ಕಾಯುವಿಕೆ ಕೊನೆಗೂ ಅಂತ್ಯ; ಹೊಸ Baleno ಫೇಸ್‌ಲಿಫ್ಟ್‌ನಿಂದ Kia Sorento ವರೆಗೆ, ಸೆಪ್ಟೆಂಬರ್‌ನಲ್ಲಿ ಬರಲಿದೆ ಈ 4 ಕಾರು

Published : Sep 01, 2026, 04:28 PM IST
Maruti Suzuki Baleno Facelift

ಸಾರಾಂಶ

ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ವಾಹನ ಮಾರುಕಟ್ಟೆಗೆ ಹಲವು ಹೊಸ ಕಾರುಗಳು ಲಗ್ಗೆ ಇಡಲಿವೆ. ಮಾರುತಿ ಬಲೆನೊ ಫೇಸ್‌ಲಿಫ್ಟ್‌ನಿಂದ ಹಿಡಿದು, ಕಿಯಾ ಸೊರೆಂಟೊ ಎಸ್‌ಯುವಿ, ಬಿಎಂಡಬ್ಲ್ಯು 7 ಸಿರೀಸ್ ಮತ್ತು ಪೋರ್ಷೆ ಕಯೆನ್ನೆ ಎಲೆಕ್ಟ್ರಿಕ್‌ನಂತಹ ಐಷಾರಾಮಿ ಮಾದರಿಗಳು ಬಿಡುಗಡೆಯಾಗಲು ಸಜ್ಜಾಗಿವೆ.

ನವದೆಹಲಿ (ಸೆ.1): ಹಬ್ಬದ ಋತು ಆರಂಭಕ್ಕೂ ಮುನ್ನವೇ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಲು ಸಜ್ಜಾಗಿದೆ. ಆಗಸ್ಟ್ ತಿಂಗಳು ಹೊಸ ಕಾರುಗಳ ಬಿಡುಗಡೆಗೆ ಹೆಸರಾಗಿದ್ದರೆ, ಸೆಪ್ಟೆಂಬರ್ ತಿಂಗಳು ಸಹ ಅದಕ್ಕಿಂತ ಕಡಿಮೆಯಿಲ್ಲ. ಸೆಪ್ಟೆಂಬರ್‌ನಲ್ಲಿ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್‌ನಿಂದ ಹಿಡಿದು ಬಿಗ್ ಎಸ್‌ಯುವಿ, ಐಷಾರಾಮಿ ಸೆಡಾನ್ ಹಾಗೂ ಎಲೆಕ್ಟ್ರಿಕ್ ಎಸ್‌ಯುವಿಗಳವರೆಗೂ ಹಲವು ಹೊಸ ಕಾರುಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿರುವ ಪ್ರಮುಖ 4 ಕಾರುಗಳ ಸಂಪೂರ್ಣ ವಿವರ ಇಲ್ಲಿದೆ

ಕಿಯಾ ಸೊರೆಂಟೊ (Kia Sorento)

ದಕ್ಷಿಣ ಕೊರಿಯಾದ ಪ್ರಸಿದ್ಧ ವಾಹನ ತಯಾರಕ ಸಂಸ್ಥೆ 'ಕಿಯಾ' ತನ್ನ ಹೊಸ ಫ್ಲ್ಯಾಗ್‌ಶಿಪ್ ಎಸ್‌ಯುವಿ 'ಸೊರೆಂಟೊ' ಅನ್ನು ಸೆಪ್ಟೆಂಬರ್ 4 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಕಂಪನಿಯ ಅತ್ಯಂತ ದೊಡ್ಡ ಪೆಟ್ರೋಲ್-ಡೀಸಲ್ ಎಸ್‌ಯುವಿ ಆಗಿರಲಿದ್ದು, ಗ್ರಾಹಕರಿಗೆ ಸ್ಟ್ರಾಂಗ್ ಹೈಬ್ರಿಡ್ ಮತ್ತು ಡೀಸಲ್ ಇಂಜಿನ್ ಆಯ್ಕೆಗಳಲ್ಲಿ ಸಿಗಲಿದೆ. ಇದರ 1.6 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಸೆಟಪ್ 238 hp ಪವರ್ ಮತ್ತು 380 Nm ಟಾರ್ಕ್ ಉತ್ಪಾದಿಸುತ್ತದೆ. ಇನ್ನು 2.0 ಲೀಟರ್ ಡೀಸಲ್ ಇಂಜಿನ್ 202 hp ಪವರ್ ಹಾಗೂ 441 Nm ಟಾರ್ಕ್ ನೀಡುವ ಸಾಮರ್ಥ್ಯ ಹೊಂದಿದೆ. ಸೊರೆಂಟೊ 6 ಮತ್ತು 7 ಸೀಟರ್ ಮಾದರಿಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಕಂಪನಿ ಈಗಾಗಲೇ ಇದರ ಬುಕಿಂಗ್ ಆರಂಭಿಸಿದೆ.

ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್ (Maruti Suzuki Baleno Facelift)

ಸಾಮಾನ್ಯ ಗ್ರಾಹಕರಿಗೆ ಸೆಪ್ಟೆಂಬರ್‌ನಲ್ಲಿ ದೊಡ್ಡ ಕೊಡುಗೆ ಸಿಗಲಿದೆ. ದೇಶದ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ 'ಮಾರುತಿ ಸುಜುಕಿ ಬಲೆನೊ'ದ ಹೊಸ ಫೇಸ್‌ಲಿಫ್ಟ್ ಮಾದರಿಯು ಸೆಪ್ಟೆಂಬರ್ 5 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. 2022 ರಲ್ಲಿ ಎರಡನೇ ತಲೆಮಾರಿನ (2nd Generation) ಬಲೆನೊ ಬಿಡುಗಡೆಯಾಗಿತ್ತು, ಈಗ ಇದಕ್ಕೆ ಮಿಡ್-ಲೈಫ್ ಅಪ್‌ಡೇಟ್ ನೀಡಲಾಗುತ್ತಿದೆ. ಪರೀಕ್ಷಾರ್ಥ ಚಾಲನೆ ವೇಳೆ ಕಂಡುಬಂದಂತೆ ಕಾರಿನ ಮುಂಭಾಗದ ವಿನ್ಯಾಸದಲ್ಲಿ (Front Design) ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಸ್ತುತ ಇರುವ 90 hp ಪವರ್ ನೀಡುವ 1.2 ಲೀಟರ್ ಪೆಟ್ರೋಲ್ ಇಂಜಿನ್ ಮುಂದುವರಿಯಲಿದ್ದು, 5-ಸ್ಪೀಡ್ ಮ್ಯಾನುಯಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆ ಸಿಗಲಿದೆ. CNG ಮಾದರಿಯು 77.5 hp ಪವರ್ ನೀಡಲಿದ್ದು, ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿರಲಿದೆ.

ಬಿಎಂಡಬ್ಲ್ಯು 7 ಸಿರೀಸ್ ಮತ್ತು i7 (BMW 7 Series & i7)

ಐಷಾರಾಮಿ ಕಾರು ಪ್ರಿಯರಿಗಾಗಿ ಬಿಎಂಡಬ್ಲ್ಯು ಸಂಸ್ಥೆಯು ಸೆಪ್ಟೆಂಬರ್ 11 ರಂದು ಹೊಸ ಅಪ್‌ಡೇಟೆಡ್ '7 ಸಿರೀಸ್' ಮತ್ತು 'i7' ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. 7 ಸಿರೀಸ್ ಕಾರು ಪೆಟ್ರೋಲ್ ಹಾಗೂ ಡೀಸಲ್ ಆಯ್ಕೆಗಳಲ್ಲಿ ಸಿಗಲಿದ್ದರೆ, i7 ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ '740i' ಪೆಟ್ರೋಲ್ ಮಾದರಿಯಲ್ಲಿ 3.0 ಲೀಟರ್ 6-ಸಿಲಿಂಡರ್ ಇಂಜಿನ್ ನೀಡಲಾಗಿದ್ದು, ಇದು 400 hp ಪವರ್ ಹಾಗೂ 580 Nm ಟಾರ್ಕ್ ಉತ್ಪಾದಿಸುತ್ತದೆ. ಇನ್ನು '740d' ಡೀಸಲ್ ಇಂಜಿನ್ 313 hp ಮತ್ತು 670 Nm ಟಾರ್ಕ್ ನೀಡುತ್ತದೆ. ಎರಡೂ ಮಾದರಿಗಳಲ್ಲಿ 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಆಲ್-ವೀಲ್ ಡ್ರೈವ್ (AWD) ಸೌಲಭ್ಯ ಮುಂದುವರಿಯಲಿದೆ.

