
ಐಷಾರಾಮಿ ಲ್ಯಾಂಬೋರ್ಘಿನಿ ಕಾರಿಗೆ ಫಿದಾ ಆಗದವರಿಲ್ಲ, ಕೋಟ್ಯಾಂತರ ಮೌಲ್ಯದ ಈ ಕಾರನ್ನು ರಸ್ತೆಯಲ್ಲಿ ನೋಡಿ ಖುಷಿಪಡುವವರೇ ಹೆಚ್ಚು. ಅನೇಕರ ಪಾಲಿಗೆ ಇದೊಂದು ಕನಸು. ಇದನ್ನು ಖರೀದಿಸಲು ಸಾಧ್ಯವಾಗದೇ ಹೋದರೂ ಕನಿಷ್ಠ ಪಕ್ಷ ಒಮ್ಮೆ ಇದರಲ್ಲಿ ಕುಳಿತು ಓಡಾಡಬೇಕು ಎಂದು ಅನೇಕರ ಕಾರು ಪ್ರೇಮಿಗಳು ಆಸೆ ಪಡುತ್ತಾರೆ. ಆದರೆ ಇಲ್ಲೊಬ್ಬ ಯುವ ಮೆಕಾನಿಕ್ ಮಾತ್ರ, ಕಾರು ಖರೀದಿಸಲು ಸಾಧ್ಯವಾಗದಿದ್ದರೆ ಏನಂತೆ ಹಳೆಯ ಮಾರುತಿ 800 ಕಾರನ್ನು ಬಳಸಿ ಲ್ಯಾಂಭೋರ್ಘಿನಿಯನ್ನೇ ಹೋಲುವ ಕಾರೊಂದನ್ನು ಸಿದ್ಧಪಡಿಸಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ವೀಡಿಯೋ ನೋಡಿ ಫಿದಾ ಆಗಿದ್ದಾರೆ. ಯುವ ಮೆಕಾನಿಕ್ ಆರೀಫ್‌ನ ಪ್ರತಿಭೆಗೆ ಫಿದಾ ಆಗಿದ್ದಾರೆ.
ಹೌದು ಜಾರ್ಖಂಡ್‌ನ ಚಂಡಿಲ್‌ನ ನಿವಾಸಿಯಾಗಿರುವ ಆರೀಫ್ ಎಂಬುವವರೇ ಈ ರೀತಿ ಮಾರುತಿ 800 ಕಾರನ್ನು ತಮ್ಮ ಸ್ವಂತ ಪ್ರತಿಭೆ ಬಳಸಿ ಲ್ಯಾಂಬೋರ್ಘಿನಿ ಕಾರಾಗಿ ಬದಲಿಸಿದ ಯುವ ಇಂಜಿನಿಯರ್. ಈ ಕಾರಿನ ಬಹುತೇಕ ಡಿಸೈನ್ ಅನ್ನು ಇವರೇ ಮಾಡಿದ್ದು, ಈ ಕಾರಿಗಾಗಿ ಅಗತ್ಯ ಬಿಡಿ ಭಾಗಗಳನ್ನು ಆರೀಫ್ ಮಾರುಕಟ್ಟೆಯಿಂದ ಖರೀದಿಸಿದ್ದಾರೆ. ಸ್ಥಳೀಯ ಯುವಕನ ಈ ಸೃಜನಾತ್ಮಕ ಪ್ರತಿಭೆಗೆ ಜನ ಫಿದಾ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ಈತನ ಪ್ರತಿಭೆ ಹಾಗೂ ಸಮರ್ಪಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಹೀಗೆ ಪ್ರತಿಭೆ ಪ್ರದರ್ಶಿಸಿದ ಆರೀಫ್ ಅವರು ತರಬೇತಿ ಪಡೆದ ಮೆಕಾನಿಕ್ ಆಗಿದ್ದು, ಇವರು ತಮ್ಮ ತಾಂತ್ರಿಕ ಜ್ಞಾನ ಹಾಗೂ ಕಲ್ಪನೆಯನ್ನು ಬಳಸಿ ಹ್ಯಾಚ್‌ಬ್ಯಾಕ್ ಕಾರನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ ದುಬಾರಿ ಬಿಡಿಭಾಗಗಳನ್ನು ಖರೀದಿಸುವ ಬದಲು, ಆರಿಫ್ ವಾಹನವನ್ನು ನಿರ್ಮಿಸಲು ಹೆಚ್ಚಾಗಿ ತನ್ನದೇ ಆದ ಕರಕುಶಲತೆ ಬಳಸಿದ್ದಾರೆ.
