SsangYong Motor sold ಸಾಲದ ಸುಳಿಯಲ್ಲಿದ್ದ ಮಹೀಂದ್ರ ಒಡೆತನದ ಸ್ಸಾಂಗ್ಯಾಂಗ್ ಮೋಟಾರ್ಸ್ ಮಾರಾಟ!

By Suvarna NewsFirst Published Jan 10, 2022, 4:00 PM IST
Highlights
  • ಮಹೀಂದ್ರ ಒಡೆತನದ ಸ್ಸಾಂಗ್ಯಾಂಗ್ ಮೋಟಾರ್ಸ್‌ಗೆ ಹೊಸ ಮಾಲೀಕ
  • 2010ರಲ್ಲಿ ಸೌತ್ ಕೊರಿಯಾದ ಸ್ಸಾಂಗ್ಯಾಂಗ್ ಖರೀದಿಸಿದ್ದ ಮಹೀಂದ್ರ
  • ಸಾಲದ ಸುಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸುಲುಕಿದ ಸ್ಸಾಂಗ್ಯಾಂಗ್

ನವದೆಹಲಿ(ಜ.10):  ಭಾರತದ ಮಹೀಂದ್ರ ಅಂಡ್ ಮಹೀಂದ್ರ(Mahindra & Mahindra) ಆಟೋಮೊಬೈಲ್ ಕಂಪನಿ ದೇಶ ವಿದೇಶಗಳಲ್ಲಿ ತನ್ನ ವ್ಯಾಪಾರ ವಹಿವಾಟು ನಡೆಸುತ್ತಿದೆ. ಹೀಗೆ ಸಾಮ್ರಾಜ್ಯ ವಿಸ್ತರಣೆಯಲ್ಲಿ ಮಹೀಂದ್ರ ಸೌತ್ ಕೊರಿಯಾದ ಅತೀ ದೊಡ್ಡ ಆಟೋಮೊಬೈಲ್ ಕಂಪನಿ ಸ್ಸಾಂಗ್ಯಾಂಗ್ ಮೋಟಾರ್ಸ್(SsangYong Motor) ಖರೀದಿಸಿ ವಹಿವಾಟು ಆರಂಭಿಸಿತ್ತು. ಆದರೆ ಕಳೆದ 6 ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿದ ಸ್ಸಾಂಗ್ಯಾಂಗ್ ಮೋಟಾರ್ಸ್‌ನ್ನು ಮಹೀಂದ್ರ ನಷ್ಟ ತಾಳಲಾರದೆ ಮಾರಾಟ ಮಾಡಿದೆ.

ಸ್ಸಾಂಗ್ಯಾಂಗ್ ಮೋಟಾರ್ಸ್‌ನ್ನು ಮಹೀಂದ್ರ 254.56 ಮಿಲಿಯನ್ ಅಮೆರಿಕ ಡಾಲರ್ ಮೊತ್ತಕ್ಕೆ ಮಾರಾಟ ಮಾಡಿದೆ. ಸೌತ್ ಕೊರಿಯಾದ(South Korea) ಸ್ಥಳೀಯ ಸಂಸ್ಥೆಯೊಂದು ಸ್ಸಾಂಗ್ಯಾಂಗ್ ಮೋಟಾರ್ಸ್ ಸಂಸ್ಥೆಯನ್ನು ಖರೀದಿಸಿದೆ. ಸಾಲದ(loan) ಮೇಲೆ ಸಾಲದಲ್ಲಿದ್ದ ಸ್ಸಾಂಗ್ಯಾಂಗ್ ಮೋಟಾರ್ಸನ್ನು 2020ರಲ್ಲಿ ದಿವಾಳಿ(bankruptcy) ಎಂದು ಸೌತ್ ಕೊರಿಯಾ ಅಪೆಕ್ಸ್ ಬ್ಯಾಂಕ್ ಘೋಷಿಸಿತ್ತು. ಬಳಿಕ ಸ್ಸಾಂಗ್ಯಾಂಗ್ ಮೋಟಾರ್ಸ್ ಮಾರಾಟ ಮಾಡಲು ಮಹೀಂದ್ರ ಆಟೋ ಪರದಾಡಿತ್ತು. ಸೂಕ್ತ ಖರೀದಿದಾರರಿಲ್ಲದೆ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಮಹೀಂದ್ರ ನಷ್ಟದಲ್ಲೇ ಸ್ಸಾಂಗ್ಯಾಂಗ್ ಮೋಟಾರ್ಸ್ ಮಾರಾಟ ಮಾಡಿದೆ.

