತೆಯೊಂದಿಗೆ ಕಡಿಮೆ ಎಂಜಿನ್ ಸ್ಪೀಡ್‍ನಲ್ಲೂ ಸಂಯೋಜಿಸುತ್ತದೆ. ಟು-ಲೀಟರ್ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಔಟ್‍ಪುಟ್ ಉತ್ಪಾದಿಸುತ್ತದೆ ಮತ್ತು 1350-4600 RPM ನಲ್ಲಿ ಗರಿಷ್ಠ ಟಾರ್ಕ್ 280 RPM ನೀಡುತ್ತದೆ. ಕಾರು ಕೇವಲ 7.1 ಸೆಕೆಂಡುಗಳಲ್ಲಿ 0 -100KM /h ವೇಗ ಪಡೆಯುತ್ತದೆ. 

ಎಯ್ಟ್ ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೊಮ್ಯಾಟಿಕ್ ಟ್ರಾನ್‍ಮಿಷನ್ ಮೃದುವಾದ, ಬಹುತೇಕ ಅಗ್ರಾಹ್ಯ ಗೇರ್‍ಶಿಫ್ಟ್ಸ್ ನೀಡುತ್ತದೆ. ಯಾವುದೇ ಸಮಯದಲ್ಲಿ, ಯಾವುದೇ ಗೇರ್‍ನಲ್ಲಿ ಟ್ರಾನ್‍ಮಿಷನ್ ಪರಿಪೂರ್ಣವಾಗಿ ಎಂಜಿನ್‍ನೊಂದಿಗೆ ಸಹಯೋಗ ಹೊಂದುವ ಮೂಲಕ ಅದಕ್ಕೆ ಪೂರ್ಣ ಶಕ್ತಿ ಮತ್ತು ದಕ್ಷತೆ ಅಭಿವೃದ್ಧಿಗೆ ಅವಕಾಶ ನೀಡುತ್ತದೆ. ಮತ್ತಷ್ಟು ಹೆಚ್ಚಿನ ಚಾಲನೆಯ ಸಂತೋಷಕ್ಕೆ ಇದು ಸ್ಟೀರಿಂಗ್ ವ್ಹೀಲ್ ಪ್ಯಾಡಲ್ ಶಿಫ್ಟರ್ಸ್ ಮತ್ತು ಕ್ರೂಸ್ ಕಂಟ್ರೋಲ್ ವಿಥ್ ಬ್ರೇಕಿಂಗ್ ಫಂಕ್ಷನ್‍ನೊಂದಿಗೆ ಬಮದಿದೆ. ಲಾಂಚ್ ಕಂಟ್ರೋಲ್ ಬಳಸಿ ಮಹತ್ವಾಕಾಂಕ್ಷೆಯ ಚಾಲಕರು ಸ್ಥಿರವಾಗಿ ನಿಂತಿರುವುದರಿಂದ ಗರಿಷ್ಠ ಟ್ರಾಕ್ಷನ್‍ಗೆ ಆಕ್ಸಲರೇಷನ್ ಸಾಧಿಸಬಹುದು. 
 
