ಮಹೀಂದ್ರಾ ಆ್ಯಂಡ್ ಮಹೀಂದ್ರಾ (Mahindra and Mahindra) ತನ್ನ ಬೊಲೆರೊ (bolero) ಮತ್ತು ಬೊಲೆರೊ ನಿಯೊ (Bolero Nio) ಎಸ್ಯುವಿಗಳ (SUV) ಬೆಲೆ ಏರಿಕೆಯನ್ನು ಘೋಷಿಸಿದೆ. ಈ ವಾಹನಗಳು ಇತ್ತೀಚೆಗೆ ಬ್ರ್ಯಾಂಡ್ನ 'ಟ್ವಿನ್ ಪೀಕ್ಸ್' (Twin Peaks)ಲೋಗೋದೊಂದಿಗೆ ಅಪ್ಡೇಟ್ ಆಗಿವೆ.
ಮಹೀಂದ್ರಾ ಆ್ಯಂಡ್ ಮಹೀಂದ್ರಾ (Mahindra &Mahindra) ತನ್ನ ಬೊಲೆರೊ (bolero) ಮತ್ತು ಬೊಲೆರೊ ನಿಯೊ (Bolero Nio) ಎಸ್ಯುವಿಗಳ (SUV) ಬೆಲೆ ಏರಿಕೆಯನ್ನು ಘೋಷಿಸಿದೆ. ಈ ವಾಹನಗಳು ಇತ್ತೀಚೆಗೆ ಬ್ರ್ಯಾಂಡ್ನ 'ಟ್ವಿನ್ ಪೀಕ್ಸ್' (Twin Peaks)ಲೋಗೋದೊಂದಿಗೆ ಅಪ್ಡೇಟ್ ಆಗಿವೆ. ಬೊಲೆರೊ ಮತ್ತು ಬೊಲೆರೊ ನಿಯೊ ಕ್ರಮವಾಗಿ 20,000 ರೂ. ಮತ್ತು 22,000 ರೂ. ದುಬಾರಿಯಾಗಿದೆ, ಹೆಚ್ಚುತ್ತಿರುವ ಇನ್ಪುಟ್ ವೆಚ್ಚದಿಂದ ವಾಹನಗಳ ದರ ಹೆಚ್ಚಳ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಮಹೀಂದ್ರಾ ದೀರ್ಘ ಚಲನೆಯ ಬೊಲೆರೊ ಎಸ್ಯುವಿಯನ್ನು 3 ವೇರಿಯಂಟ್ಗಳಲ್ಲಿ ನೀಡುತ್ತಿದೆ – ಬಿ4 (B4), ಬಿ6 (B6), ಮತ್ತು ಬಿ6(0) (B6(O)). ಕಂಪನಿ B4 ಮತ್ತು B6(O) ವೇರಿಯಂಟ್ಗಳ ಬೆಲೆಯನ್ನು ಹೆಚ್ಚಳ ಮಾಡಿದೆ.
ಕಳೆದ ಜುಲೈನಲ್ಲಿ ಬಿಡುಗಡೆಯಾದ ಬೊಲೆರೋ ನಿಯೋ (Bolero Neo), ಪ್ರಸ್ತುತ ನಾಲ್ಕು ವೇರಿಯಂಟ್ಗಳಲ್ಲಿ ಲಭ್ಯವಿದೆ- (ಎನ್4, ಎನ್8, ಎನ್10, ಮತ್ತು ಎನ್ 10(0) (N4, N8, N10, ಮತ್ತು N10(O)). ಆದರೆ, ಕಂಪನಿ N4, N8, ಮತ್ತು N10(O) ವೇರಿಯಂಟ್ಗಳ ಬೆಲೆಗಳನ್ನು ಮಾತ್ರ ಕ್ರಮವಾಗಿ 19,000 ರೂ, ರೂ 21,000 ರೂ. ಮತ್ತು 21,000 ರೂ.ಗಳಿಗೆ ಹೆಚ್ಚಿಸಿದೆ.
