ದೀಪಾವಳಿಗೆ ಮನಸ್ಸು ಬೆಸೆದ ಎಂಜಿ ಮೋಟಾರ್ಸ್, ಕುಳಿತಲ್ಲೇ ಶಾಪಿಂಗ್ ಮಾಡುವವರ ಕಣ್ತೆರೆಸಿದ ಜಾಹೀರಾತು

Published : Oct 21, 2025, 08:55 PM IST
Mg Motors India

ಸಾರಾಂಶ

ದೀಪಾವಳಿಗೆ ಮನಸ್ಸು ಬೆಸೆದ ಎಂಜಿ ಮೋಟಾರ್ಸ್, ಕುಳಿತಲ್ಲೇ ಶಾಪಿಂಗ್ ಮಾಡುವವರ ಕಣ್ತೆರೆಸಿದ ಜಾಹೀರಾತು, ವಿಂಡ್ಸರ್ ಎಲೆಕ್ಟ್ರಿಕ್ ಕಾರಿನ ಜಾಹೀರಾತು ಇದೀಗ ಭಾರತದ ಅಸಲಿ ಕತೆಯನ್ನು ಹೇಳುತ್ತಿದೆ. ಈ ಜಾಹೀರಾತು ಹಬ್ಬದ ಜೊತೆಗೆ ಮಹತ್ವದ ಸಂದೇಶವನ್ನು ಸಾರಿದೆ.

ನವದೆಹಲಿ (ಆ.21) ದೀಪಾವಳಿ ಹಬ್ಬಕ್ಕೆ ಎಲ್ಲಾ ಕಂಪನಿಗಳು ವಿಶೇಷ ಜಾಹೀರಾತು ನೀಡುತ್ತದೆ. ಜೊತೆಗೆ ಭಾರಿ ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಆಫರ್ ಕೂಡ ನೀಡುತ್ತದೆ. ಈ ಪೈಕಿ ಕೆಲ ಜಾಹೀರಾತಗಳು, ಕೆಲ ನಿರ್ಧಾರಗಳು ಬಾರಿ ವಿರೋದಕ್ಕೆ ಕಾರಣವಾಗುತ್ತದೆ. ಆದರೆ ಕೆಲ ಜಾಾಹೀರಾತುಗಳು ಜನರ ಹೃದಯ ಗೆಲ್ಲುತ್ತದೆ. ಹೀಗೆ ಎಂಜಿ ಮೋಟಾರ್ಸ್ ದೀಪಾವಳಿ ಹಬ್ಬದ ಸಂಭ್ರಕ್ಕೆ ಹೊಸ ಜಾಹೀರಾತು ಪ್ರಸಾರ ಮಾಡಿದೆ. ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರನ್ನು ಈ ಜಾಹೀರಾತಿನಲ್ಲಿ ಬಳಸಲು ಮೂಲಕ ಈ ದೀಪಾವಳಿ ಖುಷಿಗೆ ಎಂಜಿ ಕಾರು ಮನೆಗೆ ತನ್ನಿ ಎಂಬ ನೇರ ಸಂದೇಶವನ್ನು ನೀಡಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಈ ಜಾಹೀರಾತು, ಹೃದಯಗಳ ಬೆಸೆಯುವ, ಮನಸ್ಸುಗಳ ಬೆಸೆಯುವ ಕೆಲಸ ಮಾಡಿದೆ. ಇಷ್ಟೇ ಅಲ್ಲ, ಆನ್‌ಲೈನ್ ಶಾಪಿಂಗ್‌ನಲ್ಲಿ ಮುಳುಗಿರುವ ಸಮೂಹಕ್ಕೂ ಸಮಾಜದ ಜೊತೆ ಬೆರೆಯುವ ಮೂಲಕ ಭಾರತದ ಸಾಂಪ್ರಾದಾಯಿಕ ವ್ಯಾಪಾರದ ಕುರಿತು ಮಹತ್ವದ ಸಂದೇಶ ನೀಡಿದೆ.

ಏನಿದೆ ಈ ಜಾಹೀರಾತಿನಲ್ಲಿ?

