ಸಗಣಿ ಗ್ಯಾಸ್‌ ಬಳಸಿ ಓಡಬಲ್ಲ ಕಾರು ನಿರ್ಮಾಣಕ್ಕೆ ಮಾರು​ತಿ ರೆಡಿ..!

By Kannadaprabha News  |  First Published Jan 28, 2023, 11:06 AM IST

2030ರ ವೇಳೆಗೆ 6 ಹೊಸ ಎಲೆ​ಕ್ಟ್ರಿಕ್‌ ವಾಹ​ನ​ಗ​ಳನ್ನು ಬಿಡು​ಗಡೆ ಮಾಡಲು ನಿರ್ಧ​ರಿ​ಸಿ​ರುವ ಮಾರುತಿ ಸುಜುಕಿ, ಮುಂದಿನ ದಶ​ಕ​ಗ​ಳಲ್ಲಿ ಮಾಲಿನ್ಯ ನಿಯಂತ್ರ​ಣಕ್ಕೆ ಸಂಬಂಧಿ​ಸಿ​ದಂತೆ ಸುಸ್ಥಿ​ರ​ವಾದ ಪರಿ​ಹಾ​ರ​ ತರಲು ನೋಡು​ತ್ತಿದೆ.


ನವ​ದೆ​ಹ​ಲಿ (ಜನವರಿ 28, 2023): ಜಪಾನ್‌ ಮೂಲದ ಖ್ಯಾತ ಕಾರು ತಯಾ​ರಕ ಕಂಪನಿ ಸುಜುಕಿ ಹಾಗೂ ಭಾರ​ತ​ದಲ್ಲಿ ಅದರ ಪೂರಕ ಸಂಸ್ಥೆ​ಯಾ​ಗಿ​ರುವ ಮಾರುತಿ, ಮಾಲಿನ್ಯ ನಿಯಂತ್ರ​ಣಕ್ಕೆ ಸಂಬಂಧಿ​ಸಿ​ದಂತೆ ಸಗ​ಣಿ​ಯಿಂದ ಬಿಡು​ಗ​ಡೆ​ಯಾ​ಗುವ ಜೈವಿಕ ಅನಿ​ಲ​ವನ್ನು ಇಂಧ​ನ​ವಾಗಿ ಬಳಕೆ ಮಾಡಲು ಒಲವು ತೋರಿವೆ. ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಷನ್ ಸರ್ಕಾರವು ನಿಗದಿಪಡಿಸಿದ ದಿನಾಂಕಕ್ಕೆ ಅನುಗುಣವಾಗಿ 2070 ರ ವೇಳೆಗೆ ಭಾರತದಲ್ಲಿ ಇಂಗಾಲದ ತಟಸ್ಥತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

