Maruti Car Sales ಹೊಸ ವರ್ಷದ ಆರಂಭದಲ್ಲೇ ಮಾರುತಿ ಸುಜುಕಿ ಕಾರು ಮಾರಾಟ ಕುಸಿತ!

By Suvarna News  |  First Published Feb 1, 2022, 8:02 PM IST

*ಪೂರೈಕೆ ಸರಪಳಿ ಬಿಕ್ಕಟ್ಟಿನಿಂದಾಗಿ ಮಾರಾಟ ಕುಸಿತ

*2022ರಲ್ಲಿ 6 ಕಾರುಗಳ ಬಿಡುಗಡೆ

* ಜನವರಿಯಲ್ಲಿ ಒಟ್ಟು 1,54,379 ವಾಹನಗಳ ಮಾರಾಟ


ಮಾರುತಿ ಸುಜುಕಿ (Maruti Suzuki) ಇಂಡಿಯಾ ಲಿಮಿಟೆಡ್,  2022 ರ ಜನವರಿಯಲ್ಲಿ ಒಟ್ಟು 1,54,379 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ವರ್ಷದ ಮೊದಲ ತಿಂಗಳ ಮಾರಾಟದಲ್ಲಿ ಇಳಿಕೆಯಾಗಿದೆ. 2021ರ ಜನವರಿಯಲ್ಲಿ ಮಾರುತಿ ಸುಜುಕಿ, 160,752 ವಾಹನಗಳನ್ನು ಮಾರಾಟ ಮಾಡಿತ್ತು. ಪೂರೈಕೆ ಸರಪಳಿಯ ಬಿಕ್ಕಟ್ಟು, ಮೈಕ್ರೋಚಿಪ್ (microchip) ಕೊರತೆಯಿಂದಾಗಿ ಮಾರಾಟದಲ್ಲಿ ಕುಸಿತ ಉಂಟಾಗಿದೆ ಎಂದು ಕಂಪನಿ ಹೇಳಿದೆ.

ಕಳೆದ ತಿಂಗಳು ಮಾರುತಿ ಸುಜುಕಿಯ ಒಟ್ಟು ಮಾರಾಟದಲ್ಲಿ 132,461 ವಾಹನಗಳು ದೇಶೀಯ, ಮೂಲ ಉಪಕರಣ ತಯಾರಕರು (ಒಇಎಂ)ಗಳಿಗೆ  3,981 ವಾಹನಗಳು 17,937 ವಾಹನಗಳ ರಫ್ತುಗಳನ್ನು (export) ಒಳಗೊಂಡಿದೆ. ಈ ಹಣಕಾಸು ವರ್ಷದ ಏಪ್ರಿಲ್-ಜನವರಿ ಅವಧಿಯಲ್ಲಿ ಒಟ್ಟು 13,18,202 ವಾಹನಗಳು ಮಾರಾಟವಾಗಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 11,26,378  ವಾಹನಗಳ ಮಾರಾಟ ದಾಖಲಾಗಿತ್ತು. ಈ ಅವಧಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟ ಹೆಚ್ಚಳವಾಗಿದೆ ಎಂದು ವಾಹನ ತಯಾರಕರು ಹೇಳಿದ್ದಾರೆ.

Latest Videos

undefined

Upcoming car ಮಾರುತಿ ವ್ಯಾಗನರ್ ಫೇಸ್‌ಲಿಫ್ಟ್ ಕಾರು ಫೆಬ್ರವರಿಯಲ್ಲಿ ಬಿಡುಗಡೆ, ಬೆಲೆ 5.18 ಲಕ್ಷ ರೂ!

ಮಾರುತಿ ಸುಜುಕಿ ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ (domestic market) 1,28,924 ಪ್ರಯಾಣಿಕ ಕಾರುಗಳನ್ನು ಮಾರಾಟ ಮಾಡಿದ್ದು, ವರ್ಷದ ಹಿಂದೆ ಇದೇ ತಿಂಗಳಲ್ಲಿ 139,002 ವಾಹನಗಳ ಮಾರಾಟ ದಾಖಲಾಗಿತ್ತು. ಆದರೆ, ಅದರ ರಫ್ತು ಸಂಖ್ಯೆಗಳು 2021 ರ ಅದೇ ತಿಂಗಳಲ್ಲಿ ದಾಖಲಾದ 12,445 ವಾಹನಗಳಿಗೆ ಹೋಲಿಸಿದರೆ  ಈ ವರ್ಷದ ಜನವರಿಯಲ್ಲಿ 17,937 ವಾಹನಗಳಿಗೆ ಏರಿಕೆಯಾಗಿದೆ.
ಮಾರುತಿ ಸುಜುಕಿ, ದೇಶೀಯ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟ ಮತ್ತು ಸಾಗರೋತ್ತರ (overseas) ಮಾರುಕಟ್ಟೆಗಳಿಗೆ ಸಾಗಿಸುವುದರ ಜೊತೆಗೆ,  ಬೊಲೆನೊ (Boleno) ಮತ್ತು ವಿಟಾರಾ ಬ್ರೀಝಾ (Vitara Breeza) ವಾಹನಗಳನ್ನು, ಸುಜುಕಿ ಮತ್ತು ಟೊಯೊಟಾ ನಡುವಿನ ಜಾಗತಿಕ ಪಾಲುದಾರಿಕೆಯ ಅಡಿಯಲ್ಲಿ ಟೊಯೊಟಾ ಕಿರ್ಲೋಸ್ಕರ್ (Toyota Kirloskar) ಮೋಟಾರ್ಸ್ಗೆ ಮಾರಾಟ ಮಾಡುತ್ತದೆ. 

