ಜಲಾವೃತ ರಸ್ತೆಯಲ್ಲಿ ಸಲೀಸಾಗಿ ಸಾಗಿದ ಮಹೀಂದ್ರ ಥಾರ್, ನಿಂತಲ್ಲೇ ಬೆರಗಾದ ಜನ

Published : May 30, 2025, 12:13 PM IST
Mahindra thar

ಸಾರಾಂಶ

ಹಲೆವೆಡೆ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಗಳು ನದಿಯಂತಾಗಿದೆ. ಜನರು ಪರದಾಡುತ್ತಿದ್ದಾರೆ. ಇದರ ನಡುವೆ ಜಲಾವೃತಗೊಂಡಿರುವ ಪ್ರದೇಶದಲ್ಲಿ ಮಹೀಂದ್ರ ಥಾರ್ ಸಲೀಸಾಗಿ ಸಾಗಿದ್ದು, ಹಲವರನ್ನು ಅಚ್ಚರಿಗೊಳಿಸಿದೆ.

ತಿರುವಂತಪುರಂ(ಮೇ.30) ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜನರು ಪರದಾಡುತ್ತಿದ್ದಾರೆ. ರಸ್ತೆಗಳು ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರಿನಲ್ಲಿ ಮನೆ ಮೇಲೆ ಗುಡ್ಡ ಕುಸಿದು ಅನಾಹುತ ಸಂಭವಿಸಿದೆ. ಅತ್ತ ಕೇರಳದಲ್ಲೂ ಭಾರಿ ಮಳೆಯಿಂದ ಹಲವು ಪ್ರದೇಶ ನದಿಯಂತಾಗಿದೆ. ಇದರ ನಡುವೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ತಗ್ಗು ಪ್ರದೇಶದಲ್ಲಿ ಮಹೀಂದ್ರ ಥಾರ್ ಕಾರು ಸಲೀಸಾಗಿ ಸಾಗಿದ ಘಟನೆ ನಡೆದಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನೀರಿನಿಂದ ಯಾರಿಗೂ ದಾಟಲು ಸಾಧ್ಯವಾಗದೇ ಪರದಾಡುತ್ತಿರುವಾಗ ಮಹೀಂದ್ರ ಥಾರ್ ಯಾವುದೇ ಸಮಸ್ಯೆ ಇಲ್ಲದ ಸಲೀಸಾಗಿ ಸಾಗಿದೆ. ಥಾರ್ ಕಾರು ಬಹುತೇಕ ಮುಳುಗಡೆಯಾದರೂ ಸಲೀಸಾಗಿ ಸಾಗಿದೆ. ಥಾರ್ ಸಾಗಿದ ರೀತಿ ಹಲವರನ್ನು ಅಚ್ಚರಿಗೊಳಿಸಿದೆ.

ಥಾರ್ ವಿಂಡ್‌ಶೀಲ್ಡ್‌ವರೆಗೆ ನೀರಿದ್ದರೂ ಸಾಗಿದ ಕಾರು

ಮಹೀಂದ್ರ ಥಾರ್ ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರಾಗಿದೆ. ಇದರ ವಿನ್ಯಾಸ, ಬಲಷ್ಠ ಎಂಜಿನ್, ಪರ್ಫಾಮೆನ್ಸ್, ಆಫ್ ರೋಡ್ ಸಾಮರ್ಥ್ಯ ಸೇರಿದಂತೆ ಹಲವು ಕಾರಣಗಳಿಂದ ಮಹೀಂದ್ರ ಥಾರ್ ಬಹುತೇಕರ ನೆಚ್ಚಿನ ಕಾರಾಗಿ ಹೊರಹೊಮ್ಮದೆ. ಥಾರ್ ಆಫ್ ರೋಡ್ ಸಾಮರ್ಥ್ಯದ ಕಾರಾಗಿದ್ದು, ಇದೀಗ ಮಳೆಯ ಭಾರಿ ಪ್ರಮಾಣದ ನೀರಿನಲ್ಲೂ ಕಾರು ಸಲೀಸಾಗಿ ಸಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

 

ಯಾವುದೇ ರಸ್ತೆಗಳಲ್ಲಿ ಸಲೀಸಾಗಿ ಸಾಗಲಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸ್ದು ಮಾಡುತ್ತಿದೆ.ಭಾರಿ ಮಳೆಯಿಂದ ಕೇರಳದ ರಸ್ತೆ ಹಾಗೂ ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಈ ಪ್ರದೇಶದಲ್ಲಿ ಬಹುತೇಕರು ಮತ್ತೊಂದೆಡೆಗೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದರೆ, ಥಾರ್ ಕಾರು ಯಾವುದೇ ಸಮಸ್ಯೆ ಇಲ್ಲದೆ ಸಾಗಿದೆ. ಥಾರ್ ಕಾರಿನ ಮುಂಭಾಗ ವಿಂಡ್‌ಶೀಲ್ಡ್ ವರೆಗೂ ನೀರಿದ್ದರೂ ಥಾರ್ ಮಾತ್ರ ಯಾವುದೇ ಕೊರತೆ ಇಲ್ಲದೆ ಸಾಗಿದೆ.

ಭಾರಿ ಪ್ರಮಾಣದಲ್ಲಿ ನೀರು ತುಂಬಿದ ರಸ್ತೆಯಲ್ಲಿ ಥಾರ್ ಸಾಗಿ ಬಂದಿದೆ. ಬಿಳಿ ಬಣ್ಣದ ಥಾರ್ ಮಳೆ ಭಾರಿ ನೀರಿನಲ್ಲೂ ಸಾಗಿದೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ಮಹೀಂದ್ರ ಥಾರ್ ಕಾರಿನ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಮಹೀಂದ್ರ ಥಾರ್ 3 ಡೋರ್ ಕಾರಿಗೆ 13.16 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಬೆಲೆ 17.62 ಲಕ್ಷ ರೂಪಾಯಿ. 4x4 ಹಾಗೂ ಟು ವ್ಹೀಲ್ ಡ್ರೈವ್ ಆಯ್ಕೆ ಹೊಂದಿದೆ.

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್