2030ರ ವೇಳೆಗೆ 6 ಹೊಸ ಎಲೆ​ಕ್ಟ್ರಿಕ್‌ ವಾಹ​ನ​ಗ​ಳನ್ನು (Electric Vehicles) ಬಿಡು​ಗಡೆ ಮಾಡಲು ನಿರ್ಧ​ರಿ​ಸಿ​ರುವ ಮಾರುತಿ ಸುಜುಕಿ (Maruti Suzuki), ಮುಂದಿನ ದಶ​ಕ​ಗ​ಳಲ್ಲಿ ಮಾಲಿನ್ಯ ನಿಯಂತ್ರ​ಣಕ್ಕೆ (Pollution Control) ಸಂಬಂಧಿ​ಸಿ​ದಂತೆ ಸುಸ್ಥಿ​ರ​ವಾದ ಪರಿ​ಹಾ​ರ​ (Solution) ತರಲು ನೋಡು​ತ್ತಿದೆ. ಇದ​ರಲ್ಲಿ ಒಂದು ಯೋಜನೆ ಹಸು​ವಿನ ಸಗ​ಣಿಯಿಂದ ಉತ್ಪಾದಿಸುವ ಅನಿಲವನ್ನು (Cow Dung Gas) ಆಧರಿಸಿದ್ದಾಗಿದ್ದು, ಈ ಕುರಿತು ಕಂಪನಿ ಸಂಶೋ​ಧನೆ ಆರಂಭಿ​ಸಿದೆ. ಜೈವಿಕ ಅನಿ​ಲ ಮಾರು​ಕ​ಟ್ಟೆ​ಯ​ಲ್ಲಿ​ರುವ ಈ ಸವಾ​ಲನ್ನು ಮೊದ​ಲಿಗೆ ಸ್ವೀಕ​ರಿ​ಸಲು ಮುಂದಾ​ಗಿ​ರುವ ಸುಜುಕಿ, ತನ್ನ ಸಿಎ​ನ್‌ಜಿ ಮಾಡೆ​ಲ್‌ನ ವಾಹ​ನ​ಗ​ಳಲ್ಲಿ ಇದನ್ನು ಬಳಕೆ ಮಾಡಲು ನಿರ್ಧ​ರಿ​ಸಿದೆ. ಪ್ರಸ್ತುತ ಭಾರ​ತ​ದಲ್ಲಿ ಶೇ.70ರಷ್ಟು ಸಿಎ​ನ್‌ಜಿ ವಾಹ​ನ​ಗಳು ಮಾರುತಿ ಸುಜುಕಿ ಕಂಪ​ನಿಗೆ ಸೇರಿ​ದ​ವು​ಗ​ಳಾ​ಗಿವೆ. ಸಗಣಿ ಬಳ​ಕೆಯ ಕುರಿ​ತಾಗಿ ಜಾಗ​ತಿಕ ಮಟ್ಟ​ದಲ್ಲಿ ಕಂಪನಿ ಈಗಾ​ಗಲೇ ತನ್ನ ಪ್ರತಿ​ಪಾ​ದ​ನೆ​ಯನ್ನು ಮಂಡಿ​ಸಿದೆ.

Tap to resize

Latest Videos

undefined

ಇದನ್ನು ಓದಿ: ಕಾರು ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಇಂದಿನಿಂದ ಮಾರುತಿ ಸುಜುಕಿಯ ಎಲ್ಲ ಮಾಡೆಲ್‌ ಕಾರುಗಳ ಬೆಲೆ ಹೆಚ್ಚಳ..!

ಆಮ್ಲಜನಕರಹಿತ ಜೀರ್ಣಕ್ರಿಯೆ ಎಂಬ ಪ್ರಕ್ರಿಯೆಯ ಮೂಲಕ ಹಸುವಿನ ಗೊಬ್ಬರವನ್ನು ಕಾರಿನ ಇಂಧನವಾಗಿ ಪರಿವರ್ತಿಸಬಹುದು. ಈ ಪ್ರಕ್ರಿಯೆಯು ಆಮ್ಲಜನಕದ ಅನುಪಸ್ಥಿತಿಯಲ್ಲಿ ಗೊಬ್ಬರವನ್ನು ಬ್ರೇಕ್‌ ಡೌನ್‌ ಮಾಡುವುದನ್ನು ಒಳಗೊಂಡಿರುತ್ತದೆ. ಇದು ಜೈವಿಕ ಅನಿಲ, ಮೀಥೇನ್, ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಅನಿಲಗಳ ಪ್ರಮಾಣವನ್ನು ಉತ್ಪಾದಿಸುತ್ತದೆ. ನಂತರ ಜೈವಿಕ ಅನಿಲವನ್ನು ಸ್ವಚ್ಛಗೊಳಿಸಬಹುದು ಮತ್ತು ಸಂಸ್ಕರಿಸಬಹುದು ಹಾಗೂ ಕಲ್ಮಶಗಳನ್ನು ತೆಗೆದುಹಾಕಬಹುದು ಮತ್ತು ಮೀಥೇನ್ ಅಂಶವನ್ನು ಹೆಚ್ಚಿಸಬಹುದಾಗಿದೆ. ಇದನ್ನು ಮಾಡಿದ ನಂತರ, ಜೈವಿಕ ಅನಿಲವನ್ನು ಇಂಧನ ಮೂಲವಾಗಿ ಬಳಸಬಹುದು. ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಸುಟ್ಟು ಅಥವಾ ಸಂಕುಚಿತಗೊಳಿಸಿ ಮತ್ತು ವಾಹನಗಳಿಗೆ ನೈಸರ್ಗಿಕ ಅನಿಲದ ಬದಲಿಯಾಗಿ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಮಧ್ಯೆ, Fujisan Asagiri Biomas LLC ನಲ್ಲಿಯೂ ಹೂಡಿಕೆ ಮಾಡಿರುವುದಾಗಿ ಸುಜುಕಿ ಹೇಳಿಕೊಂಡಿದೆ. ಈ ಸಂಸ್ಥೆಯು ಸ್ಥಳೀಯ ರೈತರಿಂದ ಸಂಗ್ರಹಿಸಿದ ಹಸುವಿನ ಸಗಣಿಯನ್ನು ಶಕ್ತಿ ಉತ್ಪಾದನೆಗೆ ಜೈವಿಕ ಅನಿಲವಾಗಿ ಪರಿವರ್ತಿಸುತ್ತದೆ. ಭಾರತದಲ್ಲಿನ ಜೈವಿಕ ಅನಿಲ ವ್ಯವಹಾರವು ಇಂಗಾಲದ ತಟಸ್ಥತೆಗೆ ಕೊಡುಗೆ ನೀಡುವುದಲ್ಲದೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತದ ಸಮಾಜಕ್ಕೆ ಕೊಡುಗೆ ನೀಡುತ್ತದೆ ಎಂದು ನಾವು ನಂಬುತ್ತೇವೆ ಎಂದೂ ಸುಜುಕಿ ಮಾಹಿತಿ ನೀಡಿದೆ. 

