ಗ್ರಾವಿಟಾಸ್ ಎಂಬ ಕೋಡ್‌ನೇಮ್‌ನಲ್ಲಿ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಟಾಟಾದ ಐಕಾನಿಕ್ ಎಸ್‌ಯುವಿ ಸಫಾರಿ ಮತ್ತೆ ರಸ್ತೆಗಿಳಿದು ಘರ್ಜಿಸಲು ಸಜ್ಜಾಗಿದೆ. ಈ ತಿಂಗಳೊಳಗೆ ಬಿಡುಗಡೆ ಕಾಣಲಿರುವ ಸಫಾರಿ, ಹಲವು ವಿಶೇಷತೆಗಳನ್ನು ಹೊಂದಿದ್ದು, ಪವರ್‌ಫುಲ್ ಎಂಜಿನ್‌ನೊಂದಿಗೆ ಗಮನ ಸೆಳೆಯುತ್ತದೆ.
ಪ್ರಯಾಣಿಕ ವಾಹಗಳ ವಿಭಾಗದಲ್ಲಿ ಭಾರೀ ವೇಗದ ಬೆಳವಣಿಗೆಯನ್ನು ದಾಖಲಿಸುತ್ತಿರುವ ದೇಶಿ ಕಂಪನಿ ಟಾಟಾ ಮೋಟಾರ್ಸ್ ಇದೀಗ ತನ್ನ ಐಕಾನಿಕ್ ಸಫಾರಿ ಬ್ರ್ಯಾಂಡ್ ಎಸ್‌ಯುವಿಯನ್ನು ಮತ್ತೆ ಲಾಂಚ್ ಮಾಡುತ್ತಿದೆ.
ಕಳೆದ ಎಂಟು ವರ್ಷಗಳಲ್ಲಿ ಅತ್ಯಧಿಕ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿರುವ ಟಾಟಾ ಕಂಪನಿ, ಗ್ರಾವಿಟಾಸ್ ಎಂಬ ಹೆಸರಿನಲ್ಲಿ 7 ಸೀಟರ್ ಎಸ್‌ವಿಯನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿತ್ತು. ಅದೇ ಎಸ್‌ಯುವಿಯನ್ನು ಇದೀಗ ಕಂಪನಿ ಸಫಾರಿ ಬ್ರ್ಯಾಂಡ್‌ನಡಿ ಜನವರಿ 26ಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಟಾಟಾ ಮೋಟಾರ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಕೂಡ ಬಿಡುಗಡೆ ಮಾಡಿದ್ದು, ದಿ ಆಲ್ ನ್ಯೂ ಟಾಟಾ ಸಫಾರಿಗಾಗಿ ರೆಡಿಯಾಗಿರಿ ಎಂಬ ಒಕ್ಕಣಿಕೆಯೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಜನವರಿಯಲ್ಲಿ ನಿಮ್ಮ ಹತ್ತಿರದ ಶೋರೂಮ್‌ಗಳಿಗೆ ಸಫಾರಿ ಎಸ್‌ಯುವಿ ಬರಲಿದೆ ಎಂದು ಹೇಳಲಾಗಿದೆ.
undefined
1 ಲಕ್ಷ ಕೋಟಿ ರೂ. ದಾಟಿದ ಬಜಾಜ್‌ನ ಮಾರುಕಟ್ಟೆ ಬಂಡವಾಳ!
ಶೀಘ್ರವೇ ಈ ಐಕಾನಿಕ್ ಟಾಟಾ ಸಫಾರಿಗೆ ಪ್ರಿ ಬುಕ್ಕಿಂಗ್ ಕೂಡ ಆರಂಭವಾಗುವ ಸಾಧ್ಯತೆ ಇದೆ. ವಾಸ್ತವದಲ್ಲಿ ಹೊಸ ಟಾಟಾ ಸಫಾರಿ ಎಸ್‌ಯುವಿ, 5 ಸೀಟರ್ ಹ್ಯಾರಿಯರ್‌ನ 7 ಸೀಟರ್ ವರ್ಷನ್ ಆಗಿದೆ ಎಂದು ಹೇಳಬಹುದು.
ಈ ಐಕಾನಿಕ್ ಟಾಟಾ ಸಫಾರಿ ಎಸ್‌ಯುವಿ ಒಮೆಗಾರ್ಕ್-ಆಪ್ಟಿಮಲ್ ಮಾಡ್ಯುಲರ್ ಎಫಿಷಿಯಂಟ್ ಗ್ಲೋಬಲ್ ಅಡ್ವಾನ್ಸಡ್ ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್ ಆಧರಿತವಾಗಿದೆ. ವಾಸ್ತವದಲ್ಲಿ ಈ ಪ್ಲಾಟ್‌ಫಾರ್ಮ್, ಲ್ಯಾಂಡ್ ರೋವರ್ ಡಿ8 ಪ್ಲಾಟ್‌ಫಾರ್ಮ್‌ನಿಂದ ಪ್ರೇರಿತವಾಗಿದೆ. ಜೊತೆಗೆ ಟಾಟಾದ 2.0 ಡಿಸೈನ್ ಅನ್ನು ಕೂಡ ಅವಳಡಿಸಿಕೊಂಡಿದೆ ಈ ಎಸ್‌ಯುವಿ. ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕಲ್ ಕಾರಿಗೆ ಅವಕಾಶವಾಗುವಂತೆ ಈ ಎಸ್‌ಯುವಿಯನ್ನು ರೂಪಿಸಾಗಿದೆ ಎನ್ನಲಾಗುತ್ತಿದೆ.