ವಿಂಡ್ಸರ್ ಇವಿ ಕಾರಿನಲ್ಲಿ ಕುಳಿತ ಅಜ್ಜ ಹಾಗೂ ಮೊಮ್ಮಗನ ಸಂಭಾಷಣೆಯಿಂದ ಆರಂಭಗೊಳ್ಳುತ್ತದೆ. ನಾವು ಮಾರುಕಟ್ಟೆಯಲ್ಲಿ ಸ್ವೀಟ್ಸ್ ಖರೀದಿಸಲು ಹೊರಟ ಶಾಪ್ ಹೆಸರು ಹೇಳಿ, ನಾನು ಮ್ಯಾಪ್ ಹಾಕುತ್ತೇನೆ ಎಂದಿದ್ದಾನೆ. ಆದರೆ ತಾತಾ, ಅರೆ ಸ್ವೀಟ್ಸ್ ಶಾಪ್ ರಸ್ತೆ ನಾನು ಹೇಳುತ್ತೇನೆ, ಇದಕ್ಕೆ ಮ್ಯಾಪ್ ಅವಶ್ಯಕತೆ ಇಲ್ಲ ಎಂದಿದ್ದಾರೆ. ತಾತಾ ನಮಗೆ ಹೊರಗಡೆ ಅಂಗಡಿ ಹೋಗಿ ಸ್ವೀಟ್ಸ್ ಖರೀದಿಸುವ ಯಾವ ಅವಶ್ಯಕೆಯೂ ಇಲ್ಲ, ಕಾರಣ ಈಗ ಎಲ್ಲವೂ ಮನೆಯಲ್ಲಿ ಕೇಳಿತು ಆನ್‌ಲೈನ್ ಮೂಲಕ ಆರ್ಡರ್ ಮಾಡಬಹುದು, ಅದು ಕೂಡ ಕೇವಲ 10 ನಿಮಿಷದಲ್ಲಿ ಮನೆಗೆ ಬರಲಿದೆ ಎಂದು ಸದ್ಯದ ವಾಸ್ತವತೆಯನ್ನು ಆತ ಹೇಳಿದ್ದಾನೆ.

ಇವರ ಸಂಭಾಷಣೆ ಹೀಗೆ ಮುಂದುರಿಯುತ್ತದೆ. ನಾವು ಏನು ಖರೀದಿಸಲು ಹೊರಟಿದ್ದೇವೋ, ಅದು ಈ ಆ್ಯಪ್, ಆನ್‌ಲೈನ್ ಶಾಪಿಂಗ‌ನಲ್ಲಿ ಸಿಗುವುದಿಲ್ಲ. ನೀನು ಮಾರುಕಟ್ಟೆ ಕಡೆ ಕಾರು ತಿರುಗಿಸು ಎಂದು ತಾತಾ ಸೂಚನೆ ನೀಡುತ್ತಾರೆ. ತಾತಾ ಹಲವು ದಶಕಗಳಿಂದ ಹೋಗುತ್ತಿದ್ದ ಸ್ವೀಟ್ಸ್ ಶಾಪ್‌ಗೆ ತೆರಳಿ ಮಾಲೀಕರ ಬಳಿ ಬಂದು ನಮಸ್ತೆ ಹೇಳಿದಾಗ, ಮಾಲೀಕ ಕೂಡ ಅಷ್ಟೇ ಅತ್ಮೀಯದಿಂದ ಪರಿಚಯಸ್ಥ ತಾತನ ಸ್ವಾಗತಿಸುತ್ತಾರೆ. ದೀಪಾವಳಿ ಶುಭಾಶಯವನ್ನು ಮಾಲೀಕ ಇಬ್ಬರಿಗೂ ತಿಳಿಸುತ್ತಾನೆ. ಈ ವೇಳೆ ಮೊಮ್ಮಗ ಸ್ವೀಟ್ಸ್ ಲಿಸ್ಟ್ ಇದೆ ಎಂದು ಹೇಳುವ ಮೊದಲೇ ಎಲ್ಲವನ್ನು ಪ್ಯಾಕ್ ಮಾಡಿ ಅಚ್ಚರಿ ಎಂಬಂತೆ ಕೈಗಿಡುತ್ತಾರೆ. ಎಲ್ಲವೂ ಇದರಲ್ಲಿ ಚೆಕ್ ಮಾಡಿ ಎಂದು ಮಾಲೀಕ ಸೂಚಿಸುತ್ತಾರೆ. ಇದರ ಬೆನ್ನಲ್ಲೇ ತಾತನಿಗೆ ಮತ್ತೊಂದು ವಿಶೇಷ ಬಾಕ್ಸ್ ನೀಡುತ್ತಾರೆ. ಈ ವೇಳೆ ಶುಗರ್ ಕಾರಣ ಅರೇ ಇದೇನಿದು ತಾತ ಎಂದು ಪ್ರಶ್ನಿಸುತ್ತಾರೆ. ಆದರೆ ಮಾಲೀಕ, ಇದು ಇವರಿಗಾಗಿ ಮಾಡಲಾಗಿದೆ. ಶುಗರ್ ಫ್ರೀ ಎಂದು ಸೂಚಿಸುತ್ತಾರೆ.

