ನವದೆಹಲಿ(ಏ.02): ಭಾರತದಲ್ಲಿ ಕಾರು ಮಾರಾಟ(Car Sales) ನಿಧಾನವಾಗಿ ಏರಿಕೆಯಾಗತೊಡಗಿದೆ. ಇದರಿಂದ ಭಾರತದ ಆಟೋಮೊಬೈಲ್(Automobile) ಕ್ಷೇತ್ರ ಕೂಡ ಚೇತರಿಸಿಕೊಳ್ಳುತ್ತಿದೆ. ಇದೀಗ ಆಟೋಮೊಬೈಲ್ ಕಂಪನಿಗಳು ಮಾರಾಟ ಮತ್ತಷ್ಟು ಉತ್ತಮ ಪಡಿಸಿಲು, ಸ್ಟಾಕ್ ಮುಗಿಸಲು ಡಿಸ್ಕೌಂಟ್ ಆಫರ್ ಘೋಷಿಸುತ್ತಿದೆ. ಹೋಂಡಾ ಇಂಡಿಯಾ(Honda cars India) ಇದೀಗ ಏಪ್ರಿಲ್ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದೆ.
ಹೋಂಡಾ ಇಂಡಿಯಾ ಆಯ್ದ ಕಾರುಗಳ ಮೇಲೆ ಗರಿಷ್ಠ 33,158 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಈ ರಿಯಾಯಿತಿ ಆಫರ್ ಏಪ್ರಿಲ್ 2022ರ ವರೆಗೆ ಮಾತ್ರ ಲಭ್ಯವಿರಲಿದೆ. ಹೋಂಡಾ ಸಿಟಿ, ಹೋಂಡಾ ಅಮೇಜ್, ಜಾಝ್ ಹಾಗೂ ಹೋಂಡಾ WRv ಎಸ್‌ಯುವಿ ಕಾರುಗಳಿಗೆ ಡಿಸ್ಕೌಂಟ್ ನೀಡಲಾಗಿದೆ.
undefined
ಹೋಂಡಾ ಜಾಝ್ ಕಾರಿಗೆ ಗರಿಷ್ಠ ನಗದು ಡಿಸ್ಕೌಂಟ್ ನೀಡಲಾಗಿದೆ. ಜಾಝ್ ಕಾರಿಗೆ 10,000 ರೂಪಾಯಿ ನಗದು ಡಿಸ್ಕೌಂಟ್ ನೀಡಲಾಗಿದೆ. ಇದರ ಜೊತೆಗೆ 12,158 ರೂಪಾಯಿ ಆ್ಯಕ್ಸಸರಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಹೋಂಡಾ ಕಾರು ಎಕ್ಸ್‌ಚೇಂಜ್ ಮಾಡುವುದಾದರ 7,000 ರೂಪಾಯಿ ಡಿಸ್ಕೌಂಟ್, ಕಾರ್ಪೋರೇಟ್ ಬೋನಸ್ 4,000 ರೂಪಾಯಿ ನೀಡಲಾಗಿದೆ.
ASEAN NCAP ಕ್ರ್ಯಾಶ್ ಟೆಸ್ಟ್: ಹೋಂಡಾ ಸಿವಿಕ್‌ಗೆ 5 ಸ್ಟಾರ್!
5ನೇ ಜನರೇಶನ್ ಹೋಂಡಾ ಸಿಟಿ ಪೆಟ್ರೋಲ್ ಕಾರಿಗೆ ಓಟ್ಟು 30,396 ರೂಪಾಯಿ ಡಿಸ್ಕೌಂಟ್ ಆಪರ್ ನೀಡಲಾಗಿದೆ. ಇದರಲ್ಲಿ 5,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, ಆ್ಯಕ್ಸಸರಿ ಡಿಸ್ಕೌಂಟ್ 5,396 ರೂಪಾಯಿ, ಲಾಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಕಾರು ಎಕ್ಸ್‌ಚೇಂಜ್ 7,000 ರೂಪಾಯಿ, ಕಾರ್ಪೋರೇಟ್ ಬೋನಸ್ 8,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಹೋಂಡಾ ಸಿಟಿ 4ನೇ ಜನರೇಶನ್ ಕಾರಿಗೆ ಓಟ್ಟು 20,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.
