ಪಾಕಿಸ್ತಾನದಲ್ಲಿನ ಆರ್ಥಿಕ ಪರಿಸ್ಥಿತಿಗೆ ಜನರು ಹೈರಾಣಾಗಿದ್ದಾರೆ. ತುತ್ತು ಅನ್ನಕ್ಕೂ ಹಾಹಾಕರ ಎದ್ದಿದೆ. ಆದರೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ದೂಷಿಸುವುದು ಮಾತ್ರ ಬಿಟ್ಟಿಲ್ಲ. ಕಾಶ್ಮೀರ ಕುರಿತ ಚಕಾರ ಎತ್ತಿದ ಪಾಕಿಸ್ತಾನದಲ್ಲಿ ಇದೀಗ ಸಮಸ್ಯೆ ಹೆಚ್ಚಾಗಿದೆ. ಆರ್ಥಿಕ ಹೊಡೆತ ತಾಳಲಾರದೆ ಹೋಂಡಾ ಕಾರು ಘಟಕ ಸ್ಥಗಿತಗೊಂಡಿದೆ.
ಲಾಹೋರ್(ಮಾ.09): ಪಾಕಿಸ್ತಾನದ ಕ್ಷಣಕ್ಷಣಕ್ಕೂ ಪಾತಾಳಕ್ಕೆ ಕುಸಿಯುತ್ತಿದೆ. ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಆಹಾರದ ಬೆಲೆ ಗಗನಕ್ಕೇರುತ್ತಿದೆ. ಜನರು ಹಸಿವಿನಿಂದ ಕಂಗಾಲಾಗಿದ್ದಾರೆ. ಈ ವಿಚಾರ ಕುರಿತು ಗಮನಹರಿಸಬೇಕಾದ ಪಾಕಿಸ್ತಾನ ಸರ್ಕಾರ, ಸಿಕ್ಕ ಅಂತಾರಾಷ್ಟ್ರೀಯ ವೇದಿಕೆಗಳನ್ನು ಭಾರತ ವಿರುದ್ಧ ದೂರು ನೀಡಲು ಬಳಸಿಕೊಳ್ಳುತ್ತಿದೆ. ಇದರ ಪರಿಣಾಮ ಪಾಕಿಸ್ತಾನದಲ್ಲಿನ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈಗಾಗಲೇ ಹಲವು ಕಂಪನಿಗಳು ಬಾಗಿಲು ಮುಚ್ಚಿದೆ. ಇದೀಗ ಹೋಂಡಾ ತನ್ನ ಪಾಕಿಸ್ತಾನದ ಕಾರು ಘಟಕವನ್ನು ಸ್ಥಗಿತಗೊಳಿಸಿದೆ. ಪೂರೈಕೆ ಸರಪಳಿ ಮೇಲೆ ತೀವ್ರ ಹೊಡೆತ ಬಿದ್ದಿರುವ ಕಾರಣ ಘಟಕ ಸ್ಥಗಿತಗೊಳಿಸುವುದಾಗಿ ಹೋಂಡಾ ಸ್ಪಷ್ಟಪಡಿಸಿದೆ.
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಇದರ ಪರಿಣಾಮ ಕಂಪನಿಯ ಪೂರೈಕೆ ಸರಪಳಿ ಮೇಲೆ ತೀವ್ರ ಪರಿಣಾಮ ಬೀರಿದೆ. ಕಾರು ಮಾರಾಟ ಪಾತಾಳಕ್ಕೆ ಕುಸಿದಿದೆ. ಕಚ್ಚಾ ವಸ್ತುಗಳು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಪ್ಲೈ ಚೈನ್ ಮೇಲೆ ಆಗಿರುವ ಪರಿಣಾಮದಿಂದ ಮಾರ್ಚ್ ತಿಂಗಳ ಸಂಪೂರ್ಣವಾಗಿ ಹೋಂಡಾ ಕಾರು ಘಟಕ ಸ್ಥಗಿತಗೊಳಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಪಾಕಿಸ್ತಾನದ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೋಂಡಾ ಅಟ್ಲಾಸ್ ಕಾರು ಹೇಳಿದೆ.
