ಧೋನಿಗೆ ಕಾರು, ಬೈಕ್ ಮೇಲಿರುವ ಪ್ರೀತಿ ಹೊಸದೇನಲ್ಲ. ಯಮಹಾ ಆರ್‌ಎಕ್ಸ್ 100 ಬೈಕ್‌ನಿಂದ ಹಿಡಿದು, ಐಷಾರಾಮಿ ಕಾರು, ವಿಂಟೇಜ್ ವಾಹನಗಳು ಧೋನಿ ಬಳಿ ಇದೆ. ಇದೀಗ ಧೋನಿ ಐಷಾರಾಮಿ ಮರ್ಸಿಡಿಸ್ ಬೆಂಜ್ ಜಿ ಕ್ಲಾಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಈ ಕಾರಿಗೂ ಜೇಮ್ಸ್ ಬಾಂಡ್‌ಗೂ ಲಿಂಕ್ ಇದೆ.
ರಾಂಚಿ(ನ.30) ಐಪಿಎಲ್ 2024ರ ಟೂರ್ನಿಗೆ ಧೋನಿ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಧೋನಿ ಕಾರ್ಯಕ್ರಮ ಸೇರಿದಂತೆ ಹಲವು ಬಾರಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಧೋನಿ ತಮ್ಮ ಮರ್ಸಡಿಸ್ ಬೆಂಜ್ ಜಿಕ್ಲಾಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರು ಡ್ರೈವ್ ಮಾಡಿ ತೆರಳುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಧೋನಿ ಬಳಿ ಐಷಾರಾಮಿ ಹಾಗೂ ವಿಂಟೇಜ್ ಕಾರುಗಳ ದೊಡ್ಡ ಸಂಗ್ರಹವಿದೆ. ಇದಕ್ಕಾಗಿ ಎರಡು ಮಹಡಿಯ ಕಟ್ಟಡವನ್ನೇ ಕಟ್ಟಿದ್ದಾರೆ. ಹೀಗಾಗಿ ಮರ್ಸಿಡಿಸ್ ಬೆಂಜ್ ಜಿಕ್ಲಾಸ್ ಕಾರಿನಲ್ಲಿ ಧೋನಿ ಕಾಣಿಸಿಕೊಂಡಿರುವುದು ಅಚ್ಚರಿಯ ವಿಚಾರವಲ್ಲ. ಆದರೆ ಈ ಕಾರಿಗೂ ಹಾಲಿವುಡ್ ಸಿನಿಮಮಾದ ಅತ್ಯಂತ ಜನಪ್ರಿಯ ಪಾತ್ರ ಜೇಮ್ಸ್ ಬಾಂಡ್‌ಗೆ ನಂಟಿದೆ.
ಧೋನಿ ಕಪ್ಪು ಬಣ್ಣದ ಮರ್ಸಡಿಸ್ ಬೆಂಜ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಧೋನಿ ಈ ಕಾರಿನಲ್ಲಿ ಆಗಮಿಸಿದ್ದಾರೆ. ಇನ್ನು ಧೋನಿಗೆ ಬೆಂಗಾವಲಾಗಿ ರೇಂಜ್ ರೋವರ್ ಕಾರು ಕೂಡ ಜೊತೆಯಾಗಿ ಸಾಗಿದೆ. ಧೋನಿ ಈ ಕಾರಿನ ನಂಬರ್ ಪ್ಲೇಟ್ 0007. ಈ 007 ನಂಬರ್ ಜೇಮ್ಸ್ ಬಾಂಡ್ ಚಿತ್ರದಲ್ಲಿನ ನಂಬರ್. ಬಾಂಡ್ ಚಿತ್ರದಲ್ಲಿ ಎಲ್ಲವೂ 007. ಇದೇ ನಂಬರ್ ಇದೀಗ ಧೋನಿ ತಮ್ಮ ಮರ್ಸಿಡಿಸ್ ಬೆಂಜಿ ಜಿಕ್ಲಾಸ್ ಕಾರಿಗೂ ಪಡೆದಿದ್ದಾರೆ.
undefined
ಟಿ ಶರ್ಟ್‌ನಲ್ಲಿ ಧೂಳು ಒರೆಸಿ ಅಭಿಮಾನಿ ಬೈಕ್ ಮೇಲೆ ಆಟೋಗ್ರಾಫ್ ಹಾಕಿದ ಧೋನಿ!
