ಟಾಟಾ ಮೋಟಾರ್ಸ್ ಭಾರತದಲ್ಲಿ ಮೊತ್ತ ಮೊದಲ ಸಿಎನ್‌ಜಿ ವೇರಿಯೆಂಟ್ ಆಟೋಮ್ಯಾಟಿಕ್ ಕಾರಿನ ಬುಕಿಂಗ್ ಆರಂಭಿಸಿದೆ. ಕೇವಲ 21 ಸಾವಿರ ರೂಪಾಯಿಂದ ಎಎಂಟಿ ಟ್ರಾನ್ಸ್‌ಮಿಶನ್ ಸಿಎನ್‌ಜಿ ಕಾರು ಬುಕ್ ಮಾಡಲು ಸಾಧ್ಯವಿದೆ.
ಬೆಂಗಳೂರು(ಜ.25): ಟಾಟಾ ಮೋಟಾರ್ಸ್ ಭಾರತದಲ್ಲಿ ಮೊದಲನೆಯ ಬಾರಿಗೆ ತನ್ನ ಸಿಎನ್‌ಜಿ ಕಾರುಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಪರಿಚಯಿಸುವ ಮೂಲಕ ದೇಶದಲ್ಲಿ ಸಿಎನ್‌ಜಿ ವಿಭಾಗದಲ್ಲಿ ಹೊಸ ಕ್ರಾಂತಿಯನ್ನು ಮಾಡಿದೆ. ಟಾಟಾ ಇಂದು ಟಿಯಾಗೋ ಮತ್ತು ಟಿಯಾಗೋ ಮತ್ತು ಟಿಗೋರ್ ಎಎಂಟಿ, ಸಿಎನ್‌ಜಿ ಗೆ ಬುಕಿಂಗ್ ಆರಂಭಿಸಿದೆ. ಸಿಎನ್‌ಜಿ ಕಾರುಗಳಲ್ಲಿ ಹೆಚ್ಚು ಅಗತ್ಯವಿರುವ ಬೂಟ್ ಸ್ಪೇಸ್ ಅನ್ನು ಒದಗಿಸಲು ಟ್ವಿನ್ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ, ಟಾಟಾ ಮೋಟಾರ್ಸ್ ಸಿಎನ್‌ಜಿ ವಾಹನಗಳಲ್ಲಿ ಅಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಪರಿಚಯಿಸುವುದರೊಂದಿಗೆ ಹೊಸ ಟ್ರೆಂಡ್ ಅನ್ನು ಪ್ರಾರಂಭಿಸುತ್ತಿದೆ.
ಗ್ರಾಹಕರಿಗೆ ಇದು ಉತ್ತಮ ಕೊಡುಗೆಯಾಗಿದೆ, ಏಕೆಂದರೆ ಈ ಕಾರುಗಳು ಸಿಎನ್‌ಜಿಯ ಉನ್ನತ ಆರ್ಥಿಕತೆ, ಸ್ವಯಂಚಾಲಿತ ಅನುಕೂಲತೆ, ಸಾಬೀತಾದ ಆರ್ಕಿಟೆಕ್ಚರ್ ಮೂಲಕ ನಿರ್ಮಿಸಲಾದ ಸುರಕ್ಷತೆಯ ಭರವಸೆ ಮತ್ತು ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯ ಹೊಂದಿದೆ. ಗ್ರಾಹಕರು ತಮ್ಮ ಹತ್ತಿರದ ಟಾಟಾ ಮೋಟಾರ್ಸ್ ಅಧಿಕೃತ ಡೀಲರ್‌ಶಿಪ್ ಅಥವಾ ಆನ್‌ಲೈನ್‌ನಲ್ಲಿ 21,000 ರೂಪಾಯಿ ನೀಡಿ ಹೊಸ ಸಿಎನ್‌ಜಿ ಆಟೋಮ್ಯಾಟಿಕ್ ಕಾರು ಬುಕ್ ಮಾಡಿಕೊಳ್ಳಬಹುದು.
undefined
ಅತೀ ಕಡಿಮೆ ಬೆಲೆಯಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ SUV ಕಾರು ಬಿಡುಗಡೆ, 421 ಕಿ.ಮೀ ಮೈಲೇಜ್
ಟಿಯಾಗೋ ಐಸಿಎನ್‌ಜಿ ಎಎಂಟಿ 3 ವೇರಿಯಂಟ್ ಗಳಲ್ಲಿ ಬರುತ್ತದೆ - ಎಕ್ಸ್‌ಟಿಎ ಸಿಎನ್‌ಜಿ, ಎಕ್ಸ್ ಝಡ್ ಎ+ ಸಿಎನ್‌ಜಿ ಮತ್ತು ಎಕ್ಸ್ ಝಡ್ ಎ ಎನ್ ಆರ್ ಜಿ. ಟಿಯಾಗೋ ಐಸಿಎನ್‌ಜಿ ಎಎಂಟಿ, 2 ವೇರಿಯಂಟ್ ಗಳಲ್ಲಿ ಲಭ್ಯವಿರುತ್ತದೆ - ಎಕ್ಸ್ ಝಡ್ ಎ ಸಿಎನ್‌ಜಿ ಮತ್ತು ಎಕ್ಸ್ ಝಡ್ ಎ+ ಸಿಎನ್‌ಜಿ.