ಮುಂಬರುವ ಮಹೀಂದ್ರಾ ಎಸ್ಯುವಿಗಳು:
ಮಹೀಂದ್ರಾ ತನ್ನ ಜನಪ್ರಿಯ ಬೊಲೆರೊ ಲೈನ್-ಅಪ್ಗೆ ಬೊಲೆರೊ ನಿಯೋ ಪ್ಲಸ್ ಅನ್ನು ಸೇರಿಸಲು ಮುಂದಾಗಿದೆ. 2022ರ ಏಪ್ರಿಲ್‌ನರೆಗೆ ಮಾರಾಟದಲ್ಲಿದ್ದ ಬೊಲೆರೋ ನಿಯೋ ಪ್ಲಸ್ (Bolero Neo Plus) ಅನ್ನು ಆಧರಿಸಿ, ಇದರಲ್ಲಿ ಕೂಡ 7- ಮತ್ತು 9-ಸೀಟ್ ಕಾನ್ಫಿಗರೇಶನ್ಗಳನ್ನು ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. 2023ರ ಜನವರಿಯಲ್ಲಿ ಇತ್ತೀಚೆಗೆ ಅನಾವರಣಗೊಂಡ ಎಕ್ಸ್ಯುವಿ 400 ಇವಿ (XUV400 EV) ಬೆಲೆಯನ್ನು ಮಹೀಂದ್ರಾ ಘೋಷಿಸಲಿದೆ. ಇದಲ್ಲದೆ, 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ನವೀಕರಿಸಿದ XUV300 ಮುಂಬರುವ ಹಬ್ಬದ ಋತುವಿನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
Anand Mahindra: ಇವರೇ ಬೆಸ್ಟ್ ಬೊಲೆರೋ ಡ್ರೈವರ್; ಆನೆಗೂ ಹೆದರದ ಇವರನ್ನು ಕ್ಯಾಪ್ಟನ್ ಕೂಲ್ ಎಂದ ಉದ್ಯಮಿ
ಮಹೀಂದ್ರಾ ತನ್ನ ಥಾರ್ ಮತ್ತು ಎಕ್ಸ್ಯುವಿ 700 (XUV700) SUV ಗಳ ಬೆಲೆಗಳನ್ನು ಕ್ರಮವಾಗಿ 28,000 ರೂ. ಮತ್ತು 37,000 ರೂ.ವರೆಗೆ ಹೆಚ್ಚಿಸಿದೆ. ಈ ವರ್ಷ ಎರಡೂ ಎಸ್ಯುವಿಗಳ ಬೆಲೆಯನ್ನು ಮೂರನೇ ಬಾರಿಗೆ ಏರಿಕೆ ಮಾಡಲಾಗುತ್ತಿದ್ದು, ಈ ಹಿಂದೆ ಜನವರಿ ಮತ್ತು ಏಪ್ರಿಲ್ನಲ್ಲಿ ಇವುಗಳ ಬೆಲೆ ಏರಿಕೆ ಮಾಡಲಾಗಿತ್ತು. ಮಹೀಂದ್ರಾ SUV ಗಳ ಬೇಡಿಕೆಯ ಹೆಚ್ಚಳ ಮತ್ತು ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳು ದರ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
XUV700 ಬೆಲೆಗಳು ಪೆಟ್ರೋಲ್ ವೇರಿಯಂಟ್ಗಳ ಆಧಾರದ ಮೇಲೆ 22,000 ರೂ.ಗಳಿಂದ 35,000 ರೂ.ಗಳವರೆಗೆ ಹೆಚ್ಚಿಸಲಾಗಿದೆ. ಡೀಸೆಲ್ ವೇರಿಯಂಟ್ಗಳ ದರ 20,000 ರೂ.ಗಳಿಂದ 37,000 ರೂ.ಗಳವರೆಗೆ ಹೆಚ್ಚಳವಾಗಿದೆ. ಇನ್ನೊಂದೆಡೆ ಮಹೀಂದ್ರಾದ ಲೈಫ್‌ಸ್ಟೈಲ್ ವಾಹನವೆಂದೇ ಜನಪ್ರಿಯವಾಗಿರುವ ಥಾರ್ನ್ ಬೆಲೆಯನ್ನು ಕೂಡ ಕಂಪನಿ ಹೆಚ್ಚಿಸಿದೆ. ಇದು ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಮಾದರಿಗಳಲ್ಲಿ ಲಭ್ಯವಿದೆ- ಎಕ್ಸ್ (0) ಮತ್ತು ಎಲ್ಎಕ್ಸ್ (AX (O) and LX). ಇದರ ಟಾಪ್ ವೇರಿಯಂಟ್‌ಗಳ ಬೆಲೆ 7 ಸಾವಿರ ರೂ.ಗಳವರೆಗೆ ಹಾಗೂ ಇತರ ಪೆಟ್ರೋಲ್ ವೇರಿಯಂಟ್‌ಗಳ ಬೆಲೆ 6 ಸಾವಿರ ರೂ.ಗಳವರೆಗೆ ಹೆಚ್ಚಾಗಿದೆ.
ಮಹೀಂದ್ರಾ ಬೊಲೆರೋ ಎಲೆಕ್ಟ್ರಿಕ್ ಪಿಕ್ಅಪ್ ಟೀಸರ್ ಬಿಡುಗಡೆ