600 KM ಮೈಲೇಜ್, 543hp ಪವರ್, ಟಾಟಾದ ರೇಂಜ್ ರೋವರ್ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಆರಂಭ

Published : Sep 03, 2026, 01:38 PM IST
Range Rover Electric

ಸಾರಾಂಶ

600 ಕಿಲೋಮೀಟರ್ ಮೈಲೇಜ್, 10 ನಿಮಿಷ ಚಾರ್ಜ್ ಮಾಡಿದರೆ 220 ಕಿ.ಮೀ ಪ್ರಯಾಣ ಸೇರಿದಂತೆ ಹಲವು ವಿಶೇಷತೆಗಳ ರೇಂಜ್ ರೋವರ್ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಆರಂಭಗೊಂಡಿದೆ. ಇದು ಹೆಮ್ಮೆಯ ಟಾಟಾ ಮಾಲೀಕತ್ವದ ಕಾರು.

ನವದೆಹಲಿ (ಸೆ.03) ಭಾರತದ ಪ್ರತಿಷ್ಠಿತ ಟಾಟಾ ಮಾಲೀಕತ್ವದ ರೇಂಜ್ ರೋವರ್ ಇದೀಗ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ರೇಂಜ್ ರೋವರ್ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಆರಂಭಗೊಂಡಿದೆ. ಫುಲ್ ಚಾರ್ಜ್‌ಗೆ ಬರೋಬ್ಬರಿ 600 ಕಿಲೋಮೀಟರ್ ಮೈಲೇಜ್ ನೀಡಲಿದೆ. ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ ಶೇಕಡಾ 10 ರಿಂದ 80ರಷ್ಟು ಚಾರ್ಜ್ ಆಗಲು ಕೇವಲ 22 ನಿಮಿಷ ಸಾಕು. ಇನ್ನು 10 ನಿಮಿಷ ಚಾರ್ಜ್ ಮಾಡಿದರೆ 220 ಕಿಲೋಮೀಟರ್ ಮೈಲೇಜ್ ನೀಡಲಿದೆ. ಅಧಿಕೃತ ಡೀಲರ್ ಹಾಗೂ ವೆಬ್‌ಸೈಟ್ ಮೂಲಕ ರೇಂಜ್ ರೋವರ್ ಎಲೆಕ್ಟ್ರಿಕ್ ಕಾರು ಬುಕಿಂಗ್ ಮಾಡಿಕೊಳ್ಳಬಹುದು.

ಬ್ಯಾಟರಿ ಹಾಗೂ ಚಾರ್ಜಿಂಗ್

ರೇಂಜ್ ರೋವರ್ ಎಲೆಕ್ಟ್ರಿಕ್ ಕಾರಿನಲ್ಲಿ 118.5kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. 8 ವರ್ಷ ಅಥವಾ 1.60 ಲಕ್ಷ ಕಿಲೋಮೀಟರ್ ವಾರೆಂಟಿ ನೀಡಲಾಗುತ್ತದೆ. WLTP ಪ್ರಕಾರ ಮೈಲೇಜ್ ರೇಂಜ್ 600 ಕಿಲೋಮೀಟರ್, ಪ್ರಾಯೋಗಿಕವಾಗಿ 535 ಕಿಲೋಮೀಟರ್ ಮೈಲೇಜ್ ನೀಡಲಾಗಿದೆ. ರೇಂಜ್ ರೋವರ್ ಎಲೆಕ್ಟ್ರಿಕ್ ಕಾರು 543hp ಪವರ್ ಹಾಗೂ 850Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಹೈ ಪರ್ಫಾಮೆನ್ಸ್ ಕಾರು ಇದಾಗಿದೆ. 0-100 ವೇಗವನ್ನು 4.5 ಸೆಕೆಂಡ್‌ನಲ್ಲಿ ತಲುಪಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಕಾರು ಇದಾಗಿದೆ.

ರೇಂಜ್ ರೋವರ್ ಎಲೆಕ್ಟ್ರಿಕ್ ಕಾರಿನ ಬೆಲೆ

ರೇಂಜ್ ರೋವರ್ ಎಲೆಕ್ಟ್ರಿಕ್ ಕಾರು ಲಾಂಗ್ ವ್ಹೀಲ್‌ಬೇಸ್ ಹೊಂದಿದೆ. ಇದು ಸಂಪೂರ್ಣ ಆಮದು ಮಾಡೆಲ್ ಕಾರಾಗಿದೆ. ಹೀಗಾಗಿ ಭಾರತ ಯುಕೆ ಟ್ರೇಡ್ ಸುಂಕ ವಿನಾಯಿತಿ ಸಿಗುವುದಿಲ್ಲ. ಈ ಕಾರಿನ ಆರಂಭಿಕ ಅಂದಾಜು ಬೆಲೆ 3.5 ಕೋಟಿ ರೂಪಾಯಿ (ಎಕ್ಸ್ ಶೋ ರೂಂ). ಇದು ಇಂಧನ ಕಾರಿಗಿಂತ ಕೊಂಚ ದುಬಾರಿಯಾಗಿದೆ. ಭಾರತದಲ್ಲಿ ಬುಕಿಂಗ್ ಆರಂಭಗೊಂಡಿರುವ ಎಲೆಕ್ಟ್ರಿಕ್ ಕಾರಿನ ಬೆಲೆ ಇನ್ನು ಬಹಿರಂಗವಾಗಿಲ್ಲ.

ರೇಂಜ್ ರೋವರ್ ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ವೇಳೆ 350kW DC ಚಾರ್ಜ್ ಸಪೋರ್ಟ್ ಮಾಡಲಿದೆ. ಇನ್ನುವಿಶಾಲವಾದ ಕ್ಯಾಬಿನ್, ಗರಿಷ್ಠ ಸುರಕ್ಷತೆ, 6 ಏರ್‌ಬ್ಯಾಗ್, ಎಐ ಕ್ಯಾಮೆರಾ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ. ಭಾರತದಲ್ಲಿ ರೇಂಜ್ ರೋವರ್ ಹೊಸ ಇವಿ ಮೂಲಕ ಸಂಚಲನ ಮೂಡಿಸಲು ಸಜ್ದಾಗಿದೆ.

PREV
Read more Articles on
click me!

Recommended Stories

ಚಲಿಸುತ್ತಿದ್ದ Tata Sierra ಕಾರಿನ ಮೇಲೆಯೇ ಬಿದ್ದ ಭಾರಿ ಕಂಟೇನರ್: ನಜ್ಜುಗುಜ್ಜಾದರೂ ಗಟ್ಟಿಯಾಗಿ ನಿಂತ ಟಾಟಾ ಕಾರು
MG Windsor EV ಪ್ರಿಯರಿಗೆ ಬಿಗ್ ಸರ್‌ಪ್ರೈಸ್: ಪ್ರೀಮಿಯಂ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂಜಿ ಇಂಡಲ್ಜ್ ಎಡಿಷನ್