ಜನಪ್ರಿಯ ಸ್ವಿಫ್ಟ್ ಕಾರು ಉತ್ಪಾದನೆ ನಿಲ್ಲಿಸಿದ ಸುಜುಕಿ, ಕಂಗಾಲಾದ ಕಂಪನಿ

Published : Jun 06, 2025, 02:08 PM IST
Swift Blitz

ಸಾರಾಂಶ

ಕಾರಿನ ಪ್ರಮುಖ ಕಚ್ಚಾವಸ್ತುಗಳನ್ನು ಚೀನಾ ರಫ್ತು ಮಾಡದ ಕಾರಣ ಇದೀಗ ವಿಶ್ವದ ಅತ್ಯಂತ ಜನಪ್ರಿಯ ಸ್ವಿಫ್ಟ್ ಕಾರಿನ ಉತ್ಪಾದನೆ ಸ್ಥಗಿತಗೊಂಡಿದೆ. ಕಾರು ಉತ್ಪಾದನೆ ಸ್ಥಗಿತದಿಂದ ಕಂಪನಿ ಕಂಗಾಲಾಗಿದೆ.

ಟೊಕಿಯೋ(ಜೂ.06) ಜಾಗತಿಕವಾಗಿ ಎದುರಾಗಿರುವ ತೆರೆಗೆ ಸಮಸ್ಯೆ ಹಲವು ಸಮಸ್ಯೆಗಳು ಕೈಗಾರಿಕೆ, ಆಟೋಮೊಬೈಲ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಹೊಡೆತ ನೀಡಿದೆ. ಅಮೆರಿಕದ ತೆರಿಗೆ ಯುದ್ಧದಿಂದ ಚೀನಾ ಕೆರಳಿ ಕೆಂಡವಾಗಿದೆ. ಪ್ರತಿಯಾಗಿ ತೆರಿಗೆ ವಾರ್ ನಡೆಸುತ್ತಿದೆ. ಇವರಿಬ್ಬರ ಜಗಳದಲ್ಲಿ ಹಲವು ದೇಶಗಳು ಬಡವಾಗಿದೆ. ವಾಹನ ಉತ್ಪಾದನೆಯ ಪ್ರಮುಖ ಕಚ್ಚಾವಸ್ತು, ಕಂಡಕ್ಟರ್ ಸೇರಿದಂತೆ ಹಲವು ವಸ್ತುಗಳ ರಫ್ತು ಮಾಡುತ್ತಿಲ್ಲ. ಇದರಿಂದ ವಿಶ್ವದ ಅತ್ಯಂತ ಜನಪ್ರಿಯ ಸ್ವಿಫ್ಟ್ ಕಾರು ಉತ್ಪಾದನೆ ಸ್ಥಗಿತಗೊಂಡಿದೆ. ಇದು ಸುಜುಕಿ ಕಂಪನಿಯನ್ನೇ ಕಂಗಾಲು ಮಾಡಿಸಿದೆ. ಕಾರಣ ಅತೀ ಹೆಚ್ಚು ಮಾರಾಟವಾಗು ಕಾರುಗಳ ಪೈಕಿ ಸ್ವಿಫ್ಟ್ ಸ್ಥಾನ ಪಡೆದಿದೆ. ಇದೀಗ ಏಕಾಏಕಿ ಉತ್ಪಾದನೆ ಸ್ಥಗಿತಗೊಂಡಿದ್ದು, ಕಂಪನಿ ವ್ಯವಹಾರಕ್ಕೆ ತೀವ್ರ ಹೊಡೆತ ನೀಡಲಿದೆ.