undefined
ಕಾಶ್ಮೀರದಲ್ಲಿ ಸ್ತ್ರೀಯರ ಮೇಲೆ ದೌರ್ಜನ್ಯ ಎಂದು ವಿಶ್ವಸಂಸ್ಥೆಯಲ್ಲಿ ಪಾಕ್ ಕ್ಯಾತೆ: ಭಾರತ ಕೆಂಡಾಮಂಡಲ
ಆರ್ಥಿಕ ಬಿಕ್ಕಟ್ಟಿನ ಕಾರಣ ಪಾಕಿಸ್ತಾನ ಸರ್ಕಾರ ಹಲವು ವಸ್ತುಗಳ ಆಮದು ಮೇಲೆ ನಿಯಂತ್ರಣ ಹೇರಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇತರ ವಸ್ತುಗಳ ಮೇಲೆ ನಿಯಂತ್ರಣವಿದೆ. ಹೀಗಾಗಿ ಕಚ್ಚಾವಸ್ತುಗಳ ಆಮದು ಮಾಡಿಕೊಳ್ಳಲು ಹೋಂಡಾ ಕಾರು ಘಟಕಕ್ಕೆಸಾಧ್ಯವಾಗುತ್ತಿಲ್ಲ. ಇತ್ತ ಕಾರಿಗೆ ಬೇಡಿಕೆ ಇಲ್ಲದಾಗಿದೆ. ಹೀಗಾಗಿ ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗಿದೆ ಎಂದು ಹೋಂಡಾ ಹೇಳಿದೆ.
ಪಾಕಿಸ್ತಾನ ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರ, ಆಮದು ಬೆಲೆಗಳ ಹೆಚ್ಚಳದಿಂದ ಪಾಕಿಸ್ತಾನದ ಸಂಕಷ್ಟ ದಿನದಿಂದ ದಿನಕ್ಕೆ ಬಿಗಾಡಾಯಿಸಿದೆ. ಇದರ ಪರಿಣಾಮ ಪಾಕಿಸ್ತಾನ ಆಟೋಮೊಬೈಲ್ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದೆ. ಹಲವು ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿದೆ. ಆಟೋಮೊಬೈಲ್ ಬೆಲೆ ಗಗನಕ್ಕೇರಿದೆ. ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದ ಮಂದಿ ಇದೀಗ ಕಾರು, ವಾಹನ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಇತ್ತ ವಾಹನ ಬೆಲೆಯೂ ದುಬಾರಿಯಾಗಿದೆ.
ಪಾಕ್‌ನಲ್ಲಿ ಹೋಳಿಗೂ ಅವಕಾಶವಿಲ್ವಾ..? ಓಕುಳಿ ಆಡಿದ ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಕನಿಷ್ಠ 15 ಜನರಿಗೆ ಗಾಯ
ಟೊಯೋಟಾ ಮೋಟಾರ್ಸ್ ಹಾಗೂ ಪಾಕಿಸ್ತಾನ ಸುಜುಜಿ ಕೂಡ ಈಗಾಗಲೇ ಕೆಲವು ಬಾರಿ ಉತ್ಪಾದನೆ ಸ್ಥಗಿತಗೊಳಿಸಿತ್ತು. ಇದೀಗ ಈ ಎರಡು ಕಂಪನಿಗಳು ಉತ್ಪಾದನೆ ಪ್ರಮಾಣ ಕಡಿಮೆ ಮಾಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಟೋಯೋಟಾ ಮೋಟಾರ್ಸ ಹಾಗೂ ಪಾಕಿಸ್ತಾನ ಸುಜುಕಿ ಕೂಡ ಉತ್ಪಾದನೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ಪಾಕಿಸ್ತಾನ ತನ್ನ ದೇಶದೊಳಗಿನ ಸಮಸ್ಯೆ ಪರಿಹರಿಸುವ ಬದಲು, ಕಾಶ್ಮೀರ ವಿಚಾರ ಕೆದಕಿ ಭಾರತವನ್ನು ಹಣಿಯುವ ಪ್ರಯತ್ನ ಮಾಡುತ್ತಿದೆ. ಪಾಕಿಸ್ತಾನದಲ್ಲಿನ ಸ್ತ್ರಿಗಳ ಹಕ್ಕುಗಳ ದಮನ, ಕಾಶ್ಮೀರಿಗರ ಸ್ವಾತಂತ್ರ್ಯಕ್ಕೆ ಧಕ್ಕ ಸೇರಿದಂತೆ ಹಲವು ವಿಚಾರಗಳನ್ನು ಇತ್ತೀಚೆಗೆ ಮುನ್ನಲೆಗೆ ತಂದಿದೆ.