Mahindra Cars ಹೊಸ ಲೋಗೋದೊಂದಿಗೆ ಬಿಡುಗಡೆಯಾಗಲಿದೆ 2022ರ ಮಹೀಂದ್ರ XUV300 ಫೇಸ್‌ಲಿಫ್ಟ್!

2020ರಲ್ಲಿ ಭಾರತದ ಅಟೋ ದಿಗ್ಗಜ ಮಹೀಂದ್ರ ಅಂಡ್ ಮಹೀಂದ್ರ ಸೌತ್ ಕೊರಿಯಾ ಸ್ಸಾಂಗ್ಯಾಂಗ್ ಮೋಟಾರ್ಸ್ ಖರೀದಿ ಮಾಡಿತ್ತು. ಭವಿಷ್ಯದಲ್ಲಿ ಆಟೋ ಉದ್ಯಮ ವಿಸ್ತರಿಸುವ ಸೌತ್ ಕೊರಿಯಾ ಮೂಲಕ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಆಟೋ ಉದ್ಯಮವನ್ನು ಬಲಿಷ್ಠಗೊಳಿಸಲು ಮಹೀಂದ್ರ ಸ್ಸಾಂಗ್ಯಾಂಗ್ ಮೋಟಾರ್ಸ್ ಖರೀದಿ ಮಾಡಿತು. ಆದರೆ ಈ ಖರೀದಿಯಿಂದ ಮಹೀಂದ್ರಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. 

2020ರಲ್ಲಿ ಮಹೀಂದ್ರ ಸ್ಸಾಂಗ್ಯಾಂಗ್ ಮೋಟಾರ್ಸ್‌ಗೆ ಹಣ ಹೂಡಿಕೆ ಮಾಡುವುದನ್ನು ನಿಲ್ಲಿಸಿತು. 2016ರಿಂದಲೇ ನಷ್ಟದಲ್ಲಿದ್ದ ಕಂಪನಿಗೆ ಮಹೀಂದ್ರ ಬಂಡವಾಳ ಹೂಡಿಕೆ ಮಾಡಿ ಚೇತರಿಕೆ ನೀಡುವ ಪ್ರಯತ್ನ ಮಾಡಿತು. ಆದರೆ ಮಾರಾಟ ಕುಸಿತ ಸಾಲದ ಹೊರೆಯಿಂದ ಸ್ಸಾಂಗ್ಯಾಂಗ್ ಮೋಟಾರ್ಸ್ ನಷ್ಟದ ಮೊತ್ತ ಹೆಚ್ಚಾಯಿತು.

Mahindra Electric Vehicles ಹೊಸ ವರ್ಷಕ್ಕೆ ಮಹೀಂದ್ರ ಬಂಪರ್ ಗಿಫ್ಟ್, 6 ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ತಯಾರಿ!

2019 ಹಾಗೂ 2020 ರಲ್ಲಿ ಕೊರೋನಾ ಹೊಡೆತಕ್ಕೆ ಸಿಲುಕಿ ಕಂಪನಿ ನಲುಗಿತು. 2021ರಲ್ಲಿ ಸ್ಸಾಂಗ್ಯಾಂಗ್ ಮೋಟಾರ್ಸ್ ಚೇತರಿಸಿಕೊಳ್ಳಲಾರದಷ್ಟು ನಷ್ಟಕ್ಕೆ ತಳ್ಳಲ್ಪಟ್ಟಿತು. 2020ರಲ್ಲಿ ಸೌತ್ ಕೊರಿಯಾ ಮೌಲ್ಯ 100 ಬಿಲಿಯನ್ ವೊನ್ ಮೊತ್ತ ಸಾಲ ಉಳಿಸಿಕೊಂಡಿತ್ತು. ಈ ಸಂಖ್ಯೆ 2021ಕ್ಕೆ 238 ಬಿಲಿಯನ್ ವೊನ್‌ಗೆ ಏರಿಕೆಯಾಗಿತ್ತು. 2021ರಲ್ಲಿ ಸ್ಸಾಂಗ್ಯಾಂಗ್ ಮೋಟಾರ್ಸ್ ವಾಹನ ಮಾರಾಟ ಶೇಕಡಾ 21 ರಷ್ಟು ಕುಸಿತ ಕಂಡಿತ್ತು. 

