ಸ್ಟೀರಿಂಗ್ ವೀಲ್, ಪೆಡಲ್ ಏನೂ ಇಲ್ಲ, ಟೆಸ್ಲಾದ ಟೆಕ್ ಅದ್ಭುತ ರೋಬೋಟಿಕ್ ಕಾರು ಸೆ.3ಕ್ಕೆ ಬಿಡುಗಡೆ

Published : Aug 27, 2026, 03:56 PM IST
Tesla Cybercab

ಸಾರಾಂಶ

ಸ್ಟೀರಿಂಗ್ ವೀಲ್ ಇಲ್ಲ, ಡ್ರೈವರ್ ಬೇಕಿಲ್ಲ, ಕಾರಿನಲ್ಲಿ ಕುಳಿತುಕೊಂಡರೆ ಸಾಕು, ನಿಮಗೆ ಎಲ್ಲಿಗೆ ಬೇಕೋ ಅಲ್ಲಿಗೆ ,ಕರೆದುಕೊಂಡು ಹೋಗಲಿದೆ. ಹಾಗಂತ ಕಾರಿನ ಹೊರಗೆ ರೇಡಾರ್, ತಂತ್ರಜ್ಞಾನದ ಹೆಚ್ಚುವರಿ ಫಿಟ್ಟಿಂಗ್ ಇಲ್ಲ. ಅತ್ಯಾಕರ್ಷಕ ಕಾರು ಸೆ.2ಕ್ಕೆ ಟೆಸ್ಲಾ ಬಿಡುಗಡೆ ಮಾಡುತ್ತಿದೆ.

ಅಮೆರಿಕದ ಟೆಸ್ಲಾ ಇದೀಗ ಮತ್ತೊಂದು ಅದ್ಬುತ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸಾಮಾನ್ಯವಾಗಿ ಡ್ರೈವರ್ ಲೆಸ್ ಕಾರಿನ ಮೇಲೆ, ಎಲ್ಲಾ ಕಾರ್ನರ್‌ಗಳಲ್ಲಿ ರೇಡಾರ್ ಟೆಕ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಅಳವಡಿಸಿರುತ್ತಾರೆ. ದೂರದಿಂದ ನೋಡಿದಾಗಲೇ ಇದು ಡ್ರೈವರ್‌ಲೆಸ್ ಕಾರು ಅನ್ನೋದು ಸ್ಪಷ್ಟವಾಗುತ್ತದೆ. ಆದರೆ ಇದೆಲ್ಲವನ್ನೂ ಮೀರಿ ನಾರ್ಮಲ್ ಕಾರಿನಂತೆ ಇರುವ ಡ್ರೈವರ್‌ಲೆಸ್, ಆಟೋಮೇಟೆಡ್ ಕಾರನ್ನು ಟೆಸ್ಲಾ ಸೆಪ್ಟೆಂಬರ್ 3ಕ್ಕೆ ಬಿಡುಗಡೆ ಮಾಡುತ್ತಿದೆ.

ಎಕ್ಸಲೇಟರ್, ಬ್ರೇಕ್ ಪೆಡಲ್ ಇಲ್ಲ

ಇದು ಎರಡು ಸೀಟರ್ ಕಾರಾಗಿದೆ. ಗೋಲ್ಡನ್ ಕಲರ್‌ನಲ್ಲಿ ಮಿಂಚುತ್ತಿರುವ ಈ ಕಾರು ಟೆಕ್ ಅದ್ಭುತ ಎಂದೇ ಪರಿಗಣಿಸಲಾಗಿದೆ. ಕಾರಣ ಈ ಕಾರಿನಲ್ಲಿ ಸ್ಟೀರಿಂಗ್ ವ್ಹೀಲ್ ಇಲ್ಲ, ಎಕ್ಸಲೇಟರ್, ಬ್ರೇಕ್ ತುಳಿಯಲು ಯಾವುದೇ ಪೆಡಲ್ ಇಲ್ಲ. ಎಲ್ಲವೂ ತಂತ್ರಜ್ಞಾನದಿಂದ ಕೂಡಿದೆ. ಸಂಪೂರ್ಣವಾಗಿ ಸ್ವಯಂಚಾಲಿತ ಕಾರು. ವಿಶೇಷವಾಗಿ ಈ ಕಾರನ್ನು ಕ್ಯಾಬ್ ಸರ್ವೀಸ್‌ಗಾಗಿ ನಿರ್ಮಾಣ ಮಾಡಲಾಗಿದೆ.

