
ಬೆಂಗಳೂರು (ಜು.14): ನೀವು ಈ ಜುಲೈ ತಿಂಗಳಿನಲ್ಲಿ ಹೊಸ ಕಾರು ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ. ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾದ ರೆನಾಲ್ಟ್ ಇಂಡಿಯಾ (Renault India) ಜುಲೈ 2026 ರ ತಿಂಗಳಿಗಾಗಿ ತನ್ನ ಆಯ್ದ ಜನಪ್ರಿಯ ಕಾರ್ ಮಾಡೆಲ್‌ಗಳ ಮೇಲೆ ಆಕರ್ಷಕ ಆಫರ್ ಪ್ರಕಟಿಸಿದೆ. ಈ ಯೋಜನೆಯಡಿ ಕಂಪನಿಯ ಅತ್ಯಂತ ಜನಪ್ರಿಯ 'ರೆನಾಲ್ಟ್ ಕೈಗರ್' (Kiger) ಕಾರಿನ ಮೇಲೆ ಗ್ರಾಹಕರು ಗರಿಷ್ಠ ಎಂದರೆ ಬರೊಬ್ಬರಿ 1.25 ಲಕ್ಷ ರೂಪಾಯಿಗಳವರೆಗೆ ಒಟ್ಟು ಲಾಭವನ್ನು ಪಡೆಯಬಹುದಾಗಿದೆ. ಹೊಸ ಕಾರು ಖರೀದಿದಾರರಿಗೆ ಇದು ಅತ್ಯುತ್ತಮ ಸುರ್ಣಾವಕಾಶವಾಗಿದೆ.
ಮುಂಬರುವ ಹಬ್ಬದ ಸೀಸನ್‌ಗೂ ಮುನ್ನ ತನ್ನ ಪ್ರಮುಖ ಕಾರ್‌ಗಳ ಮಾರಾಟ ಪ್ರಮಾಣವನ್ನು (Volume) ಹೆಚ್ಚಿಸುವ ಉದ್ದೇಶದಿಂದ ರೆನಾಲ್ಟ್ ಈ ಬಂಪರ್ ಆಫರ್ ಪರಿಚಯಿಸಿದೆ. ಈ ವಿಶೇಷ ಕೊಡುಗೆಗಳಲ್ಲಿ ನಗದು ರಿಯಾಯಿತಿ (Cash Discount), ಎಕ್ಸ್‌ಚೇಂಜ್ ಬೋನಸ್, ಸ್ಕ್ರಾಪೇಜ್ ಬೆನಿಫಿಟ್ಸ್ ಮತ್ತು ಲಾಯಲ್ಟಿ ಆಫರ್‌ಗಳು ಸೇರಿವೆ. ಆದರೆ, ಇವು ಆಯಾ ರಾಜ್ಯಗಳು ಮತ್ತು ಡೀಲರ್‌ಶಿಪ್‌ಗಳಲ್ಲಿನ ಸ್ಟಾಕ್ ಲಭ್ಯತೆಗೆ ಅನುಗುಣವಾಗಿ ಬದಲಾಗಬಹುದು.
ರೆನಾಲ್ಟ್‌ನ ಜನಪ್ರಿಯ ಎಸ್‌ಯುವಿ ಮಾದರಿಯಾದ ಕೈಗರ್ (Kiger) ಮೇಲೆ ಈ ತಿಂಗಳು ಅತ್ಯಧಿಕ ಆಫರ್ ನೀಡಲಾಗುತ್ತಿದೆ. ಗ್ರಾಹಕರು ನಗದು ಸವಲತ್ತು, ಎಕ್ಸ್‌ಚೇಂಜ್ ಬೋನಸ್ ಹಾಗೂ ಸ್ಕ್ರಾಪೇಜ್ ಕೊಡುಗೆಗಳ ರೂಪದಲ್ಲಿ ಒಟ್ಟು 1.25 ಲಕ್ಷ ರೂಪಾಯಿಗಳವರೆಗೆ ಉಳಿತಾಯ ಮಾಡಬಹುದು. ಕಡಿಮೆ ವೆಚ್ಚದಲ್ಲಿ ಪ್ರೀಮಿಯಂ ಎಸ್‌ಯುವಿ ಮಾಲೀಕರಾಗಲು ಬಯಸುವವರಿಗೆ ಇದು ಸೂಕ್ತ ಸಮಯವಾಗಿದೆ.
