ಮಾರುತಿ ಸುಜುಕಿ ಇಂಡಿಯಾ (Maruti Suzuki India), 2022ರ ಏಪ್ರಿಲ್ ನಲ್ಲಿ ಸಗಟು ಮಾರಾಟದಲ್ಲಿ ಶೇ.6 ರಷ್ಟು ಕುಸಿತ ವರದಿ ಮಾಡಿದೆ.
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ(Maruti Suzuki India), 2022ರ ಏಪ್ರಿಲ್ ನಲ್ಲಿ ಸಗಟು ಮಾರಾಟದಲ್ಲಿ ಶೇ.6 ರಷ್ಟು ಕುಸಿತ ವರದಿ ಮಾಡಿದೆ.2022ರ ಏಪ್ರಿಲ್ನಲ್ಲಿ ಮಾರುತಿ ಸುಜುಕಿ (Maruti Suzuki), ದೇಶಾದ್ಯಂತ ಒಟ್ಟು 1,50,661 ವಾಹನಗಳನ್ನು ಡೀಲರ್ಗಳಿಗೆ ರವಾನಿಸಿದೆ. 2021ರ ಏಪ್ರಿಲ್ನಲ್ಲಿ ಇದು 1,59,691 ರಷ್ಟಿತ್ತು.
ಮಾಸಿಕ ಆಧಾರದ ಮೇಲೆ ಗಣನೀಯ ಏರಿಕೆ ಕಂಡುಬಂದಿದ್ದರೂ, ಮಾರುತಿ ಕಳೆದ ತಿಂಗಳು 1,32,248 ವಾಹನಗಳ ಮಾರಾಟವನ್ನು ಮಾತ್ರ ವರದಿ ಮಾಡಿದೆ. 2021ರ ಏಪ್ರಿಲ್ನಲ್ಲಿ ಇದು ಮಾರುತಿ 1,42,454 ವಾಹನ ಮಾರಾಟವನ್ನು ವರದಿ ಮಾಡಿತ್ತು. ಆದ್ದರಿಂದ ವರ್ಷದಿಂದ ವರ್ಷಕ್ಕೆ ಕಂಪನಿಯ ಮಾರಾಟ ಪ್ರಮಾಣದಲ್ಲಿ ಕುಸಿತವಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಮಾರುತಿ ಸುಜುಕಿ, ಸಣ್ಣ, ಪ್ರವೇಶ ಮಟ್ಟದ ಹ್ಯಾಚ್ಬ್ಯಾಕ್ಗಳಿಗೆ (Hatchback) ಬೇಡಿಕೆ ಕಡಿಮೆಯಾಗಿದ್ದು, ಪರಿಣಾಮವಾಗಿ ಒಟ್ಟಾರೆ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಆಲ್ಟೊ ಮತ್ತು ಎಸ್-ಪ್ರೆಸ್ಸೊ ಒಳಗೊಂಡಿರುವ ಮಿನಿ ಕಾರುಗಳ ಮಾರಾಟವು ಕಳೆದ ವರ್ಷ ಇದೇ ತಿಂಗಳಿನಲ್ಲಿ ದಾಖಲಾಗಿದ್ದ 25,041 ಕ್ಕೆ ಹೋಲಿಸಿದರೆ ಈ ವರ್ಷ 17,137 ವಾಹನಗಳು ಮಾರಟವಾಗಿದ್ದು, ಶೇ. 32ರಷ್ಟು ಕುಸಿದಿದೆ.
ಅದೇ ರೀತಿ, ಕಾಂಪ್ಯಾಕ್ಟ್ ವಿಭಾಗದಲ್ಲಿ ಸ್ವಿಫ್ಟ್, (Swift) ಸೆಲೆರಿಯೊ (Celerio), ಇಗ್ನಿಸ್ (ignis), ಬಲೆನೊ (Baleno) ಮತ್ತು ಡಿಜೈರ್(Desire)ನಂತಹ ಮಾದರಿಗಳು ಸೇರಿದಂತೆ ಇತರ ವಾಹನಗಳ ಮಾರಾಟ ಶೆ.18 ರಷ್ಟು ಕುಸಿದಿದೆ. 2021ರಲ್ಲಿ ಮಾರಾಟವಾಗಿದ್ದ 72,318 ವಾಹನಗಳಿಗೆ ಹೋಲಿಸಿದರೆ, ಈ ವರ್ಷದ ಏಪ್ರಿಲ್ ನಲ್ಲಿ ಇದು 59,184 ಮಾತ್ರ ಇದೆ. ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಮಾರಾಟವು ಏಪ್ರಿಲ್ನಲ್ಲಿ 1,759 ವಾಹನಗಳಿಗೆ ಇಳಿದಿದೆ.
ಆದಾಗ್ಯೂ, ವಿಟಾರಾ ಬ್ರೆಝಾ (Vitara Breeza), ಎಸ್-ಕ್ರಾಸ್ (S-Cross)ಮತ್ತು ಎರ್ಟಿಗಾ (Ertiga0 ಸೇರಿದಂತೆ ಯುಟಿಲಿಟಿ ವಾಹನಗಳ ಮಾರಾಟವು ಕಳೆದ ವರ್ಷದ 25,484 ವಾಹನಗಳಿಗೆ ಹೋಲಿಸಿದರೆ ಶೇ. 33 ರಷ್ಟು ಏರಿಕೆಯಾಗಿ 33,941 ವಾಹನಗಳಿಗೆ ತಲುಪಿದೆ ಎಂದು ಎಂಎಸ್ಐ (MSI) ತಿಳಿಸಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ರಫ್ತು 17,237 ವಾಹನಗಳ ವಿರುದ್ಧ 18,413 ವಾಹನಗಳಿಗೆ ಶೇ. 7 ರಷ್ಟು ಏರಿಕೆ ಕಂಡಿದೆ ಎಂದು ಕಂಪನಿ ತಿಳಿಸಿದೆ.
