XUV 700 ಕಾಯುವ ಅವಧಿಯಲ್ಲಿಲ್ಲ ಕಡಿತ: ಬೇಗ ಸಿಗಲಿದೆ ಸ್ಕಾರ್ಪಿಯೋ ಎನ್

By Suvarna NewsFirst Published Nov 16, 2022, 2:54 PM IST
Highlights

ಕಳೆದ ಸೆಪ್ಟೆಂಬರ್‌ನಲ್ಲಿ XUV700 ಯ ವೇಯ್ಟಿಂಗ್‌ ಅವಧಿ ಮೂರು ತಿಂಗಳು ಕಡಿಮೆಯಾಗಿದೆ ಎಂದು ವರದಿಯಾಗಿತ್ತು. ಆದರೆ, ಈಗ ಎರಡು ತಿಂಗಳ ಮತ್ತೆ ಅದರ ಹೆಚ್ಚಿನ ವೇರಿಯಂಟ್‌ಗಳು ಇನ್ನೂ ಸರಾಸರಿ ಒಂದು ವರ್ಷದ ವೇಯ್ಟಿಂಗ್ ಅವಧಿ ಹೊಂದಿವೆ ಎಂದು ಕಂಪನಿ ಮೂಲಗಳು ಖಚಿತಪಡಿಸಿವೆ.

ಮಹೀಂದ್ರಾ (Mahindra) ದ ಅತ್ಯಂತ ಜನಪ್ರಿಯ SUV ಗಳಲ್ಲಿ ಒಂದಾಗಿರುವ ಎಕ್ಸ್‌ಯುವಿ 700 (XUV700) ಬಿಡುಗಡೆಯಾದ ಸಮಯದಿಂದ ಬೇಡಿಕೆ ಕಡಿಮೆಯಾಗಿಲ್ಲ. ಕಡಿಮೆ ಮೌಲ್ಯದಲ್ಲಿ ಉತ್ತಮ ಸೌಲಭ್ಯಗಳು, ಆಧುನಿಕ ತಂತ್ರಜ್ಞಾನವನ್ನೊಳಗೊಂಡ (Modern Technology) ಕ್ಯಾಬಿನ್ ಹಾಗೂ ಸದೃಢ ಪವರ್ಟ್ರೇನ್‌ಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ, 2021 ರಲ್ಲಿ ಪ್ರಾರಂಭವಾದ ಈ ಕಾರಿನ ವೇಯ್ಟಿಂಗ್ ಅವಧಿಯನ್ನು ಇಂದಿಗೂ ತಗ್ಗಿಸಲು ಸಾಧ್ಯವಾಗಿಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ XUV700 ಯ ವೇಯ್ಟಿಂಗ್ ಅವಧಿ ಮೂರು ತಿಂಗಳು ಕಡಿಮೆಯಾಗಿದೆ ಎಂದು ವರದಿಯಾಗಿತ್ತು. ಆದರೆ, ಈಗ ಎರಡು ತಿಂಗಳ ಮತ್ತೆ ಅದರ ಹೆಚ್ಚಿನ ವೇರಿಯಂಟ್‌ಗಳು ಇನ್ನೂ ಸರಾಸರಿ ಒಂದು ವರ್ಷದ ವೇಯ್ಟಿಂಗ್ ಅವಧಿ ಹೊಂದಿವೆ ಎಂದು ಕಂಪನಿ ಮೂಲಗಳು ಖಚಿತಪಡಿಸಿವೆ. 