ಹಾಗಂತ ಧೋನಿ ಜೇಮ್ಸ್ ಬಾಂಡ್ ಅಭಿಮಾನಿಯಾಗಿ ಈ ನಂಬರ್ ಪಡೆದಿಲ್ಲ. ಇದಕ್ಕೆ ಮುಖ್ಯ ಕಾರಣ ಧೋನಿ ಜರ್ಸಿ ನಂಬರ್ 7. ಧೋನಿ ಹುಟ್ಟಿದ ದಿನಾಂಕ 7. ಹೀಗಾಗಿ ಧೋನಿ ತಮ್ಮ ಜರ್ಸಿಗೆ ನಂಬರ್ 7 ಇಟ್ಟುಕೊಂಡಿದ್ದರು. ಇದೀಗ ಇದೇ ನಂಬರ್‌ನ್ನು ತಮ್ಮ ಕಾರಿಗೆ ಪಡೆದುಕೊಂಡಿದ್ದಾರೆ. JH01 FB0007 ನಂಬರ್‌ನ್ನು ಧೋನಿ ಪಡೆದುಕೊಂಡಿದ್ದಾರೆ.
ಮರ್ಸಿಡಿಸ್ ಬೆಂಜ್ ಜಿಕ್ಲಾಸ್ ಕಾರು ಐಷಾರಾಮಿ ಜೊತೆ ಅಡ್ವೆಂಚರ್ ಕಾರು. ಧೋನಿ ಎಸ್‌ಯುವಿ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇದು ಭಾರತದ ಯಾವುದೇ ರಸ್ತೆ, ಆಫ್ ರೋಡ್ ಡ್ರೈವಿಂಗ್‌ಗೆ ಸಹಕಾರಿಯಾಗಿದೆ. ಅತ್ಯಂತ ದುಬಾರಿ ವಿದೇಶದಿಂದ ಆಮದು ಮಾಡಿಕೊಂಡಿರುವ ಹಮ್ಮರ್ ಎಸ್‌ಯುವಿ ಕಾರು ಧೋನಿ ಬಳಿ ಇದೆ. ಮರ್ಸಡಿಸ್ ಬೆಂಜ್ ಜಿಕ್ಲಾಸ್ ಕಾರಿನ ಬೆಲೆ 2.5 ಕೋಟಿ ರೂಪಾಯಿಯಿಂದ 4 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).
ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ ಧೋನಿ, ಈ ಬಾರಿಯ ಐಪಿಎಲ್‌ಗೆ ಡೌಟ್!
ಧೋನಿ ಬೈಕ್ ರೈಡ್ ಹೆಚ್ಚು ಇಷ್ಟಪಡುತ್ತಾರೆ. ಧೋನಿ ಬರೋಬ್ಬರಿ 1.5 ಕೋಟಿ ರೂಪಾಯಿ ಬೆಲೆಯ ಹ್ಯಾಲ್‌ಕಟ್ ಬೈಕ್ ಕೂಡ ಹೊಂದಿದ್ದಾರೆ. ಹಲವು ಬಾರಿ ರಾಯಲ್‌ಎನ್‌ಫೀಲ್ಡ್ ಬೈಕ್ ಮೂಲಕ ಸುತ್ತಾಡುವುದು ಧೋನಿ ನೆಚ್ಚಿನ ಹವ್ಯಾಸ. ಇನ್ನು ರಾಂಚಿ ಕ್ರೀಡಾಂಗಣಕ್ಕೆ ತಮ್ಮ ಮನೆಯಿಂದ ಬೈಕ್ ಮೂಲಕವೇ ತೆರಳಿ ಅಭ್ಯಾಸ ಮಾಡುತ್ತಾರೆ.