Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!

By Suvarna News  |  First Published Jan 2, 2022, 6:25 PM IST
  • ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಭಾರಿ ಬೇಡಿಕೆ
  • ಶೀಘ್ರದಲ್ಲೇ ಎಲೆಕ್ಟ್ರಿಕ್‌ ಮೋಟಾರ್‌ಸೈಕಲ್‌ ಹಾಗೂ ಕಾರು ಬರುವ ನಿರೀಕ್ಷೆ
  • ಜೊತೆಗೆ, ಎಲೆಕ್ಟ್ರಿಕ್‌ ಸೈಕಲ್‌ ತರುವ ಸುಳಿವು ನೀಡಿದ ಭವಿಷ್‌ ಅಗರ್ವಾಲ್‌

ಬೆಂಗಳೂರು(ಜ.02): ಆ್ಯಪ್ ಆಧಾರಿತ ಕ್ಯಾಬ್ ಸೇವೆ ಒದಗಿಸುವ ಮೂಲಕ ಜನಪ್ರಿಯವಾಗಿದ್ದ ಓಲಾ ಎಲೆಕ್ಟ್ರಿಕ್  (Ola electric) ಕಂಪನಿ, ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಬಿಡುಗಡೆ ಮಾಡಿ, ಇವಿ ಸ್ಕೂಟರ್ (EV scooter) ವಲಯದಲ್ಲಿ ಸದ್ದು ಮಾಡುತ್ತಿದೆ. ಇದರ ಎಸ್1  (S1) ಹಾಗೂ ಎಸ್1 ಪ್ರೋ (S1 Pro) ಸ್ಕೂಟರ್ಗಳಿಗೆ ಭಾರಿ ಬೇಡಿಕೆಯಿದ್ದು, ಕಡಿಮೆ ದರದಲ್ಲಿ ಉತ್ತಮ ಸೌಲಭ್ಯಗಳನ್ನು ಒಳಗೊಂಡ ಸ್ಕೂಟರ್ ಎಂಬ ಹೆಗ್ಗಳಿಗೆಗೆ ಪಾತ್ರವಾಗಿದೆ. ಆದರೆ,  ಅವುಗಳ ವಿತರಣೆ ಮಾತ್ರ ಇನ್ನೂ ಆರಂಭವಾಗಬೇಕಿದೆ.

ಇದರ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್ ಹೊಸ ವರ್ಷದಲ್ಲಿ(New Year 2022) ಇನ್ನೊಂದು ಮಹತ್ವದ ಹೆಜ್ಜೆ ಇಡುವ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಕಂಪನಿ ಎಲೆಕ್ಟ್ರಿಕ್ ಮೋಟಾರ್ಸೈಕಲ್ (Motor Cycle) ತಯಾರಿಸುವ ಯೋಜನೆಯನ್ನು ದೃಢೀಕರಿಸಿದೆ. ಜೊತೆಗೆ, ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸುವುದಾಗಿ ಈಗಾಗಲೇ ಘೋಷಿಸಿದೆ. ಇದರ ಬೆನ್ನಲ್ಲೇ ಎಲೆಕ್ಟ್ರಿಕ್ ಸೈಕಲ್ ಕೂಡ ಬರಲಿದೆಯೇ? ಓಲಾ (Ola) ಎಲೆಕ್ಟ್ರಿಕ್ 2021 ರಲ್ಲಿ ದೇಶದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಎಸ್1 ಮತ್ತು ಎಸ್1 ಪ್ರೋ ಬುಕಿಂಗ್ ಪೂರ್ಣಗೊಂಡಿದ್ದು, ಈಗ ಗ್ರಾಹಕರ ಕಣ್ಣುಗಳ ಅವುಗಳ ಹೊಸ ವೇರಿಯಂಟ್ಗಳ ಮೇಳೆ ನೆಟ್ಟಿದೆ. ಆದರೆ, ಇದೆಲ್ಲದರ ನಡುವೆ ಕಂಪನಿ, ವಿದ್ಯುತ್ ಸೈಕಲ್ ಅನ್ನು ಕೂಡ ತಯಾರಿಸಲಿದೆಯೇ ಎಂಬ ಸುದ್ದಿ ಹರಿದಾಡುತ್ತಿದೆ.

Tap to resize

Latest Videos

undefined

Ola Electric Scooter ಮುಂದಿನ ವಾರದಿಂದ ಹೊಸ ನಗರ, ಪಟ್ಟಣದಲ್ಲಿ ಸ್ಕೂಟರ್ ಲಭ್ಯ!