ಇದನ್ನೂ ಓದಿ: ಕೋಲಾರ: ಬಂಗಾರದ ಕಿವಿಯೋಲೆಗಾಗಿ ವೃದ್ಧೆಯ ಕಿವಿಯನ್ನೇ ಕತ್ತರಿಸಿದ ಪಾಪಿಗಳು
ವರದಿಗಳ ಪ್ರಕಾರ, ಕನ್ನಡಿ, ಕಾರಿನ ಗ್ಲಾಸ್ ಮುಂತಾದ ಕೆಲವು ಮೂಲಭೂತ ವಸ್ತುಗಳನ್ನು ಮಾತ್ರ ಅವರು ಮಾರುಕಟ್ಟೆಯಿಂದ ಖರೀದಿಸಿದೆ. ಕಾರಿನ ದೇಹದ ವಿನ್ಯಾಸ ಮತ್ತು ಸ್ಟೈಲಿಂಗ್ ಅಂಶಗಳನ್ನು ಒಳಗೊಂಡಂತೆ ಉಳಿದ ರಚನೆಯನ್ನು ಆರಿಫ್ ಸ್ವತಃ ರಚಿಸಿದ್ದಾರೆ. ಮಾರುತಿ 800 ರ ಮೂಲ ಚೌಕಟ್ಟನ್ನು ಮಾರ್ಪಡಿಸುವ ಮೂಲಕ, ಅವರು ಐಷಾರಾಮಿ ಲಂಬೋರ್ಘಿನಿ ಮಾದರಿಗಳಿಂದ ಪ್ರೇರಿತವಾದ ದಿಟ್ಟ ಸ್ಪೋರ್ಟ್ಸ್ ಕಾರನ್ನು ನಿರ್ಮಿಸಿದ್ದಾರೆ. ಪರಿಣಾಮ ನೋಡುಗರ ತಲೆ ತಿರುಗಿಸುವಂತಹ ಕಾರು ರೆಡಿಯಾಗಿದೆ. ವರದಿಗಳ ಪ್ರಕಾರ ಈ ಕಾರನ್ನು ನಿರ್ಮಿಸುವುದಕ್ಕೆ ಸುಮಾರು 4 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ವರದಿಯಾಗಿದೆ. ವೀಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲೇ ನಿದ್ದೆಗೆ ಜಾರಿದ ಮಗು : ಕಾಣೆಯಾಗಿದ್ದಾನೆ ಅಂತ ಊರೆಲ್ಲಾ ಹುಡುಕಿ ಬೆಸ್ತು ಬಿದ್ದ ಕುಟುಂಬ
ಈ ಕಾರಿನ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೋಡುಗರು ಆರೀಫ್‌ನ ಪ್ರತಿಭೆಗೆ ಫಿದಾ ಆಗಿದ್ದಾರೆ. ವಿಶೇಷವಾಗಿ ವೃತ್ತಿಪರ ಆಟೋಮೊಬೈಲ್ ಕಾರ್ಯಾಗಾರದಲ್ಲಿ ಭಾಗಿಯಾಗದೆಯೇ ಅವರು ಈ ರೀತಿ ಅದ್ಭುತವಾದ ಕಾರನ್ನು ರೆಡಿ ಮಾಡಿರುವುದನ್ನು ನೋಡಿ ಜನ ಫಿದಾ ಆಗಿದ್ದಾರೆ. ಅನೇಕರು ಇದನ್ನು ದೇಸಿ ಲ್ಯಾಂಬೋರ್ಘಿನಿ ಎಂದು ಕರೆದರೆ ಮತ್ತೆ ಕೆಲವರು ಯುವ ಪ್ರತಿಭೆಯ ಅವಿಷ್ಕಾರಕ್ಕೆ ಮಾರು ಹೋಗಿದ್ದಾರೆ.
ಅನೇಕರು ಈತ ಯಾವುದು ಕಾರು ಕಂಪನಿಯ ಡಿಸೈನ್ ವಿಭಾಗದಲ್ಲಿ ಕೆಲಸ ಮಾಡಬೇಕಿತ್ತು, ಮೆಕಾನಿಕ್ ಶೆಡ್‌ನಲ್ಲಿ ಅಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.