ರೇಂಜ್ ರೋವರ್ ಎಸ್ ವಿ ರಣಥಂಬೋರ್ ಖರೀದಿ ಮಾಡ್ಬೇಕು ಅಂದ್ರೆ ಎಷ್ಟು ಇಎಂಐ ಕಟ್ಬೇಕು?

Published : Feb 06, 2025, 01:48 PM ISTUpdated : Feb 06, 2025, 02:15 PM IST
ರೇಂಜ್ ರೋವರ್ ಎಸ್ ವಿ ರಣಥಂಬೋರ್ ಖರೀದಿ ಮಾಡ್ಬೇಕು ಅಂದ್ರೆ ಎಷ್ಟು ಇಎಂಐ ಕಟ್ಬೇಕು?

ಸಾರಾಂಶ

ರೇಂಜ್‌ ರೋವರ್‌ನ ರಣಥಂಬೋರ್‌ ಆವೃತ್ತಿ ಭಾರತದಲ್ಲಿ ಖ್ಯಾತಿ ಗಳಿಸಿದೆ. ಬೆಂಗಳೂರಿನಲ್ಲಿ ಆನ್‌ರೋಡ್‌ ಬೆಲೆ ₹6.22 ಕೋಟಿ. ₹2.70 ಕೋಟಿ ಸಾಲದ ಮೇಲೆ ಐದು ವರ್ಷಗಳ ಇಎಂಐ ₹11.84 ಲಕ್ಷ. ನೋಯ್ಡಾದಲ್ಲಿ ₹5.72 ಕೋಟಿಗೆ ಲಭ್ಯ. ಸೆಪ್ಟೆಂಬರ್ 2024 ರಲ್ಲಿ ಬಿಡುಗಡೆಯಾದ ಈ 7 ಆಸನಗಳ ಪೆಟ್ರೋಲ್‌ ಕಾರು ಸೆಲೆಬ್ರಿಟಿಗಳ ಅಚ್ಚುಮೆಚ್ಚು.

ಅತ್ಯುತ್ತಮ ವಿನ್ಯಾಸ ಹಾಗೂ ವೈಶಿಷ್ಟ್ಯತೆಗಳಿಂದ ಭಾರತದಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ (Land Rover Range Rover) ಕಾರಿನ ಜನಪ್ರೀಯತೆ ಏರ್ತಾನೆ ಇದೆ. ಜನರು ರೇಂಜ್ ರೋವರ್ ಕಾರು (Range Rover car) ಖರೀದಿ ಕನಸು ಕಾಣ್ತಿದ್ದಾರೆ. ಬಹುತೇಕ ಸೆಲೆಬ್ರಿಟಿಗಳು ರೇಂಜ್ ರೋವರ್ ಕಾರು ಖರೀದಿಗೆ ಮುಂದಾಗ್ತಿದ್ದಾರೆ. ರೇಂಜ್ ರೋವರ್ ಎಸ್ ವಿ ರಣಥಂಬೋರ್ (Range Rover SV Ranthambore) ಆವೃತ್ತಿ ಮತ್ತಷ್ಟು ಫೇಮಸ್ ಆಗಿದೆ. ಬೆಂಗಳೂರಿನಲ್ಲಿ ಈ ಕಾರಿನ ಆನ್ ರೋಡ್ ಬೆಲೆ (On Road Price) 6,22,07,630 ರೂಪಾಯಿ. ಎಕ್ಸ್‌ ಶೋ ರೂಮಿನ ಬೆಲೆ  4,98,00,000 ರೂಪಾಯಿ. ಆರ್‌ ಟಿಓ ಚಾರ್ಜ್‌ 99,60,000 ರೂಪಾಯಿ ಆದ್ರೆ ವಿಮೆ 19,49,630 ರೂಪಾಯಿ. ಇತರೇ ಖರ್ಚಾಗಿ 4,98,000 ರೂಪಾಯಿ ಸೇರಿಸಿದ್ರೆ ನಿಮಗೆ 6,22,07,630 ರೂಪಾಯಿಗೆ ರೇಂಜ್ ರೋವರ್ ರಣಥಂಬೋರ್ ಆವೃತ್ತಿ ಸಿಗಲಿದೆ. ರೇಂಜ್ ರೋವರ್ ರಣಥಂಬೋರ್ ಖರೀದಿ ಮಾಡ್ಲೇಬೇಕು, ಅದನ್ನು ಓಡಿಸ್ಲೇಬೇಕು ಅನ್ನೋರು ಇಎಂಐ ಸೌಲಭ್ಯ ಪಡೆಯಬಹುದು. 

