ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಲಿಮಿಡೆಡ್ ಎಡಿಷನ್ ಬಿಡುಗಡೆ; ಬೆಲೆ 11.99 ಲಕ್ಷ ರೂ!

By Suvarna News  |  First Published Oct 18, 2021, 3:51 PM IST
  • ವಿಶಿಷ್ಟ ವಿನ್ಯಾಸ, ಆಕರ್ಷಕ ನೋಟ  ರ‍್ಯಾಪಿಡ್ ಮ್ಯಾಟ್ ಲಿಮಿಟೆಡ್ ಆವೃತ್ತಿ ಕಾರು
  • ಮ್ಯಾನ್ಯೂಲ್ ಟ್ರಾನ್ಸ್‌ಮಿಷನ್‌ಗೆ ಕಾರಿ ₹11.99 ಲಕ್ಷ ರೂಪಾಯಿ
  • ಪ್ಪು ಲೆದರೆಟ್ ಮತ್ತು ಅಲ್ಕಾಂಟಾರಾದೊಂದಿಗೆ ನೂತನ ಕಾರು ಬಿಡುಗಡೆ
     

ಮುಂಬೈ(ಅ.18): ಸ್ಕೋಡಾ ಆಟೋ ಭಾರತದಲ್ಲಿ ₹ 11,99,000 (ಎಕ್ಸ್ ಶೋರೂಮ್) ಆಕರ್ಷಕ ಬೆಲೆಯಲ್ಲಿ ಹೊಸ ರ‍್ಯಾಪಿಡ್ ಮ್ಯಾಟ್ ಆವೃತ್ತಿಯನ್ನು ಪರಿಚಯಿಸಿದೆ. ಈ ಹೊಸ ಆವೃತ್ತಿಯು ವಿಶೇಷ ಕಾರ್ಬನ್ ಸ್ಟೀಲ್ ಮ್ಯಾಟ್ ಬಣ್ಣದಲ್ಲಿ ಲಭ್ಯವಿದ್ದು, ಅದರ ಸ್ಟೈಲ್ ಸ್ಟೇಟ್‌ಮೆಂಟ್ ಹೆಚ್ಚಿಸುತ್ತದೆ. ಇದು 1.0 ಎಲ್ ಟಿಎಸ್ ಐ ಎಂಜಿನ್‌ನ ಸಾಮರ್ಥ್ಯ ಹೊಂದಿದ್ದು ಮತ್ತು ಅಟೋಮ್ಯಾಟಿಕ್ ಹಾಗೂ ಮ್ಯಾನ್ಯೂಲ್ ಟ್ರಾನ್ಸ್‌ಮಿಷನ್‌ಗಳೆರಡರಲ್ಲೂ ಲಭ್ಯವಿರುತ್ತದೆ.

ಸ್ಕೋಡಾ ಕುಷಾಕ್ ಬೆಂಗಳೂರಿನಲ್ಲಿ ಬಿಡುಗಡೆ

ಮ್ಯಾಟ್ ಎಡಿಷನ್ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಕಾರನ್ನು ಪ್ರತ್ಯೇಕವಾಗಿಸುತ್ತದೆ ಮತ್ತು ರ‍್ಯಾಪಿಡ್ ಲೈನ್-ಅಪ್ ಗೆ ವೈವಿಧ್ಯತೆಯನ್ನು ಸೇರಿಸುತ್ತದೆ. ಮುಂಭಾಗದಲ್ಲಿ ಹೊಸ ಹೊಳೆಯುವ ಕಪ್ಪು ರೇಡಿಯೇಟರ್ ಗ್ರಿಲ್ ಮತ್ತು ಸ್ಪಾಯ್ಲರ್ ಕಾರ್ಬನ್ ಸ್ಟೀಲ್ ಮ್ಯಾಟ್ ಬಣ್ಣದೊಂದಿಗೆ ಭಾವನಾತ್ಮಕ ವಿನ್ಯಾಸವನ್ನು ಹೆಚ್ಚಿಸುತ್ತದೆ. ಹೊಳೆಯುವ ಕಪ್ಪು ಬಾಗಿಲ ಹ್ಯಾಂಡಲ್ ಮ್ಯಾಟ್ ಆವೃತ್ತಿಗೆ ಮಾತ್ರವಾಗಿದ್ದು ಇದು ಕಾರಿನ ಸೈಡ್ ಪ್ರೊಫೈಲ್ ಅನ್ನು ವರ್ಧಿಸುತ್ತದೆ. ಇದಲ್ಲದೆ, ಕಪ್ಪು ಬಾಡಿ ಸೈಡ್ ಮೌಲ್ಡಿಂಗ್ ಕೂಡ ಬದಿಯ ಪ್ರೊಫೈಲ್ ಅನ್ನು ಹೆಚ್ಚಿಸುತ್ತದೆ. ಹಿಂಭಾಗದಲ್ಲಿ, ಹಿಂಭಾಗದ ಡಿಫ್ಯೂಸರ್, ಹೊಳೆಯುವ ಕಪ್ಪು ಟೈಲ್ ಗೇಟ್ ಸ್ಪಾಯ್ಲರ್ ಮತ್ತು ಕಪ್ಪು ಟ್ರಂಕ್ ಲಿಪ್ ಗಾರ್ನಿಶ್‌ನ ಸೇರ್ಪಡೆಯು ಕಾರಿಗೆ ಆಧುನಿಕ ಅವತಾರವನ್ನು ನೀಡುತ್ತದೆ. ರ‍್ಯಾಪಿಡ್  ಹೊಸ ಆವೃತ್ತಿಯು ಸಂಪೂರ್ಣ ಕಪ್ಪು ಅಲಾಯ್ ಚಕ್ರಗಳೊಂದಿಗೆ ಬರುತ್ತಿದ್ದು, ಇದು ಹೊರಗಿನಿಂದ ಕಾರನ್ನು ಅತ್ಯಂತ ಆಕರ್ಷಕವಾಗಿಸುತ್ತದೆ.

