ಬರೋಬ್ಬರಿ 38 ಕಿ.ಮೀ ಮೈಲೇಜ್‌ನ ಮಾರುತಿ ಸ್ವಿಫ್ಟ್ ಸಿಎನ್‌ಜಿ ಕಾರು ಲಾಂಚ್, ಕೈಗೆಟುವ ಬೆಲೆ!

By Chethan Kumar  |  First Published Sep 12, 2024, 3:13 PM IST

ಭಾರತದಲ್ಲಿ ಮಾರುತಿ ಸುಜುಕಿ ಇದೀಗ ತನ್ನ ಜನಪ್ರಿಯ ಸ್ವಿಫ್ಟ್ ಕಾರಿನ ಸಿಎನ್‌ಜಿ ವರ್ಶನ್ ಬಿಡುಗಡೆ ಮಾಡಿದೆ. ಇದು ಬರೋಬ್ಬರಿ 32.85 ಕಿ.ಮೀ ಮೈಲೇಜ್ ನೀಡುತ್ತಿದೆ. ಇದೀಗ ಹೊಸ ಕಾರು ಮಾರುಕಟ್ಟೆಯಲ್ಲಿ ಹೊಸ ತಲ್ಲಣ ಸೃಷ್ಟಿಸಿದೆ. ಈ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದರ ಬೆಲೆ ಎಷ್ಟು? 


ನವದೆಹಲಿ(ಸೆ.12) ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯತೆ ಹೊಂದಿದೆ. ಜೊತೆಗೆ ಗರಿಷ್ಠ ಗ್ರಾಹಕರನ್ನು ಹೊಂದಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಕಡಿಮೆ ನಿರ್ವಹಣೆ ವೆಚ್ಚ, ಗರಿಷ್ಠ ಮೈಲೇಜ್, ಕೈಗೆಟುವ ಬೆಲೆ ಸೇರಿದಂತೆ ಹಲವು ಕಾರಣಗಳಿಂದ ಮಾರುತಿ ಸುಜುಕಿ ಕಾರುಗಳು ಭಾರತೀಯರ ಮೊದಲ ಆಯ್ಕೆ ಎಂದೇ ಗುರುತಿಸಿಕೊಂಡಿದೆ. ಇದೀಗ ಮಾರುತಿ ಸುಜುಕಿ ಸ್ವಿಫ್ಟ್ S-CNG ಕಾರು ಬಿಡುಗಡೆಯಾಗಿದೆ. ಇದು ಸಂಪೂರ್ಣ ಸಿಎನ್‌ಜಿ ಚಾಲಿತ ಕಾರಾಗಿದೆ. ಇದರ ಮೈಲೇಜ್ ಬರೋಬ್ಬರಿ 32.85 ಮೈಲೇಜ್. ಹೌದು 1 ಕೆಜಿ ಸಿಎನ್‌ಜಿಗೆ ಇದು 32.84 ಕಿಮಿ ಮೈಲೇಜ್ ನೀಡಲಿದೆ. ಬೆಂಗಳೂರಿನಲ್ಲಿ 1 ಕೆಜಿ ಸಿಎನ್‌ಜಿ ಬೆಲೆ 83 ರೂಪಾಯಿ.

