ಮಧ್ಯಮ ವರ್ಗದ ನೆಚ್ಚಿನ ಕಾರು ಮಾರುತಿ ಅಲ್ಟೋ 800 ಉತ್ಪಾದನೆ ಸ್ಥಗಿತ!

By Suvarna News  |  First Published Apr 1, 2023, 5:50 PM IST

ಮಾರುತಿ ಅಲ್ಟೋ 800 ಕಾರು ಭಾರತದಲ್ಲಿ ಅತ್ಯಂತ ಜನಪ್ರಿಯ. ಸಣ್ಣ ಕಾರು, ಕುಟುಂಬದ ಕಾರು ಜೊತೆಗೆ ಕೈಗೆಟುಕುವ ದರದ ಕಾರು ಎಂದೇ ಗುರುತಿಸಿಕೊಂಡಿದೆ. ಆದರೆ ಮಾರುತಿ ಅಲ್ಟೋ 800 ಕಾರು ಉತ್ಪಾದನೆ ಸ್ಥಗಿತಗೊಂಡಿದೆ. ಸದ್ಯ ಉತ್ಪಾದನೆಗೊಂಡಿರುವ ಕಾರುಗಳ ಸ್ಟಾಕ್ ಕ್ಲಿಯರೆನ್ಸ್ ಮಾತ್ರ ಲಭ್ಯವಿದೆ.


ನವದೆಹಲಿ(ಏ.01): ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಗರಿಷ್ಠ ಪಾಲು ಹೊಂದಿದೆ. ಕೈಗೆಟುಕುವ ದರದಿಂದ ಕಾರು ನೀಡಿದ ಹೆಗ್ಗಳಿಕೆಗೆ ಮಾರುತಿ ಸುಜುಕಿಗಿದೆ. ಇದರಲ್ಲಿ ವಿಶೇಷವಾಗಿ ಮಾರುತಿ ಅಲ್ಟೋ 800 ಕಾರಿಗೂ ಭಾರತೀಯರೂ ಅವಿನಾಭ ಸಂಬಂಧವಿದೆ. ಕಾರಣ ಮಾರುತಿ 800 ಕಾರು ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿತ್ತು. ಬಳಿಕ ಹಲವು ಅಪ್‌ಡೇಟ್ ಮೂಲಕ ಮಾರುತಿ ಅಲ್ಟೋ 800 ಆಗಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಇದು ಮಧ್ಯಮ ವರ್ಗದ ಕಾರು ಎಂದೇ ಗುರುತಿಸಿಕೊಂಡಿದೆ. ಸಣ್ಣ ಕಾರು, ಫ್ಯಾಮಿಲಿ ಕಾರು ಅನ್ನೋ ಹೆಸರಿನಿಂದ ಕರೆಯಿಸಿಕೊಳ್ಳುವ ಮಾರುತಿ ಅಲ್ಟೋ 800 ಇದೀಗ ಉತ್ಪಾದನೆ ಸ್ಥಗಿತಗೊಂಡಿದೆ. ಎಪ್ರಿಲ್ 1 ರಿಂದ ಮಾರುತಿ ಅಲ್ಟೋ 800 ಕಾರು ಉತ್ಪಾದನೆಯಾಗುತ್ತಿಲ್ಲ.

ಮಾರುತಿ ಸುಜುಕಿ ಕಾರುಗಳ ಪೈಕಿ ಮಾರುತಿ ಅಲ್ಟೋ 800 ಎಂಟ್ರಿ ಲೆವೆಲ್ ಕಾರಾಗಿದೆ. ಇದರ ಬೆಲೆ 3.54 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯಿಂದ ಆರಂಭಗೊಂಡು, ಗರಿಷ್ಠ 5.13 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಾಗಿದೆ. ಹೀಗಾಗಿ ಬಹುತೇಕರ ಕಾರು ಖರೀದಿಸುವ ಕನಸು ನನಸು ಮಾಡಿದ ಕಾರಿದು. ಆದರೆ ಎಪ್ರಿಲ್ 1 ರಿಂದ ಭಾರತದಲ್ಲಿ ಎಮಿಶನ್ ನಿಯಮ ಮತ್ತಷ್ಟು ಕಠಿಣಗೊಳ್ಳುತ್ತಿದೆ. ನೂತನ ಮಾನದಂಡಕ್ಕೆ ಅನುಗುಣವಾಗಿ ಕಾರು ಉತ್ಪಾದನೆ ಆರ್ಥಿಕವಾಗಿ ಹೆಚ್ಚುವರಿ ಹೊರೆಯಾಗಲಿದೆ. ಇದರ ಜೊತೆಗೆ ಮಾರುತಿ ಅಲ್ಟೋ 800 ಕಾರಿನ ಮಾರಾಟ ಕೂಡ ಕುಸಿತಗೊಂಡಿದೆ. ಹೀಗಾಗಿ ಮಾರುತಿ ಸುಜುಕಿ ಅಲ್ಟೋ 800 ಕಾರು ಸ್ಥಗಿತಗೊಳಿಸುತ್ತಿದೆ.