ಇಎಂಐನಲ್ಲಿ ರೇಂಜ್ ರೋವರ್ ಖರೀದಿ ಹೇಗೆ? : ರೇಂಜ್ ರೋವರ್ ಖರೀದಿಗೆ ನೀವು ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು. ವಾಹನ ಸಾಲದಡಿ ಬ್ಯಾಂಕ್ ನಿಮಗೆ ಸಾಲ ನೀಡುತ್ತೆ. ಆದ್ರೆ ನಿಮ್ಮ ಬ್ಯಾಂಕ್ ಕ್ರೆಡಿಟ್ ಸ್ಕೋರ್ ಇದಕ್ಕೆ ಮುಖ್ಯ. ನಿಮ್ಮ ಸ್ಕೋರ್ ಉತ್ತಮವಾಗಿದ್ರೆ ಹೆಚ್ಚಿನ ಸಾಲ ಸುಲಭವಾಗಿ ನಿಮಗೆ ಸಿಗುತ್ತೆ. ನೀವು ಎಷ್ಟು ಸಾಲವನ್ನು ತೆಗೆದುಕೊಳ್ತೀರಿ ಹಾಗೂ ಎಷ್ಟು ವರ್ಷಕ್ಕೆ ತೆಗೆದುಕೊಳ್ತೀರಿ ಎಂಬುದರ ಆಧಾರದ ಮೇಲೆ ನೀವು ಇಎಂಐ ಪಾವತಿಸಬೇಕಾಗುತ್ತದೆ. ಭಾರತದ ಪ್ರತಿಯೊಂದು ನಗರದಲ್ಲೂ ಇದ್ರ ಬೆಲೆ, ಡೌನ್ ಪೇಮೆಂಟ್ ಹಾಗೂ ಇಎಂಐ ಪಾವತಿ ಭಿನ್ನವಾಗಿದೆ.

ಮತ್ತೆ ಬರುತ್ತಿದೆ ಟಾಟಾ ಸುಮೋ, ಹೊಸ ಫೀಚರ್ಸ್ 28 ಕಿ.ಮಿ ಮೈಲೇಜ್, ಕೈಗೆಟುಕುವ ದರ!

ನೀವು ಬೆಂಗಳೂರಿನಲ್ಲಿ ಇದನ್ನು ಖರೀದಿ ಮಾಡ್ತಿದ್ದೀರಿ ಎಂದಾದ್ರೆ ಡೌನ್ ಪೇಮೆಂಟ್ ಆಗಿ 62.21 ಲಕ್ಷ ರೂಪಾಯಿ ಪಾವತಿ ಮಾಡ್ಬೇಕು. ನೀವು 2.70 ಕೋಟಿ ಬ್ಯಾಂಕ್ ಸಾಲ ಪಡೆದಿದ್ದರೆ. 60 ತಿಂಗಳು ಅಂದ್ರೆ ಐದು ವರ್ಷಕ್ಕೆ ಶೇಕಡಾ 9.8ರ ಬಡ್ಡಿಯಲ್ಲಿ ಪ್ರತಿ ತಿಂಗಳು 11,84,048 ರೂಪಾಯಿ ಇಎಂಐ ಪಾವತಿ ಮಾಡ್ಬೇಕು. ನೀವು ಎಷ್ಟು ಸಾಲ ಪಡೆದಿದ್ದೀರಿ ಎಂಬುದ್ರ ಮೇಲೆ ಇಎಂಐ ನಿರ್ಧಾರವಾಗುತ್ತದೆ.

