ಅತೀ ಕಡಿಮೆ ಬೆಲೆಯಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ SUV ಕಾರು ಬಿಡುಗಡೆ, 421 ಕಿ.ಮೀ ಮೈಲೇಜ್

By Suvarna NewsFirst Published Jan 17, 2024, 4:49 PM IST
Highlights

ಆ್ಯಕ್ಟಿ.ಇವಿ  ಹೊಸ ತಂತ್ರಜ್ಞಾನ ಹಾಗೂ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹೊಚ್ಚ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. 421 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರು 10.99 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

ಮುಂಬೈ(ಜ.17) ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಹೊಸ ಸಂಚಲನ ಸಷ್ಟಿಸಿದೆ. ಇದೀಗ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ SUV ಕಾರು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೌದು, ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳ ಪೈಕಿ ಟಾಟಾ ಪಂಚ್ ಅತೀ ಕಡಿಮೆ ಬೆಲೆಯ ಕಾರಾಗಿದೆ. ಟಾಟಾ ಪಂಚ್ ಇವಿ 10.99 ಲಕ್ಷ ರೂಪಾಯಿ ಆರಂಭಿಕ ಬೆಲೆ(ಎಕ್ಸ ಶೋ ರೂಂ)ಯಲ್ಲಿ ಲಭ್ಯವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಟಾಟಾ ಪಂಚ್ ಇವಿ 421 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.  

ಸುಧಾರಿತ ಪ್ಯೂರ್ ಇವಿ ಆರ್ಕಿಟೆಕ್ಚರ್ ಆ್ಯಕ್ಟಿ.ಇವಿ ಅನ್ನು ಆಧರಿಸಿ ತಯಾರಿಸಿದ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದೆ. ಸ್ಮಾರ್ಟ್, ಅಡ್ವೆಂಚರ್ ಮತ್ತು ಎಂಪವರ್ಡ್ ಎಂಬ ಮೂರು ವಿಭಿನ್ನ ಶೈಲಿಗಳಲ್ಲಿ ಕಾರು ಲಭ್ಯವಿದೆ. ಪಂಚ್.ಇವಿ ಬಹುಮುಖ ಮತ್ತು ಬಹು-ಶಕ್ತಿಶಾಲಿ ಎಲೆಕ್ಟ್ರಿಕ್ ವಾಹನವಾಗಿದ್ದು, ಸೊಗಸಾದ ಅದ್ಭುತವಾದ ಕ್ಲಾಸಿಕಲ್ ಎಸ್‌ಯುವಿ ವಿನ್ಯಾಸ ಹೊಂದಿದೆ. ಪಂಚ್.ಇವಿ ದೇಶಾದ್ಯಂತ ಇರು ಎಲ್ಲಾ ಟಾಟಾ ಮೋಟಾರ್ಸ್ ಶೋರೂಮ್‌ಗಳ ಅಧಿಕೃತ ಇವಿ ಮಾರಾಟ ಕೇಂದ್ರಗಳಲ್ಲಿ ಮತ್ತು ಟಾಟಾ.ಇವಿ ಸ್ಟೋರ್‌ಗಳಲ್ಲಿ ಲಭ್ಯವಿದೆ.

ವಿವಿಧ ಗ್ರಾಹಕ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಪಂಚ್.ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಅದರಲ್ಲಿ ಒಂದು 25 KWH ಆಗಿದ್ದು, 315 ಕಿಮೀಗಳ ಮೈಲೇಜ್ ರೇಂಜ್ ಒದಗಿಸುತ್ತದೆ. ಇನ್ನೊಂದು 35 KWH  ಬ್ಯಾಟರಿ ಆಯ್ಕೆಯಾಗಿದ್ದು, ಇದು 421 ಕಿಮೀ ಮೈಲೇಜ್  ರೇಂಜ್  ನೀಡುತ್ತದೆ.  60ಕೆಡಬ್ಲ್ಯೂಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಏಸಿ ಮೋಟಾರ್, 114ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.  90ಕೆಡಬ್ಲ್ಯೂ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಏಸಿ ಮೋಟಾರ್ 190ಎನ್ಎಂ ಟಾರ್ಕ್‌ ಉತ್ಪಾದಿಸುತ್ತದೆ. ಇದರ ಪರಿಣಾಮವಾಗಿ ವೇಗವು 0 ರಿಂದ 100 ಕಿಮೀ/ಗಂಟೆಗೆ ತಲುಪಲು ಕೇವರ 9.5 ಸೆಕೆಂಡ್ ಸಾಕು. ಈ ವಿದ್ಯುನ್ಮಾನ ಸೀಮಿತ ಕಾರಿನ ಗರಿಷ್ಠ ವೇಗ 140ಕಿಮೀ/ಗಂಟೆಗೆ. ಪಂಚ್.ಇವಿಯ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ IP67 ರೇಟ್ ಮಾಡಲಾಗಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸಲಿದೆ. 8 ವರ್ಷ ಅಥವಾ 1,60,000 ಕಿಮೀ (ಯಾವುದು ಮೊದಲು ತಲುಪುತ್ತದೋ ಅದು) ವಾರಂಟಿ ನೀಡುವುದರಿಂದ ನಿಮಗೆ ಸಂಪೂರ್ಣ ಮನಸ್ಸಿನ ಶಾಂತಿಯನ್ನು ನೀಡುತ್ತದೆ.
 
