Affordable electric cars ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು!

By Suvarna News  |  First Published Dec 15, 2021, 9:12 PM IST
  • 2021ರಲ್ಲಿ ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು
  • ಆಡಿ, BMW ಸೇರಿದಂತೆ ದುಬಾರಿ ಕಂಪನಿಗಳ ಎಲೆಕ್ಟ್ರಿಕ್ ಕಾರು ಲಭ್ಯ
  • ಕೈಗೆಟುಕುವ ದರ, ಗರಿಷ್ಠ ಮೈಲೇಜ್‌ನಲ್ಲಿ ಟಾಟಾಗೆ ಮೊದಲ ಸ್ಥಾನ

ನವದೆಹಲಿ(ಡಿ.15): ಹೊಸ ವರ್ಷದಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು(Electric Electric) ಭಾರತದಲ್ಲಿ ಬಿಡುಗಡೆಯಾಗಲಿದೆ. ಹಲವರು ತಮ್ಮ ಕಾರುಗಳನ್ನು ಬದಲಿಸಲು ಕಾಯುತ್ತಿದ್ದಾರೆ. ಪ್ರಸಕ್ತ ವರ್ಷ ಕೊರೋನಾ(Corona) ಸೇರಿದಂತೆ ಹಲವು ಅಡತಡೆಗಳಿದ್ದರೂ ಎಲೆಕ್ಟ್ರಿಕ್ ಕಾರು ಮಾರಾಟ ಚೇತರಿಕೆಯ ಹಾದಿಯಲ್ಲಿದೆ. 2021ರಲ್ಲಿ ಭಾರತದಲ್ಲಿ ಐಷಾರಾಮಿ, ಕೈಗೆಟುಕುವ ದರದ ಹಲವು ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಲಭ್ಯವಿದೆ. ಇದರಲ್ಲಿ ಕಡಿಮೆ ಬೆಲೆಯ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಕಾರಿನ ವಿವರ ಇಲ್ಲಿದೆ.

ಟಾಟಾ ಟಿಗೋರ್ EV
ಭಾರತದಲ್ಲಿ ಕೈಗೆಟುಕವ ದರ, ಗರಿಷ್ಠ ಸೇಫ್ಟಿ ಕಾರುಗಳನ್ನು ನೀಡುವ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ಮೋಟಾರ್ಸ್(Tata Motors) ಎರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಟಾಟಾ ಟಿಗೋರ್ ಇವಿ(Tata Tigor EV) ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರಾಗಿದೆ. 2021ರಲ್ಲಿ ಟಿಗೋರ್ ಇವಿ ಹೊಸ ರೂಪದಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಯಾಗಿದೆ.  ಇದು ಸಬ್ 4  ಮೀಟರ್ ಕಾಂಪಾಕ್ಟ್ ಸೆಡಾನ್ ಕಾರಾಗಿದೆ. ಟಾಟಾ ಟಿಗೋರ್ ಇವಿ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 306 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇದರ ಬೆಲೆ 11.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಗರಿಷ್ಠ ಬೆಲೆ 12.99 ಲಕ್ಷ ರೂಪಾಯಿ. ಮೂರು ವೇರಿಯೆಂಟ್ ಈ ಕಾರಿನಲ್ಲಿ ಲಭ್ಯವಿದೆ. 

Tap to resize

Latest Videos

undefined

Affordable Electric car ಟಾಟಾಗೆ ಪೈಪೋಟಿ, ಕೈಗೆಟುಕುವ ದರದಲ್ಲಿ ಬರುತ್ತಿದೆ ಹ್ಯುಂಡೈ, MG ಎಲೆಕ್ಟ್ರಿಕ್ ಕಾರು!