ಅಸಂಖ್ಯ BMW ಕನೆಕ್ಟೆಡ್ ಡ್ರೈವ್ ಟೆಕ್ನಾಲಜೀಸ್ ವಾಹನೋದ್ಯಮದಲ್ಲಿ ಆವಿಷ್ಕಾರದ ಅಡೆತಡೆಯನ್ನು ಮುರಿಯುವುದನ್ನು ಮುಂದುವರಿಸಿದೆ. ಆಧುನಿಕ ಕಾಕ್‍ಪಿಟ್ ಕಾನ್ಸೆಪ್ಟ್ BMW ಲೈವ್ ಕಾಕ್‍ಪಿಟ್ ಪ್ರೊಫೆಷನಲ್ 3ಆ ನ್ಯಾವಿಗೇಷನ್, ಇಂಚು 12.3 ಡಿಜಿಟಲ್ ಇನ್ಸ್‍ಟ್ರುಮೆಂಟ್ ಡಿಸ್ಪ್ಲೇ ಸ್ಟೀರಿಂಗ್ ವ್ಹೀಲ್ ಹಿಂಬದಿ ಮತ್ತು 10.25 ಇಂಚು ಕಂಟ್ರೋಲ್ ಡಿಸ್ಪ್ಲೇ ಹೊಂದಿದೆ. ಒಳಗಿರುವವರು ತಮ್ಮ BMW ವರ್ಚುಯಲ್ ಅಸಿಸ್ಟೆಂಟ್ ಜೊತೆ ಮಾತನಾಡುವ ಮೂಲಕ ಹಲವಾರು ಕಾರ್ಯಗಳನ್ನು ನಿರ್ವಹಿಸಬಹುದು. BMW ಗೆಸ್ಚರ್ ಕಂಟ್ರೋಲ್ ಮೂಲಕ ಕೈಗಳು ಕೂಡಾ ಮಾತನಾಡುತ್ತವೆ ಇದು ಅಸಂಖ್ಯ ಕಾರ್ಯಗಳನ್ನು ನಿಯಂತ್ರಿಸಲು ಆರು ಪೂರ್ವ-ನಿರ್ಧರಿತ ಕೈಗಳ ಚಲನೆಯನ್ನು ಗುರುತಿಸುತ್ತದೆ. ಸ್ಮಾರ್ಟ್‍ಫೋನ್ ಹೋಲ್ಡರ್ ಅನ್ನು ಸೆಂಟರ್ ಕನ್ಸೋಲ್‍ಗೆ ಜೋಡಿಸಲಾಗಿದ್ದು ಇದು ಇಂಡಕ್ಟಿವ್, ವೈರ್‍ಲೆಸ್ ಚಾರ್ಜಿಂಗ್ ಅನ್ನು ಮೊಬೈಲ್ ಫೋನ್‍ಗಳಿಗೆ ನೀಡುತ್ತದೆ. ಪಾರ್ಕಿಂಗ್ ಅಸಿಸ್ಟೆಂಟ್ ರಿಯರ್ ವ್ಯೂ ಕ್ಯಾಮರಾದೊಂದಿಗೆ ಕಿರಿದಾದ ಜಾಗಗಳಲ್ಲಿ ಪಾರ್ಕಿಂಗ್ ಅನ್ನು ಸುಲಭಗೊಳಿಸುತ್ತದೆ. ರಿವರ್ಸಿಂಗ್ ಅಸಿಸೆಂಟ್ ಪಾರ್ಕಿಂಗ್ ತಾಣದಿಂದ ರಿವರ್ಸ್ ಮಾಡುವಾಗ ಅಥವಾ ಕಿರಿದಾದ ದಾರಿಗಳಲ್ಲಿ ಸರಿಸಾಟಿ ಇರದ ಬೆಂಬಲ ನೀಡುತ್ತದೆ. ಇದು ಚಾಲನೆ ಮಾಡಿದ 50 ಮೀಟರ್‍ಗಳ ದಾಖಲೆ ಇರಿಸುತ್ತದೆ ಮತ್ತು ಸ್ಟೀರಿಂಗ್ ತೆಗೆದುಕೊಂಡು ನೆರವಾಗುತ್ತದೆ. ವೈರ್‍ಲೆಸ್ ಆಪಲ್ ಕಾರ್‍ಪ್ಲೇ ಸರಿಸಾಟಿ ಇರದ ಸ್ಮಾರ್ಟ್‍ಫೋನ್ ಸಂಪರ್ಕವನ್ನು ಕಾರಿನೊಂದಿಗೆ ನೀಡುವ ಮೂಲಕ ಹಲವಾರು ಕಾರ್ಯಗಳಿಗೆ ಲಭ್ಯತೆ ನೀಡುತ್ತದೆ. 

BMW ಎಫಿಷಿಯೆಂಟ್ ಡೈನಮಿಕ್ಸ್‍ನಲ್ಲಿ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೊಮ್ಯಾಟಿಕ್ ಟ್ರಾನ್‍ಮಿಷನ್, ಆಟೊ ಸ್ಟಾರ್ಟ್-ಸ್ಟಾಪ್, ಬ್ರೇಕ್-ಎನರ್ಜಿ ರೀಜನರೇಷನ್, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, 50:50 ವೆಯ್ಟ್ ಡಿಸ್ಟ್ರಿಬ್ಯೂಷನ್ ಮತ್ತು ಇಅಔ Pಖಔ ಮೋಡ್ ಅನ್ನು ಡ್ರೈವಿಂಗ್ ಎಕ್ಸ್‍ಪೀರಿಯೆನ್ಸ್ ಕಂಟ್ರೋಲ್‍ನಲ್ಲಿ ನೀಡುತ್ತದೆ.BMW ಸೇಫ್ಟಿ ಟೆಕ್ನಾಲಜೀಸ್‍ನಲ್ಲಿ ಆರು ಏರ್‌ಬ್ಯಾಗ್, ಅಟೆಂಟಿವ್‍ನೆಸ್ ಅಸಿಸ್ಟೆನ್ಸ್, ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ(ABS),  ಡೈನಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಡೈನಮಿಕ್ ಟ್ರಾಕ್ಷನ್ ಕಂಟ್ರೋಲ್  ಮತ್ತು ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಕಂಟ್ರೋಲ್ , ಕಾರ್ನರಿಂಗ್ ಬ್ರೇಕ್ ಕಂಟ್ರೋಲ್   ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.
 

click me!