ಜಾಹೀರಾತಿಗೆ ರೋಚಕ ತಿರುವು

ಆದರೆ ಇಲ್ಲಿಂದ ಈ ಜಾಹೀರಾತು ಬೇರೆ ತಿರುವು ಪಡೆದುಕೊಳ್ಳುತ್ತದೆ. ತಾತಾ, ಹಳೇ ಸಾಂಪ್ರದಾಯಿಕ ಶಾಪಿಂಗ್ ಮೂಲಕ ವಸ್ತುಗಳ ಖರೀದಿಸುತ್ತಾರೆ. ಹೋದ ಕಡೆಯೆಲ್ಲಾ ಅತೀವ ಪ್ರೀತಿ, ಸ್ವಾಗತ ಸಿಗುತ್ತದೆ. ಜೊತೆಗೆ ಹೂವಿನ ಮಾರುಕಟ್ಟೆ ಹೋದಾಗ ಪೂಜೆಗೆ ಹೂವುಗಳನ್ನು ಖರೀದಿಸುತ್ತಾರೆ. ಈ ವೇಳೆ ಉಚಿತವಾಗಿ ಇದು ನಿಮ್ಮ ಅಜ್ಜಿಗೆ ಪ್ರೀತಿಯ ಹೂವು ಎಂದು ಉಚಿತವಾಗಿ ನೀಡುತ್ತಾರೆ. ಒಂದೆಡೆ ಯುಪಿಐ ಪಾವತಿ ವಿಫಲಗೊಂಡಾಗ, ಪರ್ವಾಗಿಲ್ಲ ನಾಳೆ ಪಾವತಿ ಎಂದು ವ್ಯಾಪಾರಿ ಹೇಳುತ್ತಾರೆ. ಇವೆಲ್ಲವು ವ್ಯಾಪಾರಸ್ಥರು ಹಾಗೂ ತಾತನ ಜೊತೆಗಿನ ಸಂಬಂಧವನ್ನ ಹೇಳುತ್ತಾ ಹೋಗುತ್ತದೆ. ಜೊತೆಗೆ ದೀಪಾವಳಿ ಸಿಹಿಯಿ ಮಾತ್ರವಲ್ಲ ಮುಖದಲ್ಲಿನ ನಗುವಿನಿಂದ ಆಚರಿಸಿ ಅನ್ನೋ ಸಂದೇಶವನ್ನು ನೀಡುತ್ತದೆ.