ಇದು ಅಟೋಮ್ಯಾಟಿಕ್ ಕಾರು
· ಪೆಟ್ರೋಲ್ ತರಹದ ಕಾರ್ಯಕ್ಷಮತೆ ಮತ್ತು ಸೌಕರ್ಯವನ್ನು ಒದಗಿಸುವ ಭಾರತದ ಮೊದಲ ಸ್ವಯಂಚಾಲಿತ ಕಾರು.
· ಈ ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಚಾಲನಾಶೀಲತೆ - ಪೆಟ್ರೋಲ್ ಮತ್ತು ಸಿಎನ್‌ಜಿ ಚಾಲನಾಶೀಲತೆಯಲ್ಲಿ ವಾಹನದ ಕಾರ್ಯಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.
· ಮೃದುವಾದ ಗೇರ್ ಬದಲಾವಣೆ ಗುಣಮಟ್ಟ - ಗೇರ್ ಶಿಫ್ಟಿಂಗ್ ಮೂವ್‌ಮೆಂಟ್ ಮತ್ತು ಶಿಫ್ಟ್ ಗುಣಮಟ್ಟವು ಸುಗಮವಾಗಿದೆ ಮತ್ತು ಪೆಟ್ರೋಲ್ ಎಎಮ್‌ಟಿಗೆ ಅನುಗುಣವಾಗಿರುತ್ತದೆ.
· ಹೆಚ್ಚಿನ ರೀಸ್ಟಾರ್ಟ್ ಗ್ರೇಡೇಬಿಲಿಟಿ - ರಿಸ್ಟಾರ್ಟ್ ಸಾಮರ್ಥ್ಯವು ಪೆಟ್ರೋಲ್‌ಗೆ ಅನುಗುಣವಾಗಿರುತ್ತದೆ ಮತ್ತು ಸೆಗ್ಮೆಂಟ್ ನಲ್ಲಿಯೇ ಅತ್ಯುತ್ತಮದ್ದಾಗಿದೆ.
· ಟ್ರಾಫಿಕ್ ಮತ್ತು ಪಾರ್ಕಿಂಗ್‌ನಲ್ಲಿ ಸುಲಭ ನಿರ್ವಹಣೆ - ನಗರದ ಟ್ರಾಫಿಕ್ ಪರಿಸ್ಥಿತಿಗಳು ಮತ್ತು ಪಾರ್ಕಿಂಗ್‌ನಲ್ಲಿ ಸುಲಭವಾಗಿ ಸಾಗುವಂತೆ ರೂಪಿಸಲಾಗಿದೆ.
ಹೊಸ ವರ್ಷಕ್ಕೆ ಟಾಟಾ ಕೊಡುಗೆ, 21 ಸಾವಿರಕ್ಕೆ ಬುಕ್ ಮಾಡಿ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು!
• ಟ್ವಿನ್ ಸಿಲಿಂಡರ್ ಸಿಎನ್‌ಜಿ ಟ್ಯಾಂಕ್‌ಗಳು: ಉದ್ಯಮದಲ್ಲಿ ಮೊದಲನೇಯದು- ಲಗೇಜ್ ಪ್ರದೇಶಗಳ ಕೆಳಗೆ ಟ್ವಿನ್ ಸಿಲಿಂಡರ್‌ಗಳ ಸ್ಮಾರ್ಟ್ ಪ್ಲೇಸ್‌ಮೆಂಟ್ ನಿಂದಾಗಿ ಹೆಚ್ಚಿನ ಬೂಟ್ ಸ್ಪೇಸ್ ದೊರೆಯುತ್ತದೆ.
• ಸಿಂಗಲ್ ಅಡ್ವಾನ್ಸ್ ಡ್ ಇಸಿಯು - ಉದ್ಯಮದಲ್ಲಿ ಮೊದಲನೇಯದು - ಪೆಟ್ರೋಲ್ ಮತ್ತು ಸಿಎನ್‌ಜಿ ಮೋಡ್‌ಗಳ ನಡುವೆ ಪ್ರಯತ್ನವಿಲ್ಲದ ಮತ್ತು ಜರ್ಕ್ ಮುಕ್ತ ವರ್ಗಾವಣೆಯನ್ನು ನೀಡುತ್ತದೆ.
• ಸಿಎನ್‌ಜಿ ನಲ್ಲಿ ಡೈರೆಕ್ಟ್ ಸ್ಟಾರ್ಟ್ - ಉದ್ಯಮದಲ್ಲಿ ಮೊದಲನೇಯದು - ಎರಡೂ ಕಾರುಗಳು ನೇರವಾಗಿ ಸಿಎನ್‌ಜಿ ಮೋಡ್‌ನಲ್ಲಿ ಪ್ರಾರಂಭವಾಗುತ್ತವೆ. ಆದ್ದರಿಂದ ನೀವು ಡ್ರೈವ್‌ಗಳ ಸಮಯದಲ್ಲಿ ಸಿಎನ್‌ಜಿ ಮೋಡ್‌ಗೆ ಬದಲಾಯಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಇದು ಪ್ರತಿ ಬಾರಿ ನೀವು ಕಾರನ್ನು ಪ್ರಾರಂಭಿಸುವಾಗಲೂ ಇಂಧನವನ್ನು ಉಳಿಸುತ್ತದೆ.