Electric Car ಕೈಗೆಟುಕುವ ದರದ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್!

By Suvarna News  |  First Published Mar 26, 2022, 4:07 PM IST
  • ಮಹೀಂದ್ರ ಎಲೆಕ್ಟ್ರಿಕ್ ಕಾರುಗಳ ಟೀಸರ್ ಬಿಡುಗಡೆ
  • ಈ ಟೀಸರ್‌ನಲ್ಲಿ ಕಾಣಿಸಿಕೊಂಡ KUV100 ಇವಿ ಕಾರು ಶೀಘ್ರದಲ್ಲಿ
  • ನಾಲ್ಕು ಎಲೆಕ್ಟ್ರಿಕ್ ಕಾರುಗಳ ಪೈಕಿ KUV100 ಇವಿ ಬಿಡುಗಡೆ ತಯಾರಿ
     

ನವದೆಹಲಿ(ಮಾ.26): ಭಾರತದ ಎಲೆಕ್ಟ್ರಿಕ್ ಕಾರು  ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಟಾಟಾ ಮೋಟಾರ್ಸ್‌ಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಹೀಂದ್ರ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಗೆ ತಯಾರಿ ನಡೆಸಿದೆ. ಈಗಾಗಲೇ ಮಹೀಂದ್ರ ಎಲೆಕ್ಟ್ರಿಕ್ ಕಾರುಗಳ ಟೀಸರ್ ಬಿಡುಗಡೆ ಮಾಡಿದ್ದು ಜುಲೈ ತಿಂಗಳಲ್ಲಿ ಅನಾವರಣಗೊಳ್ಳಲಿದೆ. ಈ ನಾಲ್ಕು ಕಾರುಗಳ ಪೈಕಿ ಮಹೀಂದ್ರ KUV100 ಎಲೆಕ್ಟ್ರಿಕ್ ಇದೇ ವರ್ಷ ಬಿಡುಗಡೆಯಾಗಲಿದೆ.

ಜುಲೈ ತಿಂಗಳಲ್ಲಿ ಮಹೀಂದ್ರ ನಾಲ್ಕು ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸುತ್ತಿದೆ. ಇದರಲ್ಲಿ ಆಟೋ ಎಕ್ಸ್‌ಪೋದಲ್ಲಿ ಈಗಾಗಲೇ ಪರಿಚಯಿಸಲಾದ ಮಹೀಂದ್ರ KUV100 ಇವಿ ಕಾರನ್ನು ಅತೀ ಶೀಘ್ರದಲ್ಲೇ ಬಿಡುಗಡೆ ಮಾಡಲು ಮಹೀಂದ್ರ ಮುಂದಾಗಿದೆ.

Tap to resize

Latest Videos

ಮಹೀಂದ್ರ KUV100 ಇವಿ ಕಾರಿನ ಬೆಲೆ 8.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಮಹೀಂದ್ರ KUV100 ಇವಿ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಮೈಲೇಜ್ ನೀಡಲಿದೆ. ಅಂದಾಜು ಬೆಲೆಯಲ್ಲಿ ಈ ಕಾರು ಬಿಡುಗಡೆಯಾದರೆ  ಇದು ಕೈಗೆಟುಕುವ ದರದ ಕಾರಾಗಿ ಹೊರಹೊಮ್ಮಲಿದೆ.ಇನ್ನು ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಕೂಡ ಬಿಡುಗಡೆಯಾಗುತ್ತಿದೆ. ಆದರೆ ಈ ಕಾರು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 

ಮಹೀಂದ್ರಾ ಥಾರ್‌ನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಧನ್ಯವಾದ ಅರ್ಪಿಸಿದ ಆನಂದ್ ಮಹೀಂದ್ರ

ಕೊರೋನಾ ವೈರಸ್ ಸೇರಿದಂತೆ ಇತರ ಕಾರಣಗಳಿಂದ ಮಹೀಂದ್ರ ಕೆಯುವಿ 100 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ ವಿಳಂಬವಾಗಿದೆ. ಇದೀಗ ಇದರ ಜೊತೆಗೆ ಮತ್ತೆ ಮೂರು ಎಲೆಕ್ಟ್ರಿಕ್ ಕಾರು ಅನಾವರಣಗೊಳ್ಳಲಿದೆ. ಈ ಮೂಲಕ ದೇಶದಲ್ಲಿ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳಿಗೆ ಮಹೀಂದ್ರ ಟಕ್ಕರ್ ನೀಡಲಿದೆ.

