ಅರ್ಬನ್‌ ಕ್ರೂಸರ್‌ SUV ಮಾರುಕಟ್ಟೆಯಿಂದ ಹಿಂಪಡೆಯಲಿದೆ ಟೊಯೋಟಾ ಕಿರ್ಲೋಸ್ಕರ್

By Suvarna News  |  First Published Nov 12, 2022, 12:01 PM IST

ಟೊಯೊಟಾ ಕಿರ್ಲೋಸ್ಕರ್ (Toyoto Kirloskar) ತನ್ನ  ಅರ್ಬನ್ ಕ್ರೂಸರ್ ಕಾಂಪ್ಯಾಕ್ಟ್ (Urban Cruiser Compact) ಎಸ್ಯುವಿ (SUV) ಅನ್ನು ಭಾರತೀಯ ಮಾರುಕಟ್ಟೆಯಿಂದ  ಹಂತಹಂತವಾಗಿ ಹೊರಹಾಕುವುದಾಗಿ ಪ್ರಕಟಿಸಿದೆ.


ಟೊಯೊಟಾ ಕಿರ್ಲೋಸ್ಕರ್ (Toyoto Kirloskar) ತನ್ನ  ಅರ್ಬನ್ ಕ್ರೂಸರ್ ಕಾಂಪ್ಯಾಕ್ಟ್ (Urban Cruiser Compact) ಎಸ್ಯುವಿ (SUV) ಅನ್ನು ಭಾರತೀಯ ಮಾರುಕಟ್ಟೆಯಿಂದ ಹಂತಹಂತವಾಗಿ ಹೊರಹಾಕುವುದಾಗಿ ಪ್ರಕಟಿಸಿದೆ. ಇದು ಮಾರುತಿ ವಿಟಾರಾ ಬ್ರೀಜಾದ ಮತ್ತೊಂದು ಆವೃತ್ತಿಯಾಗಿದ್ದು, ಇದನ್ನು 2020ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದ ಕಂಪನಿ 65,000 ಕ್ಕೂ ಹೆಚ್ಚು  ಅರ್ಬನ್‌ ಕ್ರೂಸರ್‌ ಎಸ್‌ಯುವಿಯನ್ನು ಮಾರಾಟ ಮಾಡಿದೆ. ಆದರೆ, ಇದಕ್ಕೆ ಗ್ರಾಹಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವ ಕಂಪನಿ,  ಗ್ರಾಹಕರ ಚಾಲನೆಯ ಸೌಲಭ್ಯಗಳನ್ನು ಇನ್ನಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಅವರ ಗ್ರಾಹಕರ ಪ್ರತಿಕ್ರಿಯೆಯ ಆಧಾರದ ಮೇಲೆ ಹೊಸ ಮಾದರಿಗಳನ್ನು ಪರಿಚಯಿಸುವುದರತ್ತ ಹೆಚ್ಚಿನ ಗಮನ ನೀಡುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಕುರಿತು ವಿಸ್ತೃತ ಮಾರುಕಟ್ಟೆ ಹಾಗೂ ಗ್ರಾಹಕರ ಬೇಡಿಕೆಗಳ ಕುರಿತು ಅಧ್ಯಯನ ಮಾಡಲಾಗಿದ್ದು, ಅದಕ್ಕೆ ಅನುಗುಣವಾಗಿ, ನಾವು ಟೊಯೋಟಾ ಅರ್ಬನ್ ಕ್ರೂಸರ್ ಅನ್ನು ಹಂತಹಂತವಾಗಿ ಹೊರಹಾಕಲು ನಿರ್ಧರಿಸಿದ್ದೇವೆ, ಭಾರತದಲ್ಲಿ ನಮ್ಮ ಅಸ್ತಿತ್ವದಲ್ಲಿರುವ ನಮ್ಮ  ಸದೃಢ ಮತ್ತು ಸುಸ್ಥಿರ ಉತ್ಪನ್ನ ಶ್ರೇಣಿಯ ವಾಹನಗಳು ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಪೂರೈಸಲು ನೆರವಾಗಲಿದೆ ಎಂದು ದೃಢವಾಗಿ ನಂಬಿದ್ದೇವೆ"  ಕಂಪನಿಯ ಪ್ರಕಟಣೆ ತಿಳಿಸಿದೆ.