ಸ್ಪೋರ್ಟ್ ಮಾಡೆಲ್ ಹೊರತುಪಡಿಸಿ ಇನ್ನೆಲ್ಲಾ ವೇರಿಯೆಂಟ್ ಸ್ಥಗಿತ

ಸುಜುಕಿ ತನ್ನ ಸ್ವಿಫ್ಟ್ ಕಾರು ಉತ್ಪಾದನೆಯನ್ನು ಜಪಾನ್‌ನ ಪ್ರಧಾನ ಉತ್ಪಾದನಾ ಘಟಕದಲ್ಲಿ ಸ್ಥಗಿತಗೊಳಿಸಿದೆ. ಸುಜುಕಿ ಸ್ಪೋರ್ಟ್ ಮಾಡೆಲ್ ಕಾರು ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ವಿಫ್ಟ್ ವೇರಿಯೆಂಟ್ ಕಾರುಗಳ ಉತ್ಪಾದನೆ ನಿಲ್ಲಿಸಲಾಗಿದೆ. ಕಾರು ಉತ್ಪಾದನೆಗೆ ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಹೀಗಾಗಿ ಕಾರು ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಬಿಡುಗೆಡೆಯಾಗಿರುವ ಸ್ವಿಪ್ಟ್ ಸ್ಪೋರ್ಟ್ ಮಾಡೆಲ್ ಇಲ್ಲೀರೆಗೆ ಉತ್ಪಾದನೆಯಾಗುತ್ತಿದೆ. ಇನ್ನುಳಿದ ಸ್ವಿಫ್ಟ್ ಮಾಡೆಲ್ ಉತ್ಪಾದನೆ ನಿಂತು ಹೋಗಿದೆ.

ಶೇಕಡಾ 70 ರಷ್ಟು ಕಚ್ಚಾವಸ್ತು ಪೂರೈಕೆ ಮಾಡುವುದು ಚೀನಾ

ವಿಶ್ವದ ಕಾರು ಉತ್ಪಾದನೆಗೆ ಚೀನಾ ಹಲವು ಬಿಡಿ ಭಾಗ, ಕಚ್ಚಾ ವಸ್ತುಗಳನ್ನು ರಫ್ತು ಮಾಡುತ್ತದೆ. ವಿಶ್ವದ ಶೇಕಡಾ 70 ಕಾರು ಉತ್ಪಾದನೆಗೆ ಚೀನಾ ಬಿಡಿ ಭಾಗ, ಕಚ್ಚಾವಸ್ತುಗಳು ಬಳಕೆಯಾಗುತ್ತಿದೆ. ಕಾರಿನ ಎಲೆಕ್ಟ್ರಿಕ್, ಹೈಬ್ರಿಡ್ ವಸ್ತುಗಳು, ಎಲೆಕ್ಟ್ರಿಕ್ ಮೋಟಾರು, ಟೆಕ್ನಿಕಲ್ ಕಚ್ಚಾ ವಸ್ತುಗಳನ್ನು ಚೀನಾ ಪೂರೈಕೆ ಮಾಡುತ್ತಿದೆ. ಆದರೆ ಹೊಸ ನಿಯಮ ಹಾಗೂ ಸವಾಲುಗಳಿಂದ ಚೀನಾ ರಫ್ತಿಗೆ ನಿರ್ಬಂಧ ಹೇರಿದೆ. ಇದು ವಿಶ್ವದ ಎಲ್ಲಾ ರಾಷ್ಟ್ರಗಳ ಮೇಲೆ ಹೊಡೆತ ನೀಡಿದೆ.

