ಭಾರತದ ಅತ್ಯಂತ ದುಬಾರಿ ಟೊಯೋಟಾ ಕಾರು ಖರೀದಿಸಿದ ಗಾಯಕ ಗುರ್ದಾಸ್, ಬುಕಿಂಕ್ ಬೆಲೆ 10 ಲಕ್ಷ ರೂ!

By Suvarna News  |  First Published Feb 16, 2023, 3:45 PM IST

ಪ್ರಧಾನಿ ಮೋದಿ ಸೇರಿದಂತೆ ಕಲ ರಾಜಕಾರಣಿಗಳು, ಉದ್ಯಮಿ, ಸೆಲೆಬ್ರೆಟಿಗಳಲ್ಲಿರುವ ಭಾರತದ ಅತೀ ದುಬಾರಿ ಟೊಯೋಟಾ ಕಾರನ್ನು ಪಂಜಾಬಿ ಗಾಯಕ ಗುರ್ದಾಸ್ ಮಾನ್ ಖರೀದಿಸಿದ್ದಾರೆ. ಈ ಕಾರಿನ ಬುಕಿಂಗ್ ಬೆಲೆ 10 ಲಕ್ಷ ರೂಪಾಯಿ. ಗುರ್ದಾಸ್ ಮಾನ್ ಖರೀದಿಸಿದ ದುಬಾರಿ ಕಾರು ಯಾವುದು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ.
 


ಚಂಡೀಘಡ(ಫೆ.16): ಇದು ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಟೊಯೋಟಾ ಕಾರು. ಈ ಕಾರಿನ ಬುಕಿಂಗ್ ಬೆಲೆ 10 ಲಕ್ಷ ರೂಪಾಯಿ. ಸಾಮಾನ್ಯವಾಗಿ ಈ ಕಾರು ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರೆಟಿಗಳು ಬಳಕೆ ಮಾಡುತ್ತಾರೆ. ಇದೀಗ ಈ ಕಾರನ್ನು ಪಂಜಾಬಿ ಗಾಯಕ ಗುರ್ದಾಸ್ ಮಾನ್ ಖರೀದಿಸಿದ್ದಾರೆ.ಭಾರತದ ದುಬಾರಿ ಟೊಯೋಟಾ ಕಾರಿನ ಹೆಸರು ಟೊಯೋಟೋ ಲ್ಯಾಂಡ್ ಕ್ರೂಸರ್ 300. ದೆಹಲಿ ಆಟೋ ಎಕ್ಸ್‌ಪೋ 2023ರಲ್ಲಿ ಈ ಕಾರು ಭಾರತದಲ್ಲಿ ಅನಾವರಣಗೊಂಡಿತ್ತು. ಲ್ಯಾಂಡ್ ಕ್ರೂಸರ್ 300 ಕಾರು ಅಪ್‌ಡೇಟೆಡ್ ವರ್ಶನ್ ಕಾರಾಗಿದೆ. ಪ್ರಧಾನಿ ಮೋದಿ ಬಳಿಯೂ ಲ್ಯಾಂಡ್ ಕ್ರೂಸರ್ ಕಸ್ಟಮೈಸ್ಡ್ ಕಾರಿದೆ. ಇನ್ನು ಉದ್ಯಮಿಗಳು ಸೇರಿದಂತೆ ಕೆಲವರು ಈ ಕಾರನ್ನು ಬಳಸುತ್ತಿದ್ದಾರೆ. ಆದರೆ ಗುರ್ದಾಸ್ ಮಾನ್ ಹೊಚ್ಚ ಹೊಸ, ಅಪ್‌ಡೇಟೆಡ್ ವರ್ಶನ್ ಕ್ರೂಸರ್ 300 ಕಾರು ಖರೀದಿಸಿದ್ದಾರೆ. ಈ ಕಾರಿನ ಎಕ್ಸ್‌ ಶೋ ರೂಂ ಬೆಲೆ 2 ಕೋಟಿ ರೂಪಾಯಿ.

