ಹೆಚ್ಚಿನ ಮೈಲೇಜ್, ಸುರಕ್ಷಿತ ಡ್ರೈವಿಂಗ್, 5.99 ಲಕ್ಷಕ್ಕೆ ಲಾಂಚ್ ಆದ ಭಾರತದ ನಂ.1 ಸೆಲ್ಲಿಂಗ್ ಕಾರು!

Published : Oct 14, 2026, 12:44 PM IST
Maruti Suzuki

ಸಾರಾಂಶ

ಸೆಪ್ಟೆಂಬರ್ 2026ರಲ್ಲಿ ಮಾರುತಿ ಸುಜುಕಿ ಬಲೆನೊ ದೇಶದ ಅತಿ ಹೆಚ್ಚು ಮಾರಾಟವಾದ ಕಾರಾಗಿ ಹೊರಹೊಮ್ಮಿದೆ. ಹೊಸ 3-ಸಿಲಿಂಡರ್ ಎಂಜಿನ್, ಅತ್ಯುತ್ತಮ ಮೈಲೇಜ್ ಮತ್ತು ವಿಭಾಗದಲ್ಲೇ ಮೊದಲ ಬಾರಿಗೆ ಲೆವೆಲ್-2 ADAS ತಂತ್ರಜ್ಞಾನವನ್ನು ಇದು ಹೊಂದಿದೆ. ₹5.99 ಲಕ್ಷದಿಂದ ಆರಂಭವಾಗುವ ಈ ಕಾರು ಪ್ರೀಮಿಯಂ ಇಂಟೀರಿಯರ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸೆಪ್ಟೆಂಬರ್ 2026ರ ಭಾರತೀಯ ವಾಹನ ಮಾರಾಟದ ಅಂಕಿಅಂಶಗಳು ಬಹಿರಂಗಗೊಂಡಿದ್ದು, ಮಾರುತಿ ಸುಜುಕಿಯ ಹೊಸ ಬಲೆನೊ ದೇಶದಲ್ಲೇ ಅತಿ ಹೆಚ್ಚು ಮಾರಾಟವಾದ ಕಾರಾಗಿ ಹೊರಹೊಮ್ಮಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಒಟ್ಟು 25,392 ಯುನಿಟ್‌ಗಳ ಬಲೆನೊ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟದ ಪ್ರಮಾಣ ದುಪ್ಪಟ್ಟಾಗಿದೆ. ಟಾಪ್-10 ಕಾರುಗಳ ಪಟ್ಟಿಯಲ್ಲಿ ಅತ್ಯಧಿಕ ವಾರ್ಷಿಕ ಬೆಳವಣಿಗೆ ದಾಖಲಿಸಿದ ಮಾದರಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಬೆಲೆ ಮತ್ತು ವೇರಿಯಂಟ್

2026ರ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್ ಎಕ್ಸ್‌ಶೋರೂಂ ಬೆಲೆ ₹5.99 ಲಕ್ಷದಿಂದ ಪ್ರಾರಂಭವಾಗಲಿದ್ದು, ಟಾಪ್ ವೆರಿಯೆಂಟ್ ಬೆಲೆ ₹10 ಲಕ್ಷದವರೆಗೆ ಇದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಹೊಸ ಬಲೆನೊವನ್ನು ಸಿಗ್ಮಾ, ಡೆಲ್ಟಾ, ಜೀಟಾ, ಆಲ್ಫಾ ಮತ್ತು ಆಲ್ಫಾ (ಒ) ಎಂಬ ಐದು ಪ್ರಮುಖ ರೂಪಾಂತರಗಳಲ್ಲಿ (Variants) ಮಾರುಕಟ್ಟೆಗೆ ತರಲಾಗಿದೆ.

ಹೊಸ ಎಂಜಿನ್ ಮತ್ತು ಅತ್ಯುತ್ತಮ ಮೈಲೇಜ್:

ಮಾರುತಿ ಸುಜುಕಿ ಈ ಹೊಸ ಮಾದರಿಯಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ಗಳನ್ನು ಸುಧಾರಿಸಿದೆ. ಮುಂಚಿನ 4-ಸಿಲಿಂಡರ್ ಎಂಜಿನ್ ಬದಲಿಗೆ ಹೊಸ 3-ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. E20 ಇಂಧನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಇಂಧನ ದಕ್ಷತೆ (Fuel Efficiency) ಗಮನಾರ್ಹವಾಗಿ ಹೆಚ್ಚಾಗಿದೆ. ಕಡಿಮೆ ಎಂಜಿನ್ ವೇಗದಲ್ಲೂ ಗರಿಷ್ಠ ಟಾರ್ಕ್ ದೊರೆಯುವುದರಿಂದ ನಗರ ಪ್ರದೇಶಗಳಲ್ಲಿ ಕಾರು ಚಾಲನೆ ಇನ್ನಷ್ಟು ಸುಲಭವಾಗಲಿದೆ.