ಟ್ರಂಪ್ ತೆರಿಗೆ ನೀತಿಯಿಂದ ಚೀನಾ ನೀತಿ ಬದಲು

ಡೋನಾಲ್ಡ್ ಟ್ರಂಪ್ ಇತ್ತೀಚೆಗೆ ಹೇರಿದ ತೆರಿಗೆ ನೀತಿ ಚೀನಾದ ಆಕ್ರೋಶಕ್ಕೆ ಕಾರಣಾಗಿದೆ. ಇದಕ್ಕೆ ಪ್ರತಿಯಾಗಿ ಚೀನಾ ಕೂಡ ತೆರಿಗೆ ಯುದ್ದ ಆರಂಭಿಸಿದೆ. ತೆರಿಗೆ ನೀತಿಯಿಂದ ಚೀನಾ ವಸ್ತುಗಳಿಗೆ ನೀಡುತ್ತಿದ್ದ ಪರವಾನಗೆ ಹೆಚ್ಚಿನ ಪಾವತಿ ಮಾಡಬೇಕಿದೆ. ಜೊತೆಗೆ ಚೀನಾ ವಸ್ತುಗಳಿಗೆ ದುಬಾರಿ ಸುಂಕ ಪಾವತಿ ಮಾಡಬೇಕಿದೆ. ಇದರಿಂದ ಚೀನಾ ಸರ್ಕಾರ ಕೆಲ ವಸ್ತುಗಳ ರಫ್ತು ನಿರ್ಬಂಧಿಸಿದೆ. ಇದು ಆಟೋಮೊಬೈಲ್ ಕ್ಷೇತ್ರಕ್ಕೆ ತೀವ್ರ ಹೊಡೆತ ನೀಡಿದೆ. ಹೀಗಾಗಿ ಜಪಾನ್‌ನಲ್ಲಿ ಸ್ವಿಫ್ಟ್ ಕಾರು ಉತ್ಪಾದನೆ ಸ್ಥಗಿತಗೊಂಡಿದೆ.

ಸುಜುಕಿ ಮಾತ್ರವಲ್ಲ ಹಲವು ಕಂಪನಿಗಳಿಗೆ ಹೊಡೆತ

ಸುಜುಕಿ ಕಂಪನಿಗೆ ಮಾತ್ರವಲ್ಲ BMW, ಮರ್ಸಿಡಿಸ್ ಬೆಂಜ್, ಫೋರ್ಡ್ ಸೇರಿದಂತೆ ಹಲವು ಕಂಪನಿಗಳಿಗೆ ಚೀನಾ ಬಿಡಿ ಭಾಗ, ಕಚ್ಚಾ ವಸ್ತುಗಳು ಪೂರೈಕೆಯಾಗುತ್ತಿಲ್ಲ. ಕಚ್ಚಾ ವಸ್ತುಗಳ ಕೊರತೆಯಿಂದ ಇದೀಗ ಯೂರೋಪಿಯನ್ ಬಿಡಿ ಭಾಗ ಉತ್ಪಾದನೆ ಹಾಗೂ ಪೂರೈಕೆ ಘಟಕಗಳು ಪೂರೈಕೆ ನಿಲ್ಲಿಸಲು ಮುಂದಾಗಿದೆ. ಸದ್ಯ ಪೂರೈಕೆ ವೇಗ ನಿಧಾನವಾಗಿದೆ. ಸರಿಯಾದ ಪ್ರಮಾಣದಲ್ಲಿ ಬಿಡಿ ಭಾಗ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಈಗಾಗಲೇ BMW ಮಹತ್ವದ ಹೇಳಿಕೆ ನೀಡಿದೆ. ಈಗಾಗಲೇ ಬಿಡಿ ಭಾಗದ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದಿದೆ.

ತೆರಿಗೆ ಯುದ್ದ ಅಂತ್ಯಗೊಂಡಲ್ಲಿ ಮಾತ್ರ ಮತ್ತೆ ಸಹಜ ಸ್ಥಿತಿಗೆ ಮರಳಲಿದೆ. ಇಲ್ಲದಿದ್ದರೆ ಭಾರತ ಸೇರಿದಂತೆ ಇತರ ದೇಶಗಳಿಗೆ ಆಟೋಮೊಬೈಲ್ ಉತ್ಪಾದನೆಗೆ ತೀವ್ರ ಹೊಡೆತ ಬೀಳಲಿದೆ. ಭಾರತದ ಮಾರುತಿ ಸುಜುಕಿ ಕಂಪನಿ ಸದ್ಯ ಉತ್ಪಾದನೆ ಮುಂದುವರಿಸಿದೆ. ಆದರೆ ಸಮಸ್ಯೆ ಹೀಗೆ ಮುಂದುವರಿದರೆ ಭಾರತಕ್ಕೂ ಸಮಸ್ಯೆಯಾಗಲಿದೆ.

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