Tata Nexon Car ಟಾಟಾ ನೆಕ್ಸಾನ್‌ ಕಾರಿಗೆ ಹೆಚ್ಚಾಯ್ತು ಬೇಡಿಕೆ, 4 ಹೊಸ ವೇರಿಯೆಂಟ್ ಲಾಂಚ್!

By Suvarna News  |  First Published Feb 28, 2022, 5:37 PM IST
  • ಟಾಟಾ ನೆಕ್ಸಾನ್ ಕಾರಿನ ಬೇಡಿಕೆ ಹೆಚ್ಚು, ಮಾರಾಟದಲ್ಲಿ ಹೊಸ ದಾಖಲೆ
  • ಹೊಸ ಮೂರು ವೇರಿಯೆಂಟ್ ನೆಕ್ಸಾನ್ ಕಾರು ಸೇರ್ಪಡಿಸಿದ ಟಾಟಾ ಮೋಟಾರ್ಸ್
  • 3 ಲಕ್ಷ ದಾಟಿತು ಟಾಟಾ ನೆಕ್ಸಾನ್ ಕಾರಿನ ಉತ್ಪಾದನೆ

ಮುಂಬೈ(ಫೆ.28): ಭಾರತದಲ್ಲಿ ಟಾಟಾ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಅತ್ಯಾಕರ್ಷಕ ಡಿಸೈನ್, ಅತ್ಯುತ್ತಮ ಪರ್ಫಾಮೆನ್ಸ್, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಕಾರಣಗಳಿಂದ ಇದೀಗ ಬಹುತೇಕರು ಟಾಟಾ ಕಾರಿನತ್ತ ಮುಖಮಾಡಿದ್ದಾರೆ. ಇದರಿಂದ ಟಾಟಾ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಇತ್ತ ಟಾಟಾ ನೆಕ್ಸಾನ್ ಕಾರು ಗರಿಷ್ಠ ಮಾರಾಟ ದಾಖಲೆ ಕಂಡಿದೆ. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಟಾಟಾ ನೆಕ್ಸಾನ್ ವಿಭಾಗಕಕ್ಕೆ ಹೊಸ 4 ವೇರಿಯೆಂಟ್ ಕಾರು ಸೇರಿಸಿದೆ.

ಟಾಟಾ ನೆಕ್ಸಾನ್ XZ+ (P) /  XZA+ (P) ಹಾಗೂ XZ+ (HS) / XZA+ (HS) ಎಂಬ 4  ವೇರಿಯೆಂಟ್ ಕಾರು ಇದೀಗ ಹೆಚ್ಚುವರಿಯಾಗಿ ಸೇರಿಕೊಂಡಿದೆ. ಇಷ್ಟೇ ಅಲ್ಲ ರಾಯಲ್ ಬ್ಲೂ ಬಣ್ಣದಲ್ಲಿ ಇದೀಗ ನೆಕ್ಸಾನ್ ಕಾರು ಲಭ್ಯವಿದೆ. ಇಂದಿನಿಂದಲೇ ನೂತನ ವೇರಿಯೆಂಟ್ ಕಾರಿನ ಬುಕಿಂಗ್ ಕೂಡ ಆರಂಭಗೊಂಡಿದೆ. ನೂತನ ವೇರಿಯೆಂಟ್ ಕಾರು ಪೆಟ್ರೋಲ್ ಹಾಗೂ ಡೀಸಲ್ ಎಂಜಿನ್ ರೂಪದಲ್ಲಿ ಲಭ್ಯವಿದೆ. ನೂತನ ವೇರಿಯೆಂಟ್ ಕಾರಿನ ಬೆಲೆ 11.58 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 12.23 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ))

Tap to resize

Latest Videos

8 ವರ್ಷದಲ್ಲೇ ಅತ್ಯಧಿಕ ಟಾಟಾ ಪ್ರಯಾಣಿಕ ವಾಹನಗಳ ಮಾರಾಟ!