Latest Videos

undefined

65,000 ಕ್ಕೂ ಹೆಚ್ಚು ವಾಹನಗಳ ಮಾರಾಟ ದಾಖಲಿಸುವ ಮೂಲಕ ಅರ್ಬನ್ ಕ್ರೂಸರ್ ಮೊದಲ ಬಾರಿಗೆ ವಿಶೇಷವಾಗಿ ದೇಶದ ಎರಡು ಹಾಗೂ ಮೂರನೇ ಹಂತದ ಮಾರುಕಟ್ಟೆಗಳನ್ನು ತಲುಪುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಇದರಿಂದ ತಮ್ಮ ಹೊಸ ಉತ್ಪನ್ನಗಳು ಹೊಸ ಗ್ರಾಹಕರನ್ನು ಕೂಡ ತಲುಪುವ ವಿಶ್ವಾಸ ಮೂಡಿದೆ ಎಂದು ಕಂಪನಿ ಹೇಳಿದೆ.
2018ರ ಮಾರ್ಚ್ ನಲ್ಲಿ, ಟೊಯೋಟಾ ಮೋಟಾರ್ ಕಾರ್ಪ್ (Toyoto Motar Corp) ಮತ್ತು ಸುಜುಕಿ ಮೋಟಾರ್ ಕಾರ್ಪ್ (Suzuki Motor Corp)ಭಾರತೀಯ ಮಾರುಕಟ್ಟೆಯಲ್ಲಿ ಪರಸ್ಪರ ಹೈಬ್ರಿಡ್ ಮತ್ತು ಇತರ ವಾಹನಗಳನ್ನು ಪೂರೈಸುವ ಒಪ್ಪಂದಕ್ಕೆ ಒಳಪಟ್ಟಿದ್ದರು. ಇದರ ಭಾಗವಾಗಿ, ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್, ಮಾರುತಿ ಸುಜುಕಿ ಇಂಡಿಯಾದಿಂದ ಬಲೆನೊ ಮತ್ತು ಬ್ರೀಜಾ ಕಾರುಗಳ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ನಂತರ ಅವುಗಳನ್ನು ಗ್ಲ್ಯಾನ್ಜಾ ಮತ್ತು ಅರ್ಬನ್ ಕ್ರೂಸರ್ ಎಂದು ಹೆಸರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಮಾರುತಿಗೆ ಮುಂದಿನ 3 ವರ್ಷಗಳಲ್ಲಿ 20,000 ಕೋಟಿ ರೂ. ಮೌಲ್ಯದ ಕಾರು ರಫ್ತು ಗುರಿ

ಈಗ ದೇಶದಲ್ಲಿ ಅರ್ಬನ್‌ ಕ್ರೂಸರ್‌ ಅನ್ನು ಹಿಂಪಡೆಯಲಿರುವುದರಿಂದ, ಟಿಕೆಎಂ ಗ್ಲಾನ್ಸಾ (TKM Glanza) ಮಾರಾಟವನ್ನು ಮುಂದುವರಿಸುತ್ತದೆ. ಈ ನಡುವೆ, ಕಂಪನಿಯು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಸಿಎನ್ಜಿ ವಾಹನ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಜಪಾನಿನ ವಾಹನ ತಯಾರಕ ಕಂಪನಿ, ಇತ್ತೀಚೆಗೆ ಟೊಯೋಟಾ ಗ್ಲಾನ್ಜಾ ಸಿಎನ್ಜಿಯನ್ನು ಬಿಡುಗಡೆ ಮಾಡಿದೆ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಯನ್ನು ಕೂಡ ಸಿಎನ್ಜಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದರ ಬುಕಿಂಗ್‌ ಈಗಾಗಲೇ ಆರಂಭವಾಗಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ನಾಲ್ಕು ವೇರಿಯಂಟ್ಗಳಲ್ಲಿ ಬರುತ್ತದೆ. ಇ,ಎಸ್,ಜಿ ಮತ್ತು ವಿ (E, S, G, ಮತ್ತು V). ಈ ಎಸ್ಯುವಿ ಮೂರು ಪವರ್ಟ್ರೇನ್ಗಳಲ್ಲಿ ಲಭ್ಯವಿದೆ - ನಿಯೋ ಡ್ರೈವ್, ಸ್ವಯಂ ಚಾರ್ಜಿಂಗ್ ಬಲವಾದ ಹೈಬ್ರಿಡ್ ಎಲೆಕ್ಟ್ರಿಕ್ ಮತ್ತು ಇ-ಸಿಎನ್ಜಿ (E-CNG) ಟ್ರಿಮ್ಗಳು. ಟೊಯೊಟಾ ಸೆಪ್ಟೆಂಬರ್ 9 ರಂದು ಆಯ್ದ ವೇರಿಯಂಟ್ಗಳ ಬೆಲೆಗಳನ್ನು ಘೋಷಿಸಿತು. ಎಲ್ಲಾ ಇತರ ವೇರಿಯಂಟ್ಗಳ ಬೆಲೆಗಳನ್ನು ಸೆಪ್ಟೆಂಬರ್ 28 ರಂದು ಬಹಿರಂಗಪಡಿಸಲಾಯಿತು ಆದರೆ ಸಿಎನ್ಜಿ ವೇರಿಯಂಟ್ ಬೆಲೆಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

click me!