ಟಾಟಾ ನೆಕ್ಸಾನ್ ಇವಿ
ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ SUV ಎಲೆಕ್ಟ್ರಿಕ್ ಕಾರು ಟಾಟಾ ನೆಕ್ಸಾನ್ ಇವಿ(Tata Nexon EV). ಇದರ ಪ್ರತಿಸ್ಪರ್ಧಿಯಾಗಿರುವ ಎಂಜಿ ZS ಎಲೆಕ್ಟ್ರಿಕ್ ಕಾರು ಟಾಟಾ ನೆಕ್ಸಾನ್ ಕಾರಿಗಿಂತ 6 ರಿಂದ 7 ಲಕ್ಷ ರೂಪಾಯಿ ದುಬಾರಿಯಾಗಿದೆ. 30.2 kWh ಬ್ಯಾಟರಿ ಹೊಂದಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು 312 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿದೆ. ನೆಕ್ಸಾನ್ ಇವಿ ಕಾರು 129PS ಪವರ್ ಹಾಗೂ 245Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೆಕ್ಸಾನ್ ಇವಿ ಬೆಲೆ 14.25 ಲಕ್ಷ ರೂಪಾಯಿಯಿಂದ 16.85 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಎಂಜಿ  ZS EV
ಎಂಜಿ ಮೋಟಾರ್ಸ್ ಭಾರತದಲ್ಲಿ ಬಿಡುಗಡೆ ಮಾಡಿರುವ ಏಕೈಕ ಎಲೆಕ್ಚ್ರಿಕ್ ಕಾರು ಎಂಜಿ ZS ಎಲೆಕ್ಟ್ರಿಕ್ ಕಾರು. ಎಂಜಿ ZS ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 340 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿದೆ. 44.5kWh ಲಿಕ್ವಿಡ್ ಕೂಲ್ಡ್ ಲಿಥಿಯಮಂ ಬ್ಯಾಟರಿ ಐಯಾನ್ ಬ್ಯಾಟರಿ ಹೊಂದಿದೆ. ಎಂಜಿ  ZS EV ಟಾಟಾ ನೆಕ್ಸಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ನೆಕ್ಸಾನ್‌ಗಿಂತ ಉತ್ತಮ ಮೈಲೇಜ್ ರೇಂಜ್ ಹೊಂದಿದೆ. ಆದರೆ ಇದರ ಬೆಲೆ 20 ಲಕ್ಷ ರೂಪಾಯಿ(ಎಕ್ಸ್ ಶೋರೂಂ). ದಕ್ಷ ಮೋಟಾರು ಬಳಸಲಾಗಿದೆ. ಹೀಗಾಗಿ ಎಂಜಿ ಎಲೆಕ್ಟ್ರಿಕ್ ಕಾರು 143bhp ಪವರ್ ಹಾಗೂ 353Nm ಟಾರ್ಕ್ ಉತ್ಪಾದಿಸಲಿದೆ. 100 ಕಿಮೀ ವೇಗ ತಲುಪಲು ಕೇವಲ 8.5 ಸೆಕೆಂಡ್ ತೆಗೆದುಕೊಳ್ಳಲಿದೆ.

ಮೇಡ್ ಇನ್ ಚೀನಾ ಕಾರನ್ನು ಭಾರತಕ್ಕೆ ತರಬೇಡಿ; ಟೆಸ್ಲಾಗೆ ನಿತಿನ್ ಗಡ್ಕರಿ ಸೂಚನೆ!

ಹ್ಯುಂಡೈ ಕೋನಾ ಎಲೆಕ್ಟ್ರಿಕ್
ಭಾರತದಲ್ಲಿ ಬಿಡುಗಡೆಯಾದ ಮೊದಲ ಎಲೆಕ್ಟ್ರಿಕ್ SUV ಕಾರು ಹ್ಯುಂಡೈ ಕೋನಾ(Hyundai Kona). ಇದಕ್ಕೂ ಮೊದಲು ಭಾರತದಲ್ಲಿ ಮಹೀಂದ್ರ ರೇವಾ ಸೇರಿದಂತೆ ಅತೀ ಸಣ್ಣ ಎಲೆಕ್ಟ್ರಿಕ್ ಕಾರು ಮಾತ್ರ ಲಭ್ಯವಿತ್ತು. ಆದರೆ ಕೋನಾ ಕಾರು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿತು. ಸಂಪೂರ್ಣ ಚಾರ್ಜ್ ಮಾಡಿದರೆ ಕೋನಾ 425 ಕಿಲೋಮೀಟರ್ ಮೈಲೇಜ್ ನೀಡಲಿದೆ.  39.2 ಕಿಲೋವ್ಯಾಟ್ ಲಿಥಿಂಯ ಐಯಾನ್ ಪೊಲಿಮರ್ ಬ್ಯಾಟರಿ ಹೊಂದಿದೆ. ಕೋನಾ ಕಾರಿನ ಬೆಲೆ 25 ಲಕ್ಷ ರೂಪಾಯಿ.

ಇವೆಲ್ಲ ಕೈಗೆಟುಕವ ದರದಲ್ಲಿರುವ ಎಲೆಕ್ಟ್ರಿಕ್ ಕಾರುಗಳು. ಭಾರತದಲ್ಲಿ ಇದರ ಜೊತೆಗೆ ದುಬಾರಿ ಹಾಗೂ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಜಾಗ್ವರ್ ಐ ಪೇಸ್, ಆಡಿ ಇ ಟ್ರಾನ್, ಇತ್ತೀಚೆಗೆ ಬಿಡುಗಡೆಯಾದ BMW IX ಇವಿ,  ಬಿವೈಡಿ ಇ6 ಸೇರಿದಂತೆ ದುಬಾರಿ ಕಾರುಗಳು ಲಭ್ಯವಿದೆ. 2021ರಲ್ಲಿ ಕೈಗೆಟುಕುವದರದ ಕಾರುಗಳ ಸಂಖ್ಯೆ ಕಡಿಮೆ ಇದೆ. ಆದರೆ 2022ರಲ್ಲಿ ಹ್ಯುಂಡೈ, ಎಂಜಿ ಸೇರಿದಂತೆ ಕೆಲ ಆಟೋಕಂಪನಿಗಳು 10 ರಿಂದ 15 ಲಕ್ಷ ರೂಪಾಯಿ ಬೆಲೆಯ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

click me!