ಟಾಟಾ ಪ್ರಯಾಣಿಕ ವಾಹನಗಳ ದರ ಏರಿಕೆ: ವರ್ಷದಲ್ಲಿ ಎರಡನೇ ಬಾರಿಗೆ ಹೆಚ್ಚಳ

By Suvarna News  |  First Published Apr 26, 2022, 11:37 AM IST

ಟಾಟಾ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಭಾರಿ ಬೇಡಿಕೆ ವರದಿಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ ಅತಿ ಹೆಚ್ಚು ಮಾರಾಟವಾಗಿರುವ ಪ್ರಯಾಣಿಕ ವಾಹನವಾಗಿದೆ


ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳ ದರ ಏರಿಕೆಯನ್ನು ಘೋಷಿಸಿದೆ. ಇದಕ್ಕಾಗಿ ಕಚ್ಚಾ ವಸ್ತುಗಳ ದರ ಏರಿಕೆಯೇ ಕಾರಣ ಎಂದು ಕಂಪನಿ ಹೇಳಿದೆ. ಟಾಟಾ ವಾಹನಗಳ ಒಟ್ಟಾರೆ ದರ ಅವುಗಳ ವೇರಿಯಂಟ್ ಹಾಗೂ ಮಾಡಲ್ಗಳನ್ನು ಆಧರಿಸಿ ಶೇ.1.1ರಷ್ಟು ಏರಿಕೆಯಾಗಿದೆ. ಈ ದರ ಏರಿಕೆ ಶನಿವಾರದಿಂದಲೇ ಜಾರಿಗೆ ಬಂದಿದೆ.
ಟಾಟಾ ಮೋಟಾರ್ಸ್, ತನ್ನ ಕಾರುಗಳ ದರ ಏರಿಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. 2022ರ ಜನವರಿಯಲ್ಲಿ ಕೂಡ ಕಂಪನಿ ಎಲ್ಲಾ ಕಾರುಗಳ ಒಟ್ಟು ದರವನ್ನು ಶೇ.0.9ರಷ್ಟು ಏರಿಕೆ ಮಾಡಿತ್ತು. ಇದಕ್ಕೆ ಕೂಡ ಕಂಪನಿ ಕಚ್ಚಾ ದರ ಹಾಗೂ ಒಳಹರಿವಿನ ದರದ ಏರಿಕೆಯೇ ಕಾರಣ ಎಂದು ಕಂಪನಿ ಸಮರ್ಥನೆ ನೀಡಿತ್ತು. 

ಈ ನಡುವೆ, ಟಾಟಾ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಭಾರಿ ಬೇಡಿಕೆ ವರದಿಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ ಅತಿ ಹೆಚ್ಚು ಮಾರಾಟವಾಗಿರುವ ಪ್ರಯಾಣಿಕ ವಾಹನವಾಗಿದೆ. ಟಾಟ ಮೋಟಾರ್ಸ್ (Tata Motors) ಇತ್ತೀಚಿಗೆ ಒಂದೇ ದಿನದಲ್ಲಿ 101 ಇವಿಗಳನ್ನು ವಿತರಣೆ ಮಾಡಿದ ದಾಖಲೆ ನಿರ್ಮಿಸಿದೆ. ತಮಿಳುನಾಡಿನ ಚೆನ್ನೈನಲ್ಲಿ ಹಮ್ಮಿಕೊಳ್ಳಲಾಗಿದ್ದ ಉತ್ಸವವೊಂದರಲ್ಲಿ ಕಂಪನಿ ಈ ಮೈಲಿಗಲ್ಲು ಸಾಧಿಸಿದೆ.