ಪೋರ್ಷೆ ಕಯೆನ್ನೆ ಎಲೆಕ್ಟ್ರಿಕ್ (Porsche Cayenne Electric)

ಇವಿ (EV) ನಿರೀಕ್ಷೆ ಹೊಂದಿರುವವರಿಗೆ ಸೆಪ್ಟೆಂಬರ್ 30 ರಂದು 'ಪೋರ್ಷೆ ಕಯೆನ್ನೆ ಎಲೆಕ್ಟ್ರಿಕ್' ದೊಡ್ಡ ಆಕರ್ಷಣೆಯಾಗಲಿದೆ. ಈ ಐಷಾರಾಮಿ ಎಲೆಕ್ಟ್ರಿಕ್ ಕಾರಿನ ಸಾಮಾನ್ಯ ಆವೃತ್ತಿಗೆ ₹1.77 ಕೋಟಿ ಹಾಗೂ 'ಕಯೆನ್ನೆ ಟರ್ಬೊ ಎಲೆಕ್ಟ್ರಿಕ್' ಮಾದರಿಗೆ ₹2.27 ಕೋಟಿ ಎಕ್ಸ್-ಶೋರೂಮ್ ಬೆಲೆ ನಿಗದಿಪಡಿಸಲಾಗಿದೆ. ಎರಡೂ ಮಾಡೆಲ್‌ಗಳಲ್ಲಿ 113 kWh ಬ್ಯಾಟರಿ ಹಾಗೂ ಡ್ಯುಯಲ್-ಮೋಟರ್ ಆಲ್-ವೀಲ್ ಡ್ರೈವ್ ಸಿಸ್ಟಮ್ ನೀಡಲಾಗಿದೆ. ಕೇವಲ 2.5 ಸೆಕೆಂಡುಗಳಲ್ಲಿ 0 ಯಿಂದ 100 kmph ವೇಗ ಪಡೆದುಕೊಳ್ಳುವ 'ಟರ್ಬೊ ಎಲೆಕ್ಟ್ರಿಕ್' ಮಾದರಿಯು 'ಲಾಂಚ್ ಕಂಟ್ರೋಲ್'ನೊಂದಿಗೆ ಬರೋಬ್ಬರಿ 1,156 hp ಪವರ್ ಹಾಗೂ 1,500 Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 260 kmph ಆಗಿದ್ದು, ಒಂದೇ ಚಾರ್ಜ್‌ನಲ್ಲಿ 537 ಕಿ.ಮೀ (WLTP range) ಮೈಲೇಜ್ ನೀಡುತ್ತದೆ.

PREV
Read more Articles on
click me!

Recommended Stories

Japanese 7 Seater: ಜಪಾನ್‌ನಿಂದ ಬಂತು ಹೊಸ 7 ಸೀಟರ್‌ ಫ್ಯಾಮಿಲಿ ಕಾರ್! ಬೆಲೆ ₹17 ಲಕ್ಷ, ಮೈಲೇಜ್ ಎಷ್ಟು?
₹10ರ ಪ್ಲಾಸ್ಟಿಕ್ ಬ್ಯಾಗ್‌ನಿಂದ ಕಾರಿನ ಮಿರರ್‌ಗೆ ಇಷ್ಟೊಂದು ಪ್ರಯೋಜನವೇ? ಇಲ್ಲಿದೆ ಟ್ರಿಕ್‌