ವಿಶ್ವಾಸಾರ್ಹ ಕಾರು: 6 ವರ್ಷಗಳಿಂದ ರಸ್ತೆ ಬದಿಯಲ್ಲಿ ನಿಂತಿದ್ದ ಕ್ವಾಲಿಸ್ ಸ್ಟಾರ್ಟ್ ಮಾಡುವ ವಿಡಿಯೋ ವೈರಲ್

By Contributor Asianet  |  First Published Feb 26, 2022, 4:01 PM IST

* 6 ವರ್ಷಗಳಿಂದ ಧೂಳು ಹಿಡಿಯುತ್ತಿದ್ದ ಟೊಯೋಟಾ ಕ್ವಾಲಿಸ್‌

* ಸ್ವಲ್ಪ ಪ್ರಯತ್ನದಿಂದ ಸ್ಟಾರ್ಟ್‌ ಮಾಡಿದ ವ್ಲಾಗರ್‌

* ಕ್ವಾಲೀಸ್‌ ಮಾರ್ಪಾಡು ಮಾಡಲು ಜನರ ಆಸಕ್ತಿ


ಭಾರತದಲ್ಲಿ ಟೊಯೋಟಾ ಬ್ರಾಂಡ್  (Toyoto brand) ಸಾಕಷ್ಟು ವಿಶ್ವಾಸಾರ್ಹತೆ ಹೊಂದಿದೆ. ಇದರ ಮೊದಲ ವಾಹನವಾದ ಕ್ವಾಲಿಸ್ ಎಂಪಿವಿ (Qualis MPV) ಬಿಡುಗಡೆಯಾದ ಕೆಲ ಸಮಯದಲ್ಲೇ ಜನಪ್ರಿಯವಾಗಿತ್ತು. ನಿರೀಕ್ಷೆಗೂ ಮೀರಿ ವಾಹನಗಳು ಮಾರಾಟವಾಗಿದ್ದವು.  ಆದರೆ, ಈಗ ರಸ್ತೆಗಳಲ್ಲಿ ಕ್ವಾಲಿಸ್ ವಾಹನಗಳು ಕಾಣಸಿಗುವುದು ಬಹಳ ಅಪರೂಪ.

ಆದರೆ, ದಕ್ಷಿಣ ಭಾರತದಲ್ಲಿ, ಕ್ವಾಲಿಸ್ ಹೊಂದಿರುವ ಅನೇಕರು ಅದನ್ನು ಪುನಃ ರಸ್ತೆಗಿಳಿಸಲು ಹಾಗೂ ಕಸ್ಟಮೈಸ್ (Customise) ಮಾಡಲು ಪ್ರಾರಂಭಿಸಿದ್ದಾರೆ. ಇಂಟರ್ನೆಟ್ನಲ್ಲಿ ಈ ರೀತಿಯ ಹಲವು ವಿಡಿಯೋಗಳನ್ನು ನಾವು ಕಾಣುತ್ತೇವೆ. ಇತ್ತೀಚೆಗಷ್ಟೇ, 6 ವರ್ಷಗಳಿಂದ ರಸ್ತೆ ಬದಿಯಲ್ಲಿ ತುಕ್ಕು ಹಿಡಿದಿರುವ ಕ್ವಾಲಿಸ್ ಅನ್ನು ಸ್ಟಾರ್ಟ್ ಮಾಡಲು ಮೆಕ್ಯಾನಿಕ್ ಒಬ್ಬರು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

Maruti WagonR Launch ಹೊಚ್ಚ ಹೊಸ ಮಾರುತಿ ಸುಜುಕಿ ವ್ಯಾಗನರ್ ಕಾರು ಬಿಡುಗಡೆ, ಕೇವಲ 5.39 ಲಕ್ಷ ರೂ!

ಈ ವೀಡಿಯೊವನ್ನು ಟ್ರಕ್ಸ್ ಗುರು (TRUCKZ GURU) ಎಂಬುವವರು ತಮ್ಮ ಯೂಟ್ಯೂಬ್ ಚಾನೆಲ್ (YouTube channel)ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ, ವ್ಲಾಗರ್ (Vlogger)  ದೃಶ್ಯವನ್ನು ವಿವರಿಸುವುದರಿಂದ ಆರಂಭವಾಗುತ್ತದೆ. ಟೊಯೊಟಾ ಕ್ವಾಲಿಸ್ ಬಹಳ ಸಮಯದಿಂದ ರಸ್ತೆಬದಿಯಲ್ಲಿ ತುಕ್ಕು ಹಿಡಿದಿದೆ. ಕಾರನ್ನು ಕೊನೆಯದಾಗಿ ಸುಮಾರು 6 ವರ್ಷಗಳ ಹಿಂದೆ ಸ್ಟಾರ್ಟ್ ಮಾಡಲಾಗಿತ್ತು. ಈಗ ಆ ಕ್ವಾಲಿಸ್ ಸ್ಟಾರ್ಟ್ ಆಗುತ್ತದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಪ್ರಯತ್ನಿಸುವುದಾಗಿ ತಿಳಿಸುತ್ತಾರೆ. ನಂತರ ಕ್ವಾಲಿಸ್ ಮಾಲೀಕರು ಕೀಗಳನ್ನು ಅವರಿಗೆ ಹಸ್ತಾಂತರಿಸುತ್ತಾರೆ.

