7.50 ಕೋಟಿ ರೂ ಫೆರಾರಿ SF90 ಕಾರಿನಲ್ಲಿ ಅಕಾಶ್ ಅಂಬಾನಿ ಜಾಲಿ ಡ್ರೈವ್!

By Suvarna News  |  First Published May 6, 2023, 11:52 AM IST

ಅಂಬಾನಿ ಕುಟುಂಬದ ಬಳಿ ಐಷಾರಾಮಿ ಕಾರುಗಳ ಬೆಲೆ ಕೇಳಿದರೆ ತಲೆ ತಿರುಗುತ್ತೆ. ಕುಟುಂಬದ ಪ್ರತಿ ಸದಸ್ಯರ ಬಳಿ ದುಬಾರಿ ಕಾರುಗಳಿವೆ. ಮುಕೇಶ್ ಅಂಬಾನಿ ಪುತ್ರ ಅಕಾಶ್ ಅಂಬಾನಿ ತಮ್ಮ ನೆಚ್ಚಿನ ಫೆರಾರಿ SF90 ಕಾರಿನಲ್ಲಿ ಜಾಲಿ ಡ್ರೈವ್ ಹೋಗಿದ್ದಾರೆ. 


ಮುಂಬೈ(ಮೇ.06): ಅಂಬಾನಿ ಕುಟುಂಬದ ಪ್ರತಿಯೊಬ್ಬರು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಕೇವಲ ಕಾರು ಖರೀದಿಸಿ ಕಲೆಕ್ಷನ್ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ, ಖುದ್ದು ಡ್ರೈವ್ ಆನಂದ ಅನುಭವಿಸುತ್ತಾರೆ. ಇದೀಗ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಹಿರಿಯ ಪುತ್ರ ಅಕಾಶ್ ಅಂಬಾನಿ ತಮ್ಮ ನೆಚ್ಚಿನ ಕೆಂಪು ಬಣ್ಣದ ಫೆರಾರಿ SF90 ಕಾರಿನಲ್ಲಿ ಜಾಲಿ ಡ್ರೈವ್ ಮಾಡಿದ್ದಾರೆ. ಮುಂಬೈ ಬೀದಿಯಲ್ಲಿ ಅಕಾಶ್ ಅಂಬಾನಿ ಫೆರಾರಿ ಡ್ರೈವ್ ಮಾಡಿ ಗಮನಸೆಳೆದಿದ್ದಾರೆ.

ಅಕಾಶಿ ಅಂಬಾನಿ ಫ್ಯಾನ್ ಪೇಜ್ ಕಾರು ಡ್ರೈವ್ ವಿಡಿಯೋ ಹಂಚಿಕೊಂಡಿದೆ. ಬಳಿ ಬಣ್ಣದ ಶರ್ಟ್ ಧರಿಸಿದ ಅಕಾಶ್ ಅಂಬಾನಿ, ಫೆರಾರಿ SF90 ಕಾರು ಡ್ರೈವ್ ಮಾಡುತ್ತಾ ವೇಗವಾಗಿ ಸಾಗಿದ್ದಾರೆ. ಅಕಾಶ್ ಅಂಬಾನಿ ಫೆರಾರಿ ಕಾರು ಅಂಬಾನಿ ಗ್ಯಾರೇಜಿನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಸುತ್ತುವರಿದಿದ್ದಾರೆ. ಹಲವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

Tap to resize

Latest Videos

undefined

Ambani cars ವಿಶ್ವದ ಅತ್ಯಂತ ದುಬಾರಿ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್ ಖರೀದಿಸಿದ ಮುಕೇಶ್ ಅಂಬಾನಿ!

ಫೆರಾರಿ SF90 ಕಾರಿನ ಬೆಲೆ 7.50 ಕೋಟಿ ರೂಪಾಯಿ. ಭಾರತದಲ್ಲಿ ಕೆಲವೇ ಕೆಲವು ಮಂದಿಯಲ್ಲಿ ಈ ಕಾರಿದೆ. ಅಕಾಶ್ ಅಂಬಾನಿ ಬಳಿ ರೆಡ್ ಕಲರ್‌ನ ಫೆರಾರಿ SF90 ಕಾರು ಅತ್ಯಂತ ಆಕರ್ಷಕ ಸ್ಪೋರ್ಟ್ಸ್ ಕಾರು. ಇದು ಹೈಬ್ರಿಡ್ ಎಂಜಿನ್ ಹೊಂದಿದೆ. 4.0L ಟ್ವಿನ್ ಟರ್ಬೋ 90 ಡಿಗ್ರಿ V8 ರೇಟೆಡ್ ಕಾರಾಗಿದೆ. 769 hp ಪವರ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ಸ್ ಹೊಂದಿದೆ. ಪೆಟ್ರೋಲ್ ಎಂಜಿನ್ ಕಾರು ಅತೀ ವೇಗದ ಕಾರು ಎಂದೇ ಗುರುತಿಸಿಕೊಂಡಿದೆ.3990 ಸಿಸಿ ಹೊಂದಿರುವ ಈ ಕಾರು ಪವರ್‌ಫುಲ್ ಪರ್ಫಾಮೆನ್ಸ್ ನೀಡಲಿದೆ.