ಈ ಎರಡು ಕಾರುಗಳನ್ನು ಟಿಕೆಎಂ ಕ್ರಮವಾಗಿ ಗ್ಲಾನ್ಜಾ  (Glanza) ಮತ್ತು ಅರ್ಬನ್ ಕ್ರೂಸರ್(Urban Cruiser) ಎಂದು ಮರುನಾಮಕರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಇತರ ಒಇಎಂ (OEM)ಗಳಿಗೆ ಕೂಡ ಮಾರುತಿ ಸುಜುಕಿ ಮಾರಾಟ ಮಾಡುತ್ತಿದೆಯಾದರೂ, ಈ ವರ್ಷದ ಜನವರಿಯಲ್ಲಿ ಇದು ಭಾರಿ ಕುಸಿತ ಕಂಡಿದೆ. ವಾಹನ ತಯಾರಕ ಸಂಸ್ಥೆ, ಕಳೆದ ತಿಂಗಳು 3,981 ಬೊಲೆನೊ ಮತ್ತು ವಿಟಾರಾ ಬ್ರೀಝಾವನ್ನು ಟೊಯೊಟಾಗೆ ಮಾರಾಟ ಮಾಡಿದೆ. ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಮಾರಾಟವಾದ 5,703 ವಾಹನಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆಯಿದೆ.

Upcoming Car ಮಾರುತಿ ಬಲೆನೋ ಫೇಸ್‌ಲಿಫ್ಟ್ ಕಾರಿನ ಬುಕಿಂಗ್ ಆರಂಭ!

ಈ ನಡುವೆ, ಮಾರುತಿ ಸುಜುಕಿ ಈ ತಿಂಗಳು ಬಿಡುಗಡೆಯಾಗಲಿರುವ ಹೊಸ ಬೊಲೆನೊಗಾಗಿ ಬುಕಿಂಗ್ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ವಾಹನ ತಯಾರಕರು ತನ್ನ ಗುಜರಾತ್ ಸ್ಥಾವರದಲ್ಲಿ ಹೊಸ ಮಾರುತಿ ಸುಜುಕಿ ಬೊಲೆನೊ ಉತ್ಪಾದನೆಯನ್ನು ಕೂಡ ಪ್ರಾರಂಭಿಸಿದ್ದಾರೆ. ಮಾರುತಿ ಸುಜುಕಿ 2022 ರಲ್ಲಿ 6 ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಅವುಗಳಲ್ಲಿ ಬಹುತೇಕ ವಾಹನಗಳ ಬಿಡುಗಡೆಯ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ.  ಮಾರುತಿ ಸುಜುಕಿ ಫೆಬ್ರವರಿಯಲ್ಲಿ ಬೊಲೆನೋ, ಮಾರ್ಚ್ನಲ್ಲಿ ಎಟ್ರಿಗಾ ಫೇಸ್ಲಿಫ್ಟ್, (Ertiga facelift) ಏಪ್ರಿಲ್ನಲ್ಲಿ ಮಾರುತಿ ಹೊಸ ಪೀಳಿಗೆಯ ಬ್ರೀಜಾ ಅನ್ನು ಬಿಡುಗಡೆಗೊಳಿಸಲಿದೆ. ಮೇ ತಿಂಗಳಲ್ಲಿ ಎಕ್ಸ್ಎಲ್6 (XL )ನ ಫೇಸ್ಲಿಲಿಫ್ಟ್ ಬಿಡುಗಡೆಯಾಗಲಿದೆ. ಜೊತೆಗೆ, ಟೊಯಾಟೊದೊಂದಿಗೆ ಸೇರಿ ತಯಾರಿಸಲಾದ ಆಲ್-ನ್ಯೂ ಮಿಡ್ ಸೈಜ್ ಎಸ್ಯುವಿಯನ್ನು (SUV) ಕೂಡ ಮಾರುತಿ ಸುಜುಕಿ ಬಿಡುಗಡೆಗೊಳಿಸಲಿದೆ. 
 

click me!