ವ್ಲಾಗರ್ ಕೀಲಿಯನ್ನು ಬಳಸಿಕೊಂಡು ಬಾಗಿಲು ತೆರೆಯುತ್ತಾರೆ ಮತ್ತು ಒಳಾಂಗಣವನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಕಾರು ಮಾಲೀಕರು ಕಾರನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದರು ಮತ್ತು ಒಳಭಾಗ ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಆದರೆ, ಅದನ್ನು ರಸ್ತೆಯ ಪಕ್ಕದಲ್ಲಿ ತೆರೆದ ಜಾಗದಲ್ಲಿ ನಿಲ್ಲಿಸಿದ್ದ ಕಾರಣ ಕಾರಿನ ಒಳಗೆ ಮತ್ತು ಹೊರಗೆ ಧೂಳು ತುಂಬಿತ್ತು.  ವ್ಲಾಘರ್ ನಂತರ ಬಾನೆಟ್ ತೆರೆಯುತ್ತಾರೆ  ಮತ್ತು ಈ ವರ್ಷಗಳಲ್ಲಿ ಯಾವುದೇ ವೈರ್ ಸಂಪರ್ಕ ಹಾಳಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ.

ಅಚ್ಚರಿಯೆಂದರೆ, ರೇಡಿಯೇಟರ್ ಮೇಲ್ಭಾಗದವರೆಗೆ ನೀರು ತುಂಬಿತ್ತು. ಇಂಜಿನ್ ಆಯಿಲ್ ಹಳೆಯದಾಗಿತ್ತಾದರೂ, ಕಾರು ಸ್ಟಾರ್ಟ್ ಮಾಡಲು ಸಾಲುವಷ್ಟಿತ್ತು. ನಂತರ, ಅವರು ಬ್ಯಾಟರಿಯನ್ನು ತಂದು ಅದನ್ನು ಜಂಪ್ ಸ್ಟಾರ್ಟ್ ಮಾಡಲು ಕಾರಿಗೆ ಸಂಪರ್ಕಿಸಿದರು. ಆಗ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅದರ ಮೇಲೆ ಸೂಚನೆಗಳು ಬರಲು ಪ್ರಾರಂಭಿಸಿತು.  ಆದರೆ, ಕಾರ್ ಸ್ಟಾರ್ಟ್ ಆಗಲಿಲ್ಲ.

ವ್ಲಾಗರ್ ಮತ್ತೆ ಬೋನೆಟ್ನ ವೈರ್ಗಳನ್ನು ಪರಿಶೀಲಿಸಿ, ತಮ್ಮ ಸ್ನೇಹಿತರಿಗೆ ಕಾರು ಪ್ರಾರಂಭಿಸಲು ಹೇಳಿದರು. ಜೊತೆಗೆ, ತಮ್ಮ ಕೈಯಾರೆ ಲಿಫ್ಟ್ ಪಂಪ್ ಅನ್ನು ಪಿಎಸ್ಎಚ್ (psh) ಡೀಸೆಲ್ಗೆ ಎಂಜಿನ್ಗೆ ಪಂಪ್ ಮಾಡಿದರು. ಅವರು ಅದನ್ನು ಮಾಡಲು ಪ್ರಾರಂಭಿಸಿದ ನಂತರ, ಕ್ವಾಲಿಸ್ ಯಾವುದೇ ಸಮಸ್ಯೆಗಳಿಲ್ಲದೆ ಪ್ರಾರಂಭವಾಯಿತು. ಜೊತೆಗೆ, ಇಂಜಿನ್ನಿಂದ ಯಾವುದೇ ಶಬ್ದ ಬರಲಿಲ್ಲ. 

Tap to resize

Latest Videos

ಆದರೆ, ಕಾರಿನ ಎಲ್ಲಾ ಟೈರುಗಳು ಚಪ್ಪಟೆಯಾಗಿದ್ದು ಮಣ್ಣಿನಲ್ಲಿ ಸಿಲುಕಿಕೊಂಡಿತ್ತು. ನಂತರ ಆ್ಯಕ್ಸಲೇಟರ್, ಬ್ರೇಕ್ ಮತ್ತು ಕ್ಲಚ್ ಪೆಡಲ್ಗಳನ್ನು ಪರಿಶೀಲಿಸಿದರು. ಅವೆಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ಇದರ ನಂತರ ಅವರು ಗೇರ್ ಬದಲಿಸಲು ಕಾರನ್ನು  ಮುಂದಕ್ಕೆ ಸರಿಸಲು ಪ್ರಯತ್ನಿಸಿದರು. ಆಗ ಕಾರಿನ  ಹಿಂದಿನ ಚಕ್ರಗಳು ತಿರುಗಲು ಪ್ರಾರಂಭಿಸಿದವು.

ಜನರು ಟೊಯೋಟಾವನ್ನು ವಿಶ್ವಾಸಾರ್ಹತೆಯೊಂದಿಗೆ ಏಕೆ ಸಂಬಂಧಿಸುತ್ತಾರೆ ಎಂಬುದಕ್ಕೆ ಈ ಕ್ವಾಲಿಸ್ ಒಂದು ಉದಾಹರಣೆಯಾಗಿದೆ. ಬೇರೆ ಯಾವುದೇ ಬ್ರಾಂಡ್ನ ಕಾರು ವರ್ಷಗಟ್ಟಲೆ ಚಾಲನೆ ಮಾಡದೆ ಬಿಟ್ಟ ನಂತರ ಅಷ್ಟು ಸುಲಭವಾಗಿ  ಸ್ಟಾರ್ಟ್ ಆಗುವುದಿಲ್ಲ. ಅದಕ್ಕಾಗಿಯೇ ಜನ ಕ್ವಾಲೀಸ್ ಮೇಲೆ ಈಗಲೂ ವಿಶ್ವಾಸವಿಟ್ಟಿದ್ದಾರೆ ಮತ್ತು ಅದಕ್ಕೆ ಪುನರ್ ಜೀವ ನೀಡಲು ಮತ್ತು ಮಾರ್ಪಾಡಲು ಮಾಡಲು ಮುಂದಾಗುತ್ತಿದ್ದಾರೆ.

click me!