Maruti Suzuki XL6 ಶೀಘ್ರದಲ್ಲೇ ಮಾರುತಿ ಸುಜುಕಿ XL6 ಕಾರು ಬಿಡುಗಡೆ, ಬುಕಿಂಗ್ ಬೆಲೆ 11 ಸಾವಿರ!

By Suvarna News  |  First Published Apr 11, 2022, 3:41 PM IST
  • ಮಾರುತಿ ಸುಜುಕಿ ಹೊಚ್ಚ ಹೊಸ XL6 ಫೇಸ್‌ಲಿಫ್ಟ್ ಕಾರು
  • ವಿಡಿಯೋ ಟೀಸರ್ ಬಿಡುಗಡೆ, ಬುಕಿಂಗ್ ಆರಂಭ
  • ಈ ತಿಂಗಳ ಅಂತ್ಯದಲ್ಲಿ ನೂತನ ಕಾರು ಬಿಡುಗಡೆ
     

ನವದೆಹಲಿ(ಏ.11): ಮಾರುತಿ ಸುಜುಕಿ XL6 ಫೇಸ್‌ಲಿಫ್ಟ್ ಕಾರು ಬಿಡುಗಡೆ ಸಜ್ಜಾಗಿದೆ. ಈ ತಿಂಗಳ ಅಂತ್ಯದಲ್ಲಿ ನೂತನ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಇದೀಗ  XL6 ಫೇಸ್‌ಲಿಫ್ಟ್ ಕಾರಿನ ವಿಡಿಯೋ ಟೀಸರ್ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಕಾರಿನ ಬುಕಿಂಗ್ ಕೂಡ ಆರಂಭಿಸಲಾಗಿದೆ.  XL6 ಫೇಸ್‌ಲಿಫ್ಟ್ ಕಾರನ್ನು 11,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು.

 XL6 ಫೇಸ್‌ಲಿಫ್ಟ್ ಕಾರಿನಲ್ಲಿ ಕೆಲ ಬದಲಾವಣೆಗಳಿವೆ, ಬಾನೆಟ್, ರೂಫ್ ಸೇರಿದಂತೆ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. ಆಕರ್ಷಕ ಕಾರಿನಲ್ಲಿ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ಸಿಲ್ವರ್ ಫಿನೀಶಡ್ ರೂಫ್ ರೈಲ್ಸ್ ಹಾಗೂ ಸ್ಕಿಡ್ ಪ್ಲೇಟ್ ಕಾರಿನ ಅಂದ ಮತ್ತಷ್ಟು ಹೆಚ್ಚಿಸಿದೆ. ಮುಂಬಾಗದ ಗ್ರಿಲ್‌ನಲ್ಲೂ ಕೆಲ ಬದಲಾವಣೆಗಳಿವೆ. ಫ್ರಂಟ್ ಹಾಗೂ ರೇರ್ ಬಂಪರ್ಸ್, LED ಹೆಡ್‌ಲ್ಯಾಂಪ್ಸ್, ಹೊಸ ಆಲೋಯ್ ವ್ಹೀಲ್ಸ್ ಸೇರಿದಂತೆ ಹಲವು ವಿಶೇಷತೆ ಹಾಗೂ ಬದಲಾವಣೆಗಳನ್ನು ನೂತನ ಕಾರಿನಲ್ಲಿ ಕಾಣಬಹುದು.

Latest Videos

undefined

Maruti Ertiga 11 ಸಾವಿರ ರೂಗೆ ಬುಕ್ ಮಾಡಿ 2022ರ ಹೊಚ್ಚ ಹೊಸ ಮಾರುತಿ ಎರ್ಟಿಗಾ!

ಕಾರಿನ ಇಂಟಿರಿಯರ್, ಕ್ಯಾಬಿನ್, ಡ್ಯಾಶ್‌ಬೋರ್ಡ್‌ನಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಕನೆಕ್ಟೆಡ್ ಕಾರ್ ಟೆಕ್ ಫೀಚರ್ಸ್, ಹೊಸ ಮಾರುತಿ ಸ್ಮಾರ್ಟ್ ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಹೊಸತನಗಳನ್ನು ಕಾಣಬಹುದು. ಇದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

ನೂತನ  XL6 ಫೇಸ್‌ಲಿಫ್ಟ್ ಕಾರು 1.5 ಲೀಟರ್ ಡ್ಯುಯೆಲ್ ಜೆಟ್ ಎಂಜಿನ್ ಹೊಂದಿದೆ. ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯನ್ನು ಬಳಸಿಕೊಳ್ಳಲಾಗಿದೆ. ಇನ್ನು ಎಂಜಿನ್ ಪವರ್ ಹಾಗೂ ಇನ್ನಿತರ ಮಾಹಿತಿ ಶೀಘ್ರದಲ್ಲೆ ಬಹಿರಂಗಗೊಳ್ಳಲಿದೆ.

ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವ ಭಾರತೀಯ ಆಟೋಮೊಬೈಲ್ ಕಂಪನಿಗಳು ಇದೀಗ ವಾಹನಗಳ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಮಾರುತಿ ಸುಜುಕಿ ಬಲೆನೋ ಸೇರಿದಂತೆ ಹಲವು ಕಾರುಗಳ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಮಾರುತಿ ಎರ್ಟಿಗಾ ಫೇಸ್‌ಲಿಫ್ಟ್ ಕಾರು ಕೂಡ ಬಿಡುಗಡೆಯಾಗುತ್ತಿದೆ. ಕಳೆದ 2 ವರ್ಷಗಳಿಂದ ಕುಸಿತ ಕಂಡಿದ್ದ ಕಾರು ಉತ್ಪಾದನೆ  ಇದೀಗ ಏರಿಕೆಯಾಗಿದೆ. 2021ರ ನವೆಂಬರ್ ತಿಂಗಳಿನಿಂದ ಮಾರುತಿ ಸುಜುಕಿ ಉತ್ದಾದನೆ ವೇಗ ಹೆಚ್ಚಿಸಿದೆ.

Maruti discounts ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಮಾರುತಿ ಸುಜುಕಿ, ಕೈಗೆಟುಕುವ ದರದಲ್ಲಿ ಕಾರು ಲಭ್ಯ!

35 ವರ್ಷಗಳ ಬಳಿಕ ಒಮ್ನಿ ವ್ಯಾನ್‌ ಉತ್ಪಾದನೆ ಸ್ಥಗಿತ
ಮಾರುತಿ ಕಂಪನಿಯ ಜನಪ್ರಿಯ ಮಾಡೆÜಲ್‌ಗಳ ಪೈಕಿ ಒಂದಾ ಒಮ್ನಿ ವ್ಯಾನ್‌ನ ಉತ್ಪಾದನೆಯನ್ನು ಕಂಪನಿ ಸ್ಥಗಿತಗೊಳಿಸಿದೆ. ಇದರೊಂದಿಗೆ ಸತತ 35 ವರ್ಷಗಳ ಕಾಲ ತನ್ನ ವರ್ಗದ ವಾಹನಗಳ ಪೈಕಿ ಮುಂಚೂಣಿ ಸ್ಥಾನದಲ್ಲೇ ಇದ್ದ ಒಮ್ನಿ ಇತಿಹಾಸದ ಪುಟ ಸೇರಿದೆ.

ಕೇಂದ್ರ ಸರ್ಕಾರ, ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಎಬಿಎಸ್‌, ಏರ್‌ಬ್ಯಾಗ್‌ ಮತ್ತು ಬಿಎಸ್‌ 6 ಮಾನದಂಡಗಳನ್ನು ಕಡ್ಡಾಯ ಮಾಡಿದೆ. ಆದರೆ ಈ ಪೈಕಿ ಹಲವು ಸೌಕರ್ಯಗಳನ್ನು ಒಮ್ನಿ ವ್ಯಾನ್‌ನಲ್ಲಿ ಒದಗಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ಮಾದರಿಯನ್ನೇ ಕೈಬಿಡಲು ಕಂಪನಿ ನಿರ್ಧರಿಸಿದೆ. ಇದಕ್ಕೆ ಪರ್ಯಾಯವೆಂದೇ ಕೆಲ ವರ್ಷಗಳ ಹಿಂದೆ ಮಾರುತಿ ಕಂಪನಿಯು ಒಮ್ನಿಯ ಸುಧಾರಿತ ಮಾದರಿಯ ಇಕೋ ಪರಿಚಯಿಸಿತ್ತು.

ಹಿನ್ನೆಲೆ: 1984ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಒಮ್ನಿ ಬಿಡುಗಡೆಯಾಗಿತ್ತು. ಇದು ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯ 2ನೇ ಕಾರಿನ ಮಾದರಿಯಾಗಿತ್ತು. 1998ರಲ್ಲಿ ಇದಕ್ಕೆ ಒಮ್ನಿ ಎಂಬ ಹೆಸರು ನೀಡಲಾಗಿತ್ತು. ಪ್ರಯಾಣಿಕರ ಜೊತೆ ಸರಕು ಸಂಚಾರಕ್ಕೂ ಇದು ಬಹುಪಯೋಗಿಯಾದ ಕಾರಣ, ಇದು ಬಹುಬೇಗ ಜನಮನ ಸೆಳೆದಿತ್ತು. ಕಳೆದ 35 ವರ್ಷಗಳಲ್ಲಿ ಕೇವಲ ಎರಡು ಬಾರಿ ಮಾತ್ರವೇ ಇದರ ವಿನ್ಯಾಸದಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತು. ಒಮ್ಮೆ 1998 ಮತ್ತು 2005ರಲ್ಲಿ ವಿನ್ಯಾಸದಲ್ಲಿ ಸಣ್ಣ ಬದಲಾವಣೆ ಮಾಡಲಾಗಿತ್ತು.
 

click me!