ಭಾರತದಲ್ಲಿ ಈ ಕಾರು ಅನಾವರಣಗೊಂಡ ಬೆನ್ನಲ್ಲೇ ಗುರ್ದಾಸ್ ಮಾನ್ ಟೊಯೋಟಾ ಲ್ಯಾಂಡ್ ಕ್ರೂಸರ್ 300 ಕಾರನ್ನು ಬುಕ್ ಮಾಡಿದ್ದಾರೆ. ಇದೀಗ ಹೊಚ್ಚ ಹೊಸ ಕಾರು ಗಾಯಕ ಗುರ್ದಾಸ್ ಮಾನ್ ಕೈಸೇರಿದೆ. 2021ರಲ್ಲಿ ಲ್ಯಾಂಡ್ ಕ್ರೂಸರ್ 200 ಕಾರು ಬಿಡುಗಡೆಯಾಗಿತ್ತು. ಈ ಕಾರು ಭಾರತದ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳ ಬಳಿ ಇವೆ. ಇದೀಗ ಲ್ಯಾಂಡ್ ಕ್ರೂಸರ್ 300 ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಈ ಕಾರನ್ನು ಗುರ್ದಾಸ್ ಮಾನ್ ಖರೀದಿಸಿದ್ದಾರೆ. ಗುರ್ದಾಸ್ ಮಾನ್ ಕಪ್ಪು ಬಣ್ಣದ ಕಾರು ಖರೀದಿಸಿದ್ದಾರೆ. ಈ ಕಾರು 5 ಬಣ್ಣಗಳಲ್ಲಿ ಲಭ್ಯವಿದೆ. 

Latest Videos

undefined

ಕಾರು ಬದಲಾಯಿಸಿದ ಮೋದಿ; ಹೊಸ ವಾಹನ ಮಾಡುತ್ತಿದೆ ಮೋಡಿ!

ಹೊಚ್ಚ ಹೊಸ ಲ್ಯಾಂಡ್ ಕ್ರೂಸರ್ 300 ಕಾರು 3.3 ಲೀಟರ್ ಟ್ವಿನ್ ಟರ್ಬೋ ಡೀಸೆಲ್ ಎಂಜಿನ್ ಹೊಂದಿದೆ. 305 Hp ಪವರ್ ಹಾಗೂ 800 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. A 10 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಲ್ಯಾಂಡ್ ಕ್ರೂಸರ್ 200 ಕಾರಿಗಿಂತ ಲ್ಯಾಂಡ್ ಕ್ರೂಸರ್ 300 ಕಾರು 200 ಕೆಜಿ ಕಡಿಮೆ ತೂಕ ಹೊಂದಿದೆ. 6 ಸಿಲಿಂಡರ್ , 3346 ಸಿಸಿ ಸಾಮರ್ಥ್ಯ ಈ ಎಸ್‌ಯುವಿ ಕಾರು ಯಾವುದೇ ರಸ್ತೆಯಲ್ಲೂ ನಿರಾಯಾಸವಾಗಿ ಸಾಗಲಿದೆ. ಡೀಸೆಲ್ ಟ್ಯಾಂಕ್ ಸಾಮರ್ಥ್ಯ 110 ಲೀಟರ್ ಹೊಂದಿದೆ. ಅತ್ಯಂತ ಆಕರ್ಷಕ ವಿನ್ಯಾಸದಲ್ಲಿ ನೂತನ ಕಾರು ಲಭ್ಯವಿದೆ. ಇದೀಗ ಈ ಕಾರು ಗಾಯಕ ಗುರ್ದಾಸ್ ಮಾನ್ ಕೈಸೇರಿದೆ. 

ಭಾರತದಲ್ಲಿ ಲ್ಯಾಂಡ್‌ ಕ್ರೂಸರ್‌ ಎಲ್‌ಸಿ 300 ಬುಕಿಂಗ್‌ ಆರಂಭ

2019ರ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಲ್ಯಾಂಡ್ ಕ್ರೂಸರ್ 200 ಕಾರನ್ನು ಅಪ್‌ಗ್ರೇಡ್ ಮಾಡಿದ್ದರು. 73ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಕಸ್ಟಮೈಸ್ಡ್ ಲ್ಯಾಂಡ್ ಕ್ರೂಸರ್ ಕಾರು ಬಳಸಿದ್ದರು. ಈ ಕಾರು ಬುಲೆಟ್ ಫ್ರೂಫ್, ಬಾಂಬ್ ನಿರೋಧ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. 2019ರಲ್ಲಿ ಪ್ರಧಾನಿ ಹೊಚ್ಚಹೊಸ ಲ್ಯಾಂಡ್ ಕ್ರೂಸರ್ ಕಾರನ್ನು 1.7 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ನೀಡಿ ಖರೀದಿಸಿದ್ದರು. ಆದರೆ ಈ ಕಾರು ಕಸ್ಟಮೈಸ್ಡ್ ಬಳಿಕ ಈ ಕಾರಿನ ಎಷ್ಟು ಅನ್ನೋ ಮಾಹಿತಿ ಲಭ್ಯವಿಲ್ಲ.

click me!