 

 

ರೆಡ್ ಬ್ಯೂಟಿ ಫೆರಾರಿ ಕಾರು ಅಕಾಶ್ ಅಂಬಾನಿ ನೆಚ್ಚಿನ ಕಾರಾಗಿದೆ. ಹಲವು ಬಾರಿ ಈ ಕಾರಿನಲ್ಲಿ ಅಕಾಶ್ ಅಂಬಾನಿ ಕಾಣಿಸಿಕೊಂಡಿದ್ದಾರೆ. ಅಕಾಶ್ ಅಂಬಾನಿ ಬಳಿ ಮೆಕ್ಲರೆನ್ ಸೇರಿದಂತೆ ಹಲವು ಸ್ಪೋರ್ಟ್ಸ್ ಕಾರುಗಳಿವೆ. ಇತ್ತೀಚೆಗೆ ಅಕಾಶ್ ಅಂಬಾನಿ ಹಳದಿ ಬಣ್ಣದ ಮೆಕ್ಲೆರೆನ್ ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಿನ ಬೆಲೆ 4.85 ಕೋಟಿ ರೂಪಾಯಿ.

ಅಂಬಾನಿ ಮನೆ ಸೇರಿದ ಫೆರಾರಿ ಹಾಗೂ ಮೆಕ್ಲೆರೆನ್ ಸೂಪರ್ ಕಾರು!

ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆಯಲ್ಲಿ ಅತೀ ದೊಡ್ಡ ಸ್ಥಳ ಐಷಾರಾಮಿ ಕಾರು ಪಾರ್ಕ್ ಮಾಡಲು ಮೀಸಲಿಡಲಾಗಿದೆ. ಆ್ಯಂಟಿಲಿಯಾದಲ್ಲಿ 400,000 ಚದರ ಅಡಿ ಸ್ಥಳ ಕಾರು ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. ಇದರಲ್ಲಿ 158 ಅತೀ ದೊಡ್ಡ ಗಾತ್ರದ ಕಾರುಗಳನ್ನು ಪಾರ್ಕ್ ಮಾಡಲು ಸಾಧ್ಯವಿದೆ. ಆ್ಯಂಟಿಲಿಯಾ ಮನೆಯಲ್ಲಿ ಒಟ್ಟು 27 ಮಹಡಿಗಳಿವೆ. ಇದರಲ್ಲಿ ಒಂದು  ಮಹಡಿ ಸಂಪೂರ್ಣ ಕಾರು ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. 

ಕೆಲ ವರ್ಷಗಳಹಿಂದ ಮುಂಬೈ ಇಂಡಿಯನ್ಸ್ ಆಟಗಾರರು ಅಂಬಾನಿಯ ಆ್ಯಂಟಲಿಯಾ ಮನಗೆ ಭೇಟಿ ನೀಡಿದ್ದರು. ಈ ವೇಳೆ ಕಾರು ಪಾರ್ಕಿಂಗ್ ಭೇಟಿ ನೀಡಿ ಐಷಾರಾಮಿ ಕಾರುಗಳನ್ನುನೋಡಿ ದಂಗಾಗಿದ್ದರು. ರೋಲ್ಸ್ ರಾಯ್ಸ್ ಸೇರಿದಂತೆ ವಿಶ್ವದ ಎಲ್ಲಾ ದುಬಾರಿ ಕಾರುಗಳು ಅಂಬಾನಿ ಬಳಿ ಇದೆ. ಟೆಸ್ಲಾದ ಎಲೆಕ್ಟ್ರಿಕ್ ಕಾರನ್ನು ಆಮದು ಮಾಡಿಕೊಂಡಿದ್ದಾರೆ. ಅಂಬಾನಿಯ ಬೆಂಗಾವಲು ಪಡೆಗೆ ರೇಂಜ್ ರೋವರ್ ಕಾರು ನೀಡಲಾಗಿದೆ. ರೇಂಜ್ ರೋವರ್ ಕಾರಿನ ಆರಂಭಿಕ ಬೆಲೆ 1 ಕೋಟಿ ರೂಪಾಯಿ. 

click me!