ಇದನ್ನೂ ಓದಿ: 550 ಕಿ.ಮೀ ಮೈಲೇಜ್, ಗೇಮ್‌ಚೇಂಜರ್ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು ಅನಾವರಣ!

ಮೊದ​ಲಿಗೆ ಭಾರ​ತ​ದಲ್ಲಿ ಇದನ್ನು ಜಾರಿ ಮಾಡಿ ಬಳಿಕ, ಕೃಷಿ ಮತ್ತು ಹೈನು​ಗಾ​ರಿಕೆ ನಡೆ​ಸುವ ಏಷ್ಯಾ ಹಾಗೂ ಆಫ್ರಿ​ಕಾದ ಇತರ ದೇಶ​ಗ​ಳಿಗೆ ಇದನ್ನು ವರ್ಗಾ​ಯಿ​ಸಲು ನಿರ್ಧ​ರಿ​ಸಿದೆ. ಇದ​ಕ್ಕಾಗಿ ರಾಷ್ಟ್ರೀಯ ಡೈರಿ ಅಭಿ​ವೃದ್ಧಿ ನಿಗಮ ಮತ್ತು ಬನಾಸ್‌ ಡೈರಿ​ಯೊಂದಿಗೆ ಒಪ್ಪಂದ ಮಾಡಿ​ಕೊಂಡಿದೆ ಎಂದು ವರ​ದಿ​ಗಳು ತಿಳಿ​ಸಿವೆ.

ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಅಂಗ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ ಭಾರತದಲ್ಲಿನ ಅತಿ ದೊಡ್ಡ ಕಾರು ತಯಾರಕವಾಗಿದೆ. FY2030 ಗಾಗಿ ತನ್ನ ಬೆಳವಣಿಗೆಯ ಕಾರ್ಯತಂತ್ರದಲ್ಲಿ, ಈ ಅಂಗಸಂಸ್ಥೆಯು ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ಜೊತೆಗೆ CNG, ಜೈವಿಕ ಅನಿಲ ಮತ್ತು ಎಥೆನಾಲ್ ಮಿಶ್ರಿತ ಇಂಧನಗಳನ್ನು ಬಳಸಿಕೊಂಡು ಕಾರ್ಬನ್-ತಟಸ್ಥ ಆಂತರಿಕ ದಹನಕಾರಿ ಎಂಜಿನ್ ವಾಹನಗಳನ್ನು ಒದಗಿಸುವುದಾಗಿಯೂ ಹೇಳಿದೆ.

ಇದನ್ನೂ ಓದಿ: ಜಾಗತಿಕ ಎನ್ಸಿಎಪಿ ಪರೀಕ್ಷೆಯಲ್ಲಿ ಕೇವಲ 1 ಸ್ವಾರ್ ರೇಟಿಂಗ್ ಪಡೆದ ಮಾರುತಿ ಸ್ವಿಫ್ಟ್, ಎಸ್-ಪ್ರೆಸ್ಸೋ, ಇಗ್ನಿಸ್

click me!