ನೋಯ್ಡಾದಲ್ಲಿ ನೀವು ಈ ಕಾರು ಖರೀದಿಗೆ ಮುಂದಾದ್ರೆ ನಿಮಗೆ ರೇಂಜ್ ರೋವರ್ ರಣಥಂಬೋರ್ ಕಾರು 5.72 ಕೋಟಿ ರೂಪಾಯಿಗೆ ಲಭ್ಯವಿದೆ. ನೀವು 57.17 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡ್ಬೇಕು. ನೀವು ಶೇಕಡಾ 9 ರಷ್ಟು ಬಡ್ಡಿಯನ್ನು ನಾಲ್ಕು ವರ್ಷಕ್ಕೆ ಸಾಲ ತೆಗೆದುಕೊಂಡರೆ ಪ್ರತಿ ತಿಂಗಳು 12.80 ಲಕ್ಷ ರೂಪಾಯಿ ಇಎಂಐ ಪಾವತಿಸಬೇಕು. ಐದು ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡರೆ, ಶೇಕಡಾ 9 ರ ಬಡ್ಡಿದರದಲ್ಲಿ 60 ತಿಂಗಳವರೆಗೆ 10.68 ಲಕ್ಷ ರೂಪಾಯಿ  ಇಎಂಐ ಪಾವತಿಸಬೇಕಾಗುತ್ತದೆ. 

ಟಾಟಾ ಕಾರುಗಳ ಮೇಲೆ ಭಾರಿ ಡಿಸ್ಕೌಂಟ್! 1 ಲಕ್ಷ ರೂ. ವರೆಗೆ ಬೆಲೆ ಇಳಿಕೆ

ರೇಂಜ್ ರೋವರ್ ಕಂಪನಿ ರೇಂಜ್ ರೋವರ್ ಎಸ್ ವಿ ರಣಥಂಬೋರ್ ಆವೃತ್ತಿಯನ್ನು ಸೆಪ್ಟೆಂಬರ್, 2024ರಲ್ಲಿ ಬಿಡುಗಡೆ ಮಾಡಿದೆ. ಇದ್ರ ವಿನ್ಯಾಸ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಹುಲಿಯಿಂದ ಸ್ಪೂರ್ತಿ ಪಡೆದಿದೆ. ಈ ರೂಪಾಂತರವು 11 ಬಣ್ಣಗಳಲ್ಲಿ ಲಭ್ಯವಿದೆ. 2998 ಸಿಸಿ ಎಂಜಿನ್‌ ಚಾಲಿತವಾಗಿದ್ದು, ಇದು ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಇದು 7 ಆಸನಗಳ ಪೆಟ್ರೋಲ್ ಕಾರು. ರೇಂಜ್ ರೋವರ್ ಎಸ್ವಿ ರಣಥಂಬೋರ್ ಆವೃತ್ತಿಯು ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಟಚ್‌ಸ್ಕ್ರೀನ್, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್,  ಪ್ಯಾಸೆಂಜರ್ ಏರ್‌ಬ್ಯಾಗ್, ಡ್ರೈವರ್ ಏರ್‌ಬ್ಯಾಗ್, ಪವರ್ ಸ್ಟೀರಿಂಗ್, ಏರ್ ಕಂಡಿಷನರ್ ಹೊಂದಿದೆ. 
 

PREV
click me!

Recommended Stories

ಇದು ಬರೀ ಡಿಸೆಂಬರ್‌ ಅಲ್ಲ, ಕಾರ್‌ ಡಿಸ್ಕೌಂಟ್‌ ಡಿಸೆಂಬರ್‌; ಈ ಐದು ಕಾರ್‌ಗಳಿಗೆ ಇದೆ ಭರ್ಜರಿ ಆಫರ್‌!
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