ವಿಂಡ್ಶೀಲ್ಡ್ ಸಮಸ್ಯೆ: 26,000 Sonata, Elantra sedan ಹಿಂಪಡೆದ ಹ್ಯುಂಡೈ!

By Suvarna NewsFirst Published Jan 19, 2022, 8:10 AM IST
Highlights

*ವಿಂಡ್‌ಶೀಲ್ಡ್‌ ಅಳವಡಿಕೆಯಲ್ಲಿ ದೋಷ
*ಸೊನಾಟ, ಎಲಾಂಟ್ರಾ, ಸಾಂಟಾ ಫೆ ಕಾರುಗಳನ್ನು ಹಿಂಪಡೆದ ವಿಂಡ್‌ಶೀಲ್ಡ್‌
*ಎನ್‌ಎಚ್‌ಟಿಎಸ್‌ಎ ವರದಿ ಆಧರಿಸಿ ಕ್ರಮ

Auto Desk: ಹ್ಯುಂಡೈ ಸೊನಾಟ(Hyundai Sonata), ಎಲಾಂಟ್ರಾ (Elantra) ಮತ್ತು ಸಾಂಟಾ ಫೆ (Santa Fe) ಮಾದರಿಗಳಲ್ಲಿ ವಿಂಡ್ಶೀಲ್ಡ್ (Windhsield) ಗಳನ್ನು ಸರಿಯಾಗಿ ಜೋಡಿಸಿಲ್ಲವಾದ್ದರಿಂದ, ಅವುಗಳು ಅಪಘಾತದ ವೇಳೆ ಸಡಿಲಗೊಳ್ಳುವ ಸಾಧ್ಯತೆಗಳಿವೆ.ಹ್ಯುಂಡೈ ಮೋಟಾರ್ ಕಂಪನಿ ಸುರಕ್ಷತಾ ಕಾರಣಗಳಿಗಾಗಿ  2020 ಹಾಗೂ 2021ರಲ್ಲಿ ಡೆಲಿವರಿ ಮಾಡಲಾಗಿರುವ ಎಲಾಂಟ್ರಾ, ಸಾಂಟಾ ಫೆ ಮತ್ತು ಸೊನಾಟಾ ಸೆಡಾನ್ಗಳನ್ನು ಹಿಂಪಡೆದಿದೆ. ಇಲ್ಲಿಯವರೆಗೆ ಒಟ್ಟು 26,413 ಕಾರುಗಳನ್ನು ಕಂಪನಿ ಹಿಂದಕ್ಕೆ ಪಡೆದಿದೆ. ಇದಕ್ಕೆ ಕಾರಣ ಸರಿಯಾಗಿ ಜೋಡಿಸದ ವಿಂಡ್ಶೀಲ್ಡ್ಗಳು. ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (ಎನ್ಎಚ್ಟಿಎಸ್ಎ) ಸಲ್ಲಿಸಿರುವ ವರದಿ ಪ್ರಕಾರ, ಸರಿಯಾಗಿ ಜೋಡಿಸದ ವಿಂಡ್ಶೀಲ್ಡ್, ಅಪಘಾತದ ವೇಳೆ ಸಡಿಲಗೊಳ್ಳಬಹುದು.

