ಕೈಗೆಟುಕವ ದರ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೊಸ ಬೆಲೆ ಪ್ರಕಟ, ಇಲ್ಲಿದೆ ಸಂಪೂರ್ಣ ಪಟ್ಟಿ!

By Suvarna News  |  First Published Feb 10, 2023, 9:56 PM IST

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆ ವೇಳೆ ನೀಡಿದ್ದ 20,000 ರೂಪಾಯಿ ಆಫರ್ ಬೆಲೆ ಅಂತ್ಯಗೊಂಡಿದೆ. ಇದೀಗ ಟಾಟಾ ಟಿಯಾಗೋ ಇವಿ ವೇರಿಯೆಂಟ್ ಬೆಲೆ ಪ್ರಕಟಗೊಂಡಿದೆ. ಕೈಗೆಟುಕುವ ದರದ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ಬೆಂಗಳೂರು(ಫೆ.10)  ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಸಂಸ್ಥೆ  ಟಾಟಾ ಮೋಟಾರ್ಸ್, ಇಂದು Tiago ev ನ ಹೊಸ ಬೆಲೆಯನ್ನು ಘೋಷಿಸಿದೆ. ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆ ವೇಳೆ ಗ್ರಾಹಕರಿಗೆ ನೀಡಿದ್ದ 20,000 ರೂಪಾಯಿ ಆಫರ್ ಅಂತಿಮಗೊಳಿಸಿದೆ. ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಈಗ 8.69 ಲಕ್ಷ ರೂಪಾಯಿಂದ( ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.  ಇದರಿಂದಾಗಿ Tiago.ev ಅತ್ಯಾಕರ್ಷಕ, ಶ್ರಮವಿಲ್ಲದ ಮತ್ತು ಪರಿಸರ ಸ್ನೇಹಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಖರೀದಿಸಲು ಬಯಸುವ ಹೊಸ ಗ್ರಾಹಕರಿಗೆ ಕೈಗೆಟುವ ಬೆಲೆಯಲ್ಲೇ ಈಗಲೂ ಕಾರು ಲಭ್ಯವಿದೆ. 

XE ವೇರಿಯೆಂಟ್, 8.49 ಲಕ್ಷ ರೂಪಾಯಿ(ಹಳೇ ಬೆಲೆ), 8.69 ರೂಪಾಯಿ(ಪರಿಷ್ಕರಿಸಿದ ಬೆಲೆ)
XT ವೇರಿಯೆಂಟ್, 9.09 ಲಕ್ಷ ರೂಪಾಯಿ(ಹಳೇ ಬೆಲೆ), 9.29 ರೂಪಾಯಿ(ಪರಿಷ್ಕರಿಸಿದ ಬೆಲೆ)
XT ವೇರಿಯೆಂಟ್,9.99 ಲಕ್ಷ ರೂಪಾಯಿ(ಹಳೇ ಬೆಲೆ), 10.19 ರೂಪಾಯಿ(ಪರಿಷ್ಕರಿಸಿದ ಬೆಲೆ)
XZ+ ವೇರಿಯೆಂಟ್, 10.79 ಲಕ್ಷ ರೂಪಾಯಿ(ಹಳೇ ಬೆಲೆ), 10.99 ರೂಪಾಯಿ(ಪರಿಷ್ಕರಿಸಿದ ಬೆಲೆ)
XZ+ Tech LUX ವೇರಿಯೆಂಟ್, 11.29 ಲಕ್ಷ ರೂಪಾಯಿ(ಹಳೇ ಬೆಲೆ), 11.49 ರೂಪಾಯಿ(ಪರಿಷ್ಕರಿಸಿದ ಬೆಲೆ)
XZ+ ವೇರಿಯೆಂಟ್, 11.29 ಲಕ್ಷ ರೂಪಾಯಿ(ಹಳೇ ಬೆಲೆ), 11.49 ರೂಪಾಯಿ(ಪರಿಷ್ಕರಿಸಿದ ಬೆಲೆ)
XZ+ Tech LUX ವೇರಿಯೆಂಟ್ 11.79 ಲಕ್ಷ ರೂಪಾಯಿ(ಹಳೇ ಬೆಲೆ), 11.99 ರೂಪಾಯಿ(ಪರಿಷ್ಕರಿಸಿದ ಬೆಲೆ)

Tap to resize

Latest Videos

undefined

315 ಕಿ.ಮೀ ಮೈಲೇಜ್, 21,000 ರೂಗೆ ಬುಕ್ ಮಾಡಿ ದೇಶದ ಕಡಿಮೆ ಬೆಲೆಯ ಟಾಟಾ ಟಿಯಾಗೋ ಇವಿ!