3 ಲಕ್ಷ ಕಾರು ರೋಲ್ ಔಟ್
ಟಾಟಾ ನೆಕ್ಸಾನ್ ಕಾರು ಹೊಸ ಇತಿಹಾಸ ರಚಿಸಿದೆ. ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಉತ್ಪಾದನೆಯನ್ನು ಕಂಡಿದೆ. ಟಾಟಾ ಮೋಟಾರ್ಸ್ ರಂಜನಗಾಂವ್ ಘಟಕದಲ್ಲಿ 3 ಲಕ್ಷ ನೆಕ್ಸಾನ್ ಕಾರು ರೋಲ್ ಔಟ್ ಆಗಿದೆ. 2017ರಲ್ಲಿ ಟಾಟಾ ನೆಕ್ಸಾನ್ ಕಾರು ಮಾರುಕಟ್ಟೆ ಪ್ರವೇಶಿಸಿತು. ಬಳಿಕ ಕೆಲ ಅಪ್‌ಗ್ರೇಡ್ ಮೂಲಕ ನೆಕ್ಸಾನ್ ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ತಿಂಗಳ ಬಾಡಿಗೆಗೆ ಟಾಟಾ ನೆಕ್ಸಾನ್‌ ಕಾರುಗಳು
ಟಾಟಾ ನೆಕ್ಸಾನ್‌ ತನ್ನ ಎಲೆಕ್ಟ್ರಿಕ್‌ ಕಾರುಗಳಿಗೆ ಸಬ್‌ಸ್ಕಿ್ರಪ್ಶನ್‌ಅನ್ನು ಘೋಷಿಸಿದೆ. ಕನಿಷ್ಠ 41,900 ರು.ನಂತೆ ಪ್ರತೀ ತಿಂಗಳಿಗೆ ಬಾಡಿಗೆ ಪಾವತಿಸಿ ಈ ಕಾರುಗಳ ಬಳಕೆ ಮಾಡಬಹುದು. ಕನಿಷ್ಠ 18 ತಿಂಗಳಿಂದ 34 ತಿಂಗಳವರೆಗೂ ಈ ಸಬ್‌ಸ್ಕಿ್ರಪ್ಶನ್‌ಗೆ ಅವಕಾಶವಿದೆ. 18 ತಿಂಗಳಿಗೆ ಸಬ್‌ಸ್ಕೆ್ರೖಬ್‌ ಆಗೋದಾದ್ರೆ ತಿಂಗಳ ಬಾಡಿಗೆ ಮೊತ್ತ 47,900 ರು.ಗಳಷ್ಟಾಗುತ್ತದೆ. 32 ತಿಂಗಳಿಗೆ 41,900 ರು. ಮೊತ್ತವಿದೆ. ವೆಹಿಕಲ್‌ ರಿಜಿಸ್ಪ್ರೇಶನ್‌, ರೋಡ್‌ ಟ್ಯಾಕ್ಸ್‌ಗಳ ಹೊರೆ ಇರುವುದಿಲ್ಲ. ಇನ್‌ಶ್ಯೂರೆನ್ಸ್‌ ಜೊತೆಗೆ ಫ್ರೀ ಮೈಂಟೇನೆನ್ಸ್‌ ವ್ಯವಸ್ಥೆಯೂ ಇರುತ್ತದೆ ಎಂದು ಕಂಪೆನಿ ತಿಳಿಸಿದೆ.

ಟಾಟಾ ನೆಕ್ಸಾನ್ ಮಾರಾಟ ದ್ವಿಗುಣ, ವಿದೇಶಿ ಕಾರುಗಳಿಗಿಲ್ಲ ಬೇಡಿಕೆ!

ಗರಿಷ್ಠ ಸುರಕ್ಷತೆ ಕಾರು:
ಟಾಟಾ ಸಮೂಹದ ಟಾಟಾ ನೆಕ್ಸಾನ್‌ ಕಾರು, ಸುರಕ್ಷತಾ ಮಾನದಂಡದಲ್ಲಿ 5 ಸ್ಟಾರ್‌ ಶ್ರೇಯಾಂಕ ಪಡೆದಿದೆ. ಈ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಭಾರತೀಯ ತಯಾರಿಕಾ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದೆ. ಬ್ರಿಟನ್‌ ಮೂಲದ ಗ್ಲೋಬಲ್‌ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಟಾಟಾ ನೆಕ್ಸಾನ್‌ ಎಸ್‌ಯುವಿ ಈ ಹಿರಿಮೆಗೆ ಪಾತ್ರವಾಗಿದೆ. ಇತ್ತೀಚೆಗೆ ನಡೆಸಲಾದ ಪರೀಕ್ಷೆ ವೇಳೆ ಹಿರಿಯರ ಸುರಕ್ಷತೆಯಲ್ಲಿ ಕಾರಿಗೆ 5 ಸ್ಟಾರ್‌, ಮಕ್ಕಳ ಸುರಕ್ಷತೆಯಲ್ಲಿ 3 ಸ್ಟಾರ್‌ ಸಿಕ್ಕಿದೆ. ಈ ಕಾರನ್ನು ಪೂರ್ಣವಾಗಿ ಸ್ವದೇಶದಲ್ಲೇ ನಿರ್ಮಿಸಲಾಗಿದೆ.

ಪ್ರತಿ ಕಾರಿನ ಮೇಲೆ ಲಾಭ, ಮಾರುತಿ ಹಿಂದಿಕ್ಕಿದ ಟಾಟಾ
ಪ್ರತಿ ಕಾರಿನ ಮಾರಾಟದ ಮೂಲಕ ಗಳಿಸುವ ಲಾಭದ ಪ್ರಮಾಣದಲ್ಲಿ ಟಾಟಾ ಮೋಟಾ​ರ್‍ಸ್, ದಶಕದಲ್ಲೇ ಮೊದಲ ಬಾರಿಗೆ ದೇಶದ ನಂ.1 ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಝುಕಿಯನ್ನು ಹಿಂದಿಕ್ಕಿದೆ. ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾ​ರ್‍ಸ್ರ್‍ನ ಪ್ರತಿ ಕಾರಿನ ಮೇಲಿನ ನಿರ್ವಹಣಾ ಲಾಭವು 45810 ರು.ಗಳಿಗೆ ಏರಿದೆ. ಇದು ಮಾರುತಿಗಿಂತ ಡಬಲ್‌ ಎಂಬುದು ವಿಶೇಷ. ಹೊಸ ಕಾರುಗಳಿಗೆ ಹೆಚ್ಚಿದ ಬೇಡಿಕೆ, ಚಾಣಾಕ್ಷ ಉತ್ಪಾದನಾ ತಂತ್ರಗಾರಿಕೆ ಮತ್ತು ವಿತರಣಾ ವ್ಯವಸ್ಥೆ, ಬಹುಮಾದರಿ ಲಭ್ಯತೆಯ ವಿಷಯಗಳು ಟಾಟಾ ಮೋಟಾ​ರ್‍ಸ್ನ ನಿರ್ವಹಣಾ ಲಾಭ ಏರಿಕೆಗೆ ಕಾರಣವಾಗಿದೆ.

click me!