ಸುರಕ್ಷತಾ ಏಜೆನ್ಸಿಯ ವರದಿಯಲ್ಲಿ, ಪೂರೈಕೆದಾರರಾದ ಆಕ್ಸಾಲ್ಟಾ ಒದಗಿಸಿದ ಕ್ಲಿಯರ್ಕೋಟ್ ಪೇಂಟ್ನಲ್ಲಿ ನಾನ್ ಕನ್ಫೋರ್ಮಿಂಗ್ ಸಂಯೋಜಕವನ್ನು ಹಿನ್ನೆಲೆಯಲ್ಲಿ ವಿಂಡ್ಶೀಲ್ಡ್ ವಾಹನಕ್ಕೆ ಸರಿಯಾಗಿ ಅಂಟಿಕೊಂಡಿಲ್ಲ ಎಂದು ವಿವರಿಸಲಾಗಿದೆ. ಇದರಲ್ಲಿ ಇಂತಹ ಹ್ಯುಂಡೈ ಸೆಡಾನ್ ಕಾರುಗಳ ಚಾಲಕರು ವಿಂಡ್ಶೀಲ್ಡ್ನಲ್ಲಿ ಶಬ್ದ ಅಥವಾ ಅದರಿಂದ ನೀರು ಸೋರುವುದನ್ನು ಕಂಡಿದ್ದರೆ, ಅದು ಸಡಿಲ ವಿಂಡ್ಶೀಲ್ಡ್ನ ಸೂಚನೆಯಾಗಿರಬಹುದು ಎಂದು ಕೂಡ ವರದಿ ತಿಳಿಸಿದೆ. ಸದ್ಯ ಹ್ಯುಂಡೈ ಕಂಪನಿ 2020ರ ಅಕ್ಟೋಬರ್ 29ರಲ್ಲಿ ತಯಾರಾಗಿರುವ 95,96 2021 ಸೊನಾಟಾ ವಾಹನಗಳನ್ನು ಹಿಂಪಡೆದಿದೆ. ಇದಲ್ಲದೆ, 82,56 2021 ಎಲಾಂಟ್ರಾ ಸೆಡಾನ್ಗಳು, ಹಾಗೂ 8,56,1 2020 ಮತ್ತು 2021 ಸಾಂಟಾ ಫೆ ಮಾಡೆಲ್ಗಳನ್ನು ಹಿಂಪಡೆಯಲಾಗಿದೆ. 

ಇದನ್ನೂ ಓದಿ: Tata vs Hyundai ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ Ai3 ಮೈಕ್ರೋ SUV ಕಾರು, ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿ!

ಹ್ಯುಂಡೈ  2020ರ ಡಿಸೆಂಬರ್16ರ ನಂತರ ವಾಹನಗಳ ಮೇಲೆ "ಸುಕೋಸ್ಪೆಕ್ಟ್ ನಾನ್ಫಾರ್ಮ್" ಬಳಕೆ ಮಾಡುವುದನ್ನು ನಿಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ ವಿಂಡ್ಶೀಲ್ಡ್ ಸಮಸ್ಯೆಯಿಂದ ಯಾವುದೇ ಅಪಘಾತಗಳು ಅಥವಾ ಗಾಯಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಕಂಪನಿ ತಿಳಿಸಿದೆ. ಕಂಪನಿಯು ಫೆಬ್ರವರಿ 25ರ ನಂತರ ದೋಷಗಳು ಕಂಡುಬಂದಿರುವ ವಾಹನಗಳ ಬಗ್ಗೆ ಮಾಲೀಕರಿಗೆ ಸೂಚನೆ ನೀಡಲು ಆರಂಭಿಸಲಿದೆ. ಮಾಲೀಕರು ತಮ್ಮ ವಾಹನವನ್ನು ಡೀಲರ್ಗಳ  ಬಳಿಗೆ ಕೊಂಡೊಯ್ದ ನಂತರ ಕಂಪನಿಯ ಡೀಲರ್ಗಳು ವಾಹನಗಳ ವಿಂಡ್ಶೀಲ್ಡ್ಗಳನ್ನು ಉಚಿತವಾಗಿ ತೆಗೆದುಹಾಕಿ ಮತ್ತು ಸರಿಯಾದ ರೀತಿಯಲ್ಲಿ ಪುನಃ ಅಳವಡಿಸಲಿದ್ದಾರೆ. ಮಾಲೀಕರು ತಮ್ಮ ವಾಹನವನ್ನು ಹಿಂದಿರುಗಿಸಬೇಕೆ ಎಂಬುದನ್ನು ಅರಿಯಲು ಎನ್ಎಚ್ಟಿಎಸ್ಎ (NHTSA) ಮರುಪಡೆಯುವಿಕೆ ವೆಬ್ಸೈಟ್ ಅನ್ನು ಸಹ ಪರಿಶೀಲಿಸಬಹುದು.