ಆನ್‌ಲೈನ್ ಶಾಪಿಂಗ್, ಸಾಂಪ್ರದಾಯಿಕ ವ್ಯಾಪಾರ

ಕೊನೆಯದಾಗಿ ಇವರ ಶಾಪಿಂಗ್ ಹಣತೆಗಳ ಖರೀದಿ ಬಳಿ, ಇಲ್ಲಿ ತಾತನೊಬ್ಬ ಹಣತೆ ಮಾರುತ್ತಿರುತ್ತಾರೆ. ಅರೇ ಶರ್ಮಾಜಿ ಬನ್ನಿ ಬನ್ನಿ ಈ ಬಾರಿ ಹೊಸ ಡಿಸೈನ್ ಇದೆ ಎನ್ನುತ್ತಾರೆ. ಈ ವೇಳೆ ಇದು ಮೊಮ್ಮಗ ರೋಹನ್ ತಾನೆ ಎಂದು ಹಳೇ ಹಾಡೊಂದನ್ನು ಗುನುಗುತ್ತಾರೆ. ಎಲ್ಲರನ್ನು ನಗು, ಇದರ ನಡುವೆ ದೀಪ ಖರೀದಿಸುತ್ತಿದ್ದ ತಾತ, ದೀಪಾವಳಿ ವ್ಯಾಪಾರ ಹೇಗಿದೆ ಎಂದು ಕೇಳುತ್ತಾರೆ. ಅದಕ್ಕ ನಾವೇನು ಹೇಳುವುದು, ಈಗ ಎಲ್ಲಾ ಆನ್‌ಲೈನ್ ಶಾಪಿಂಗ್, ಇದರಿಂದ ನಮ್ಮ ದೀಪಾವಳಿ ಹೇಗೆ ನಡೆಯುತ್ತೆ ಎಂದು ಉತ್ತರಿಸುತ್ತಾರೆ. ಅಲ್ಲೀವರೆಗೆ ಆನ್‌ಲೈನ್ ಶಾಪಿಂಗ್, ನಮಗೆ ಮಾರುಕಟ್ಟೆಗೆ ಯಾಕೆ ಹೋಗಬೇಕು, ಮ್ಯಾಪ್ ಎಂದೆಲ್ಲಾ ಮಾತನಾಡುತ್ತಿದ್ದ ಮೊಮ್ಮಗ, ತಕ್ಷಣವೇ ಇಷ್ಟು ಹಣತೆ ಸಾಕಾಗುವುದಿಲ್ಲ ಎಂದು ಹಲವು ಹಣತೆ ಸೇರಿ ಭರ್ಜರಿ ಶಾಪಿಂಗ್ ಮಾಡಿ ಅವರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡುತ್ತಾರೆ. ಇದೇ ವೇಳೆ ಮನೆಯಿಂದ ತಾತನಿಗೆ ಕರೆಯೊಂದು ಬರುತ್ತದೆ. ಹಣ್ಣುಗಳು ಲಿಸ್ಟ್‌ನಲ್ಲಿ ಸೇರಿಸಲು ಮರತು ಬಿಟ್ಟಿದೆ. ಬರುವಾಗ ಖರೀದಿಸುವಂತೆ ಸೂಚಿಸುತ್ತಾರೆ. ರೋಹನ್ ಕಡೆ ನೋಡುತ್ತಾ, ಇದನ್ನು ಆ್ಯಪ್‌ನಲ್ಲಿ ಖರೀದಿಸು ಎಂದು ಸೂಚಿಸುತ್ತಾರೆ. ಇದಕ್ಕೆ ಮೊಮ್ಮಗ, ತಾತ ನಾವು ಖರೀದಿಸುವ ಹಣ್ಣು ಆ್ಯಪ್‌ನಲ್ಲಿ ಸಿಗುವುದಿಲ್ಲ ಹೇಳುವ ಮೂಲಕ ಜಾಹೀರಾತು ಕೊನೆಗೊಳ್ಳುತ್ತದೆ.

 

 

ಈ ಜಾಹೀರಾತು ಆನ್‌ಲೈನ್ ಶಾಪಿಂಗ್ ಹೊಡೆತಕ್ಕೆ ಸಿಲುಕಿ ಸಣ್ಣ ಸಣ್ಣ ವ್ಯಾಪಾರಿಗಳ ದೀಪಾವಳಿ ಖುಷಿ, ಸಂಭ್ರಮ ಕುಗ್ಗಿರುವುದು ಹಾಗೂ ಭಾರತದಲ್ಲಿ ಹಬ್ಬಗಳಿಗೆ ಸಾಂಪ್ರಾದಾಯಿ ರೀತಿಯಲ್ಲಿ ಕುಟುಂಬ ಸದಸ್ಯರು ತೆರಳಿ ಖುಷಿ ಖುಷಿಯಿಂದ ಮಾಡುವ ಶಾಪಿಂಗ್ ಇಲ್ಲವಾಗುತ್ತದೆ. ಇದನ್ನು ಪುಷ್ಠಿಕರೀಸುವ ಪ್ರಯತ್ನವೂ ಇದಾಗಿದೆ. ಈ ಜಾಹೀರಾತು ಇದೀಗ ಭಾರಿ ಚರ್ಚೆಯಾಗುತ್ತೆದ. ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

 

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್