ಸೈಬರ್‌ಕ್ಯಾಬ್ ಟೆಸ್ಲಾದ AI4 ಹಾರ್ಡ್‌ವೇರ್ ಅಡಿಯಲ್ಲಿ ನಿಯಂತ್ರಣಗೊಂಡಿದೆ. 219 ಹಾರ್ಸ್‌ಪವರ್ ಪರ್ಮನೆಂಟ್ ಮ್ಯಾಗ್ನೆಟ್ ಮೋಟಾರ್ ಮತ್ತು 48 kWh ಬ್ಯಾಟರಿ ಪ್ಯಾಕ್‌ನ್ನು ಈ ಕಾರಿಗೆ ನೀಡಲಾಗಿದೆ. EPA ದಾಖಲೆಗಳ ಪ್ರಕಾರ, ಇದರ ಕರ್ಬ್ ತೂಕ 3,113 ಪೌಂಡ್‌ಗಳು (ಸುಮಾರು 1,412 ಕೆಜಿ) ವಿಶೇಷ ಈ ಸೈಬರ್‌ಕ್ಯಾಬ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 466 ರುಂದ 482 ಕಿಲೋಮೀಟರ್ ಆನ್ ಗ್ರೌಂಡ್ ಮೈಲೇಜ್ ಸಿಗಲಿದೆ ಎಂದು ಕಂಪನಿ ಹೇಳುತ್ತಿದೆ.

ಟೆಸ್ಲಾ ಈ ವಾಹನವನ್ನು ತನ್ನ ರೋಬೋಟ್ಯಾಕ್ಸಿ ನೆಟ್‌ವರ್ಕ್‌ನ ಭಾಗವಾಗಿ ಬಳಸಲಿದೆ. ಈ ಕಾರನ್ನು ಸಾರ್ವಜನಿಕರು ಆ್ಯಪ್ ಮೂಲಕ ಕ್ಯಾಬ್ ಆಗಿ ಬುಕಿಂಗ್ ಮಾಡಿಕೊಳ್ಳಲು ಸಾಧ್ಯವಿದೆ. ಇದೇ ವರ್ಷದಲ್ಲಿ 2500 ರೋಬೋ ಟ್ಯಾಕ್ಸಿಗಳನ್ನು ಟೆಸ್ಲಾ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ.

ನೂತನ ಸೈಬರ್‌ಕ್ಯಾಬ್ ಕಾರು ಬೆಲೆ

ನೂತನ ಸೈಬರ್‌ಕ್ಯಾಬ್ ಕಾರಿನ ಬೆಲೆ 30,000 ಅಮೆರಿಕನ್ ಡಾಲರ್. ಭಾರತದ ರೂಪಾಯಿಗಳಲ್ಲಿ ಅಂದಾದು 28 ಲಕ್ಷ ರೂಪಾಯಿ. ಬಿಡುಗಡೆ ಆಫರ್ ಮೂಲಕ 25 ಸಾವಿರ ಡಾಲರ್‌ನಲ್ಲಿ ಲಭ್ಯವಾಗಬಹುದು ಎಂದು ವರದಿಯಾಗಿದೆ. ಬರ್‌ಕ್ಯಾಬ್‌ನಲ್ಲಿ 20.5-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್ ಮೂಲಕ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸಲಾಗುತ್ತದೆ. ಸ್ಕಿಸರ್ ಡೋರ್‌ಗಳು, ಕನಿಷ್ಠ ಕಾರ್ಗೋ ಸ್ಪೇಸ್ ಮತ್ತು ಹಗುರವಾದ ವಿನ್ಯಾಸ ಇದರ ವಿಶೇಷತೆಗಳು. ಇದು ಊಬರ್ ಸೇರಿದಂತೆ ಇತರ ಕ್ಯಾಬ್‌ಗಳಿಗೆ ಪೈಪೋಟಿಯಾಗಿ ಟೆಸ್ಲಾದ ರೋಬೋಟ್ಯಾಕ್ಸಿ ಬಿಡುಗಡೆ ಮಾಡುತ್ತಿದೆ.

PREV
Read more Articles on
click me!

Recommended Stories

Maruti Suzuki Ertiga ಹೊಸ ಸಂಚಲನ.. ದೊಡ್ಡ ದೊಡ್ಡ ದೈತ್ಯ ಕಂಪನಿಗಳಿಗೆ ಬಿತ್ತು ಕೊಡಲಿ ಪೆಟ್ಟು
Mahindra Thar Facelift: ಥಾರ್‌ ರಾಕ್ಸ್‌ ಲುಕ್‌ನಲ್ಲಿ ಹೊಸ ಥಾರ್‌; ಬರಲಿವೆ ಭರ್ಜರಿ ಫೀಚರ್ಸ್‌!