Maruti Suzuki Ertiga ಹೊಸ ಸಂಚಲನ.. ದೊಡ್ಡ ದೊಡ್ಡ ದೈತ್ಯ ಕಂಪನಿಗಳಿಗೆ ಬಿತ್ತು ಕೊಡಲಿ ಪೆಟ್ಟು

Published : Sep 16, 2026, 12:14 PM IST
Maruti Suzuki Ertiga

ಸಾರಾಂಶ

ಮಾರುತಿ ಸುಜುಕಿ ನಿರ್ಮಾಣದ Ertiga ದೇಶದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ದೊಡ್ಡ ದೊಡ್ಡ ದೈತ್ಯ ಕಂಪನಿಗಳಿಗೆ ನಡುಕ ಹುಟ್ಟಿಸುವ ರೀತಿಯಲ್ಲಿ ಮಾರಾಟವಾಗಿದೆ. 2012ರಿಂದ ಇಲ್ಲಿಯವರೆಗೆ ಮಾರಾಟವಾದ ದಾಖಲೆ ಕೇಳಿದ್ರೆ ಬೆರಗಾಗ್ತೀರಿ.. ಈ ಕುರಿತ ಸ್ಟೋರಿ ಇಲ್ಲಿದೆ..

Maruti Suzuki Ertiga: ನೀವು ಏನಾದರೂ ಕಾರನ್ನು ಖರೀದಿಸುವ ಯೋಚನೆಯಲ್ಲಿದ್ದರೆ ಮಾರುತಿ ಸುಜುಕಿ ಎರ್ಟಿಗಾಗೆ ಹೋಗಬಹುದು. ಕಾರಣ ಇಷ್ಟೇ ದೇಶದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಮಾಡಿದೆ. ನಿಮಗೆ ಅಚ್ಚರಿ ಆಗಬಹುದು ಇಲ್ಲಿವರೆಗೆ ಬರೋಬ್ಬರಿ 15 ಲಕ್ಷ ಕಾರುಗಳನ್ನ ಮಾರಾಟ ಮಾಡಿದೆ. ಮಾತ್ರವಲ್ಲ ಪ್ರತಿ ತಿಂಗಳು ಮಾರಾಟವಾಗುವ ಟಾಪ್‌ ಲಿಸ್ಟ್‌ನಲ್ಲಿ Maruti Suzuki Ertiga ಕೂಡ ಇದ್ದೇ ಇರುತ್ತಿದೆ.

ದೇಶದಲ್ಲಿರುವ ಜನಪ್ರಿಯ ವಾಹನ ತಯಾರಕ ಸಂಸ್ಥೆಯಲ್ಲಿ ಮಾರುತಿ ಸುಜುಕಿ ಕೂಡ ಒಂದು. ಅದರ ಎರ್ಟಿಗಾ ಕಾರು ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. 2012ರಲ್ಲಿ ಬಿಡುಗಡೆಯಾದ 7-ಸೀಟರ್ ಎಂಪಿವಿ (MPV), ಇದುವರೆಗೆ ಬರೋಬ್ಬರಿ 15,13,574 (15 ಲಕ್ಷಕ್ಕೂ ಹೆಚ್ಚು) ಯುನಿಟ್‌ಗಳು ಮಾರಾಟವಾಗಿದೆ. ಮಾತ್ರವಲ್ಲ ಕಳೆದ 8 ವರ್ಷಗಳಿಂದ ಭಾರತದ ನಂಬರ್-1 ಎಂಪಿವಿ ಎಂಬ ಹೆಗ್ಗಳಿಕೆ ಎರ್ಟಿಗಾಗೆ ಇದೆ. ಒಟ್ಟು ಯುವಿ (UV) ವಾಹನಗಳ ಮಾರಾಟದಲ್ಲಿ ಶೇ. 33 ರಷ್ಟು ಪಾಲು ಹೊಂದಿದೆ.

ಎರ್ಟಿಗಾದಲ್ಲಿ 1.5-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಇದೆ. ಇದು 103 hp ಪವರ್ ಮತ್ತು 139 Nm ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಿವೆ. ಉತ್ತಮ ಮೈಲೇಜ್ ಬಯಸುವವರಿಗಾಗಿ ಫ್ಯಾಕ್ಟರಿ ಫಿಟ್ಟೆಡ್ ಸಿಎನ್‌ಜಿ (CNG) ಆಯ್ಕೆಯೂ ಕಂಪನಿ ನೀಡಿದೆ.

ಮೈಲೇಜ್‌ ಮತ್ತು ಬೆಲೆ ಎಷ್ಟು?

