ಒಂದು ಕೆಜಿ ಸಿಎನ್‌ಜಿಗೆ 34 ಕಿ.ಮೀ ಮೈಲೇಜ್! ನಿಮ್ಮ ಹಣ ಉಳಿಸಲಿವೆ ಈ 5 ಬಜೆಟ್ CNG ಕಾರುಗಳು

Published : Feb 26, 2026, 10:23 PM IST
Top 5 affordable cng cars

ಸಾರಾಂಶ

ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ, ಮಧ್ಯಮ ವರ್ಗದವರಿಗೆ ಸಿಎನ್‌ಜಿ ಕಾರುಗಳು ಉತ್ತಮ ಆಯ್ಕೆಯಾಗಿವೆ. ಈ ಲೇಖನದಲ್ಲಿ, ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿಯ ಟಾಪ್ 5 ಸಿಎನ್‌ಜಿ ಕಾರುಗಳಾದ ಸೆಲೆರಿಯೊ, ವ್ಯಾಗನ್ ಆರ್, ಆಲ್ಟೊ ಕೆ10, ಡಿಜೈರ್ ಮತ್ತು ಸ್ವಿಫ್ಟ್ ಬಗ್ಗೆ ಮಾಹಿತಿ ನೀಡಲಾಗಿದೆ.

ಬೆಂಗಳೂರು (ಫೆ.26): ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಬೆಲೆ ದುಬಾರಿಯಾಗಿರುವುದರಿಂದ, ಮಧ್ಯಮ ವರ್ಗದ ಜನರಿಗೆ ಸಿಎನ್‌ಜಿ ಕಾರುಗಳು ಅತ್ಯುತ್ತಮ ಆಯ್ಕೆಯಾಗಿವೆ. ಪೆಟ್ರೋಲ್‌ಗೆ ಹೋಲಿಸಿದರೆ ಸಿಎನ್‌ಜಿ ದರ ಕಡಿಮೆ ಇರುವುದು ಮಾತ್ರವಲ್ಲದೆ, ಇವುಗಳಲ್ಲಿ ಮೈಲೇಜ್ ಕೂಡ ಅಧಿಕ. ಭಾರತದ ಸಿಎನ್‌ಜಿ ಕಾರ್ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯೇ ಮೇಲುಗೈ ಸಾಧಿಸಿದೆ.

ಹೆಚ್ಚು ಮೈಲೇಜ್ ನೀಡುವ ಟಾಪ್ 5 ಸಿಎನ್‌ಜಿ ಕಾರುಗಳು

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio): ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರ್ ಎಂದರೆ ಅದು ಸೆಲೆರಿಯೊ. ಇದರ ಮೈಲೇಜ್ ಪ್ರತಿ ಕೆಜಿ ಸಿಎನ್‌ಜಿಗೆ 34.43 ಕಿ.ಮೀ ಇದೆ. ಇದರ VXI CNG ಮಾದರಿಯ ಎಕ್ಸ್ ಶೋರೂಮ್ ಬೆಲೆ ₹5.98 ಲಕ್ಷ ರೂಪಾಯಿ ಆಗಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ಲುಕ್ ಮತ್ತು ಫೀಚರ್ಸ್ ಬಯಸುವವರಿಗೆ ಇದು ಹೇಳಿ ಮಾಡಿಸಿದಂತಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್ (Maruti Suzuki WagonR): ಮಧ್ಯಮ ವರ್ಗದ ಕುಟುಂಬಗಳ ನೆಚ್ಚಿನ ಆಯ್ಕೆ ಈ ವ್ಯಾಗನ್ ಆರ್. ಇದು ಎರಡು ಸಿಎನ್‌ಜಿ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಪ್ರತಿ ಕೆಜಿಗೆ ಸಿಎನ್‌ಜಿಗೆ 34 ಕಿ.ಮೀ. ಮೈಲೇಜ್‌ ನೀಡುತ್ತದೆ. LXI CNG ಮಾದರಿಗೆ ₹5.89 ಲಕ್ಷ ಮತ್ತು VXI CNG ಮಾದರಿಗೆ ₹6.42 ಲಕ್ಷ (ಎಕ್ಸ್ ಶೋರೂಮ್) ರೂಪಾಯಿ ಇದೆ.

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10): ದೇಶದ ಎರಡನೇ ಅತಿ ಅಗ್ಗದ ಸಿಎನ್‌ಜಿ ಕಾರ್ ಇದಾಗಿದೆ. ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಬಯಸುವವರಿಗೆ ಇದು ಬೆಸ್ಟ್. ಪ್ರತಿ ಕೆಜಿ ಸಿಎನ್‌ಜಿಗೆ 33.85 ಕಿ.ಮೀ ಮೈಲೇಜ್‌ ನೀಡುತ್ತದೆ. LXI S-CNG ವೇರಿಯಂಟ್ ₹4.82 ಲಕ್ಷ ಹಾಗೂ VXI S-CNG ವೇರಿಯಂಟ್ ₹5.32 ಲಕ್ಷಕ್ಕೆ ಲಭ್ಯವಿದೆ.

ಮಾರುತಿ ಸುಜುಕಿ ಡಿಜೈರ್ (Maruti Suzuki Dzire): ಸೆಡಾನ್ ಕಾರುಗಳ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಡಿಜೈರ್ ಸಿಎನ್‌ಜಿಯಲ್ಲೂ ಲಭ್ಯವಿದೆ. ಪ್ರತಿ ಕೆಜಿ ಸಿಎನ್‌ಜಿಗೆ 33 ಕಿ.ಮೀ ಮೈಲೇಜ್‌ ನೀಡುತ್ತದೆ. VXI CNG ಮಾದರಿಗೆ ₹8.03 ಲಕ್ಷ ಹಾಗೂ ZXI CNG ವೇರಿಯಂಟ್‌ಗೆ ₹9.04 ಲಕ್ಷ ಬೆಲೆಯಿದೆ.

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift): ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಸ್ವಿಫ್ಟ್ ಅಧಿಪತ್ಯ ಮುಂದುವರಿದಿದೆ. ಪ್ರತಿ ಕೆಜಿ ಸಿಎನ್‌ಜಿಗೆ 32 ಕಿ.ಮೀ. ಮೈಕೇಜ್‌ ನೀಡುತ್ತದೆ. ಇದರ VXI CNG ಬೆಲೆ ₹7.45 ಲಕ್ಷದಿಂದ ಆರಂಭವಾಗಿ, ಟಾಪ್ ಎಂಡ್ ZXI CNG ಮಾದರಿಗೆ ₹8.39 ಲಕ್ಷದವರೆಗೆ ಇರುತ್ತದೆ.

 

PREV
Read more Articles on
click me!

Recommended Stories

ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ
ಟಾಪ್‌ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ: ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು: ಆಗಿದ್ದೇನು?