Latest Videos

ಪ್ರಾರಂಭದಿಂದಲೇ ರ‍್ಯಾಪಿಡ್ ಭಾರತದಲ್ಲಿ ಅಸದೃಶವಾದ ಯಶಸ್ಸಿನ ಪ್ರಯಾಣವನ್ನು ಹೊಂದಿದೆ. 1,00,000 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ರಾಪಿಡ್ ದೇಶಾದ್ಯಂತದ ವಾಹನ ಉತ್ಸಾಹಿಗಳಿಂದ ಉತ್ತಮ ಸ್ಪಂದನೆಯನ್ನು ಪಡೆದಿದೆ. ಯಶೋಗಾಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತ, ಭಾರತದಲ್ಲಿ ರಾಪಿಡ್ ಮ್ಯಾಟ್ ಆವೃತ್ತಿಯನ್ನು ಪರಿಚಯಿಸುವುದು ನಮಗೆ ರೋಮಾಂಚನವೆನಿಸುತ್ತಿದೆ. ಈ ಸೇರ್ಪಡೆಯೊಂದಿಗೆ, ರ‍್ಯಾಪಿಡ್ ಪೋರ್ಟ್ ಫೋಲಿಯೊ ಹೊಸ ಗ್ರಾಹಕರನ್ನು ತಲುಪುವತ್ತ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ಅದರ ವಿಶಿಷ್ಟ ಸ್ಟೈಲ್ ಮತ್ತು ವ್ಯಾಪಕ ಫೀಚರ್‌ಗಳೊಂದಿಗೆ, ಈ ಉತ್ಪನ್ನವು ಹೆಚ್ಚಿನ ಬೇಡಿಕೆ ಪಡೆಯಲಿದೆ ಎಂದು  ಸ್ಕೋಡಾ ಆಟೋ ಇಂಡಿಯಾದ ಬ್ರಾಂಡ್ ನಿರ್ದೇಶಕರಾದ ಜ್ಯಾಕ್ ಹೋಲಿಸ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನೂತನ ಸ್ಕೋಡಾ ಅಟೋ ಇಂಡಿಯಾ ಶೋರೂಮ್ ಉದ್ಘಾಟನೆ!
 
ಇಂಟೀರಿಯರ್ ಹಾಗೂ ಫೀಚರ್ಸ್
ರ‍್ಯಾಪಿಡ್ ಮ್ಯಾಟ್ ಎಡಿಷನ್ ಡ್ಯುಯಲ್ ಟೋನ್ ಟೆಲ್ಲೂರು ಗ್ರೇ ಇಂಟೀರಿಯರ್ಸ್ ಅನ್ನು ಪಡೆಯುತ್ತಿದ್ದು ಅಲ್ಕಾಂಟಾರಾ ಸೇರಿಕೆಗಳೊಂದಿಗೆ ಪ್ರೀಮಿಯಂ ಕಪ್ಪು ಲೆದರೆಟ್ ಅಪ್‌ಹೋಲ್‌ಸ್ಟ್ರಿಯನ್ನು ಹೊಂದಿದೆ. ಒಳಾಂಗಣದಲ್ಲಿ ಅದೇ 16.51 ಸೆಂ.ಮೀ ಡ್ರೈವ್ ಆಡಿಯೋ ಪ್ಲೇಯರ್ ಸೆಂಟ್ರಲ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಸಹ ಇದ್ದು, ಅದು ಹಿಂಭಾಗದ ವೀಕ್ಷಣೆಯ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿನಲ್ಲಿ ಯುಎಸ್‌ಬಿ ಏರ್ ಪ್ಯೂರಿಫೈಯರ್ ಕೂಡ ಇದೆ. RAPID ಕೆತ್ತನೆಯಿರುವ ಸ್ಟೇನ್ ಲೆಸ್-ಸ್ಟೀಲ್ ಸ್ಕಫ್ ಪ್ಲೇಟ್‌ಗಳು ಒಳಾಂಗಣದ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಹೆಚ್ಚುವರಿಯಾಗಿ, ಹೆಚ್ಚು ಕಾಣುವ ಕಾರ್ಯಕ್ಷಮತೆಯ ಬಲ್ಬ್‌ಗಳನ್ನು ರ‍್ಯಾಪಿಡ್ ಮ್ಯಾಟ್ ಆವೃತ್ತಿಗಾಗಿ ಪ್ರತ್ಯೇಕವಾಗಿ ಒದಗಿಸಲಾಗುತ್ತದೆ.