ಎಲೆಕ್ಟ್ರಾನಿಕ್ ಘಟಕಗಳ ಕೊರತೆಯು 2021-22 ರ ಆರ್ಥಿಕ ವರ್ಷದಲ್ಲಿ ವಾಹನಗಳ ಉತ್ಪಾದನೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ಕಂಪನಿಯು ಈ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಎಲೆಕ್ಟ್ರಾನಿಕ್ ಘಟಕಗಳ ಪೂರೈಕೆಯ ಪರಿಸ್ಥಿತಿಯು ಅನಿರೀಕ್ಷಿತವಾಗಿ ಮುಂದುವರಿದಿರುವುದರಿಂದ, 2022-23 ರ ಆರ್ಥಿಕ ವರ್ಷದಲ್ಲಿ ಕೂಡ ಉತ್ಪಾದನೆಯ ಪರಿಮಾಣದ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು, ಎಂದು ಎಂಎಸ್ಐ ಹೇಳಿದೆ.
ಮಾರುತಿ ಸುಜುಕಿ 2022ರಲ್ಲಿ ಹಲವಾರು ಹೊಸ ಕಾರುಗಳು ಹಾಗೂ ಫೇಸ್ಲಿಫ್ಟ್ಗಳನ್ನು ಬಿಡುಗಡೆಗೊಳಿಸಿದೆ. ನ್ಯೂ ಬೊಲೆನೋ, ವ್ಯಾಗನ್ ಆರ್ ಫೇಸ್ಲಿಫ್ಟ್, ಎರ್ಟಿಗಾ ಫೇಸ್ಲಿಫ್ಟ್, ಎಕ್ಸ್ಎಲ್6 ಫೇಸ್ಲಿಫ್ಟ್ಗಳನ್ನು ಕಂಪನಿ ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರುಗಳಿಗೆ ಉತ್ತಮ ಬೇಡಿಕೆಯಿತ್ತು, ವೇಯ್ಟಿಂಗ್ ಅವಧಿ ಕೂಡ ಹೆಚ್ಚಾಗಿಯೇ ಇದೆ.
ಇದನ್ನೂ ಓದಿ: ಟಾಟಾ ಪ್ರಯಾಣಿಕ ವಾಹನಗಳ ದರ ಏರಿಕೆ: ವರ್ಷದಲ್ಲಿ ಎರಡನೇ ಬಾರಿಗೆ ಹೆಚ್ಚಳ
ಮಾರುತಿ ಸುಜುಕಿಯು ಹೊಸ ಬ್ರೆಝಾ ಸಬ್-4 ಮೀಟರ್ ಎಸ್‌ಯುವಿಯನ್ನು ಬಿಡುಗಡೆಗೆ ಸಿದ್ಧವಾಗಿದೆ.ಹೊಸ ಮಾದರಿಯು ಪರಿಷ್ಕೃತ ಹೊರಭಾಗ ಮತ್ತು ಎಲ್ಲಾ ಹೊಸ ಒಳಾಂಗಣದೊಂದಿಗೆ ಬರಲಿದೆ. ಹೊಸ ಮಾರುತಿ ಬ್ರೆಝಾ ಹೊಸ ಮುಂಭಾಗದ ಗ್ರಿಲ್, LED ಹೆಡ್‌ಲ್ಯಾಂಪ್‌ಗಳು ಮತ್ತು LED ಟೈಲ್-ಲೈಟ್‌ಗಳೊಂದಿಗೆ ಬರಲಿದೆ. ಇದು ಹೊಸ ಡ್ಯಾಶ್‌ಬೋರ್ಡ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟ್ ಕಾರ್ ಟೆಕ್, ಹೊಸ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಎಲೆಕ್ಟ್ರಿಕ್ ಸನ್‌ರೂಫ್, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ಹೊಸ ಕ್ಲೈಮೇಟ್ ಕಂಟ್ರೋಲ್ ಒಳಗೊಂಡ ಎಲ್ಲಾ-ಹೊಸ ಒಳಾಂಗಣದೊಂದಿಗೆ ಬರುತ್ತದೆ.
ಇದನ್ನೂ ಓದಿ: ಬೆಂಕಿ ಅವಘಡ: ಎಲ್ಲಾ ಘಟನೆಗಳ ವಿಸ್ತೃತ ತನಿಖೆ- ಗಿರಿಧರ್ ಅರಮನೆ
ಹೊಸ ಬ್ರೀಝಾ 1.5-ಲೀಟರ್ K15B ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು ಅದು 104bhp ಮತ್ತು 138Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರಸರಣ ಆಯ್ಕೆಗಳು 5-ವೇಗದ ಕೈಪಿಡಿ ಮತ್ತು 6-ವೇಗದ ಟಾರ್ಕ್ ಪರಿವರ್ತಕ ಸ್ವಯಂಚಾಲಿತವನ್ನು ಒಳಗೊಂಡಿರುತ್ತದೆ. ವಾಹನವು ಸಿಎನ್‌ಜಿ ಆವೃತ್ತಿಯನ್ನು ಸಹ ಪಡೆಯುತ್ತದೆ, ಇದು ಎರ್ಟಿಗಾ ಸಿಎನ್‌ಜಿಯೊಂದಿಗೆ ಪವರ್‌ಟ್ರೇನ್ ಕೂಡ ಲಭ್ಯವಿರುತ್ತದೆ.