Tata Car offers ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್, ಮಾರ್ಚ್ ತಿಂಗಳ ಡಿಸ್ಕೌಂಟ್ ಘೋಷಣೆ!

Published : Mar 06, 2022, 03:48 PM IST
Tata Car offers ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್, ಮಾರ್ಚ್ ತಿಂಗಳ ಡಿಸ್ಕೌಂಟ್ ಘೋಷಣೆ!

ಸಾರಾಂಶ

ಹೋಳಿ ಹಬ್ಬಕ್ಕೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಟಾಟಾ ಮೋಟಾರ್ಸ್ ರಿಯಾಯಿತಿ ಆಫರ್ ಮಾರ್ಚ್ ತಿಂಗಳಿಗೆ ಮಾತ್ರ ಅನ್ವಯ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ಹಲವು ಆಫರ್ ನೀಡಿದ ಟಾಟಾ ಮೋಟಾರ್ಸ್

ಮುಂಬೈ(ಮಾ.06): ಟಾಟಾ ಮೋಟಾರ್ಸ್ ಕಾರುಗಳು ಬೇಡಿಕೆ ಹೆಚ್ಚಾಗಿದೆ. ಮಾರಾಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇದೀಗ ಮಾರ್ಚ್ ತಿಂಗಳಲ್ಲಿ ಮತ್ತೆ ಹೊಸ ದಾಖಲೆ ಬರೆಯಲು ಟಾಟಾ ಮೋಟಾರ್ಸ್ ಸಜ್ಜಾಗಿದೆ. ಇದೀಗ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಟಾಟಾ ಮೋಟಾರ್ಸ್ ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ ತಿಂಗಳ ಡಿಸ್ಕೌಂಟ್ ಆಫರ್ ನೀಡಿದೆ. ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ಹಲವು ರಿಯಾಯಿತಿಗಳು ಒಳಗೊಂಡಿದೆ.

ಫೆಬ್ರವರಿ ತಿಂಗಳಲ್ಲೂ ಟಾಟಾ ಮೋಟಾರ್ಸ್ ಆಯ್ದ ಕಾರುಗಳ ಮೇಲೆ ಆಫರ್ ಘೋಷಿಸಿತ್ತು. ಇತ್ತ ಮಾರಾಟದಲ್ಲೂ ದಾಖಲೆ ಬರೆದಿತ್ತು. ಇದೀಗ ಟಾಟಾ ಮಾರ್ಚ್ ತಿಂಗಳಲ್ಲಿ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಟಾಟಾ ಟಿಗೋರ್, ಟಿಯಾಗೋ, ಹ್ಯಾರಿಯರ್ ಸೇರಿದಂತೆ ಟಾಟಾದ ಪ್ರಮುಖ ಕಾರಗಳ ಮೇಲೆ ಆಫರ್ ಅನ್ವಯವಾಗಲಿದೆ.

Tata Nexon Car ಟಾಟಾ ನೆಕ್ಸಾನ್‌ ಕಾರಿಗೆ ಹೆಚ್ಚಾಯ್ತು ಬೇಡಿಕೆ, 4 ಹೊಸ ವೇರಿಯೆಂಟ್ ಲಾಂಚ್!

ಟಾಟಾ ಮಾರ್ಚ್ ತಿಂಗಳ ಆಫರ್‌ನಲ್ಲಿ MY2021 ಕಾರಿಗೆ 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಘೋಷಿಸಲಾಗಿದೆ. ಆ ಆಫರ್  XZ ಟ್ರಿಮ್ ಮಾಡೆಲ್ ಹಾಗೂ MY2022 ಮಾಡೆಲ್ ಟಾಪ್ ವೇರಿಯೆಂಟ್ ಕಾರಿಗೂ ಡಿಸ್ಕೌಂಟ್ ಆಫರ್ ನೀಡಲಾಗಿದೆ.ಇನ್ನು ಕಾರ್ಪೋರೇಟ್ ಆಫರ್ 3,000 ರೂಪಾಯಿ ಘೋಷಿಸಲಾಗಿದೆ.