ಇತ್ತೀಚೆಗೆ, ಮರ್ಸಿಡೀಸ್ ಬೆನ್ಸ್ ಕಂಪನಿ ಕೂಡ ಅಮೆರಿಕದಲ್ಲಿನ ಕಾರುಗಳನ್ನು ಸುರಕ್ಷತಾ ಕಾರಣಗಳಿಂದಾಗಿ ಹಿಂಪಡೆದಿದೆ. ಇ-ಕಾಲ್ ಕಾರ್ಯನಿರ್ವಹಣೆಯ ಸಮಸ್ಯೆಯಿಂದಾಗಿ  2021ರ ಫೆಬ್ರವರಿ 15ರಿಂದ ಮತ್ತು ಡಿಸೆಂಬರ್ 4ರ ನಡುವೆ ತಯಾರಾದ 1,161  ಎಸ್500 ಮಾದರಿಗಳು ಹಾಗೂ 2021ರ  ಫೆಬ್ರವರಿ 15ರಿಂದ ಡಿಸೆಂಬರ್ 4ರ ನಡುವೆ ತಯಾರಿಸಲಾದ 77 ಎಸ್580 ಮಾದರಿಗಳನ್ನು ಹಿಂಪಡೆಯಲಾಗಿದೆ. 
ಇದರಲ್ಲಿ 2022 ಈಕ್ಯೂಎಸ್450 ಮಾದರಿಯನ್ನು ಸಹ ಒಳಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತೆ ಆಡಳಿತ (NHTSA) ತಿಳಿಸಿದೆ.

ಇದನ್ನೂ ಓದಿ: Auto Sales 2021: ಸಾಕಷ್ಟು ಅಡೆತಡೆಗಳ ನಡುವೆಯೂ ಶೇ.27ರಷ್ಟು ಮಾರಾಟದ ಪ್ರಗತಿ ಸಾಧಿಸಿದ ಆಟೊಮೊಬೈಲ್ ಕ್ಷೇತ್ರ!

ಕೆಲ ತಿಂಗಳ ಹಿಂದೆ ಹ್ಯುಂಡೈ ಐಯಾನಿಕ್ ಕಾರುಗಳನ್ನು ಕೂಡ ಸುರಕ್ಷತಾ ಲೋಪದ ಕಾರಣಗಳಿಂದಾಗಿ ಹಿಂಪಡೆಯಲಾಗಿತ್ತು. ಇದರಲ್ಲಿ ಆಕ್ಸಲರೇಷನ್ ಸಮಸ್ಯೆ ಕಾಣಿಸಿಕೊಂಡಿದ್ದು, ಡಿಸೆಂಬರ್ ತಿಂಗಳಲ್ಲಿ ಸುಮಾರು 2500 ಕಾರುಗಳನ್ನು ಕಂಪನಿ ಹಿಂಪಡೆದಿತ್ತು. ಈ ಸಮಸ್ಯೆಯಿಂದ ಅಪಘಾತದ ಸಂಭವಗಳು ಹೆಚ್ಚಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿತ್ತು. 2016ರಿಂದ 2019ರ ನಡುವೆ ತಯಾರಿಸಿ,  ವಿತರಣೆ ಮಾಡಲಾದ ಕಾರುಗಳನ್ನು ಹಿಂಪಡೆಯುವುದಾಗಿ ಕಂಪನಿ ಪ್ರಕಟಿಸಿತ್ತು. ಈ ಎಲೆಕ್ಟ್ರಿಕ್ ಕಾರು, ಚಾಲಕರು ಆಕ್ಸಲೇಟರ್ ಪೆಡಲ್ ಇಂದ ಕಾಲು ತೆಗೆದ ಮೇಲೆ ಆಕ್ಸಲೇಟರ್ ಮುಂದುವರಿಯುವ ಸಮಸ್ಯೆ ಎದುರಿಸುತ್ತಿತ್ತು.  

click me!