ನೋಡೋದಕ್ಕೆ ಇದು 5 ಸೀಟರ್ ಹ್ಯಾರಿಯರ್ ರೀತಿಯಲ್ಲೇ ಕಾಣುತ್ತದೆ. ಹಾಗಿದ್ದೂ, ನೀವು ಕೆಲವು ಬದಲಾವಣೆಗಳನ್ನು ಗುರುತಿಸಬಹುದಾಗಿದೆ. ಎಸ್‌ಯುವಿ ಮುಂಭಾಗದಲ್ಲಿ ಸ್ಟೈಲಿಂಗ್ ಟ್ವೀಕ್‌ಗಳ ಮೂಲಕವೇ ನೀವು ಹ್ಯಾರಿಯರ್ ಮತ್ತು ಸಫಾರಿ ಎಂದು ಪ್ರತ್ಯೇಕಿಸಿ ಗುರುತಿಸಬಹುದು. ಸ್ಪೂರ್ಟ್ಸ್ ಲುಕ್ ನೀಡುವ ಕ್ಸಾಸ್ಕಡಿಂಗ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲೈಟ್ಸ್, ಎಲ್ಇಡಿ ಟೇಲ್ ಲೈಟ್ಸ್, ಆಯಾತಾಕಾರ ಚಕ್ರದ ಕಮಾನುಗಳು, ರೂಫ್ ರೇಲ್ಸ್, ಲಾರ್ಜ್ ಟೇಲ್ ಗೇಟ್, ದೊಡ್ಡದಾದ ರಿಯರ್ ವಿಂಡ್ ಸ್ಕ್ರೀನ್‍ನಂಥ ವಿನ್ಯಾಸಗಳು ಗಮನ ಸೆಳೆಯುತ್ತವೆ.
8 ವರ್ಷದಲ್ಲೇ ಅತ್ಯಧಿಕ ಟಾಟಾ ಪ್ರಯಾಣಿಕ ವಾಹನಗಳ ಮಾರಾಟ!
ಎಂಜಿನ್ ಬಗ್ಗ ಹೇಳುವುದಾದರೆ, ಟಾಟಾ ಸಫಾರಿ ಎಸ್‌ಯುವಿ ಬಿಎಸ್-6 ಆಧರಿತ ಫಿಯೆಟ್ ಮೂಲದ 2.0 ಲೀ. ಮತ್ತು 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿರಲಿದೆ. ಇದೇ ಎಂಜಿನ್ ಅನ್ನು ನೀವು 5 ಸೀಟರ್ ಹ್ಯಾರಿಯರ್‌ನಲ್ಲೂ ಕಾಣಬಹುದು. ಈ ಎಂಜಿನ್, 350ಎನ್‌ಎಂ ವಿರುದ್ಧ ಗರಿಷ್ಠ 168 160 ಶಕ್ತಿಯನ್ನು ಉತ್ಪಾದಿಸುತ್ತದೆ. 6 ಸ್ಪೀಡ್ ಮ್ಯಾನುಯೆಲ್ ಗೇರ್‌ಬಾಕ್ಸ್ ಇದೆ. ಎಂಜಿನ್ ತುಂಬ ಶಕ್ತಿಶಾಲಿಯಾಗಿದ್ದು, ಈ ಹಿಂದೆ ಸಫಾರಿ ಗಳಿಸಿದ್ದ ಜಬರ್ದಸ್ತ್ ಎಂಜಿನ್ ಎಂಬ ಹೆಗ್ಗಳಿಕೆಗೆ ತಕ್ಕಂತೆ ಇದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಅತ್ಯುದ್ಭುತ ಪ್ರದರ್ಶನ ತೋರುತ್ತಿದೆ. ಟಿಯಾಗೋ, ಟಿಗೋರ್, ಹ್ಯಾರಿಯರ್‌ನಂಥ ಕಾರುಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಗ್ರಾಹಕರು ಕೂಡ ಟಾಟಾ ಪ್ರಯಾಣಿಕ ವಾಹನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಪರಿಣಾಮ ಕಳೆದ ಎಂಟು ವರ್ಷಗಳಲ್ಲೇ ಈ ಬಾರಿ ಅತ್ಯಧಿಕ ವಾಹನಗಳನ್ನು ಮಾರಾಟದ ಪ್ರದರ್ಶನ ತೋರಿದೆ. ಇದೀಗ ಟಾಟಾ ಮೋಟಾರ್ಸ್ ಹೆಗ್ಗಳಿಕೆಗೆ ಐಕಾನಿಕ್ ಸಫಾರಿ ಕೂಡ ಮತ್ತೆ ಮರಳಿ ಸೇರುತ್ತಿದೆ. ಇದರೊಂದಿಗೆ ಟಾಟಾ ಮೋಟಾರ್ಸ್ ‘ಸಫಾರಿ’ ಹೊಸ ದಿಕ್ಕಿನತ್ತ ಸಾಗಲು ಸಜ್ಜಾಗಿದೆ ಎಂದು ಹೇಳಬಹುದು.
90 ಲಕ್ಷಕ್ಕೂ ಅಧಿಕ ಮಾರಾಟ, ದಾಖಲೆ ಬರೆದ ಹೋಂಡಾ ಶೈನ್