ವರ್ಧಿತ ಸುರಕ್ಷತೆ ಮತ್ತು ಭದ್ರತೆ
ಸ್ಕೋಡಾದಲ್ಲಿ, ಸುರಕ್ಷತೆಯು ಪ್ರಮಾಣವಾಗಿದೆ. ಅದಕ್ಕಾಗಿಯೇ ಸ್ಕೋಡಾ ಆಟೋ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊದಾದ್ಯಂತ ಡ್ಯುಯಲ್ ಏರ್‌ ಬ್ಯಾಗ್‌ಗಳು ಮತ್ತು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್‌ನಂತಹ ಅಗತ್ಯ ಸುರಕ್ಷತಾ ಫೀಚರ್‌ಗಳನ್ನು ನೀಡುತ್ತದೆ. ಎಂಎಟಿಇ ಆವೃತ್ತಿಯ ಸುರಕ್ಷತಾ ಉಪಕರಣಗಳಲ್ಲಿ ಪಾರ್ಕ್ ಟ್ರಾನಿಕ್ ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಆಂಟಿ-ಗ್ಲೇರ್ ಇಂಟೀರಿಯರ್ ರಿಯರ್ ವ್ಯೂ ಮಿರರ್, ಟೈಮರ್ ಜೊತೆ  ಹಿಂಭಾಗದ ವಿಂಡ್ ಸ್ಕ್ರೀನ್ ಡಿಫಾಗರ್, ಮುಂಭಾಗದಲ್ಲಿ ಎತ್ತರವನ್ನು ಹೊಂದಿಸಬಹುದಾದ ಮೂರು ಪಾಯಿಂಟ್ ಸೀಟ್ ಬೆಲ್ಟ್‌ಗಳು, ರಫ್ ರೋಡ್ ಪ್ಯಾಕೇಜ್ ಮತ್ತು ಫ್ಲೋಟಿಂಗ್ ಕೋಡ್ ಸಿಸ್ಟಮ್ ಜೊತೆಗೆ ಎಂಜಿನ್ ಇಮ್ಮೊಬೈಲೈಜರ್‌ಗಳಿವೆ.

ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ; ಹತ್ತು ಹಲವು ವಿಶೇಷತೆ

ಸ್ಕೋಡಾ ಶೀಲ್ಡ್ ಪ್ಲಸ್ 6 ವರ್ಷಗಳ ತೊಂದರೆ ರಹಿತ ಮಾಲೀಕತ್ವದ ಅನುಭವ ಮತ್ತು ಅತ್ಯಂತ ಹೆಚ್ಚಿನ 'ಮಾನಸಿಕ ನೆಮ್ಮದಿ'ಯನ್ನು ಖಚಿತಪಡಿಸುತ್ತದೆ. ಇದು ಮೋಟಾರು ವಿಮೆ, 24 x 7 ರಸ್ತೆ ಬದಿಯ ನೆರವು ಮತ್ತು ವಿಸ್ತೃತ ವಾರಂಟಿಯನ್ನು ಒಳಗೊಂಡಿದೆ. ಸ್ಕೋಡಾ ಆಟೋ ಈ ಹಿಂದೆ ಭಾರತದ ಮೊದಲ 4 ವರ್ಷಗಳ ಸೇವಾ ಆರೈಕೆ ಕಾರ್ಯಕ್ರಮವನ್ನು (4 ವರ್ಷಗಳ ವಾರಂಟಿ, 4 ವರ್ಷಗಳ ರಸ್ತೆ ಬದಿಯ ನೆರವು ಮತ್ತು ಐಚ್ಛಿಕ 4 ವರ್ಷಗಳ ನಿರ್ವಹಣಾ ಪ್ಯಾಕೇಜ್) ಪರಿಚಯಿಸಿತ್ತು.

ರ‍್ಯಾಪಿಡ್ ಮ್ಯಾಟ್ ಆವೃತ್ತಿ
1.0 ಟಿ.ಎಸ್.ಐ. ಮ್ಯಾನ್ಯೂಲ್ ಟ್ರಾನ್ಸ್‌ಮಿಷನ್ = ರೂ 11,99,000 (ಎಕ್ಸ್ ಶೋ ರೂಂ)
1.0 ಟಿ.ಎಸ್.ಐ. ಅಟೋಮ್ಯಾಟಿಕ್ ಟ್ರಾನ್ಸ್‌ಮಿಷನ್= ರೂ 13,49,000(ಎಕ್ಸ್ ಶೋ ರೂಂ)

click me!