Tiago.ev ಒಂದು ವಿಶೇಷ ಉತ್ಪನ್ನವಾಗಿದೆ ಏಕೆಂದರೆ ಇದು ಇಲೆಕ್ಟ್ರಿಕ್ ಮೊಬಿಲಿಟಿಯನ್ನು ಲಭ್ಯವಾಗಿಸುತ್ತದೆ ಮತ್ತು ಮುಖ್ಯವಾಹಿನಿಗೆ ತರುತ್ತದೆ. ಮೊದಲ ದಿನದಲ್ಲಿ 10,000 ಯೂನಿಟ್‌ಗಳನ್ನು ಕಾಯ್ದಿರಿಸುವುದರೊಂದಿಗೆ ಭಾರತದಲ್ಲಿ 'ವೇಗವಾಗಿ ಬುಕ್ ಮಾಡಲಾದ EV' ಆಗಿ ಗ್ರಾಹಕರಿಂದ ಅಸಾಧಾರಣ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಮತ್ತು ಒಂದು ತಿಂಗಳೊಳಗೆ 20,000 ಬುಕಿಂಗ್‌ಗಳನ್ನು ಸಾಧಿಸಲಾಗಿದೆ ಎಂದು  ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ ಮಾರ್ಕೆಟಿಂಗ್ ಮುಖ್ಯಸ್ಥರಾದ  ವಿವೇಕ್ ಶ್ರೀವತ್ಸ ಹೇಳಿದ್ದಾರೆ.

ಈ ಪ್ರಯಾಣದ ಮುಂದಿನ ಹಂತಕ್ಕೆ ನಾವು ಸಾಗುವ ಸಮಯ ಈಗ ಬಂದಿದೆ. ಈ ಅತ್ಯಾಕರ್ಷಕ ಉತ್ಪನ್ನದ ಉತ್ಸಾಹವನ್ನು ಯಾವುದೇ ರಾಜಿಯಿಲ್ಲದೆ ಹೆಚ್ಚಿನ ಗ್ರಾಹಕರಿಗೆ ವಿಸ್ತರಿಸುವುದನ್ನು ಮುಂದುವರಿಸಲು, Tiago.ev ಶ್ರೇಣಿಯ ಆರಂಭಿಕ ಬೆಲೆಯನ್ನು INR 8.69 ಲಕ್ಷಕ್ಕೆ ಘೋಷಿಸಲು ನಾವು ಸಂತೋಷಪಡುತ್ತೇವೆ, ಪ್ರಸ್ತಾವಿತ ಪರಿಚಯಾತ್ಮಕ ಬೆಲೆಯಿಂದ ಕನಿಷ್ಟ INR 20,000 ಹೆಚ್ಚಳದೊಂದಿಗೆ, EV ಮಾರುಕಟ್ಟೆಯನ್ನು ಸಾಮನ್ಯಜನರಿಗೆ ತೆರೆದಿಡುವುದು ಮತ್ತು 10 ಲಕ್ಷಕ್ಕಿಂತ ಕಡಿಮೆ ಆರಂಭಿಕ ಬೆಲೆಯನ್ನು ಉಳಿಸಿಕೊಳ್ಳುವ ಮೂಲಕ ಉತ್ಪನ್ನವನ್ನು ಎಲ್ಲರಿಗೂ ಸುಲಭ ಲಬ್ಯವಾಗುವಂತೆ ಮಾಡುವ ನಮ್ಮ ಭರವಸೆಗೆ ನಾವು ಬದ್ಧರಾಗಿದ್ದೇವೆ ಎಂದರು.

ಅತೀ ಕಡಿಮೆ ಬೆಲೆಗೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು, ಹೊಸ ಇತಿಹಾಸ ರಚಿಸಿದ ಟಾಟಾ ಮೋಟಾರ್ಸ್!

ಸಾಮಾನ್ಯವಾಗಿ ಪ್ರೀಮಿಯಂ ಕಾರುಗಳಲ್ಲಿ ಲಭ್ಯವಿರುವ ಎಲ್ಲಾ ಪರಿಷ್ಕಾರಗಳನ್ನು ಹೊಂದಿರುವ ಉತ್ತಮ ಗುಣಮಟ್ಟದ ಸಂಪರ್ಕಿತ ವೈಶಿಷ್ಟ್ಯಗಳನ್ನು ನೀಡುವ ತನ್ನ ವಿಭಾಗದಲ್ಲಿಯೇ ಮೊದಲನೆಯ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದು ಬ್ಯಾಟರಿ ಪ್ಯಾಕ್‌ಗಳ ಎರಡು ಆಯ್ಕೆಗಳು ಮತ್ತು ನಾಲ್ಕು ವಿಭಿನ್ನ ಚಾರ್ಜಿಂಗ್ ಪರಿಕರಗಳೊಂದಿಗೆ ಬರಲಿದೆ, ಗ್ರಾಹಕರು ತಮ್ಮ ಚಲನಶೀಲತೆಯ ಅಗತ್ಯಗಳನ್ನು ಉತ್ತಮವಾಗಿ ಪೂರೈಸುವ ಸಂಯೋಜನೆಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಐಷಾರಾಮಿ ವಾತಾವರಣದ ನಡುವೆ ಅದರ ರೋಮಾಂಚಕ, ಅದರೊಂದಿಗೆ ಚಾಲನೆ ಮಾಡಲು ಸುಲಭವಾದ ಅನುಭವದೊಂದಿಗೆ, Tiago.ev ಪ್ರತಿ ಕುಟುಂಬದ ಸದಸ್ಯರ ನೆಚ್ಚಿನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗುವ ಹಾದಿಯಲ್ಲಿದೆ. 

click me!