Latest Videos

undefined

ಕೈಗೆಟುಕುವ ಬೆಲೆಯ ಹೊಚ್ಚ ಹೊಸ ಮಾರುತಿ ಬ್ರೆಜ್ಜಾ CNG ಕಾರು ಬಿಡುಗಡೆ, 26 ಕಿ.ಮೀ ಮೈಲೇಜ್!

ಎಪ್ರಿಲ್ 1 ರಿಂದ ಭಾರತದಲ್ಲಿ BS6 ಫೇಸ್ 2 ಎಮಿಶನ್ ನಿಯಮ ಜಾರಿಗೊಂಡಿದೆ. ಹೀಗಾಗಿ ಹೊಸ ಆರ್ಥಿಕವರ್ಷದಿಂದ ಉತ್ಪಾದನೆಗೊಳ್ಳುವ ಕಾರುಗಳು BS6 ಫೇಸ್ 2 ಎಮಿಶನ್ ನಿಯಮಕ್ಕೆ ಅನುಗುಣವಾಗಿರಬೇಕು. ಸದ್ಯ ಅತೀ ಕಡಿಮೆ ಮೊತ್ತದಲ್ಲಿ ಕಾರು ಅಲ್ಟೋ 800 ಕಾರು ನೀಡುತ್ತಿರುವ ಮಾರುತಿ ಸುಜುಕಿಗೆ ಹೆಚ್ಚುವರಿಯಾಗಿ ಆರ್ಥಿಕ ಹೊಡೆತ ನೀಡಲಿದೆ. ಇನ್ನು ಬೆಲೆ ಏರಿಕೆ ಮಾಡಿದರೆ, ಮತ್ತಷ್ಟು ಮಾರಾಟ ಕುಸಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಾರುತಿ ಸುಜುಕಿ ಅಲ್ಟೋ 800 ಕಾರು ಸ್ಛಗಿತಗೊಳಿಸಿದೆ.

ಅಲ್ಟೋ 800 ಸ್ಥಗಿತಗೊಂಡಿರುವ ಕಾರಣ ಇದೀಗ ಮಾರುತಿ ಸುಜುಕಿ ಕಂಪನಿಯ ಎಂಟ್ರಿ ಲೆವೆಲ್ ಕಾರು ಅನ್ನೋ ಹೆಗ್ಗಳಿಕೆಗೆ ಅಲ್ಟೋ ಕೆ10 ಪಾತ್ರವಾಗಿದೆ. ಅಲ್ಟೋ ಕೆ10 ಕಾರಿನ ಬೆಲೆ 3.99 ಲಕ್ಷ ರೂಪಾಯಿಯಿಂದ 5.94 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಕಾರು ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಇಂದಿನಿಂದ ಮಾರುತಿ ಸುಜುಕಿಯ ಎಲ್ಲ ಮಾಡೆಲ್‌ ಕಾರುಗಳ ಬೆಲೆ ಹೆಚ್ಚಳ..!

ಅಲ್ಟೋ 800 ಕಾರು  796cc ಪೆಟ್ರೋಲ್ ಎಂಜಿನ್ ಹೊಂದಿದೆ. 48PS ಪವರ್ ಹಾಗೂ  69Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಇದರಲ್ಲಿ ಸಿಎನ್‌ಜಿ ಆಯ್ಕೆಯೂ ಲಭ್ಯವಿದೆ. ಸಿಎನ್‌ಜಿ ವೇರಿಯೆಂಟ್ ಕಾರು 41PS ಪವರ್ ಹಾಗೂ 60Nm ಟಾರ್ಕ್ ಉತ್ಪಾದಿಸಲಿದೆ. ಇನ್ನು ಎಂಟ್ರಿ ಲೆವಲ್ ಕಾರಿಗಿದ್ದ ಅಲ್ಟೋ 800 ಕೇವಲ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಮಾತ್ರ ಲಭ್ಯವಿದೆ. 
 

click me!