ರೆನಾಲ್ಟ್‌ನ ಅತ್ಯಂತ ಯಶಸ್ವಿ 7 ಸೀಟರ್ ಕಾರು ಆಗಿರುವ ಟ್ರೈಬರ್ (Triber) ಎಂಪಿವಿ ಮೇಲೆ ಗ್ರಾಹಕರು ಒಟ್ಟು 60,000 ರೂಪಾಯಿಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಮತ್ತೊಂದೆಡೆ, ಬಜೆಟ್ ಹ್ಯಾಚ್‌ಬ್ಯಾಕ್ ಕ್ವಿಡ್ (Kwid) ಕಾರಿನ ಹೊಸ ಮಾಡೆಲ್‌ಗಳ ಮೇಲೆ (2026 MY) 15,000 ರೂಪಾಯಿಗಳವರೆಗೆ ಮತ್ತು ಕಂಪನಿಯ ಬಳಿ ಇರುವ ಹಳೆಯ ಸ್ಟಾಕ್ (Old Stock) ಕ್ವಿಡ್ ಕಾರುಗಳ ಮೇಲೆ ಬರೋಬ್ಬರಿ 30,000 ರೂಪಾಯಿಗಳವರೆಗೆ ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ.
ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಕಂಪನಿಯು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಾಂಚ್ ಮಾಡಿರುವ ನ್ಯೂ ಜನರೇಷನ್ 'ರೆನಾಲ್ಟ್ ಡಸ್ಟರ್' (Duster) ಕಾರಿನ ಮೇಲೆ ಯಾವುದೇ ರೀತಿಯ ಅಧಿಕೃತ ರಿಯಾಯಿತಿ ಅಥವಾ ಆಫರ್‌ಗಳನ್ನು ಘೋಷಿಸಿಲ್ಲ.
ರೆನಾಲ್ಟ್ ಇಂಡಿಯಾ ಪ್ರಕಟಿಸಿರುವ ಈ ಆಕರ್ಷಕ ಆಫರ್‌ಗಳು ಕೇವಲ ಜುಲೈ 31, 2026 ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತವೆ. ಹೀಗಾಗಿ, ಆಫರ್‌ಗಳ ಸಂಪೂರ್ಣ ವಿವರ ಹಾಗೂ ನಿಖರ ಮಾಹಿತಿ ಪಡೆಯಲು ಗ್ರಾಹಕರು ತಮ್ಮ ಹತ್ತಿರದ ಅಧಿಕೃತ ರೆನಾಲ್ಟ್ ಡೀಲರ್‌ಶಿಪ್‌ಗೆ ಭೇಟಿ ನೀಡಲು ಕೋರಲಾಗಿದೆ. ಹಬ್ಬದ ದಿನಗಳು ಹತ್ತಿರ ಬರುತ್ತಿರುವುದರಿಂದ ಬಜೆಟ್ ಸ್ನೇಹಿ ಎಸ್‌ಯುವಿ, ಎಂಪಿವಿ ಅಥವಾ ಹ್ಯಾಚ್‌ಬ್ಯಾಕ್ ಕಾರುಗಳನ್ನು ಮನೆಗೆ ತರಲು ಇದು ಅತ್ಯಂತ ಸೂಕ್ತ ಹಾಗೂ ಹಣ ಉಳಿಸುವ ಸಮಯವಾಗಿದೆ.