  • ಪೆಟ್ರೋಲ್ ಮ್ಯಾನ್ಯುವಲ್ (MT): ಲೀಟರ್‌ಗೆ 23.80 ಕಿ.ಮೀ ಮೈಲೇಜ್.
  • ಪೆಟ್ರೋಲ್ ಆಟೋಮ್ಯಾಟಿಕ್ (AMT): ಲೀಟರ್‌ಗೆ 24.77 ಕಿ.ಮೀ ಮೈಲೇಜ್.
  • ಸಿಎನ್‌ಜಿ (CNG) ಆವೃತ್ತಿ: ಕೆಜಿಗೆ 33.61 ಕಿ.ಮೀ ಮೈಲೇಜ್.

ವಿಭಾಗದಲ್ಲೇ ಮೊದಲ ಬಾರಿಗೆ 'ಲೆವೆಲ್-2 ಎಡಿಎಎಸ್'

ಹೊಸ ಬಲೆನೊದ ಅತಿ ದೊಡ್ಡ ಆಕರ್ಷಣೆಯೆಂದರೆ ಅದರ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನ. B2 ವಿಭಾಗದ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ 'ಲೆವೆಲ್-2 ADAS' ಸೌಲಭ್ಯ ಪಡೆದ ಮೊದಲ ಕಾರು ಇದಾಗಿದೆ.

ಎಡಿಎಎಸ್ ವೈಶಿಷ್ಟ್ಯಗಳು: ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಲೇನ್ ನಿರ್ಗಮನ ಎಚ್ಚರಿಕೆ, ಫಾರ್ವರ್ಡ್ ಡಿಕ್ಕಿ ಎಚ್ಚರಿಕೆ , ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಹೈ-ಬೀಮ್ ಅಸಿಸ್ಟ್.

ಇತರ ರಕ್ಷಣಾ ವೈಶಿಷ್ಟ್ಯಗಳು: 6 ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ, ಹಿಲ್-ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ರಿಯರ್ ಡಿಫಾಗರ್.

ಇಂಟೀರಿಯರ್ :

ಹೊಸ ಬಲೆನೊ ಫೇಸ್‌ಲಿಫ್ಟ್ ಮಾದರಿಯಾಗಿದ್ದು, ಮುಂಭಾಗದ ಪ್ರೊಫೈಲ್‌ನಲ್ಲಿ ವಿಶಾಲವಾದ ಕ್ರೋಮ್ ಗ್ರಿಲ್, ನವೀಕರಿಸಿದ ಬಂಪರ್‌ಗಳು, ಹೊಸ ಫಾಗ್ ಲ್ಯಾಂಪ್‌ಗಳು ಮತ್ತು ಫೆಂಡರ್ ಗಾರ್ನಿಶ್ ನೀಡಲಾಗಿದೆ. ಇಂಟೀರಿಯರ್‌ನಲ್ಲಿ ಲೆಥೆರೆಟ್ ಅಪ್ಹೋಲ್ಸ್ಟರಿ, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ವೈರ್‌ಲೆಸ್ ಚಾರ್ಜಿಂಗ್, ಕ್ಲಾರಿಯನ್ (Clarion) ಪ್ರೀಮಿಯಂ ಸೌಂಡ್ ಸಿಸ್ಟಮ್, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್-ಅಪ್ ಡಿಸ್ಪ್ಲೇ (HUD) ಮತ್ತು ರಿಯರ್ ಎಸಿ ವೆಂಟ್ಸ್‌ಗಳಂತಹ ಪ್ರೀಮಿಯಂ ಸೌಕರ್ಯಗಳನ್ನು ಒದಗಿಸಲಾಗಿದೆ.

PREV
Read more Articles on
click me!

Recommended Stories

ಮಾರುತಿ ಎಲೆಕ್ಟ್ರಿಕ್‌ ಎಂಪಿವಿ, ಕ್ರೆಟಾ ಎಂಜಿನ್ ಇರುವ ಹ್ಯುಂಡೈ ಬಯಾನ್‌ ಎಂಟ್ರಿ! 500 ಕಿ.ಮೀ ರೇಂಜ್‌, ₹11 ಸಾವಿರಕ್ಕೆ ಬುಕ್ಕಿಂಗ್‌?
Hyundai Bayon: ಅದ್ಭುತ ನೋಟ - ಹೈಟೆಕ್ ವೈಶಿಷ್ಟ್ಯ ! ಹುಂಡೈನ ಹೊಸ ಎಸ್‌ಯುವಿ ಬುಕ್ಕಿಂಗ್ ಶುರು