Upcoming Electric Car ಟಾಟಾ ನೆಕ್ಸಾನ್ ಇವಿ ಪ್ರತಿಸ್ಪರ್ಧಿ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಲಾಂಚ್!

By Suvarna NewsFirst Published Jan 31, 2022, 8:30 PM IST
Highlights
  • ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟಿಂಗ್
  • ವಿಳಂಬವಾದ ಮಹೀಂದ್ರ ಇವಿ ಶೀಘ್ರದಲ್ಲೇ ಲಾಂಚ್
  • ಕೈಗೆಟುಕುವ ಬೆಲೆಗೆ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮಹೀಂದ್ರ ರೆಡಿ

ನವದೆಹಲಿ(ಜ.31):  ಟಾಟಾ ನೆಕ್ಸಾನ್ ಎಲೆಕ್ಟ್ರಿಕ್(Tata Electric Car) ಕಾರಿನ ಪ್ರತಿಸ್ಪರ್ಧಿ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಇದೀಗ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಮತ್ತೆ ರೋಡ್ ಟೆಸ್ಟ್ ವೇಳೆ ಮಹೀಂದ್ರ ಇವಿ(Mahindra XUV300) ಕಾಣಿಸಿಕೊಂಡಿದೆ. ಕೆಲ  ವರ್ಷಗಳ ಹಿಂದೆ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿದ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಇದೀಗ ರೋಡ್ ಟೆಸ್ಟ್ ಪೂರ್ಣಗೊಳಿಸಿದೆ. ಶೀಘ್ರದಲ್ಲೇ ನೂತನ ಇವಿ(Electric Car) ಕಾರು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಮೂಲಗಳ ಪ್ರಕಾರ ಇದೇ ವರ್ಷ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಬಿಡುಗಡೆಯಾಲಿದೆ. ಮಹೀಂದ್ರ ಕಂಪನಿಗೆ ಎಲೆಕ್ಟ್ರಿಕ್ ಕಾರು ಹೊಸದಲ್ಲ. ಕಾರಣ ರೇವಾ, E2O ಹಾಗೂ ಮಹೀಂದ್ರ ಇ ವೆರಿಟೋ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಮಹೀಂದ್ರ XUV300 ಎಲೆಕ್ಟ್ರಿಕ್ ವಿಚಾರದಲ್ಲಿ ಕೊಂಚ ವಿಳಂಬವಾಗಿದೆ.

Latest Videos

Nexon EV sales ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ, ಕಳೆದ 10 ತಿಂಗಳಲ್ಲಿ 9 ಸಾವಿರ EV ಮಾರಾಟ!

ನೂತನ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ವಿವರಗಳನ್ನು ಮಹೀಂದ್ರ ಬಹಿರಂಗಪಡಿಸಿಲ್ಲ. ಆದರೆ 40 kWh ಬ್ಯಾಟರಿ ಪ್ಯಾಕ್ ಬಳಸುವ ಸಾಧ್ಯತೆ ಇದೆ. ಇದರಿಂದ ಹೆಚ್ಚಿನ ಮೈಲೇಜ್ ನೀಡಲಿದೆ. ಕಾರಣ ನೆಕ್ಸಾನ್ ಇವಿಯಲ್ಲಿ 30 kWh ಬ್ಯಾಟರಿ ಬಳಕೆ ಮಾಡಲಾಗಿದೆ. ಈ ಕಾರು 312 ಕಿ.ಮೀ ಮೈಲೇಜ್ ನೀಡಲಿದೆ. ಹೀಗಾಗಿ 40 kWh ಬ್ಯಾಟರಿ ಕನಿಷ್ಠ 350 ಕ್ಕಿಂತ ಹೆಚ್ಚು ಮೈಲೇಜ್ ನೀಡವು ಸಾಧ್ಯತೆ ಇದೆ.

ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು 130 Bhp ಪವರ್  ಸಾಧ್ಯತೆ ಇದೆ. ಇದು ಟಾಟಾ ನೆಕ್ಸಾನ್ ಇವಿಗೆ ನೇರ ಪ್ರತಿಸ್ಪರ್ಧಿಯಾಗಿದ್ದರೆ, ಎಂಜಿ ಮೋಟಾರ್ಸ್ ZS ಕಾರಿಗೂ ಪ್ರತಿಸ್ಪರ್ಧಿಯಾಗಿದೆ. ನೂತನ ಕಾರಿನ ಬೆಲೆ ಕುರಿತು ಮಾಹಿತಿ ಬಹಿರಂಗವಿಲ್ಲ. ಆದರೆ 12 ರಿಂದ 15 ಲಕ್ಷ ರೂಪಾಯಿಗೆ ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವ ಸಾಧ್ಯತೆ ಇದೆ.

Electric Car sales ಎರಡು ವರ್ಷದಲ್ಲಿ 4 ಸಾವಿರ ಎಂಜಿ ZS ಎಲೆಕ್ಟ್ರಿಕ್ ಕಾರು ಮಾರಾಟ, ಫೆಬ್ರವರಿಯಲ್ಲಿ ಫೇಸ್‌ಲಿಫ್ಟ್ ಲಾಂಚ್!

ಮಹೀಂದ್ರ ಎಲೆಕ್ಟ್ರಿಕ್ ವಿಭಾಗ ದೇಶದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ. ದೇಶದಲ್ಲಿ ಸದ್ಯ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ತನ್ನ ಟಾಟಾ ನೆಕ್ಸಾನ್ ಇವಿ ಹಾಗೂ ಟಿಗೋರ್ ಇವಿ ಮೂಲಕ ಅತ್ಯುತ್ತಮ ಮಾರಾಟ ದಾಖಲೆ ಹಾಗೂ ಬೇಡಿಕೆ ಪಡೆದುಕೊಂಡಿದೆ. ಇನ್ನು ಎಂಜಿ ಮೋಟಾರ್ಸ್ ZS  ಕಾರು ಉತ್ತಮ ಎಲೆಕ್ಟ್ರಿಕ್ ಕಾರಾಗಿದ್ದರೂ ಬೆಲೆ 21.49  ಲಕ್ಷ ರೂಪಾಯಿಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಹೀಗಾಗಿ ಜನಸಾಮಾನ್ಯರಿಗೆ ಇದು ದುಬಾರಿಯಾಗಿದೆ.

ಟಾಟಾ ನೆಕ್ಸಾನ್ ಸರಿಸುಮಾರು 14 ಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಇನ್ನು ಟಿಗೋರ್ ಇವಿ 11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಆರಂಭಗೊಳ್ಳುತ್ತಿದೆ. ಜೊತೆಗೆ ಟಾಟಾದ ಎರಡು ಎಲೆಕ್ಟ್ರಿಕ್ ಕಾರುಗಳು ಉತ್ತಮ ಮೈಲೇಜ್, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಕಾರಣಗಳಿಂದ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿದೆ. ಹೀಗಾಗಿ ಗ್ರಾಹಕರು ಟಾಟಾ ಎಲೆಕ್ಟ್ರಿಕ್ ಕಾರಿನತ್ತ ಆಕರ್ಷಿತರಾಗುತ್ತಿದ್ದಾರೆ.ಕಾರು ಬುಕಿಂಗ್ ಮಾಡುತ್ತಿದ್ದಾರೆ.

Tata Electric Car ವರ್ಷದಲ್ಲಿ 50,000 ಎಲೆಕ್ಟ್ರಿಕ್ ಕಾರು ಮಾರಾಟ ಗುರಿ, ಆಟೋ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಟಾಟಾ ನಿರ್ಧಾರ!

ಟಾಟಾ ನೆಕ್ಸಾನ್ ಕಳೆದ ಎರಡು ವರ್ಷದಲ್ಲಿ 13,500 ಕಾರುಗಳು ಮಾರಾಟವಾಗಿದೆ. ಇನ್ನು ಎಂಜಿ  ZS ಎಲೆಕ್ಟ್ರಿಕ್ ಕಾರು ಕಳೆದ ಎರಡು ವರ್ಷದಲ್ಲಿ 4,000 ಕಾರುಗಳು ಮಾರಾಟವಾಗಿದೆ. ಇದೀಗ ಮಹೀಂದ್ರ ಎಲೆಕ್ಟ್ರಿಕ್ ಕಾರು ಕೈಗೆಟುವ ದರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ದೇಶದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ಮಹೀಂದ್ರ ಮುಂದಾಗಿದೆ. 

click me!