ನಾಳೆ ಟಾಟಾ ಮೋಟಾರ್ಸ್ ಹೊಸ ಎಲೆಕ್ಟ್ರಿಕ್‌ ಕಾರು ಅನಾವರಣ: ನಿರೀಕ್ಷೆಗಳೇನು?

By Suvarna News  |  First Published Apr 28, 2022, 4:45 PM IST

ದೇಶಿಯ ಕಾರು ತಯಾರಕ  ಟಾಟಾ  ಏಪ್ರಿಲ್ 29 ರಂದು ಹೊಸ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಲಿದೆ


Tata Motors New EV: ಕೇವಲ ಮೂರು ವಾರಗಳ ಹಿಂದೆ, ಟಾಟಾ ಮೋಟಾರ್ಸ್ ಮುಂದಿನ ಎರಡು ವರ್ಷಗಳಲ್ಲಿ ಕರ್ವ್ (Curvv) ಎಂಬ ತನ್ನ ಎಲೆಕ್ಟ್ರಿಕ್ ಎಸ್‌ಯುವಿ ಪರಿಕಲ್ಪನೆಯನ್ನುಆಧಾರದ ಮೇಲೆ  ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿತ್ತು. ದೇಶದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ 90 ಪ್ರತಿಶತ ಪಾಲನ್ನು ಹೊಂದಿರುವ ದೇಶಿಯ ಕಾರು ತಯಾರಕ  ಟಾಟಾ ಈಗ ಏಪ್ರಿಲ್ 29 ರಂದು ಹೊಸ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. 

ಟಾಟಾದ ಹೊಸ ಎಲೆಕ್ಟ್ರಿಕ್‌ ಕಾರಿನ ಬಗ್ಗ ಯಾವುದೇ ಮಾಹಿತಿಗಳಿಲ್ಲದಿದ್ದರೂ ಹೊಸ ಕಾರಿನಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ.  ಟಾಟಾ ಮೋಟಾರ್ಸ್  'A new paradigm' (ಹೊಸ ಮಾದರಿ) ಎಂಬ ಸಂದೇಶದೊಂದಿಗೆ ಮುಂಬರುವ ಇವಿಯ ಬಗ್ಗೆ ಸುಳಿವು ನೀಡಿದೆ. ನಾಳೆ ಅನಾವರಣಗೊಳ್ಳುವ ಕಾರು ದೀರ್ಘ-ಶ್ರೇಣಿಯ ನೆಕ್ಸಾನ್ (Nexon) ಅಥವಾ ಆಲ್ಟ್ರೋಝ್ (Altroz) ಇವಿ ಆಗಿರಬಹುದು ಎಂದು ಊಹಿಸಲಾಗಿದೆ. ಮತ್ತೊಂದೆಡೆ, ಟಾಟಾ ಸಂಪೂರ್ಣ ಹೊಸ  ಮಾದರಿಯ ಉತ್ಪನ್ನವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. 

Tap to resize

Latest Videos

ಇದನ್ನೂ ಓದಿ: CURVV Electric SUV ಹೊಚ್ಚ ಹೊಸ ಎಲೆಕ್ಟ್ರಿಕ್ SUV ಕಾನ್ಸೆಪ್ಟ್ ಕಾರು ಪ್ರದರ್ಶಿಸಿದ ಟಾಟಾ ಮೋಟಾರ್ಸ್!

ಇದು  ಆಲ್ಟ್ರೋಝ್ ​​ಇವಿ ಆಗಿದ್ದರೆ, ಆಯಾಮಗಳ ವಿಷಯದಲ್ಲಿ ಇದು ಭಾರತದಲ್ಲಿ ಚಿಕ್ಕ ಇವಿಯಾಗಿರುತ್ತದೆ ಆಗಿರುತ್ತದೆ, ಆದಾಗ್ಯೂ, ಇದು ಟೈಗೋರ್‌ ಇವಿಗಿಂತ ಹೆಚ್ಚಿನ ಬೆಲೆ ಹೊಂದಬಹುದು, ಇದು ಪ್ರಸ್ತುತ ಭಾರತದಲ್ಲಿ 11.99 ಲಕ್ಷ ರೂ. ಬೆಲೆಯಲ್ಲಿ ಲಭ್ಯವಿದೆ. ಆಲ್ಟ್ರೋಝ್ ​​ಇವಿಯನ್ನು ಮೊದಲ ಬಾರಿಗೆ 2020 ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಯಿತು ಮತ್ತು ಇದು ದೇಶದ ಅತ್ಯಂತ ನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ.

ಇದಲ್ಲದೆ, ಟಾಟಾ ಮೋಟಾರ್ಸ್ ಮುಂದಿನ ಐದು ವರ್ಷಗಳಲ್ಲಿ 10 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಭರವಸೆ ನೀಡಿದೆ. ಹೀಗಾಗಿ ಇದು ಈಗಾಗಲೇ ಗಳಿಸಿರುವ  ಜನಪ್ರಿಯತೆಯನ್ನು ಬಳಸಲು ಎದುರು ನೋಡುತ್ತಿದೆ. ತನ್ನ ಇವಿ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ಭರವಸೆಯೊಂದಿಗೆ, ಟಾಟಾ ಮೋಟಾರ್ಸ್ ಹೊಸ ನೆಕ್ಸಾನ್‌ ಇವಿಯನ್ನು (Nexon EV)  ದೊಡ್ಡ ಬ್ಯಾಟರಿಯೊಂದಿಗೆ ನಾಳೆ ಪರಿಚಯಿಸಬಹುದು.

ಇದನ್ನೂ ಓದಿ: ಟಾಟಾ ಪ್ರಯಾಣಿಕ ವಾಹನಗಳ ದರ ಏರಿಕೆ: ವರ್ಷದಲ್ಲಿ ಎರಡನೇ ಬಾರಿಗೆ ಹೆಚ್ಚಳ

ಹೊಸ ನೆಕ್ಸಾನ್ ಇವಿ 40 kWh ಬ್ಯಾಟರಿ ಪ್ಯಾಕ್‌ನಿಂದ ನಡೆಸಬಹುದೆಂದು ವರದಿಗಳು ಸೂಚಿಸವೆ, ಇದು ಗಣನೀಯವಾಗಿ ದೊಡ್ಡ ಅಂಕಿಅಂಶಗಳ ಭರವಸೆ ನೀಡುತ್ತದೆ. ಹೀಗಾಗಿ ದೊಡ್ಡ ನೆಕ್ಸಾನ್‌ ಇವಿ ಭಾರತದಲ್ಲಿ ದೊಡ್ಡ ಎಲೆಕ್ಟ್ರಿಕ್ ಎಸ್‌ಯುವಿಗಳೊಂದಿಗೆ  ಸ್ಪರ್ಧಿಸಲಿದೆ.

click me!