ಹೆಚ್ಚುವರಿಯಾಗಿ, ಪಂಚ್.ಇವಿ ಲಾಂಗ್ ರೇಂಜ್ (ಎಲ್ಆರ್), 3.3ಕೆಡಬ್ಲ್ಯೂ ಮತ್ತು 7.2 ಕೆಡಬ್ಲ್ಯೂ ಏಸಿ ಫಾಸ್ಟ್ ಚಾರ್ಜರ್ ಆಯ್ಕೆಯೊಂದಿಗೆ ಲಭ್ಯವಿದೆ, ಇದನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಸ್ಥಾಪಿಸಬಹುದು. ಡಿಸಿ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ, ಯಾವುದೇ 50 ಕೆಡಬ್ಲ್ಯೂ ಡಿಸಿ ವೇಗದ ಚಾರ್ಜರ್‌ನಿಂದ 56 ನಿಮಿಷಗಳಲ್ಲಿ 10% ರಿಂದ 80% ವರೆಗೆ ವೇಗವಾಗಿ ಚಾರ್ಜ್ ಮಾಡಬಹುದು.

ಪಂಚ್.ಇವಿಯು ಟಾಟಾ.ಇವಿಯ ಪೋರ್ಟ್‌ಫೋಲಿಯೊಗೆ ಪ್ರವರ್ತಕ ಮಾದರಿಯ ಸೇರ್ಪಡೆಯಾಗಿದ್ದು, ಸಮಕಾಲೀನ ಗ್ರಾಹಕರ ಅಗತ್ಯತೆಗಳು ಮತ್ತು ಜೀವನಶೈಲಿಯಲ್ಲಿ ಪರಿವರ್ತನೆಯ ಬದಲಾವಣೆಯನ್ನು ತರಲಿದೆ. ಇದು ಪಂಚ್ ಬ್ರಾಂಡ್‌ನ ವಿಶ್ವಾಸಾರ್ಹತೆಯನ್ನು ವಿದ್ಯುತ್ ವಾಹನ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳೊಂದಿಗೆ ಸಂಯೋಜಿಸುತ್ತದೆ. ಝೀರೋ ಎಮಿಷನ್ ಗಳೊಂದಿಗೆ ಅಸಾಧಾರಣ ಚಾಲನೆಯ ಅನುಭವವನ್ನು ನೀಡುತ್ತದೆ.

ಭಾರತದ ಇವಿ ಪ್ರಯಾಣದಲ್ಲಿ ಇವತ್ತು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ ಕ್ಷಣವಾಗಿದೆ, ಏಕೆಂದರೆ ಟಾಟಾ.ಇವಿ, ಪಂಚ್.ಇವಿ ಅನ್ನು ಬಿಡುಗಡೆ ಮಾಡುವುದರೊಂದಿಗೆ ಸುಸ್ಥಿರ ಚಲನಶೀಲತೆಯ ಹೊಸ ಯುಗದ ಪಥದಲ್ಲಿ ರಾಷ್ಟ್ರವನ್ನು ಮುನ್ನಡೆಸುತ್ತದೆ. ಇವಿ ಅಳವಡಿಕೆಯನ್ನು ವೇಗಗೊಳಿಸುವ ನಿಟ್ಟಿನ ನಮ್ಮ ಯೋಜನೆಯು ಆ ಕ್ಷೇತ್ರವನ್ನು ಮಾರ್ಪಡಿಸಿದೆ ಎಂದು ಟಾಟಾ ಮೋಟಾರ್ಸ್ ಮ್ಯಾನೇಜಿಂಗ್ ಡೆರೈಕ್ಟರ್ ಶೈಲೇಶ್ ಚಂದ್ರ ಹೇಳಿದ್ದಾರೆ. 

click me!