Tap to resize

Latest Videos

undefined

ಇದನ್ನೂ ಓದಿ: ಭಾರಿ ಬೇಡಿಕೆ ಹಿನ್ನೆಲೆ: ಇವಿ ಉತ್ಪಾದನೆ ಹೆಚ್ಚಿಸಲಿರುವ ಟಾಟಾ ಮೋಟಾರ್ಸ್

ಈ ಕುರಿತು ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಕಾರು ತಯಾರಕರು, “ಟಾಟಾ ಮೋಟಾರ್ಸ್ ಒಂದೇ ದಿನದಲ್ಲಿ 101 ಇವಿಗಳನ್ನು ವಿತರಣೆ ಮಾಡಲಾಗಿದೆ. ಇದರಲ್ಲಿ 70 ನೆಕ್ಸಾನ್ ಇವಿ (Nexon EV) ಹಾಗೂ 31 ಟಿಗೋರ್ ಇವಿಗಳಿವೆ (Tigor EV). ಇದು ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾರಾಟದ ದಾಖಲೆಯಾಗಿದೆ” ಎಂದಿದೆ.
ಟಾಟಾ ಮೋಟಾರ್ಸ್ ಇಂದು ಲಿಥಿಯಂ ಅರ್ಬನ್ ಟೆಕ್ನಾಲಜೀಸ್, EV ಆಧಾರಿತ ನಗರ ಸಾರಿಗೆ ಸೇವಾ ಪೂರೈಕೆದಾರರೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ, ಇದು ಉದ್ಯೋಗಿಗಳ ಸಾಗಣೆಗಾಗಿ ದೇಶಾದ್ಯಂತ 5,000 ಎಕ್ಸ್ಪ್ರೆಸ್ ಟಿ (XPRES T) ಎಲೆಕ್ಟ್ರಿಕ್ ಸೆಡಾನ್ಗಳನ್ನು ನಿಯೋಜಿಸುತ್ತದೆ. ಹಂತ ಹಂತವಾಗಿ ಇದರ ವಿತರಣೆಯನ್ನು ಪ್ರಾರಂಭಿಸಲಾಗುತ್ತದೆ ಮತ್ತು ಮುಂದಿನ ವರ್ಷದ ವೇಳೆಗೆ ನಿಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.2021ರ ಜುಲೈನಲ್ಲಿ ಟಾಟಾ ಮೋಟಾರ್ಸ್ ಫ್ಲೀಟ್ ಗ್ರಾಹಕರಿಗೆ ಪ್ರತ್ಯೇಕವಾಗಿ 'XPRES' ಬ್ರಾಂಡ್ ಅನ್ನು ಪ್ರಾರಂಭಿಸಿತು ಮತ್ತು XPRES-T EV ಈ ಬ್ರ್ಯಾಂಡ್ ಅಡಿಯಲ್ಲಿ ಮೊದಲ ವಾಹನವಾಗಿದೆ.

ಹೊಸ XPRES-T ಎಲೆಕ್ಟ್ರಿಕ್ ಸೆಡಾನ್ 2 ಶ್ರೇಣಿಯ ಆಯ್ಕೆಗಳೊಂದಿಗೆ ಬರುತ್ತದೆ - 213 ಕಿಮೀ ಮತ್ತು 165 ಕಿಮೀ. ಇದು 21.5 kWh ಮತ್ತು 16.5 kWh ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ ಮತ್ತು ವೇಗದ ಚಾರ್ಜಿಂಗ್ ಅನ್ನು ಬಳಸಿಕೊಂಡು ಕ್ರಮವಾಗಿ 90 ನಿಮಿಷಗಳು ಮತ್ತು 110 ನಿಮಿಷಗಳಲ್ಲಿ 0- 80% ವರೆಗೆ ಚಾರ್ಜ್ ಮಾಡಬಹುದು ಅಥವಾ ಸಾಮಾನ್ಯವಾಗಿ ಯಾವುದೇ 15 A ಪ್ಲಗ್ ಪಾಯಿಂಟ್ನಿಂದ ಚಾರ್ಜ್ ಮಾಡಬಹುದು.

ಇದನ್ನೂ ಓದಿ: Electric Hybrid ಹೋಂಡಾ ಸಿಟಿ ಸುಪ್ರೀಂ ಎಲೆಕ್ಟ್ರಿಕ್ ಹೈಬ್ರಿಡ್ ಕಾರು ಉತ್ಪಾದನೆ ಆರಂಭ!

ಹೊಸ XPRES-T ಎಲೆಕ್ಟ್ರಿಕ್ ಸೆಡಾನ್ 2 ಶ್ರೇಣಿಯ ಆಯ್ಕೆಗಳೊಂದಿಗೆ ಬರುತ್ತದೆ - 213 ಕಿಮೀ ಮತ್ತು 165 ಕಿಮೀ. ಇದು 21.5 kWh ಮತ್ತು 16.5 kWh ಬ್ಯಾಟರಿ ಪ್ಯಾಕ್ ಹೊಂದುತ್ತದೆ ಮತ್ತು ವೇಗದ ಚಾರ್ಜಿಂಗ್ ಅನ್ನು ಬಳಸಿಕೊಂಡು ಕ್ರಮವಾಗಿ 90 ನಿಮಿಷಗಳು ಮತ್ತು 110 ನಿಮಿಷಗಳಲ್ಲಿ 0- 80% ವರೆಗೆ ಚಾರ್ಜ್ ಮಾಡಬಹುದು ಅಥವಾ ಸಾಮಾನ್ಯವಾಗಿ ಯಾವುದೇ 15 A ಪ್ಲಗ್ ಪಾಯಿಂಟ್ನಿಂದ ಚಾರ್ಜ್ ಮಾಡಬಹುದು.

click me!