ಮಹೀಂದ್ರಾ ಕಂಪನಿ ಹೊಸ ಲಾಂಛನ
ಭಾರತದ ಜನಪ್ರಿಯ ವಾಹನ ತಯಾರಿಕಾ ಕಂಪನಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ನೂತನ ಲೋಗೋ ದಲ್ಲಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.   ಎಕ್ಸ್‌ಯುವಿ 700 ಎಸ್‌ಯುವಿ ವಾಹನದಲ್ಲಿ ಹೊಸ ಲೋಗೋ ಮೂಲಕ ಬಿಡುಗಡೆಯಾಗಿದೆ. 2022ರ ಒಳಗಾಗಿ 823 ನಗರಗಳ 1300 ಘಟಕಗಳ ಎಸ್‌ಯುವಿ ವಾಹನಗಳ ಮೇಲೆ ಈ ಹೊಸ ಲೋಗೋ ಕಾಣಿಸಿಕೊಂಡಿದೆ.  ಮುಂಬರುವ ದಿನಗಳಲ್ಲಿ ವಾಣಿಜ್ಯ ಮತ್ತು ಕೃಷಿ ಸಂಬಂಧಿ ವಾಹನಗಳಲ್ಲೂ ಲೋಗೋ ಕಾಣಿಸಲಿದೆ. ಹೊಸ ಲೋಗೋವು ಇಂಗ್ಲಿಷ್‌ನ ‘ಎಂ’ (ಮಹೀಂದ್ರಾ) ಅಕ್ಷರವನ್ನು ಹೋಲುವಂತಿದೆ. ಹಾಲಿ ಇರುವ ಲೋಗೋವನ್ನು 2000ನೇ ಇಸವಿಯಲ್ಲಿ ಪರಿಚಯಿಸಲಾಗಿತ್ತು. ಸ್ಕಾರ್ಪಿಯೋ ವಾಹನದಲ್ಲಿ 2002ರಲ್ಲಿ ಮೊದಲ ಬಾರಿಗೆ ಲೋಗೋ ಕಾಣಿಸಿಕೊಂಡಿತ್ತು.

ಪ್ರೋತ್ಸಾಹ ಧನಕ್ಕೆ ಟಾಟಾ, ಮಹೀಂದ್ರಾ, ಹ್ಯುಂಡೈ ಆಯ್ಕೆ: ಮಾರುತಿ ಪಟ್ಟಿಯಿಂದ ಹೊರಗೆ!

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಸುಝುಕಿ ಇಂಡಿಯಾ ತನ್ನ ಕಾರುಗಳ ಬೆಲೆಯನ್ನು ಶೇ.4.3ರವರೆಗೂ ಹೆಚ್ಚಿಸಿದೆ. ಮತ್ತೊಂದೆಡೆ ಮಹೀಂದ್ರಾ ಕಂಪನಿ ಕೂಡಾ ವಿವಿಧ ಮಾದರಿಯ ಕಾರುಗಳ ಬೆಲೆಯಲ್ಲಿ ಗಣನೀಯ ಏರಿಕೆ ಮಾಡಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಎರಡೂ ಕಂಪನಿಗಳು ಹೇಳಿವೆ. ಮಾರುತಿ ಸುಝುಕಿ ಇಂಡಿಯಾ, ಆಲ್ಟೋದಿಂದ ಎಸ್‌-ಕ್ರಾಸ್‌ನಂತಹ ವಿವಿಧ ಶ್ರೇಣಿಯ ಕಾರನ್ನು 3.15 ಲಕ್ಷದಿಂದ 12.56 ಲಕ್ಷ ರು ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತದೆ. ಕಂಪನಿ ಜನವರಿಯಲ್ಲಿ ಶೇ. 1.4, ಏಪ್ರಿಲ್‌ನಲ್ಲಿ ಶೇ. 1.6 ಹಾಗೂ ಸೆಪ್ಟೆಂಬರ್‌ನಲ್ಲಿ ಶೇ. 1.9 ಒಟ್ಟು ಶೇ. 4.9 ರಷ್ಟುಬೆಲೆಯಲ್ಲಿ ಏರಿಕೆ ಮಾಡಿತ್ತು. ಇದೀಗ ನಾಲ್ಕನೇ ಬಾರಿ ಹೆಚ್ಚಳ ಮಾಡಿದೆ.

ಮಹೀಂದ್ರಾ ಫೈನಾನ್ಸ್‌ನಿಂದ ವಾಹನ ಲೀಸ್‌ ಮತ್ತು ಚಂದಾದಾರಿಕೆ
ಮಹೇಂದ್ರ ಫೈನಾನ್ಸ್‌ ಸಂಸ್ಥೆ ತನ್ನ ಗ್ರಾಹಕರಿಗೆ ವಾಹನ ಲೀಸ್‌ ಹಾಗೂ ಸಬ್‌ಸ್ಕಿ್ರಪ್ಶನ್‌ ನೀಡುವ ಸಂಸ್ಥೆಯನ್ನು ಆರಂಭಿಸಿದೆ. ಅದರ ಹೆಸರು ಕ್ವಿಕ್‌ಲಿಜ್‌. ಈ ಕ್ವಿಕ್‌ಲಿಜ್‌ ಮೂಲಕ ನಿರ್ದಿಷ್ಟಕಾಲಾವಧಿಗೆ ಮಾಲೀಕತ್ವ ಇಲ್ಲದೇ ವಿವಿಧ ಬ್ರ್ಯಾಂಡ್‌ಗಳ ಹೊಸ ವಾಹನಗಳನ್ನು ಲೀಸ್‌ ಅಥವಾ ಸಬ್‌ಸ್ಕಿ್ರಪ್ಶನ್‌ ಮೇಲೆ ಪಡೆಯಬಹುದು. ಬಳಿಕ ಹಿಂತಿರುಗಿಸಬಹುದು. ಇದರ ನೋಂದಣಿ, ವಿಮೆ, ನಿರ್ವಹಣೆ, ರೋಡ್‌ ಸೈಡ್‌ ಅಸಿಸ್ಟೆನ್ಸ್‌ ಇತ್ಯಾದಿ ನೆರವುಗಳನ್ನು ಕಂಪನಿಯೇ ನೀಡುತ್ತದೆ. ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್‌ ಸೇರಿದಂತೆ 30 ಕಡೆ ಈ ಸೇವೆಯನ್ನು ಕಂಪನಿ ನೀಡಲಿದೆ.

click me!