ಪೆಟ್ರೋಲ್ ಚಾಲಿತ MX ಮತ್ತು AX3 ವೇರಿಯಂಟ್‌ಗಳಲ್ಲಿ XUV700 ಅನ್ನು ಖರೀದಿಸುವವರು ಒಂದೂವರೆ ತಿಂಗಳಲ್ಲಿ ವಾಹನಗಳ ವಿತರಣೆ ಪಡೆಯಬಹುದು. ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವೇರಿಯಂಟ್ಳಿಗಾಗಿ ಕಾಯುವ ಅವಧಿ ಸ್ವಲ್ಪ ಕಡಿಮೆಯಾಗಿದೆ. ಮತ್ತೊಂದೆಡೆ, ಪೆಟ್ರೋಲ್ ಎಎಕ್ಸ್ 5 (AX 5) ವೇರಿಯಂಟ್ನ ಕಾಯುವ ಅವಧಿ ನಾಲ್ಕು ತಿಂಗಳವರೆಗೆ ಹೆಚ್ಚಾಗಿದೆ. XUV700 MX, AX3 ಮತ್ತು AX5 ಡೀಸೆಲ್ ಎಸ್ಯುವಿ (SUV)ಗಳಿಗೆ ಕೂಡ ಸುಮಾರು 10 ತಿಂಗಳ ಹೆಚ್ಚಿನ ಕಾಯುವ ಅವಧಿ ಇದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ನಡುವೆ, ಟಾಪ್-ಸ್ಪೆಕ್ ಎಎಕ್ಸ್7 (Top spec AX7) ಮತ್ತು ಎಎಕ್ಸ್7ಎಲ್ (AX7L) ಟ್ರಿಮ್ಗಳ ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್ಗಳು ಸುಮಾರು 15 ತಿಂಗಳುಗಳ ದೀರ್ಘಾವಧಿಯ ಕಾಯುವ ಅವಧಿಯನ್ನು ಹೊಂದಿವೆ.

ಮಹೀಂದ್ರಾ ಎಕ್ಸ್‌ಯುವಿ700ಯ ಹಲವು ವೈಶಿಷ್ಟ್ಯಗಳು ಡಿಲೀಟ್!

ಮಹೀಂದ್ರಾ ಪ್ರಸ್ತುತ ತಿಂಗಳಿಗೆ 6,000 XUV700 ವಾಹನಗಳ  ಉತ್ಪಾದನಾ ಸಾಮರ್ಥ್ಯ ಹೊಂದಿದೆ ಮತ್ತು ಅಕ್ಟೋಬರ್‌ನಲ್ಲಿ, ಇದು 5,815 ವಾಹನಗಳನ್ನು ವಿತರಿಸಿದೆ. ಮಹೀಂದ್ರಾ ಪ್ರತಿ ತಿಂಗಳು XUV700 ಗಾಗಿ ಸರಾಸರಿ 11,000 ಬುಕಿಂಗ್‌ಗಳನ್ನು ಪಡೆಯುತ್ತಿದೆ ಮತ್ತು ಸುಮಾರು 80,000 XUV700 ವಾಹನಗಳನ್ನು ಇನ್ನೂ ವಿತರಿಸಬೇಕಾಗಿದೆ. ಮುಂದಿನ 12 ರಿಂದ 15 ತಿಂಗಳುಗಳಲ್ಲಿ ತನ್ನ ಎಸ್ಯುವಿ (SUV)ಗಳಿಗೆ ಉತ್ಪಾದನಾ ಸಾಮರ್ಥ್ಯವನ್ನು (Production Capacity) 6 ಲಕ್ಷಕ್ಕೆ ಹೆಚ್ಚಿಸುವುದಾಗಿ ಮಹೀಂದ್ರಾ ಇತ್ತೀಚೆಗೆ ಘೋಷಿಸಿದೆ. ಇದು ದೀರ್ಘ ಕಾಯುವ ಅವಧಿಯನ್ನು ಕಡಿಮೆಗೊಳಿಸಲು ನೆರವಾಗಲಿದೆ. ಈಗಾಗಲೇ ಉತ್ಪಾದನಾ ಸಾಮರ್ಥ್ಯದಲ್ಲಿ ಶೇ. 68ರಷ್ಟು ಏರಿಕೆಯಾಗಿದೆ. ಕಂಪನಿ  XUV700 2024ರ ಜನವರಿ-ಮಾರ್ಚ್ ವೇಳೆಗೆ ತನ್ನ ಉತ್ಪಾದನಾ ಸಾಮರ್ಥ್ಯವನ್ನು 10,000 ವಾಹನಗಳಿಗೆ ಹೆಚ್ಚಿಸಲು ಸಜ್ಜಾಗಿದೆ. ಅಲ್ಲಿಯವರೆಗೆ, ಗ್ರಾಹಕರ ಬೇಡಿಕೆಯನ್ನು ಅವಲಂಬಿಸಿ, ಕಾಯುವ ಅವಧಿ ಇದೇ ರೀತಿ ಮುಂದುವರಿಯುವ ನಿರೀಕ್ಷೆಯಿದೆ.