ಹೋಂಡಾ WR-v ಕಾರಿಗೆ ಓಟ್ಟು 26,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಕಾರು ಎಕ್ಸ್‌ಜೇಂಜ್ ಬೋನಸ್ 10,000 ರೂಪಾಯಿ, ಲಾಯಲ್ಟಿ ಬೋನಸ್ 5,000 ರೂಪಾಯಿ, ಕಾರ್ಪೋರೇಟ್ ಬೋನಸ್ 4,000 ರೂಪಾಯಿ ಘೋಷಿಲಾಗಿದೆ.
ಕೊರೋನಾ ಹೋರಾಟಕ್ಕೆ ಕೈಜೋಡಿಸಿದ ಹೊಂಡಾ ಇಂಡಿಯಾ ; 6.5 ಕೋಟಿ ರೂ ಪ್ಯಾಕೇಜ್ ಘೋಷಣೆ!
ಹೋಂಡಾ ಅಮೇಜ್ ಕಾರಿಗೂ ವಿಶೇಷ ಆಫರ್ ನೀಡಲಾಗಿದೆ ಅಮೇಜ್ ಕಾರಿಗೆ ಲಾಯಲ್ಟಿ ಬೋನಸ್ 5,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 6,000 ರೂಪಾಯಿ ಹಾಗೂ ಲಾಯಲ್ಟಿ ಬೋನಸ್ 4,000 ರೂಪಾಯಿ ನೀಡಲಾಗಿದೆ.
ಹೋಂಡಾ ಕಾರ್ ಹೊಸ ಒಪ್ಪಂದ
ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್, ಇಂಡಿಯಾ ಇಂಡಸ್ ಇಂಡ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದ ಗ್ರಾಹಕರಿಗೆ ಹೋಂಡಾ ಅಮೇಜ್ ಮತ್ತು ಹೋಂಡಾ ಸಿಟಿಯ ಖರೀದಿಯ ಮೇಲೆ ಕಡಿಮೆ ಇಎಂಐ, ಎಕ್ಸ್ ಶೋರೂಂ ಫಂಡಿಂಗ್ ಇತ್ಯಾದಿ ಪ್ರಯೋಜನಗಳಿವೆ ಎಂದು ಕಂಪೆನಿ ಹೇಳಿದೆ.
ಹೋಂಡಾ ಕಂಪನಿ ತಮ್ಮ ಬಹು ಯಶಸ್ವೀ ಕಾರು ಹೋಂಡಾ ಅಮೇಜ್‌ನ ಹೊಸ ವರ್ಷನ್ ‘ನ್ಯೂ ಹೋಂಡಾ ಅಮೇಜ್’ ಅನ್ನು ಬಿಡುಗಡೆ ಮಾಡಿದೆ. ಶಕ್ತಿಶಾಲಿ ಹೆಡ್‌ಲೈಟ್, ಎಲ್‌ಇಡಿ ಬಲ್ಬುಗಳು, ಮಲ್ಟಿವ್ಯೂ ರೇರ್ ಕ್ಯಾಮೆರಾ, ಹೊಸದಾಗಿ ವಿನ್ಯಾಸ ಮಾಡಿದ ಇಂಟೀರಿಯರ್ ಹೀಗೆ ಅನೇಕ ಹೊಸ ಬದಲಾವಣೆಗಳೊಂದಿಗೆ ನ್ಯೂ ಹೋಂಡಾ ಅಮೇಜ್ ಕಾರು ಬಂದಿದೆ. ಅಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಎರಡೂ ಮಾದರಿಯಲ್ಲಿ ಕಾರು ಲಭ್ಯ. ಎಕ್ಸ್‌ಶೋರೂಮ್ ಬೆಲೆ ಘೋಷಣೆಯಾಗಿದೆ. ಆನ್‌ರೋಡ್ ಬೆಲೆ ತಿಳಿಯಲು ಶೋರೂಮ್ ಮಾರ್ಗದರ್ಶನ ಪಡೆಯಬಹುದು. ಹೋಂಡಾದ ಭಾರತ ವಿಭಾಗದ ಅಧ್ಯಕ್ಷ, ಸಿಇಓ ಗಾಕು ನಕನಿಶಿ ಕಾರು ಬಿಡುಗಡೆ ಮಾಡಿದರು.