ಇದಕ್ಕೆ ಕಾರಣ, ಓಲಾ ಸಿಇಒ (CEO) ಭವಿಶ್ ಅಗರ್ವಾಲ್  (Bhavish Agarwal) ಅವರ ಇತ್ತೀಚಿನ ಟ್ವೀಟ್. ಇತ್ತೀಚೆಗಷ್ಟೇ ಟ್ವಿಟರ್ನಲ್ಲಿ  ತಾವು ಸೈಕಲ್ ಹೊಂದಿರುವ ಎರಡು ಫೋಟೋಗಳನ್ನು ಲಗತ್ತಿಸಿರುವ ಭವಿಷ್ "ಈ ಹೊಸ ವರ್ಷ, ಹಳೆಯ ಉತ್ಸಾಹವನ್ನು ಪುನಶ್ಚೇತನಗೊಳಿಸಲು ನಿರ್ಧರಿಸಿದ್ದೇನೆ" ಎಂದು ಶೀರ್ಷಿಕೆ ಬರೆದಿದ್ದಾರೆ 2006, 2010 ಹಾಗೂ 2022ರಲ್ಲಿ ಬಳಸಿರುವ ಹಾಗೂ ಬಳಸಲಿರುವ ಸೈಕಲ್ಗಳ ಚಿತ್ರಗಳಿವೆ. ಇದರಿಂದ, ಓಲಾ ಎಲೆಕ್ಟ್ರಿಕ್ ಸೈಕಲ್ ಹೊರತರಬಹುದೇ ಎಂದು ಹಲವರು ಆಶ್ಚರ್ಯಪಡುತ್ತಿದ್ದಾರೆ. ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು, ಭವಿಷ್ಯದಲ್ಲಿ ಓಲಾ ಎಲೆಕ್ಟ್ರಿಕ್ ಸೈಕಲ್ ಮೇಲೆ ಕೆಲಸ ಮಾಡಲಿದೆಯೇಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಭವಿಷ್, “ ಬಹುತೇಕ ಸಾಧ್ಯತೆಯಿದೆ. ಸೈಕಲ್ ಸವಾರಿ ಒಂದು ಕೂಲ್ ಲೈಫ್ಸ್ಟೈಲ್ ಆಯ್ಕೆಯಾಗಿದೆ” ಎಂದಿದ್ದಾರೆ. 

Ola Hypercharger ಚಾರ್ಜಿಂಗ್ ಚಿಂತೆ ಬಿಡಿ, ಇ-ಸ್ಕೂಟರ್ಗಳಿಗೆ ಹೈಪರ್ ಚಾರ್ಜರ್ ಅಳವಡಿಕೆ ಆರಂಭಿಸಿದ ಓಲಾ!

ಪ್ರಸ್ತುತ ಓಲಾ ಎಲೆಕ್ಟ್ರಿಕ್ನ ಸಂಪೂರ್ಣ ಗಮನ, ಭರವಸೆ ನೀಡಿರುವಂತೆ ಸಮಯಕ್ಕೆ ಸರಿಯಾಗಿ ಸ್ಕೂಟರ್ಗಳನ್ನು ಡೆಲಿವರಿ ಮಾಡುವುದಾಗಿದೆ.ಏಕೆಂದರೆ, ಕಂಪನಿಯು ನೇರ-ಮನೆಗೆ ವಿತರಣೆ ಮಾದರಿಯನ್ನು ಅನುಸರಿಸುತ್ತಿದೆ. ಆದರೆ, ಈಗಾಗಲೇ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡಿ ತಿಂಗಳುಗಳೇ ಕಳೆದರೂ ಅದರ ವಿತರಣೆ ದೊರೆಯದೆ ಗ್ರಾಹಕರು ಆಕ್ರೋಶಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿ ವಿರುದ್ಧ ಭಾರಿ ಅಸಮಾಧಾನ ಕಾಣಿಸಿಕೊಂಡಿದೆ. ಭವಿಷ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸುತ್ತಿರುವ ಜನರು ವಾಹನ ಡೆಲಿವರಿ ವಿಳಂಬದ ಕುರಿತು ಕಿಡಿಕಾರುತ್ತಿದ್ದಾರೆ.

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಈ ನಡುವೆ, ಓಲಾ ಎಲೆಕ್ಟ್ರಿಕ್ ತುಂಬಾ ದೊಡ್ಡದಾಗಿ ಬೆಳೆಯುತ್ತಿದೆ ಎಂದು ವಿಮರ್ಶಕರು ವಿವರಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಬೃಹತ್  ಓಲಾ ಘಟಕ ಇನ್ನೂ ಹಂತ-ವಾರು ನಿರ್ಮಾಣ ಹಂತದಲ್ಲಿದೆ ಮತ್ತು ಇದರ ನೇರ-ಮನೆಗೆ ಮಾರಾಟ ಮತ್ತು ಸೇವಾ ಮಾದಯು ತನ್ನದೇ ಆದ ಸವಾಲುಗಳನ್ನು ಹೊಂದಿದೆ.  ಜೊತೆಗೆ, ಇದರ ಬೆನ್ನಲ್ಲೇ ಓಲಾ ಸ್ಕೂಟರ್ ಪಡೆದಿರುವ ಹಲವರು ಅದರ ಗುಣಮಟ್ಟದ ಸಮಸ್ಯೆಗಳ ಕುರಿತು ದೂರು ದಾಖಲಿಸಿದ್ದಾರೆ. ಆದರೆ, ಓಲಾ ಮಾತ್ರ ಸ್ಕೂಟರ್ನ ಡೆಲಿವರಿ ದಿನಾಂಕವನ್ನು ಪದೆ ಪದೇ ಮುಂದೂಡುತ್ತಿದೆ. ಈಗಾಗಲೇ ಮೂರು ಬಾರಿ ಡೆಲಿವರಿಯ ನಿಗದಿತ ದಿನಾಂಕ ಮುಂದೂಡಲಾಗಿದೆ.
 

click me!