XUV700 ಇತರ ಮೂರು-ಸಾಲಿನ SUVಗಳಾದ ಟಾಟಾ ಸಫಾರಿ, MG ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಜರ್ಗಳಿಗೆ ಸ್ಪರ್ಧೆ ನೀಡಲಿದೆ. ಮಹೀಂದ್ರಾದ ಇತ್ತೀಚಿನ ಬೇಡಿಕೆಯ ವಾಹನವಾದ ಸ್ಕಾರ್ಪಿಯೋ ಎನ್ ಕೂಡ ದೀರ್ಘ ಕಾಯುವ ಅವಧಿಯನ್ನು ಹೊಂದಿದೆ, ಇದರ ಕೆಲವು ವೇರಿಯಂಟ್ಗಳ ವಿತರಣಾ ಸಮಯವು ಎರಡು ವರ್ಷಗಳವರೆಗೆ ಇದೆ ಎನ್ನಲಾಗುತ್ತಿದೆ. ಇದು ಈಗಲೂ ಮುಂದುವರಿದಿದೆಯಾದರೂ, ಸ್ಕಾರ್ಪಿಯೋ ಎನ್ ಝೆಡ್ ಎಲ್ (ಎಟಿ) Scorpio N Z8 L (AT) ವೇರಿಯಂಟ್ಗಳ ಕಾಯುವ ಅವಧಿಗಳಲ್ಲಿ ತೀವ್ರ ಕಡಿತ ಉಂಟಾಗಿವೆ ಎಂದು ಮೂಲಗಳು ತಿಳಿಸಿವೆ.

ತಾಂತ್ರಿಕ ದೋಷ: ಮತ್ತೊಮ್ಮೆ ಮಹೀಂದ್ರಾ ಎಕ್ಸ್ಯುವಿ700 ಹಿಂಪಡೆದ ಕಂಪನಿ

ಬಿಡುಗಡೆಯಾದಾಗಿನಿಂದ, ಸ್ಕಾರ್ಪಿಯೋ ಎನ್ ಅತಿ ಹೆಚ್ಚಿನ ಬುಕಿಂಗ್  ಪಡೆದುಕೊಳ್ಳುತ್ತಿದೆ. ಜೂನ್ನಲ್ಲಿ ಸ್ಕಾರ್ಪಿಯೊ ಎನ್ಗಾಗಿ ಬುಕ್ಕಿಂಗ್ ಪ್ರಾರಂಭವಾಗಿದ್ದು, ಈ ವರ್ಷ ದಸರಾ ಸಮಯದಲ್ಲಿ ವಿತರಣೆ ಪ್ರಾರಂಭವಾಗಿದೆ.. ಮೊದಲ 25,000 ಬುಕಿಂಗ್ಗಳಲ್ಲಿ ಝೆ8 ಎಲ್ (Z8 L) ವೇರಿಯಮಟ್ಗಳ ವಿತರಣೆಗೆ ಆದ್ಯತೆ ನೀಡುವುದಾಗಿ ಮಹೀಂದ್ರಾ ಘೋಷಿಸಿದೆ.

click me!