ಸಿಎನ್‌ಜಿ ಇಂಧನಕ್ಕೆ ಪೆಟ್ರೋಲ್‌ಗಿಂತ ಕಡಿಮೆ ಬೆಲೆ ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ವಾಹನಕ್ಕಿಂತ ಹೆಚ್ಚಿನ ಮೈಲೇಜ್ ಸಿಗುತ್ತಿದೆ. ಹೊಸ ಸ್ವಿಫ್ಟ್ S-CNG ಕಾರು ಮಾರುತಿ ಪೈಕಿ ಗರಿಷ್ಠ ಮೈಲೇಜ್ ನೀಡುತ್ತಿರುವ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. Z ಸೀರಿಸ್ ಡ್ಯುವೆಲ್ ವಿವಿಟಿ ಇಂಜಿನ್ ಹೊಂದಿರುವ ನೂತನ ಸ್ವಿಫ್ಟ್ S-CNG ಪರಿಸರಕ್ಕೆ ಪೂರಕವಾಗಿದೆ. ಕಾರಣ ಇದು ಅತ್ಯಂತ ಕಡಿಮೆ ಕಾರ್ಬನ್ ಹೊರಸೂಸುತ್ತದೆ. ಹಾಗಂತ ಪರ್ಫಾಮೆನ್ಸ್‌ನಲ್ಲಿ ರಾಜಿ ಇಲ್ಲ. 101.8 Nm(@ 2900 rpm ) ಟಾರ್ಕ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

Tap to resize

Latest Videos

undefined

 ಕುಟುಂಬ ಸಮೇತ ಪ್ರಯಾಣಿಸಲು ಲಭ್ಯವಿರುವ ಟಾಪ್ 5 ಕಡಿಮೆ ಬೆಲೆಯ 7 ಸೀಟರ್ ಕಾರು!

 ಸ್ವಿಫ್ಟ್ S-CNG ಕಾರು ಮೂರು ವೇರಿಯೆಂಟ್‌ನಲ್ಲಿ ಲಭ್ಯವಿದೆ.  V, V(O), ಹಾಗೂ Z. ಪ್ರತಿ ವೇರಿಯೆಂಟ್ 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ.  ಹೊಸ ಸ್ವಿಫ್ಟ್ S-CNG ಕಾರು ಸುರಕ್ಷತೆಗೂ ಆದ್ಯತೆ ನೀಡಿದೆ. 6 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಮ್, ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. ಸ್ವಯಂಚಾಲಿತ ಎಸಿ ನಿಯಂತ್ರಣ, ಹಿಂಭಾಗದ AC ವೆಂಟ್, ವೈರ್ ಲೆಸ್ ಚಾರ್ಜರ್, 60:40 ಸ್ಪ್ಲಿಟ್ ರಿಯರ್ ಸೀಟ್ ಹೊಂದಿದೆ.  17.78 ಸೆಂ.ಮೀ (7-ಇಂಚಿನ) ಸ್ಮಾರ್ಟ್ ಪ್ಲೇ ಪ್ರೊ ಇನ್ಫೋಟೈನ್ ಮೆಂಟ್ ಸಿಸ್ಟಮ್ , Suzuki Connect ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

ಹೊಸ ಸ್ವಿಫ್ಟ್ S-CNG ಕಾರನ್ನು ಮಾಸಿಕ ಚಂದಾದಾರಿಕೆ ಮೂಲಕ ಕೇವಲ 21,628 ರೂಪಾಯಿಗೆ ಪಡೆಯಲು ಸಾಧ್ಯವಿದೆ. ಈ ಮಾದರಿಯಲ್ಲಿ ರಿಜಿಸ್ಟ್ರೇಶನ್, ನಿರ್ವಹಣೆ, ವಿಮೆ, ರೋಡ್ ಸೈಡ್ ಅಸಿಸ್ಟೆನ್ಸ್ ಸೇರಿದಂತೆ ಎಲ್ಲವೂ ಒಳಗೊಂಡಿರುತ್ತದೆ. ಅತೀ ಕಡಿಮೆ ಬೆಲೆಯಲ್ಲಿ ಕಾರು ಹೊಂದಲು ಸಾಧ್ಯವಿದೆ. 

ಮಾರುತಿ ಸುಜುಕಿ ಎಸ್ ಸಿಎನ್‌ಜಿ ಕಾರಿನ ಎಕ್ಸ್ ಶೋ ರೂಂ ಬೆಲೆ
Vxi : 8,19,500
Vxi (O) :8,46,500
Zxi :9,19,50 

ಮಾರುತಿ ಸುಜುಕಿ ಕಾರುಗಳ ಮೇಲೆ 2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್!

click me!