ನಷ್ಟದ ಕಂಪನಿ ಖರೀದಿಗೆ ಹಿಂದೇಟು:
2020ರಿಂದ ಮಹೀಂದ್ರ ಸ್ಸಾಂಗ್ಯಾಂಗ್ ಮೋಟಾರ್ಸ್ ಮಾರಾಟ ಮಾಡಲು ಪ್ರಯತ್ನಿಸಿತು. ಆದರೆ ಈಗಾಗಲೇ 3 ಮಾಲೀಕರನ್ನು ಕಂಡರೂ ಚೇತರಿಕೆ ಕಾಣದ ಸ್ಸಾಂಗ್ಯಾಂಗ್ ಮೋಟಾರ್ಸ್ ಖರೀದಿಗೆ ಎಲ್ಲಾ ಆಟೋ ಮೊಬೈಲ್ ಕಂಪನಿ ಹಿಂದೇಟು ಹಾಕಿತ್ತು. ಇದರ ನಡುವೆ ಬಹುಪಾಲ ಹೊಂದಿದ್ದ ಮಹೀಂದ್ರ ಹಾಗೂ ಸಣ್ಣ ಷೇರು ಹೊಂದಿದ್ದ ಸ್ಸಾಂಗ್ಯಾಂಗ್ ಮೋಟಾರ್ಸ್ ನಡುವಿನ ಕಲಹ ಕೂಡ ಮಾರಾಟಕ್ಕೆ ಅಡ್ಡಿಯಾಯಿತು. ಕೊನೆಗೂ ಮಹೀಂದ್ರ ಸ್ಸಾಂಗ್ಯಾಂಗ್ ಮೋಟಾರ್ಸ್ ಕಂಪನಿಯನ್ನು ಭಾರಿ ನಷ್ಟದೊಂದಿಗೆ ಮಾರಾಟ ಮಾಡಿದೆ.

ಸ್ಸಾಂಗ್ಯಾಂಗ್ ಮೋಟಾರ್ಸ್‌ಗೆ 4ನೇ ಮಾಲೀಕ:
1950ರಲ್ಲಿ ಡಾಂಗ್ ಎ ಮೋಟಾರ್ಸ್ ಕಂಪನಿ ಸ್ಥಾಪನೆಯಾಗಿತ್ತು. ಸೌತ್ ಕೊರಿಯಾದಲ್ಲಿ ಆರಂಭಗೊಂಡ ಈ ಮೋಟಾರ್ಸ್ ಹಲವು ದೇಶಗಳಲ್ಲಿ ತನ್ನ ಬಲಿಷ್ಠ SUV ಹಾಗೂ MPV ವಾಹನ ಮೂಲಕ ಹೆಸರುವಾಸಿಯಾಗಿತ್ತು. ಮಾರಾಟದಲ್ಲೂ ಉತ್ತಮ ಸಾಧನೆ ಮಾಡಿತ್ತು. ಆದರೆ ಹ್ಯುಂಡೈ ಸೇರಿದಂತೆ ಹಲವು ಸೌತ್ ಕೊರಿಯಾ ವಾಹನಗಳ ಪೈಪೋಟಿಯಿಂದ ಡಾಂಗ್ ಎ ಮೋಟಾರ್ಸ್ ನಷ್ಟಕ್ಕೆ ಸಿಲಿಕು. ಹೀಗಾಗಿ 1988ರಲ್ಲಿ ಸ್ಸಾಂಗ್ಯಾಂಗ್ ಮೋಟಾರ್ಸ್ ಈ ಸಂಸ್ಥೆಯನ್ನು ಖರೀದಿ ಮಾಡಿತು. 2010ರಲ್ಲಿ ನಷ್ಟದಲ್ಲಿದ್ದ ಸ್ಸಾಂಗ್ಯಾಂಗ್ ಮೋಟಾರ್ಸ್ ಕಂಪನಿಯನ್ನು ಭಾರದ ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಖರೀದಿಸಿತು. 2016ರ ವರೆಗೆ ಹೆಚ್ಚು ನಷ್ಟ ಹಾಗೂ ಲಾಭವಿಲ್ಲದೆ ಸಾಗಿದ ಸ್ಸಾಂಗ್ಯಾಂಗ್ ಮೋಟಾರ್ಸ್ ಬಳಿಕ ನಷ್ಟಕ್ಕೆ ಸಿಲುಕಿತು. ಇದೀಗ ಸೌತ್ ಕೊರಿಯಾ ಸ್ಥಳೀಯ ಸಂಸ್ಥೆಯೊಂದು ಸ್ಸಾಂಗ್ಯಾಂಗ್ ಮೋಟಾರ್ಸ್ ಖರೀದಿಸಿದೆ. ಈ ಮೂಲಕ ಡಾಂಗ್ ಎ ಮೋಟಾರ್ಸ್ ಸಂಸ್ಥೆ 4ನೇ ಮಾಲೀಕರನ್ನು ಕಾಣುತ್ತಿದೆ.

click me!