ಪೆಟ್ರೋಲ್‌ ಆಧಾರಿತ ಕಾರು ಪ್ರತಿ ಲೀಟರ್‌ಗೆ 20.51 ಕಿಲೋ ಮೀಟರ್‌ ನೀಡಲಿದೆ. ಸಿಎನ್‌ಜಿ ಆಧಾರಿತ ಕಾರು ಪ್ರತಿ ಕೆಜಿಗೆ 26.11 ಕಿಲೋ ಮೀಟರ್‌ ದೂರ ಮೈಲೇಜ್‌ ನೀಡುತ್ತದೆ. ಇನ್ನು ಬೆಲೆ ಏನು ಅಂತಾ ನೋಡೋದಾದರೆ, ಎಕ್ಸ್‌ ಶೋ ರೂಮ್‌ ಬೆಲೆ 8.90 ಲಕ್ಷದಿಂದ ಶುರುವಾಗಿ, ಟಾಪ್‌ ಮಾಡೆಲ್‌ 13.5 ಲಕ್ಷದವರೆಗೆ ಕಾರುಗಳು ಲಭ್ಯವಿದೆ.

ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿ ಎನಿಸಿರುವ ಎರ್ಟಿಗಾ, ಕಿಯಾ ಕ್ಯಾರೆನ್ಸ್‌, ಟೊಯೋಟಾ ರೋಮಿಯಾನ ಕಾರುಗಳಿಗೆ ಸೆಡ್ಡೆ ಹೊಡೆಯುತ್ತಿದೆ. ಈ ಎಲ್ಲಾ ಕಾರುಗಳಿಗೆ ಪೈಪೋಟಿ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿಕೊಂಡಿದೆ. ಮತ್ತೊಂದು ವಿಚಾರ ಏನೆಂದರೆ.. ಕಡಿಮೆ ನಿರ್ವಹಣಾ ವೆಚ್ಚ, ಅತ್ಯುತ್ತಮ ಮೈಲೇಜ್‌, ಮಧ್ಯಮ ವರ್ಗದ ದೊಡ್ಡ ಕುಟುಂಬಕ್ಕೆ ಅಗತ್ಯವಿರುವ ಆರಾಮಾದಾಯಕ ಕ್ಯಾಬಿನ್‌ ಸ್ಪೇಸ್‌ ನೀಡುತ್ತದೆ.

ಮಾರುತಿ ಕಂಪನಿಗೆ ದೊಡ್ಡ ಶಕ್ತಿಯಾಗಿ ನಿಂತಿರುವ ಎರ್ಟಿಗಾ ಕಳೆದ 8 ವರ್ಷಗಳಿಂದ ಎಂಪಿವಿ (Multi-Purpose Vehicle) ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ಇದೇ ಕಂಪನಿಯ ಬ್ರೆಜಾ ಕೂಡ ಸಂಸ್ಥೆಯ ಬೆನ್ನೆಲುವಾಗಿದೆ. ಇವುಗಳ ಜನಪ್ರಿಯತೆಯಿಂದಾಗಿ 2018ರಲ್ಲಿ ದೇಶದ ನಂಬರ್‌ ಒನ್‌ ಆಗಿದ್ದ ಮಹೇಂದ್ರಾ ಕಂಪನಿಯನ್ನ ಹಿಂದಿಕ್ಕಿದೆ. ಅಗ್ಗದ ಬೆಲೆ ಹಾಗೂ ಮಾರುತಿಯ ವಿಶ್ವಾಸಾರ್ಹ ನೆಟ್‌ವರ್ಕ್ ಎರ್ಟಿಗಾವನ್ನು ಭಾರತೀಯರ ನೆಚ್ಚಿನ ಫ್ಯಾಮಿಲಿ ಕಾರನ್ನಾಗಿ ಮಾಡಿಕೊಂಡಿದೆ. ಪ್ರಯಾಣ ಸ್ನೇಹಿ, ಆರಾಮಾದಾಯಕ ಜರ್ನಿ ಆಗಿರುವುದರಿಂದ ಬಹುತೇಕರು ಇದ್ದನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

PREV
Read more Articles on
click me!

Recommended Stories

Mahindra Thar Facelift: ಥಾರ್‌ ರಾಕ್ಸ್‌ ಲುಕ್‌ನಲ್ಲಿ ಹೊಸ ಥಾರ್‌; ಬರಲಿವೆ ಭರ್ಜರಿ ಫೀಚರ್ಸ್‌!
ಸುರಕ್ಷತೆಯಲ್ಲಿ ನಂ.1 ಪಟ್ಟಕ್ಕೇರಿದ ಮಹೀಂದ್ರಾ XUV 7XO: ಕ್ರ್ಯಾಶ್ ಟೆಸ್ಟ್‌ನಲ್ಲಿ ಭರ್ಜರಿ 5-ಸ್ಟಾರ್ ರೇಟಿಂಗ್!