ಟಾಟಾ ಹ್ಯಾರಿಯರ್:
ಭಾರತದ ಅತ್ಯಂತ ಜನಪ್ರಿಯ suv ಕಾರು ಟಾಟಾ ಹ್ಯಾರಿಯರ್ ಕಾರಿಗೆ ಒಟ್ಟು 85,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. 2021ರ ಹ್ಯಾರಿಯರ್ ಮಾಡೆಲ್ ಕಾರಿಗೆ 60,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದರಲ್ಲಿ 20,000 ರೂಪಾಯಿ ನಗದು ಡಿಸ್ಕೌಂಟ್ ಹಾಗೂ 40,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಘೋಷಿಸಲಾಗಿದೆ. ಇನ್ನು ಕಾರ್ಪೋರೇಟ್ ಆಫರ್ 25,000 ರೂಪಾಯಿ ನೀಡಲಾಗಿದೆ.
ಹ್ಯಾರಿಯರ್ ಕಾರಿನ ಬೆಲೆ 14.99 ಲಕ್ಷ ರೂಪಾಯಿಯಿಂದ 21.70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

Upcoming Car ಪಂಚ್ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೆ ಟಾಟಾ ತಯಾರಿ, ಕಡಿಮೆ ಬೆಲೆಗೆ EV ಕನಸು ನನಸು!

ಟಾಟಾ ಅಲ್ಟ್ರೋಜ್ ಕಾರು:
ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಅಲ್ಟ್ರೋಜ್ ಕಾರಿಗೆ 10,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಟರ್ಬೋ ಪೆಟ್ರೋಲ್ ಎಂಜಿನ್ ಕಾರಿಗೆ 10,000 ರೂಪಾಯಿ ಕಾರ್ಪೋರೇಟ್ ಆಫರ್ ಘೋಷಿಸಲಾಗಿದೆ. ಇನ್ನು ಪೆಟ್ರೋಲ್ ಎಂಜಿನ್ ಕಾರಿಗೆ 7,500 ರೂಪಾಯಿ ಆಫರ್ ನೀಡಲಾಗಿದೆ. ಅಲ್ಟ್ರೋಜ್ ಕಾರಿನ ಬೆಲೆ 5.99 ಲಕ್ಷ ರೂಪಾಯಿಂದ 9.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಅಲ್ಟ್ರೋಜ್ ಕಾರು ಮಾರತಿ ಸುಜುಕಿ ಬಲೆನೋ ಹಾಗೂ ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿದೆ.

ಟಾಟಾ ಟಿಗೋರ್ ಹಾಗೂ ಟಿಯಾಗೋ
ಟಾಟಾ ಟಿಗೋರ್ ಕಾರಿಗೆ 35,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. 2021 ಹಾಗೂ 2022ರ ಮಾಡೆಲ್ ಕಾರಿಗೆ ಎಕ್ಸ್‌ಟೇಂಜ್ ಆಫರ್ ಕ್ರಮವಾಗಿ 25,000 ರೂಪಾಯಿ ಹಾಗೂ 20,000 ರೂಪಾಯಿ ಘೋಷಿಸಲಾಗಿದೆ. ಇನ್ನು ಕಾರ್ಪೋರೇಟ್ ಡಿಸ್ಕೌಂಟ್ 10,000 ರೂಪಾಯಿ ನೀಡಲಾಗಿದೆ. ಟಿಗೋರ್ ಕಾರಿನ ಬೆಲೆ 5.79 ಲಕ್ಷ ರೂಪಾಯಿಯಿಂದ 8.41 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಟಾಟಾ ಟಿಗೋರ್ ಕಾರಿಗೆ 30,000 ರೂಪಾಯಿ ಆಫರ್ ನೀಡಲಾಗಿದೆ. 5,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಟಾಟಾ ಟಿಯಾಗೋ ಕಾರಿನ ಬೆಲೆ 5.19 ಲಕ್ಷ ರೂಪಾಯಿಂದ 7.64 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಟಾಟಾ ನೆಕ್ಸಾನ್
ಟಾಟಾ ನೆಕ್ಸಾನ್ ಕಾರಿಗೆ ಗರಿಷ್ಠ 25,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. 5,000 ರೂಪಾಯಿ ಕಾರ್ಪೋರೇಟ್ ಆಫರ್ ನೀಡಲಾಗಿದೆ. ಟಾಟಾ ನೆಕ್ಸಾನ್ ಕಾರಿಗೆ 7.39 ಲಕ್ಷ ರೂಪಾಯಿಯಿಂದ 13.73  ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

PREV
Read more Articles on
click me!

Recommended Stories

ಇದು ಬರೀ ಡಿಸೆಂಬರ್‌ ಅಲ್ಲ, ಕಾರ್‌ ಡಿಸ್ಕೌಂಟ್‌ ಡಿಸೆಂಬರ್‌; ಈ ಐದು ಕಾರ್‌ಗಳಿಗೆ ಇದೆ ಭರ್ಜರಿ ಆಫರ್‌!
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